ಮೊಮ್ಮಗ ಗುಟ್ಕಾ ತಿನ್ನುವ ವಿಚಾರ ಆತನ ಸ್ನೇಹಿತರಿಂದ ಅಜ್ಜಿಗೆ ಗೊತ್ತಾಗಿತ್ತು. ಹೀಗಾಗಿ ಗುಟ್ಕಾ ತಿನ್ನಬೇಡ, ತಿಂದರೆ ನಿನ್ನ ಆರೋಗ್ಯ ಹಾಳಾಗುತ್ತದೆ ಎಂದು ಅಜ್ಜಿ ಬುದ್ಧಿವಾದ ಹೇಳಿದ್ದಳು. ಆದರೆ ಅಜ್ಜಿಯ ಬುದ್ಧಿವಾದದಿಂದ ಮನನೊಂದು ಮೊಮ್ಮಗ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ.
)
Kalaburagi: ಗುಟ್ಕಾ ತಿನ್ನಬೇಡ.. ನಿನ್ನ ಶರೀರ ಹಾಳಾಗುತ್ತದೆ ಎಂದು ಅಜ್ಜಿ ಬುದ್ಧಿವಾದ ಹೇಳಿದ್ದಕ್ಕೆ ಮೊಮ್ಮಗನೊಬ್ಬ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಶನಿವಾರ ಈ ಆಘಾತಕಾರಿ ಘಟನೆ ನಡೆದಿದೆ.
ರೋಹಿತ್ ಮಣ್ಣಾಂಕಲಗಿ ಆತ್ಮಹ*ತ್ಯೆ ಮಾಡಿಕೊಂಡ ಬಾಲಕ. ಅಫಜಲಪುರ ತಾಲೂಕಿನ ಕರ್ಜಗಿ ಗ್ರಾಮದ ರೋಹಿತ್ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ದಮಯಂತಿ ಎಂಬ ಅಜ್ಜಿ ತನ್ನ ಮೊಮ್ಮಗನನ್ನು ಕಳೆದ ಏಳೆಂಟು ವರ್ಷಗಳಿಂದ ಸಾಕಿ ಸಲುಹಿ, ವಿದ್ಯಾಭ್ಯಾಸ ಕೊಡಿಸುತ್ತಿದ್ದಳು.
ಮೊಮ್ಮಗ ಗುಟ್ಕಾ ತಿನ್ನುವ ವಿಚಾರ ಆತನ ಸ್ನೇಹಿತರಿಂದ ಅಜ್ಜಿಗೆ ಗೊತ್ತಾಗಿತ್ತು. ಹೀಗಾಗಿ ಗುಟ್ಕಾ ತಿನ್ನಬೇಡ, ತಿಂದರೆ ನಿನ್ನ ಆರೋಗ್ಯ ಹಾಳಾಗುತ್ತದೆ ಎಂದು ಅಜ್ಜಿ ಬುದ್ಧಿವಾದ ಹೇಳಿದ್ದಳು.
ಬುದ್ಧಿ ಹೇಳಿದ ಒಂದೇ ಕಾರಣಕ್ಕೆ ಮನನೊಂದ ರೋಹಿತ್, ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಅಫಜಲಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.