Karnataka Bundh march 22 : ನಾಳೆ ಶಾಲೆಗೂ ಇರಲಿದೆಯೇ ರಜೆ !ನಾಳೆ ನಡೆಯಲಿರುವ ಪರೀಕ್ಷೆಯ ಬಗ್ಗೆ ಸರ್ಕಾರದ ನಿರ್ಧಾರ ಏನು ?

ಈ ಮಧ್ಯೆ ನಾಳೆ ಬಂದ್ ನಡೆದರೆ ನಾಳೆ ನಡೆಯಬೇಕಾಗಿರುವ ಪರೀಕ್ಷೆಗಳ ಗತಿ ಏನು ಎನ್ನುವ ಆತಂಕ್ ವಿದ್ಯಾರ್ಥಿ ಮತ್ತು ಪೋಷಕರನ್ನು ಕಾಡುತ್ತಿದೆ. ನಾಳೆ ಎಸ್ಎಸ್ಎಲ್ ಸಿ ಪರೀಕ್ಷೆ ಇಲ್ಲ. ಆದರೆ 5,6,7,8,9 ನೇ ತರಗತಿಗಳಿಗೆ ಗಣಿತ ಪರೀಕ್ಷೆ ನಿಗದಿಯಾಗಿದೆ.   

Written by - Ranjitha R K | Last Updated : Mar 21, 2025, 01:05 PM IST
  • ನಾಳೆ ನಡೆಯಬೇಕಾಗಿರುವ ಪರೀಕ್ಷೆಗಳ ಗತಿ ?
  • ಪರೀಕ್ಷೆ ಬಗ್ಗೆ ನಿರ್ಧಾರಕ್ಕೆ ಸರ್ಕಾರದ ಸಭೆ
  • ಬಂದ್ ಕರೆಗೆ ಕೃಪಾ‌ ಸಂಘಟನೆ ಭಾರೀ ವಿರೋಧ
Karnataka Bundh march 22  : ನಾಳೆ ಶಾಲೆಗೂ ಇರಲಿದೆಯೇ ರಜೆ !ನಾಳೆ ನಡೆಯಲಿರುವ ಪರೀಕ್ಷೆಯ ಬಗ್ಗೆ ಸರ್ಕಾರದ ನಿರ್ಧಾರ ಏನು ?

ಬೆಳಗಾವಿಯಲ್ಲಿ KSRTC ಬಸ್ ಕಂಡಕ್ಟರ್ ಮೇಲೆ ಮರಾಠಿ ಭಾಷೆಯಲ್ಲಿ ಮಾತನಾಡದ ಕಾರಣಕ್ಕೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಂದರೆ 12 ಗಂಟೆಗಳ ಕಲಾ ಬಂದ್‌ಗೆ ಕನ್ನಡ ಒಕ್ಕೂಟ ಕರೆ ನೀಡಿದೆ. ಮರಾಠಿ ಪರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, ಕನ್ನಡ ಕಾರ್ಯಕರ್ತರಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಲ್ಲೆ ನಡೆಸಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಗಳು ಕೇಳಿಬಂದಿವೆ. 

Add Zee News as a Preferred Source

ನಾಳೆ ನಡೆಯಬೇಕಾಗಿರುವ ಪರೀಕ್ಷೆಗಳ ಗತಿ ?: 
ಈ ಮಧ್ಯೆ ನಾಳೆ ಬಂದ್ ನಡೆದರೆ ನಾಳೆ ನಡೆಯಬೇಕಾಗಿರುವ ಪರೀಕ್ಷೆಗಳ ಗತಿ ಏನು ಎನ್ನುವ ಆತಂಕ್ ವಿದ್ಯಾರ್ಥಿ ಮತ್ತು ಪೋಷಕರನ್ನು ಕಾಡುತ್ತಿದೆ. ನಾಳೆ ಎಸ್ಎಸ್ಎಲ್ ಸಿ ಪರೀಕ್ಷೆ ಇಲ್ಲ. ಆದರೆ 5,6,7,8,9 ನೇ ತರಗತಿಗಳಿಗೆ ಗಣಿತ ಪರೀಕ್ಷೆ ನಿಗದಿಯಾಗಿದೆ. ಬಂದ್ ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಾಗಿರುವ ಪರೀಕ್ಷೆ ಮುಂದೂಡಬೇಕಾ ಬೇಡವಾ ಎನ್ನುವ ಗೊಂದಲದಲ್ಲಿದೆ ಸರ್ಕಾರ.  

ಇದನ್ನೂ ಓದಿ : Karnataka Bandh on March 22: ಮಾರ್ಚ್ 22ರಂದು ಕರ್ನಾಟಕ ಬಂದ್‌: ಇಲ್ಲಿದೆ ಬಂದ್ ಕುರಿತ ಸಂಪೂರ್ಣ ವಿವರ..!

