ಧಾರವಾಡದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಖದೀಮರ ಕಾಲಿಗೆ ಗುಂಡೇಟು!

Dharwad: ಅವರಿಬ್ಬರು ಅಂತರರಾಜ್ಯ ಖತರ್ನಾಕ ಕಳ್ಳರು. ಕಳೆದ ಹಲವಾರು ತಿಂಗಳುಗಳಿಂದ ಧಾರವಾಡ ಸೇರಿದಂತೆ ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಕಳ್ಳತನ, ದರೋಡೆ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಈ ಇಬ್ಬರು ಖದೀಮರು ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣವೊಂದರಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

Written by - Deepa A Reddy | Last Updated : Jul 24, 2025, 01:50 PM IST
  • ಪೊಲೀಸ್ ಅಧಿಕಾರಿ ಪಿಎಸ್ಸೈ ಮಲ್ಲಿಕಾರ್ಜುನ ಗುಂಡು ಹಾರಿಸಿ ಇಬ್ಬರ ಕಾಲಿಗೆ ಹೊಡೆದಿದ್ದಾರೆ.
  • ಈ ಹಲ್ಲೆಯಿಂದ ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
  • ಈ ವೇಳೆ ಆರೋಪಿಗಳ ಗ್ಯಾಂಗ್ ಬಗ್ಗೆ ಹಲವು ಬಾಯಿಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಧಾರವಾಡದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಖದೀಮರ ಕಾಲಿಗೆ ಗುಂಡೇಟು!

Dharwad: ಅವರಿಬ್ಬರು ಅಂತರರಾಜ್ಯ ಖತರ್ನಾಕ ಕಳ್ಳರು. ಕಳೆದ ಹಲವಾರು ತಿಂಗಳುಗಳಿಂದ ಧಾರವಾಡ ಸೇರಿದಂತೆ ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಕಳ್ಳತನ, ದರೋಡೆ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಈ ಇಬ್ಬರು ಖದೀಮರು ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣವೊಂದರಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಬಂಧನದ ವೇಳೆ ಇಬ್ಬರೂ ಕಳ್ಳರು ಪೊಲೀಸರ ಮೇಲೆ ದೌರ್ಜನ್ಯ ಎಸಗಿದ ಕಾರಣ, ಆತ್ಮರಕ್ಷಣೆಗೋಸ್ಕರ ಪೊಲೀಸ್ ಅಧಿಕಾರಿ ಪಿಎಸ್ಸೈ ಮಲ್ಲಿಕಾರ್ಜುನ ಗುಂಡು ಹಾರಿಸಿ ಇಬ್ಬರ ಕಾಲಿಗೆ ಹೊಡೆದಿದ್ದಾರೆ.

Add Zee News as a Preferred Source

ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು, ಖದೀಮ ಹുസೇನ್ ಸಾಬ್ ಅನ್ನು ಬಂಧಿಸಿ, ಮತ್ತಿಬ್ಬರ ಮಾಹಿತಿ ಪಡೆಯಲು ಅವರನ್ನು ಡಬಲ್ ರೋಡ್ ಕಡೆ ಕರೆದೊಯ್ದರು. ಅಲ್ಲಿ ವಿಜಯ ಅಣ್ಣಿಗೇರಿ ಮತ್ತು ಮುಜಮ್ಮಿಲ್ ಎಂಬ ಇಬ್ಬರು ಸಹಚರರನ್ನು ಗುರುತಿಸಿ ತೋರಿಸಿದ ಹಿಸೇನ್, ಹಠಾತ್ ಪೊಲೀಸರ ಮೇಲೆ ತಿರುಗಿಬಿದ್ದಿದ್ದ. ಅವರೊಂದಿಗೆ ಬದಿಗಿದ್ದ ಪಿಎಸ್ಸೈ ಮಲ್ಲಿಕಾರ್ಜುನ ಹಾಗೂ ಕಾನ್ಸ್ಟೇಬಲ್ ಇಸಾಕ್ ನದಾಫ್ ಮೇಲೆ ಈ ಮೂವರು ಕಳ್ಳರು ಹಲ್ಲೆ ಮಾಡಿದ್ದು, ಈ ಹಲ್ಲೆಯಿಂದ ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆಯ ಬಳಿಕ, ಆತ್ಮರಕ್ಷಣೆಗಾಗಿ ಗುಂಡೇಟು ಹಾರಿಸಿದ ಪಿಎಸ್ಸೈ, ಇಬ್ಬರ ಕಾಲಿಗೆ ಗುರಿ ಹೊಡೆದಿದ್ದಾರೆ. ನಂತರ ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಈ ವೇಳೆ ಆರೋಪಿಗಳ ಗ್ಯಾಂಗ್ ಬಗ್ಗೆ ಹಲವು ಬಾಯಿಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆಯುಕ್ತ ಎನ್. ಶಶಿಕುಮಾರ್ ಅವರು ನೀಡಿದ ಮಾಹಿತಿ ಪ್ರಕಾರ, ವಿಜಯ ಅಣ್ಣಿಗೇರಿ ವಿರುದ್ಧ 40 ಕ್ಕೂ ಹೆಚ್ಚು ಮತ್ತು ಮುಜಮ್ಮಿಲ್ ವಿರುದ್ಧ 20 ಕ್ಕೂ ಹೆಚ್ಚು ಕೇಸುಗಳಿವೆ. ಇವರು ಎಪ್ಸ್, ಇನ್ಸ್ಟಾಗ್ರಾಂ ಮುಂತಾದ ತಂತ್ರಜ್ಞಾನ ಬಳಸಿಕೊಂಡು ಗ್ಯಾಂಗ್ ಸಂಪರ್ಕದಲ್ಲಿ ಇರುತ್ತಿದ್ದರು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಇತ್ತೀಚೆಗೆ ಅವಳಿ ನಗರದಲ್ಲಿ ಹೆಚ್ಚಾಗುತ್ತಿರುವ ಕಳ್ಳತನ ಪ್ರಕರಣಗಳ ನಡುವೆ ಈ ಘಟನೆ ಜಾಗೃತಿಯ ಸಂದೇಶವಾಗಿ ಕಂಡುಬಂದಿದೆ. ಕಾನೂನು ವ್ಯವಸ್ಥೆಗೆ ಧಕ್ಕೆ ನೀಡಿದರೆ, ಪೊಲೀಸರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಪಾಠವಾಗಿದೆ ಈ ಘಟನೆ.

About the Author

Deepa A Reddy

ದೀಪಾ ಎ (Deepa A) Zee ಕನ್ನಡ ನ್ಯೂಸ್‌ ಮಾಧ್ಯಮದಲ್ಲಿ 2023ರಿಂದ ಕೆಲಸ ಮಾಡುತ್ತಿದ್ದು, ವೆಬ್‌ ವಿಭಾಗದಲ್ಲಿ ಒಂದು ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿದ್ದು, ಇದೀಗ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಜ್ಯೋತಿಷ್ಯ, ವೈರಲ್‌, ಆರೋಗ್ಯ ಹಾಗೂ ಲೈಫ್‌ ಸ್ಟೈಲ್‌ ವಿಭಾಗಗಳಲ್ಲಿನ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಓದುಗರನ್ನು ತಮ್ಮ ಬರವಣಿಗೆಯ ಮೂಲಕ ತಲುಪುವ ಗುರಿ ಇವರದ್ದಾಗಿದ್ದು, ಓದುಗರ ಆಸಕ್ತಿ ಹಾಗೂ ಅಗತ್ಯಗಳನ್ನು ಗೌರವಿಸುತ್ತಾರೆ. 

...Read More

Trending News