)
ಮಂಡ್ಯ : ಸಕ್ಕರೆನಾಡು ಮಂಡ್ಯದಲ್ಲಿ ಮತ್ತೆ ಮುನ್ನಲೆಗೆ ಬಂದಿದೆ ಮಂದಿರ V/S ಮಸೀದಿ ಹೋರಾಟ. ಟಿಪ್ಪುವಿನ ಕಾಲದಲ್ಲಿ ಪಟ್ಟಣದಲ್ಲಿದ್ದ ಮೂಡಲ ಬಾಗಿಲು ಆಂಜನೇಯ ದೇಗುಲವನ್ನು ಕೆಡವಿ ಆ ಜಾಗದಲ್ಲಿ ಜಾಮೀಯ ಮಸೀದಿ ನಿರ್ಮಿಸಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ಇದಕ್ಕಾಗಿ ಕಳೆದ ಒಂದು ದಶಕ ದಿಂದ ಈ ಜಿಲ್ಲೆಯ ಹಿಂದೂ ಜನರು, ಹಿಂದೂ ಪರ ಸಂಘಟನೆಗಳ ಆಶ್ರಯದಲ್ಲಿ ಕಳೆದ ಒಂದು ದಶಕದಿಂದ ಹನುಮ ಮಾಲಾಧಾರಿ ಗಳಾಗಿ ಮೂಡಲ ಬಾಗಿಲು ಆಂಜನೇಯ ದೇಗುಲದ ಪುನರ್ ಪ್ರತಿಷ್ಠಾಪನೆ ಸಂಕಲ್ಪ ಮಾಡಿ ಹನುಮ ಮಾಲಾಧಾರಿಗಳಾಗಿ ಹೋರಾಟ ಮಾಡ್ತಿದ್ದಾರೆ.
ಇನ್ನು ಈ ಕುರಿತು ಇಂದು ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಹಿಂದು ಸಂಘಟನೆ ಕಾರ್ಯ ಕರ್ತರು ಹನುಮ ಮಾಲಾಧಾರಿಗಳಾಗಿ ಗಂಜಾಮ್ ನಿಂದ ಶ್ರೀರಂಗಪಟ್ಟಣ ರಂಗನಾಥ ಮೈದಾನದವರೆಗೆ ಹನುಮ ಮಾಲಾ ಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆ ಕೈಗೊಂಡಿದ್ರು. ನಿಮಿಷಾಂಭ ದೇಗುಲದ ಬಳಿ ಸಂಕೀರ್ತನಾ ಯಾತ್ರೆ ಹಿಂದೂ ಮಹಾಸಭಾದ ಮುಖಂಡ ಡಾ.ಭಾನು ಪ್ರಕಾಶ್ ಶರ್ಮಾ ಹನುಮನ ಉತ್ಸವ ಮೂರ್ತಿಗೆ ಪೂಜೆ ಅಲ್ಲಿಸಿ ಚಾಲನೆ ನೀಡಿದ್ರು. ಅಲ್ದೆ ಮೂಡಲ ಬಾಗಿಲು ಆಂಜನೇಯ ದೇಗುಲ ಪುನರ್ ಪ್ರತಿಷ್ಠಾಪನೆ ನಮ್ಮೆಲ್ಲರ ಸಂಕಲ್ಪವಾಗಿದೆ ಎಂದರು.
ಇನ್ನು ಈ ಹನುಮ ಭಕ್ತರ ಬೃಹತ್ ಸಂಕೀರ್ತನಾ ಯಾತ್ರೆ ಪೊಲೀಸರು ಬಿಗಿ ಪೊಲೀಸ್ ಭದ್ರತೆ ಒದಗಿಸಿದ್ರು. ಯಾವುದೇ ಅಹಿತಕರ ಘಟನೆ ನಡೆಯದೆಂತೆ ಹೆಚ್ಚಿನ ಪೊಲೀಸ್ರನ್ನು ಭದ್ರತೆಗೆ ನಿಯೋಜಿಸಿ ಕಟ್ಟೆಚ್ಚರವಹಿಸಲಾಗಿತ್ತು. ಮೆರವಣಿಗೆಯ ವೇಳೆ ದ್ರೋಣ್ ಹಾಗು ಸಿಸಿ ಕ್ಯಾಮರಗಳ ಮೂಲಕ ನಿಗಾ ಇಡಲಾಗಿತ್ತು. ಅದ್ದೂರಿ ಮೆರವಣಿಗೆ ಮೂಲಕ ಪಟ್ಟಣದ ಜಾಮೀಯ ಮಸೀದಿ ಬಳಿ ಬಂದ ಹನುಮ ಭಕ್ತರು ಏಕಾ ಏಕಿ ಮಸೀದಿಗೆ ನುಗ್ಗುವ ಪ್ರಯತ್ನಕ್ಕೆ ಮುಂದಾದ್ರು. ಈ ವೇಳೆ ಪೊಲೀಸ್ರು ಮತ್ತು ಹನುಮ ಭಕ್ತರ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ ನೂಕಾಟ ನಡೆದು ಅವರ ಪ್ರಯತ್ನಕ್ಕೆ ಪೊಲೀಸರು ತಡೆವೊಡ್ಡಿ ಅವರನ್ನ ಸಂತೈಸಿ ಅಲ್ಲಿಂದ ವಾಪಸ್ಸು ಕಳಿಸಿದ್ರು. ಘಟನೆ ಬಳಿಕ ಮಾತನಾಡಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಂಡಿತ್ತು. ಯಾತ್ರೆ ಶಾಂತಿಯುತವಾಗಿ ನಡೆದಿದೆ ಎಂದ್ರು.
ಒಟ್ಟಾರೆ ಶ್ರೀರಂಗಪಟ್ಟಣದಲ್ಲಿ ಈ ಮೂಡಲ ಬಾಗಿಲು ಆಂಜನೇಯನ ದೇಗುಲ ಪುನರ್ ನಿರ್ಮಾಣಕ್ಕೆ ಜಿಲ್ಲೆಯ ಹಿಂದೂಗಳು ಸೇರಿ ಹನುಮ ಭಕ್ತರು ಸಂಕಲ್ಪ ಮಾಡಿ ಪ್ರತಿಜ್ಞೆ ಮಾಡಿದ್ದು, ಮುಂದಿನ ದಿನಗಳಲ್ಲಿ ಈ ಹನುಮ ಭಕ್ತರ ಹೋರಾಟ ಮತ್ತಷ್ಟು ಕಿಚ್ಚು ಹೊತ್ತಿಸಲಿದ್ದು ಇದು ಎಲ್ಲಿಗೆ ಹೋಗಿ ನಿಲ್ಲಲಿದೆ ಅನ್ನೋದ್ನ ಕಾದು ನೋಡಬೇಕಿದೆ.