)
ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದಲ್ಲಿ ದಾಸೋಹದ ಜೊತೆ ಜೊತೆಗೆ ಶೈಕ್ಷಣಿಕ ಕ್ರಾಂತಿ ಎಬ್ಬಿಸಿದ್ದ ಕಲಬುರಗಿಯ ಶ್ರೀ ಶರಣಬಸವೇಶ್ವರ ಮಹಾಸಂಸ್ಥಾನದ ಎಂಟನೇ ಪೀಠಾಧಿಪತಿ ಪೂಜ್ಯ ಶ್ರೀ ಡಾ. ಶರಣಬಸಪ್ಪ ಅಪ್ಪಾ ಲಿಂಗೈಕ್ಯರಾಗಿದ್ದಾರೆ.. ಇನ್ನೂ ಶ್ರೀ ಡಾ. ಶರಣಬಸಪ್ಪ ಅಪ್ಪಾರ ತಂದೆ ಪೂಜ್ಯ ದೊಡ್ಡಪ್ಪ ಅಪ್ಪಾ 1993 ರಲ್ಲಿ ಲಿಂಗೈಕ್ಯರಾಗಿದ್ದ ವೇಳೆ ಮಹಾಸಂಸ್ಥಾನಕ್ಕೆ 40 ಸಾವಿರ ರೂಪಾಯಿ ಸಾಲವಿತ್ತು. ದೊಡ್ಡಪ್ಪ ಅಪ್ಪಾರ ಅಗಲಿಕೆ ಬಳಿಕ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಬಹುದೊಡ್ಡ ಕ್ರಾಂತಿಯೇ ಮಾಡಿದವರು ಡಾ. ಶರಣಬಸಪ್ಪ ಅಪ್ಪ.
ಆರಂಭದಲ್ಲಿ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಅಪ್ಪಾಜಿಯವರು, 1971 ರಲ್ಲೆ ಶರಣಬಸವೇಶ್ವರ ವಸತಿ ಶಾಲೆ ಆರಂಭಿಸಿದರು.. ಬಳಿಕ ಎಂಬಿಎ, ಎಂಸಿಎ, ಎಮ್ಟಿಎ ಇಂಜಿನಿಯರಿಂಗ್, ಸೇರಿದಂತೆ ಹತ್ತು ಹಲವಾರು ಶಾಲಾ ಕಾಲೇಜುಗಳು, ಮಹಾದೇವಿ ಕನ್ಯಾ ಹಿರಿಯ ಮತ್ತು ಪ್ರೌಢ ಶಾಲೆ ಪ್ರಾಥಮಿಕ ಶಾಲೆ, ಮುಕ್ತಾಂಬಿಕ ಬಿಸಿಎ ಮಹಿಳಾ ಮಹಾವಿದ್ಯಾಲಯ, ಗೋದುತಾಯಿ ಮಹಿಳಾ ಬಿ.ಇಡ್ ಕಾಲೇಜು, ಗೋದುತಾಯಿ ಮಹಿಳಾ ಇಂಜಿನಿಯರಿಂಗ್ ಕಾಲೇಜು, ಕೋಮಲಾ ಪಿಯು ಮಹಿಳಾ ಕಾಲೇಜು, ಸ್ನಾತಕೋತ್ತರ ಪತ್ರಿಕೋದ್ಯಮ ಕೋರ್ಸ್ ಸೇರಿದಂತೆ 2017 ರಲ್ಲಿ ಶ್ರೀ ಶರಣಬಸವೇಶ್ವರ ವಿಶ್ವವಿದ್ಯಾಲಯ ಸ್ಥಾಪಿಸಿ ಈ ಭಾಗದಲ್ಲಿ ಶ್ರೀ ಡಾ. ಶರಣಬಸಪ್ಪ ಅಪ್ಪಾರವರು ಬಹುದೊಡ್ಡ ಶೈಕ್ಷಣಿಕ ಕ್ರಾಂತಿ ಮಾಡಿದ್ದರು.