ಪರೀಕ್ಷೆ ಬಗ್ಗೆ ನಿರ್ಧಾರಕ್ಕೆ ಸಭೆ : 
ಇನ್ನು ನಿಗದಿಯಂತೆ ಪರೀಕ್ಷೆ ನಡೆಸಬೇಕಾ ಅಥವಾ ಪರೀಕ್ಷೆಯನ್ನು ಮುಂದುದಬೇಕಾ ಎನ್ನುವ ನಿರ್ಧಾರ ತೆಗೆದುಕೊಳ್ಳುವ ಸಲುವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಭೆ ನಡೆಸಲು ಮುಂದಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ನಾಳೆ ಶಾಲೆಗೇ ರಜೆ ನೀಡುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಒಂದು ವೇಳೆ ಸಾರಿಗೆ ವ್ಯವಸ್ಥೆಗೆ ತೊಂದರೆಯಾದರೆ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗುವುದು ಖಂಡಿತಾ.  

ಹೀಗಾಗಿ ಇದರ ಬಗ್ಗೆ ಗೃಹಸಚಿವರು ಹಾಗೂ ಸಾರಿಗೆ ಸಚಿವರ ಬಳಿ ಚರ್ಚಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಸೆಕ್ಯೂರಿಟಿ, ಸಾರಿಗೆ ವಿಚಾರವಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಗೃಹ ಸಚಿವ ಪರಮೇಶ್ವರ್ ಜೊತೆ ಮಾತುಕತೆ ನಡೆಸಲಿದ್ದಾರೆ. ಮಾತುಕತೆಯ ನಂತರ ಮಧ್ಯಾಹ್ನ ಎಕ್ಸಾಂ ಪರೀಕ್ಧೆ ನಡೆಸಬೇಕೆ ಬೇಡವೇ ಎನ್ನುವ ಬಗ್ಗೆ ನಿರ್ಧಾರ ಹೊರ ಬೀಳಲಿದೆ. 

ಇದನ್ನೂ ಓದಿ : ಹನಿಟ್ರ್ಯಾಪ್ ಅಂದ್ರೆ ಏನು? ಹೇಗೆ ಕಾರ್ಯನಿರ್ವಹಿಸುತ್ತದೆ?

ಕೃಪಾ‌ ಸಂಘಟನೆ ಭಾರೀ ವಿರೋಧ : 
ಇನ್ನು ನಾಳೆ ಕೊಟ್ಟಿರುವ ಬಂದ್ ಕರೆಗೆ  ಖಾಸಗೀ ಶಾಲಾ ಸಂಘಟನೆಯಾದ  ಕೃಪಾ‌ ಸಂಘಟನೆ ಭಾರೀ ವಿರೋಧ ವ್ಯಕ್ತಪಡಿಸಿದೆ. ಇಂದಿನಿಂದ SSLC ಪರೀಕ್ಷೆ ಆರಂಭವಾಗಿದೆ. ಜೊತೆಗೆ ಮೌಲ್ಯಾಂಕನ ಪರೀಕ್ಷೆ ಕೂಡಾ ನಡೆಯುತ್ತಿದೆ. ಬಂದ್ ಎಫೆಕ್ಟ್ ನಿಂದ 40-50 ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ. ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಹಲ್ಲೆ‌ ಆದ ಕಾರಣಕ್ಕೆ ಬಂದ್ ಅವಶ್ಯಕತೆ ಇರಲಿಲ್ಲ. ಬೆಳಗಾವಿಯಲ್ಲಿ ಹೋರಾಟ ಮಾಡಿದ್ದರೆ ಆಗುತ್ತಿತ್ತು. ಅದನ್ನ ಹೊರೆತುಪಡಿಸಿ ಕರ್ನಾಟಕ ಬಂದ್ ಮಾಡುವುದು ಸರಿಯಲ್ಲ. ಬಂದ್ ಗೆ ಕರೆ ಕೊಡುವಾಗ ಮಕ್ಕಳ ಭವ್ಯಿಷ್ಯದ ಬಗ್ಗೆಯೂ ಯೋಚನೆ ಮಾಡಬೇಕು. ದಿನಾಂಕಗಳನ್ನ ನೋಡಿಕೊಂಡು ಬಂದ್ ಗೆ ಕರೆ ಕೊಡಬಹುದಿತ್ತು. ಪರೀಕ್ಷೆಗೆ ಮೊದಲು ಅಥವಾ ಪರೀಕ್ಷೆ ಮುಗಿದ ಬಂದ್ ಗೆ ಕರೆ ನೀಡಬಹುದಿತ್ತು. ಅದನ್ನ ಬಿಟ್ಟು ಪರೀಕ್ಷೆ ಇರುವಾಗ ಬಂದ್ ಕರೆಕೊಟ್ಟಿದ್ದು ಸರಿಯಲ್ಲ ಎಂದು ಕೃಪಾ‌ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಆಕ್ರೋಶ ಹೊರ ಹಾಕಿದ್ದಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 

Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News