Karnataka Budget 2025: ಸಿಎಂ ಸಿದ್ದು ಲೆಕ್ಕಾಚಾರ: ಜನರ ನಿರೀಕ್ಷೆಗಳೇನು?

ಈ ಬಾರಿಯ ಬಜೆಟ್ ನಲ್ಲಿ ಹಲವಾರು ನಿರೀಕ್ಷೆಗಳು ಇರುವುದರಿಂದ ಸಿಎಂ ರಾಜಸ್ವ ಕೊರತೆಯ ಬಜೆಟ್ ಮಂಡನೆ ಮಾಡಲು ಸಾಧ್ಯತೆ.ಇದರಿಂದಾಗಿ ಸಾಲದ ಗಾತ್ರವೂ ಕೂಡ ಹೆಚ್ಚಾಗಲಿದೆ ಎನ್ನಲಾಗಿದೆ.

Written by - Manjunath Naragund | Last Updated : Mar 7, 2025, 09:12 AM IST
  • ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿಸಿ ಕೈಗಾರಿಕಾ ಪ್ರದೇಶಗಳು/ವಸಾಹತುಗಳ ಮೂಲಭೂತ ಸೌಕರ್ಯಗಳ ಉನ್ನತೀಕರಣ, ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ನಿರೀಕ್ಷೆ
  • ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗಾಗಿ ನೂತನ ಕೈಗಾರಿಕಾ ವಸಾಹತುಗಳ ಸ್ಥಾಪನೆ ನಿರೀಕ್ಷೆ
  • ವಿದ್ಯುತ್ ತೆರಿಗೆಯನ್ನು ಶೇಕಡಾ 9 ರಿಂದ ಶೇ. 6 ಕ್ಕೆಇಳಿಸಬಹುದು
 Karnataka Budget 2025: ಸಿಎಂ ಸಿದ್ದು ಲೆಕ್ಕಾಚಾರ: ಜನರ ನಿರೀಕ್ಷೆಗಳೇನು?
file photo

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 7 ರಂದು 2025-26ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮಂಡಿಸಲಿದ್ದಾರೆ. ಇದು ಅವರು ದಾಖಲೆಯ16 ನೇ ಬಜೆಟ್ ಆಗಿದೆ. ಈ ಬಾರಿಯ ಬಜೆಟ್ ನಲ್ಲಿ ಹಲವಾರು ನಿರೀಕ್ಷೆಗಳು ಇರುವುದರಿಂದ ಸಿಎಂ ರಾಜಸ್ವ ಕೊರತೆಯ ಬಜೆಟ್ ಮಂಡನೆ ಮಾಡಲು ಸಾಧ್ಯತೆ. ಇದರಿಂದಾಗಿ ಸಾಲದ ಗಾತ್ರವೂ ಕೂಡ ಹೆಚ್ಚಾಗಲಿದೆ ಎನ್ನಲಾಗಿದೆ.

Add Zee News as a Preferred Source

ಈಗ ಯಾವ್ಯಾವ ವಲಯಕ್ಕೆ ಏನೇನು ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿ ರಾಜ್ಯದ ಜನರಿದ್ದಾರೆ. ಹಾಗಾಗಿ ಈಗ ನಾವು ಜನರ ನಿರೀಕ್ಷೆಗಳು ಯಾವವು ಎನ್ನುವುದನ್ನು ತಿಳಿಯೋಣ ಬನ್ನಿ.

ಜನರ ನಿರೀಕ್ಷೆಗಳು:

-ಕೃಷಿ, ಕೈಗಾರಿಕೆ,‌ ಪ್ರವಾಸೋದ್ಯಮ, ಶಿಕ್ಷಣ, ಹೈನುಗಾರಿಕೆ, ಆರೋಗ್ಯ, ಸಾರಿಗೆ ಸೇರಿದಂತೆ ಹಲ ವಲಯಗಳಿಗೆ ಆದ್ಯತೆ 

-ನೀರಾವರಿ ಯೋಜನೆಗಳಿಗೆ ಯಾವ ಪ್ರಮಾಣದಲ್ಲಿ ಹಣ ಮೀಸಲಿಡಬಹುದೆಂಬ ನಿರೀಕ್ಷೆ

-ಅದರಲ್ಲೂ ಬೆಂಗಳೂರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಹೆಚ್ಚು ಆದ್ಯತೆಯ ನಿರೀಕ್ಷೆ

