ಬೆಂಗಳೂರು : ನವೆಂಬರ್ ಕ್ರಾಂತಿ ಬ್ರಾಂತಿಯ ಚರ್ಚೆ ದಿನದಿಂದ ದಿನಕ್ಕೆ ಕ್ಷೀಣಿಸ್ತಿದೆ. ಡಿಸಿಎಂ ಡಿಕೆಶಿ ದೆಹಲಿಗೆ ಹೋಗಿ ಬಂದ್ರೂ ರಾಹುಲ್ ಗಾಂಧಿ ಭೇಟಿ ಸಾಧ್ಯವಾಗಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿ ಮಾಡಿ ವೋಟ್ ಚೋರಿ ಸಹಿ ಅಭಿಯಾನದ ವರದಿ ನೀಡೋದಕ್ಕಷ್ಟೇ ಸೀಮಿತವಾಗಿದೆ. ಸಿಎಂ ಕುರ್ಚಿ ಆಸೆಯನ್ನ ಖರ್ಗೆ ಮುಂದೆ ವ್ಯಕ್ತಪಡಿಸಿದರೂ ವರ್ಕೌಂಟ್ ಆದಂತೆ ಕಾಣ್ತಿಲ್ಲ. ಇದ್ರ ನಡುವೆಯೇ ನವೆಂಬರ್ 15 ರಂದು ಸಿಎಂ ದೆಹಲಿಗೆ ತೆರಳ್ತಿದ್ದು, ಮೂರು ದಿನಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ.
ಈ ವೇಳೆ ರಾಹುಲ್ ಗಾಂಧಿ ಭೇಟಿ ಮಾಡಿ ಸಂಪುಟ ಪುನಾರಚನೆಗೆ ಒಪ್ಪಿಗೆ ಪಡೆವ ಸಾಧ್ಯತೆ ಇದೆ. ರಾಹುಲ್ ಅಭಯ ಸಿಕ್ಕರೆ ಸಿದ್ದು ನಿರ್ಭಯವಾಗಿ ಕುರ್ಚಿಯಲ್ಲಿ ಉಳಿತಾರೆ. ಸಂಪುಟವನ್ನು ಪುನಾರಚನೆ ಮೂಲಕ ಮತ್ತೊಮ್ಮೆ ಪ್ರಾಬಲ್ಯ ಮೆರೆಯುತ್ತಾರೆ ಎಂಬ ಮಾತುಗಳು ಕೈ ಪಾಳೆಯದಲ್ಲಿ ಕೇಳಿ ಬರ್ತಿದೆ.
ಇದನ್ನೂ ಓದಿ:ದಲಿತ ಸಿಎಂ ಮಾಡುವಂತೆ ಮಂಡ್ಯದಲ್ಲಿ ಮುಖಂಡರ ಹೋರಾಟ
ಇನ್ನು ಬಿಹಾರ ಚುನಾವಣಾ ಫಲಿತಾಂಶ ಹೊರಬೀಳುವ ಮುನ್ನವೇ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಲಿದ್ದಾರೆ ಎಂಬ ಮಾಹಿತಿ ಇತ್ತು.ಆದ್ರೆ ಅವರ ಫಿನ್ಲ್ಯಾಂಡ್ ಪ್ರವಾಸ ಒಂದು ವಾರ ಮುಂದೂಡಿಕೆ ಯಾಗಿದೆ ಎನ್ನಲಾಗ್ತಿದೆ. ಸಿದ್ದರಾಮಯ್ಯಗೆ ನವೆಂಬರ್ 17 ರಂದು ರಾಹುಲ್ ಸಮಯಾವಕಾಶ ನೀಡಲಿದ್ದು ಸಂಪುಟ ಪುನಾರಚನೆಗೆ ಅನುಮತಿ ಪಡೆದುಕೊಳ್ಳಬಹುದು ಎನ್ನಲಾಗ್ತಿದೆ. ಸಂಪುಟ ಪುನಾರಚನೆ ಒಕೆ ಆದರೆ ಅಂದಾಜು 12 ರಿಂದ 15 ಸಚಿವರ ಕೈಬಿಟ್ಟು ಅವರ ಸ್ಥಾನಗಳಿಗೆ ಹೊಸಬರ ಆಯ್ಕೆ ಪಕ್ಕಾ ಎನ್ನಲಾಗ್ತಿದೆ. ಯಾರನ್ನ ಕೈಬಿಡಲಾಗುತ್ತದೆ ಎಂಬ ಮಾಹಿತಿಯೂ ಈಗಾಗಲೇ ಕೆಲವು ಸಚಿವರ ಗಮನಕ್ಕೆ ಹೋಗಿದೆಯಂತೆ.
