ಕನ್ನಡದಲ್ಲಿ Offline ನಲ್ಲಿ type ಮಾಡಬೇಕೇ ? ಚಿಂತೆ ಬಿಡಿ....ಇಲ್ಲಿದೆ ಇದಕ್ಕೆ ಪರಿಹಾರ!

ಸಾಮಾನ್ಯವಾಗಿ ನುಡಿ ಹಾಗೂ ಬರಹ ಸಾಫ್ಟ್ವೇರ್ ಗಳ ಮೂಲಕ ಕನ್ನಡ ಟೈಪ್ ಮಾಡದವರಿಗೆ ಈಗ ಮೈಕ್ರೋ ಸಾಫ್ಟ್ ತನ್ನ ನೂತನ ಯೋಜನೆ ಮೂಲಕ ಹೊಸ ಸಾಫ್ಟ್ ವೇರ್ ನ್ನು ಬಳಕೆಗೆ ತಂದಿದೆ.

Last Updated : Mar 6, 2020, 06:39 PM IST
ಕನ್ನಡದಲ್ಲಿ Offline ನಲ್ಲಿ type ಮಾಡಬೇಕೇ ? ಚಿಂತೆ ಬಿಡಿ....ಇಲ್ಲಿದೆ ಇದಕ್ಕೆ ಪರಿಹಾರ!  title=
Photo courtesy: Microsoft

ನವದೆಹಲಿ: ಸಾಮಾನ್ಯವಾಗಿ ನುಡಿ ಹಾಗೂ ಬರಹ ಸಾಫ್ಟ್ವೇರ್ ಗಳ ಮೂಲಕ ಕನ್ನಡ ಟೈಪ್ ಮಾಡದವರಿಗೆ ಈಗ ಮೈಕ್ರೋ ಸಾಫ್ಟ್ ತನ್ನ ನೂತನ ಯೋಜನೆ ಮೂಲಕ ಹೊಸ ಸಾಫ್ಟ್ ವೇರ್ ನ್ನು ಬಳಕೆಗೆ ತಂದಿದೆ.

ಹಲವು ವರ್ಷಗಳ ಕಾಲ ಆಫ್ ಲೈನ್ ನಲ್ಲಿ ಇದ್ದಂತಹ ಗೂಗಲ್ ಇನ್ ಪುಟ್ ಟೂಲ್ಸ್ ನ್ನು ಈಗ ಆನ್ ಲೈನ್ ಗೆ ಮಾತ್ರ ಸೀಮಿತಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ಈಗ ಆಫ್ ಲೈನ್ ನಲ್ಲಿಯೂ ಕೂಡ ಟೈಪ್ ಮಾಡಬೇಕೆಂದು ಬಯಸುವರರಿಗೆ ನಿಜಕ್ಕೂ ಚಿಂತೆಯಾಗಿದೆ.ಇಂತಹ ಸಂದರ್ಭದಲ್ಲಿ ಈಗ ಗೂಗಲ್ ಗೆ ಸೆಡ್ಡು ಹೊಡೆದಿರುವ ಮೈಕ್ರೋ ಸಾಫ್ಟ್ Bhashaindia.com ಮೂಲಕ ಭಾರತೀಯ ಭಾಷೆಗಳಿಗೆ ಸಂಬಂಧಿಸಿದ ಗಣಕ ಸಂಬಂಧಿ ವಿಷಯ ಮತ್ತು ತಂತ್ರಾಂಶಗಳ, ಒಂದು ಪ್ರಮುಖ ಆಕರವಾಗಿ ಅನೂಕೂಲಕರವಾಗಿದೆ.

ಪ್ರಮುಖವಾಗಿ ಭಾಷಾ ತೊಡಕುಗಳ ವಿಚಾರವಾಗಿ ಮೈಕ್ರೋ ಸಾಫ್ಟ್ ಹೇಳುವಂತೆ "ಭಾಷೆಗಳ ನಡುವೆಯ ಗೋಡೆಯನ್ನು ತೊಡೆದುಹಾಕಲು, ಎರಡು ದಶಕಗಳ ಹಿಂದೆ ನಾವು ಭಾರತೀಯ ಭಾಷೆಗಳೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದೆವು ಮತ್ತು ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್‌ನ ವೇಗವನ್ನು ಹೆಚ್ಚಿಸಲು ಭಾಷಾ ಇಂಡಿಯಾ ಯೋಜನೆಯನ್ನು ಹುಟ್ಟು ಹಾಕಿದೆವು. ಅದರ ನಂತರ – ಸಂವಿಧಾನದಿಂದ ಗುರುತಿಸಲಾದ ಎಲ್ಲಾ 22 ಭಾರತೀಯ ಭಾಷೆಗಳಲ್ಲಿ ಪಠ್ಯ ನಮೂದಿಸುವ ಸೌಲಭ್ಯದಿಂದ ಹಿಡಿದು 12 ಭಾಷೆಗಳಲ್ಲಿ ವಿಂಡೋಸ್ ಇಂಟರ್ಫೇಸ್‌ನ ಲಭ್ಯತೆಯ ವರೆಗೆ ನಾವು ಬಹುದೂರ ಸಾಗಿ ಬಂದಿದ್ದೇವೆ" ಎಂದು ಅದು ತನ್ನ ವೆಬ್ ಸೈಟ್ ನಲ್ಲಿ ಭಾಷಾ ಯೋಜನೆ ಕುರಿತಾಗಿ ಬರೆದುಕೊಂಡಿದೆ.

ಗೂಗಲ್ ಇನ್ ಪುಟ್ ಟೂಲ್ಸ್ ನಂತೆ ಕಾರ್ಯನಿರ್ವಹಿಸುವ ಮೈಕ್ರೋಸಾಫ್ಟ್ ಇನ್‌ಪುಟ್ ಮೆತೆಡ್ ಎಡಿಟರ್ಸ್ ಮೂಲಕ ಬಳಕೆದಾರರು ಸುಲಭವಾಗಿ  ಆಫ್ ಲೈನ್ ಟೈಪ್ ಮಾಡಬಹುದಾಗಿದೆ.ಇಂತಹ ಅವಕಾಶವನ್ನು ಈಗ ಮೈಕ್ರೋ ಸಾಫ್ಟ್ Bhashaindia.com ಮೂಲಕ ಲಭ್ಯವಾಗುವಂತೆ ಮಾಡಿದೆ. ಹಾಗಾದರೆ ಈ ಸಾಫ್ಟ್ವೇರ್ ನ್ನು ನೀವು Bhashaindia.com ವೆಬ್ಸೈಟ್ ನಲ್ಲಿ Microsoft Indic Language Input Tool( ILIT)ಎನ್ನುವ ವಿಭಾಗಕ್ಕೆ ಹೋಗಿ ಅಲ್ಲಿ ನೀವು ಬಗೆ ಬಗೆಯ ಟೈಪಿಂಗ್ ಸಾಫ್ಟ್ವೇರ್ ಗಳನ್ನು ನಿಮ್ಮ ವಿಂಡೋಸ್ ಗಳಿಗೆ ಅನುಗುಣವಾಗಿ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

 

Trending News