-ಗ್ಯಾರಂಟಿಗೆ ಯೋಜನೆಗಳಿಗೆ ೫೩ ಸಾವಿರ ಕೋಟಿಯಷ್ಟು ಅನುದಾನ ಮೀಸಲು

-ಫಲಾನುಭವಿಗಳ ಪಟ್ಟಿಯನ್ನು ತರ್ಕಬದ್ಧಗೊಳಿಸಲು ನಿರ್ಣಯ

-ಬೆಂಗಳೂರಿನ ಮೆಟ್ರೋ, ಡಬಲ್ ಡೆಕ್ಕರ್‌ಗೆ ಗಮನ

-ವೈದ್ಯಕೀಯ ಕಾಲೇಜು ಇಲ್ಲದ ಜಿಲ್ಲೆಗೆ ಹೊಸ ಕಾಲೇಜ್ ಗಳ ಘೋಷಣೆ

-ಹಿಂದುಳಿದ ವರ್ಗದ ಮಕ್ಕಳಿಗೆ ಯುಪಿಎಸ್ಸಿ ತಯಾರಿಗೆ ಆಶ್ರಯ

-ಮಾನವ- ವನ್ಯಜೀವಿ ಸಂಘರ್ಷ ತಡೆಯಲು ದೀರ್ಘಾವಧಿ ಕಾರ್ಯಕ್ರಮ

-ಮತ್ತಷ್ಟು ಕರ್ನಾಟಕ ಪಬ್ಲಿಕ್ ಶಾಲೆ ಘೋಷಣೆ ಮೂಲಕ ಬಲವರ್ಧನೆ

-ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳಿಗೆ ವಿಶೇಷ ಅನುದಾನ

-ಪ್ರವಾಸೋದ್ಯಮಕ್ಕೆ ಪಿಪಿಪಿ ಮಾದರಿಯಲ್ಲಿ ಮೂಲಸೌಕರ್ಯಕ್ಕೆ ಒತ್ತು

-ಕಂದಾಯ ನಿವೇಶನಗಳಿಗೆ ಖಾತಾ ನೀಡುವುದಕ್ಕೆ ಒಪ್ಪಿಗೆ,ಗ್ರಾಪಂ ವ್ಯಾಪ್ತಿಯಲ್ಲಿ ಇ-ಖಾತಾ,ನಗರ ಪಟ್ಟಣ ವ್ಯಾಪ್ತಿಯಲ್ಲಿ ಬಿ- ಖಾತಾ ಘೋಷಣೆ

-ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿಸಿ ಕೈಗಾರಿಕಾ ಪ್ರದೇಶಗಳು/ವಸಾಹತುಗಳ ಮೂಲಭೂತ ಸೌಕರ್ಯಗಳ ಉನ್ನತೀಕರಣ, ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ನಿರೀಕ್ಷೆ

-ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗಾಗಿ ನೂತನ ಕೈಗಾರಿಕಾ ವಸಾಹತುಗಳ ಸ್ಥಾಪನೆ ನಿರೀಕ್ಷೆ

ವಿದ್ಯುತ್ ತೆರಿಗೆಯನ್ನು ಶೇಕಡಾ 9 ರಿಂದ ಶೇ. 6 ಕ್ಕೆಇಳಿಸಬಹುದು

-ಪ್ರತ್ಯೇಕ ವಿದ್ಯುತ್ ದರ, ಎಸ್ಕಾಂಗಳು ನೌಕರರ ಪಿಂಚಣಿ ಪಾವತಿಸುವ ಸಲುವಾಗಿ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಹೇರಿಕೆ

-100 ಶೇಕಡಾ ನವೀಕರಿಸಬಹುದಾದ ಇಂಧನ ಬಳಸುವ ಕೈಗಾರಿಕೋದ್ಯಮಿಗಳಿಗೆ ಸಬ್ಸಿಡಿ

-ಬೆಲ್ಲ ಉತ್ಪಾದಕರು, ತೊಗರಿ ಬೇಳೆ, ಬೆಲ್ಲ, ಮೆಣಸಿನಕಾಯಿ ರಫ್ತು, ತೊಗರಿ ಬೇಳೆ  ಇತರ ಧಾನ್ಯಗಳನ್ನು ಕೃಷಿ ಆಧಾರಿತ ಉದ್ಯಮವಾಗಿಸುವ ನಿರೀಕ್ಷೆ

-ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ 

-ಸೂಕ್ಷ್ಮ, ಸಣ್ಣ ಕೈಗಾರಿಕೆಗಳಿಗೆ ಪ್ರತ್ಯೇಕ ಕನಿಷ್ಠ ವೇತನ ನೀಡಬಹುದು

-ಕೃಷಿ ಯಂತ್ರೋಪಕರಣಗಳ ಪರೀಕ್ಷಾ ವರದಿಗೆ ಕನಿಷ್ಠ ದರ ನಿಗದಿಮಾಡಬಹುದು

-ಕಲಾವಿದರ ಮಾಸಾಶನ 3,000 ರೂ. ಕೊಡುವ ಸಾಧ್ಯತೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

About the Author

Trending News