ಸಿಎಂ ದೆಹಲಿಗೆ ಭೇಟಿ ಹಿನ್ನೆಲೆಯಲ್ಲೇ ಕೆಲವು ಸಚಿವರಿಗೆ ಎದೆಬಡಿತ ಜೋರಾಗ್ತಿದೆ.ಎಲ್ಲಿ ಸಂಪುಟದಿಂದ ತಮ್ಮನ್ನ ಕೈಬಿಡ್ತಾರೋ ಎಂಬ ಆತಂಕ ಎದುರಾಗಿದೆ.ಹಾಗಾಗಿ ಸಂಪುಟದಲ್ಲೇ ಉಳಿಯ ಬೇಕೆಂಬ ಕಾರಣಕ್ಕೆ ಕೆಲವರು ವರಿಷ್ಠರ ಬೆನ್ನಿಗೆ ಬಿದ್ದಿದ್ದಾರೆ. ಸಚಿವ ಈಶ್ವರ್ ಖಂಡ್ರೆ, ರಹೀಂಖಾನ್ ಇಂದು ಸದಾಶಿವನಗರದ ಎಐಸಿಸಿ ಅಧ್ಯಕ್ಷರ ಖರ್ಗೆಯವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಸಂಪುಟದಿಂದ ರಹೀಂಖಾನ್ ಕೈಬಿಡ್ತಾರೆಂಬ ಚರ್ಚೆಗಳು ಇವೆ.ಹೀಗಾಗಿ ಎಐಸಿಸಿ ಅಧ್ಯಕ್ಷ ಖರ್ಗೆಯವರ ಮುಂದೆ ಮನವಿ ಮಾಡಿದ್ದಾರೆ. ರಹೀಂಖಾನ್ ಪರ ಈಶ್ವರ್ ಖಂಡ್ರೆ ಕೂಡ ಬ್ಯಾಟಿಂಗ್ ನಡೆಸಿದ್ದಾರೆ. ಇನ್ನು ಸಂಪುಟಕ್ಕೆ ಎಂಟ್ರಿ ಆಗಲಿರುವ ಶಾಸಕರು ಖರ್ಗೆಯವರನ್ನ ಭೇಟಿ ಮಾಡ್ತಿದ್ದಾರೆ.ಇಂದು ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಕೂಡ ಖರ್ಗೆಯವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ರು..
ಇದನ್ನೂ ಓದಿ:ದೆಹಲಿ ಸ್ಫೋಟ ಪ್ರಕರಣ, ವಿಜಯದ ತುಂಗಭದ್ರಾ ಡ್ಯಾಂಗೆ ಹೈ ಸೆಕ್ಯೂರಿಟಿ
ಒಟ್ನಲ್ಲಿ ಸಿಎಂ ಕುರ್ಚಿ ಬದಲಾವಣೆ ಚರ್ಚೆ ಮುಂದೆ ಮುಂದೆ ಹೋಗ್ತಿದೆ, ಸಂಪುಟ ಪುನಾರಚನೆ ಚರ್ಚೆ ಜೋರಾಗ್ತಿದೆ.. ಸಿಎಂ ದೆಹಲಿ ಭೇಟಿಯ ಹಿನ್ನೆಲೆಯಲ್ಲೇ ಸಂಪುಟ ಪುನಾರಚನೆ ಫಿಕ್ಸ್ ಅನ್ನೋದು ಹೊರಬಿದ್ದಿದೆ. ರಾಹುಲ್ ಭೇಟಿಗೆ ಅವಕಾಶ ಸಿಕ್ಕರೆ ಮಾಸಾಂತ್ಯದೊಳಗೆ ಹಲವು ಸಚಿವರು ಸಂಪುಟದಿಂದ ಹೊರಬೀಳಲಿದ್ದಾರೆ.. ಸಚಿವ ಸ್ಥಾನದ ಕನಸು ಕಾಣ್ತಿರೋರಿಗೆ ಅವಕಾಶ ಲಭ್ಯವಾಗಲಿದೆ. ಸಿಎಂ ಕುರ್ಚಿನಾ.. ಸಂಪುಟ ಪುನಾರಚನನಾ... ನವೆಂಬರ್ 17 ರಂದು ಕ್ಲೈಮ್ಯಾಕ್ಸ್ ಫಿಕ್ಸ್..