ಇದನ್ನೂ ಓದಿ:ಶರಣಬಸವೇಶ್ವರ ಮಹಾ ದಾಸೋಹ ಮನೆಯಲ್ಲಿ ಕೊನೆಯುಸಿರು
ಆದರೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅಪ್ಪಾ ನಿನ್ನೆ ರಾತ್ರಿ ಲಿಂಗೈಕ್ಯರಾಗಿದ್ದಾರೆ. ಹೀಗಾಗಿ ಲಕ್ಷಾಂತರ ಭಕ್ತರನ್ನು ಅಗಲಿ ಹೋಗಿದ್ದು ಇಂದು ಸಕಲ ಸರ್ಕಾರಿ ಗೌರವದೊಂದಿಗೆ ಶ್ರೀಗಳ ಅಂತ್ಯಕ್ರಿಯೆ ನಡೆಯಿತು. ಇನ್ನೂ ಶ್ರೀಗಳ ಪಾರ್ಥಿವ ಶರೀರವನ್ನು ದೇವಾಲಯದ ಆವರಣದಲ್ಲಿರೋ ಅನುಭವ ಮಂಟಪದಲ್ಲಿ ಜನರ ದರ್ಶನಕ್ಕೆ ಇಡಲಾಗಿತ್ತು. ಲಕ್ಷಾಂತರ ಭಕ್ತರು ಬೆಳಿಗ್ಗೆಯಿಂದಲೇ ದೇವಾಲಯಕ್ಕೆ ಬಂದು ಅಪ್ಪನ ದರ್ಶನ ಪಡೆದರು. ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಸಹ ಆಗಮಿಸಿ ಶರಣಬಸಪ್ಪ ನ ದರ್ಶನ ಪಡೆದು ಮಾತನಾಡಿದರು.
ಇನ್ನೂ ಸಕಲ ಸರ್ಕಾರಿ ಗೌರವದೊಂದಿಗೆ ಡಾ. ಶರಣಬಸಪ್ಪ ಅಪ್ಪ ಅವರ ಅಂತ್ಯಸಂಸ್ಕಾರ ಮಾಡಲಾಯಿತು. ಈ ವೇಳೆ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿಕೆಶಿ ಆಗಮಿಸಿ ಅಪ್ಪ ಅವರ ದರ್ಶನ ಪಡೆದರು.ಎಲ್ಲಾ ಭಕ್ತರು ಮಠದ ಪರಂಪರೆನ್ನು ಉಳಿಸಿಕೊಂಡು ಹೋಗಬೇಕು ಎಂದರು.
ಇನ್ನೂ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಡಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಶ್ರೀ ಶರಣಬಸಪ್ಪ ಅಪ್ಪಾ ಒತ್ತು ಕೊಡುತ್ತಲೇ ಬಂದಿದ್ದರು.. ಉತ್ತರ ಕರ್ನಾಟಕ ಭಾಗದಲ್ಲಿ ಮೊದಲ ಮಹಿಳಾ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಿದ ಕೀರ್ತಿ ಸಹ ಅಪ್ಪಾಜಿಯವರಿಗೆ ಸಲ್ಲುತ್ತದೆ.. 1934 ರಲ್ಲಿ ನಿಜಾಮರ ಆಳ್ವಿಕೆಯಲ್ಲಿ ಬಾಲಕಿಯರಿಗೆ ಶಿಕ್ಷಣ ನೀಡುವ ಅವಕಾಶ ಇರಲಿಲ್ಲ.. ಅಂಥಹದರಲ್ಲಿ ದೊಡ್ಡಪ್ಪ ಅಪ್ಪ ಬಾಲಕಿಯರಿಗೆ ಕನ್ನಡ ಮಾಧ್ಯಮದಲ್ಲೆ ಶಿಕ್ಷಣ ಕೊಡಿಸುವ ವ್ಯವಸ್ಥೆ ಮಾಡಿದ್ದರು.. ಪರಿಣಾಮ ಇಂದು ಲಕ್ಷಾಂತರ ಬಾಲಕಿಯರು ಉನ್ನತಮಟ್ಟದ ಶಿಕ್ಷಣ ಮುಗಿಸಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡ್ತಿದ್ದಾರೆ..
1903 ರಲ್ಲಿ ಸ್ಥಾಪನೆಯಾದ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಇಂದು ರಾಜ್ಯದ ಉದ್ದಗಲಕ್ಕೂ ಹೆಮ್ಮರವಾಗಿ ಬೆಳೆದಿದೆ. ಇನ್ನೂ ಅಪ್ಪ ಅವರಿಗೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಹಾಗೂ ವಿಧಿ ವಿಧಾನಗಳಂತೆ ಅಂತ್ಯಸಂಸ್ಕಾರ ಮಾಡಲಾಯಿತು. ಪೋಲಿಸ್ ಇಲಾಖೆ ಮೂಲಕ ಅಪ್ಪಾ ಅವರಿಗೆ ಗೌರವ ವಂದನೆ ಸಲ್ಲಿಕೆ ಮಾಡಿ ಗೌರವಿಸಲಾಯಿತು. ಅದೆನೇ ಇರಲಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹುದೊಡ್ಡ ಕ್ರಾಂತಿ ಎಬ್ಬಿಸಿದ ಶಿಕ್ಷಣ ಸಂತನ ಅಗಲಿಕೆಯಿಂದ ಕಲ್ಯಾಣ ಕರ್ನಾಟಕ ಶೈಕ್ಷಣಿಕ ಕ್ಷೇತ್ರಕ್ಕೆ ಹಿನಡೆಯಾಗಿದ್ದು ಮಾತ್ರ ಸುಳ್ಳಲ್ಲ.