)
ಬೆಂಗಳೂರು : ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರ್ಷ ಆಗ್ತಿರುವ ಸನಿಹದಲ್ಲೇ,ಮೇಜರ್ ಸರ್ಜರಿಗೆ ಹೈಕಮಾಂಡ್ ಮುಂದಾಗಿದೆ.ಸಿಎಂ ಸಿದ್ದರಾಮಯ್ಯನವ್ರ ಸಚಿವ ಸಂಪುಟ ಪುನರ್ ರಚನೆ ಫಿಕ್ಸ್ ಆಗಿದ್ದು,ಸಂಪುಟದ ಅರ್ಧದಷ್ಟು ಸಚಿವರನ್ನ ಕೈ ಬಿಡೋ ಸಾಧ್ಯತೆ ಇದೆ.ನಿನ್ನೆ ಡಿನ್ನರ್ ಮೀಟಿಂಗ್ ನಲ್ಲಿ ಸಚಿವರಿಗೆ ಸಿಎಂ ಸಿದ್ದರಾಮಯ್ಯನವ್ರೇ ಖುದ್ದಾಗಿ ಮಾಹಿತಿ ನೀಡಿದ್ದಾರಂತೆ.ಪುನರ್ ರಚನೆ ಆಗಲಿದೆ. ಮಾನಸಿಕವಾಗಿ ತಯಾರಿಗಿರಿ ಎಂದು ಸಿಎಂ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.ಟೆನ್ಷನ್ ನಲ್ಲೇ ಔತಣಕೂಟಕ್ಕೆ ಹೋಗಿದ್ದ ಸಚಿವರು, ಊಟದ ವೇಳೆ ಶಾಕ್ ಗೆ ಒಳಗಾಗಿದ್ದಾರೆ. ಹೊಸಬರಿಗೆ ಅವಕಾಶ ಕೊಡುವ ಬಗ್ಗೆ ವರಿಷ್ಠರ ಜೊತೆ ಚರ್ಚೆ ಆಗಿದೆ. ಹೈಕಮಾಂಡ್ ಬಳಿ ನಿಮ್ಮೆಲ್ಲರ ರಿಪೋರ್ಟ್ ಕಾರ್ಡ್ ಇದ್ದು ಯಾರನ್ನ ಕೈ ಬಿಡ್ತಾರೋ ಗೊತ್ತಿಲ್ಲ.. ಮಾನಸಿಕವಾಗಿ ಸಿದ್ದರಾಗಿರಿ ಎಂದಿದ್ದಾರೆ.ಬಿಹಾರ ಎಲೆಕ್ಷನ್ ರಿಸಲ್ಟ್ ನಂತ್ರ ಯಾವುದೇ ಕ್ಷಣದಲ್ಲಿ ಪುನರ್ ರಚನೆ ಆಗುವ ಸಾಧ್ಯತೆ ಇದೆ..ಪುನರ್ ರಚನೆ ಮಾತು ಕೇಳಿ ಹಲವು ಬೇಸರದಿಂದಲೇ ತೆರಳಿದ್ರು ಅಂತಾ ಮಾಹಿತಿ ಬಂದಿದೆ..
ನಿನ್ನೆ ಸಿಎಂ ಡಿನ್ನರ್ ಸಭೆಯಲ್ಲಿ ನವೆಂಬರ್ ಕ್ರಾಂತಿಯ ಬಗ್ಗೆಯೂ ಚರ್ಚೆ ಆಗಿದೆ.ಸಿಎಂ ಹಾಗೂ ಸಚಿವರು ಮಾತನಾಡುವಾಗ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಬಿಸಿಬಿಸಿ ಚರ್ಚೆ ಆಗಿದೆ..ಡಿಸಿಎಂ ಡಿ.ಕೆ ಶಿವಕುಮಾರ್ ತೆರಳಿದ ಬಳಿಕ ಸಿಎಂ,ಸಚಿವರು ಈ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.ಸರ್.. ಮಾಧ್ಯಮಗಳಲ್ಲಿ ಬರೀ ನವೆಂಬರ್ ಕ್ರಾಂತಿಯದ್ದೇ ಸುದ್ದಿ ಎಂದ ಕೆಲ ಸಚಿವರು ಪ್ರಸ್ತಾಪ ಮಾಡಿದ್ದಾರೆ.. ಆಗ ಸಿಎಂ, ಹೇ.ಯಾವುದೂ ಇಲ್ಲ..ಸುಮ್ಕಿರಯ್ಯಾ.. ಹೈಕಮಾಂಡ್ ನವ್ರು ನಿಂಗೆ ಹೇಳಿದ್ದಾರಾ ಎಂದು ಸಚಿವರನ್ನೇ ಸಿಎಂ ಪ್ರಶ್ನಿಸಿದ್ರಂತೆ.ಈ ವೇಳೆ ಡಿ.ಕೆ ಶಿವಕುಮಾರ್ ಹೇಳಿಕೆ ಬಗ್ಗೆಯೂ ಸಚಿವರು ಪ್ರಸ್ತಾಪಿಸಿ,ಸಿಎಂ ಆಯ್ಕೆಗೆ ಶಾಸಕರ ಬಲ ಬೇಡ ಹೈಕಮಾಂಡ್ ತೀರ್ಮಾನ ಸಾಕು ಅಂತಾ ಡಿಕೆ ಹೇಳ್ತಿದ್ದಾರೆ ಎಂದಿದ್ದಾರೆ. ಅದಕ್ಕೆ ಸಿಎಂ ಶಾಸಕರ ಬೆಂಬಲ ಇಲ್ಲದೇ ಸಿಎಂ ಆಗೋಕೆ ಆಗುತ್ತೇನಯ್ಯಾ. ನನ್ನನ್ನ ಆಯ್ಕೆ ಮಾಡಿದ್ದು ಶಾಸಕರಲ್ವಾ ಅಂತಾ ಮರು ಪ್ರಶ್ನೆ ಹಾಕಿದ್ದಾರೆ.ಈ ಮೂಲಕ ಐದು ವರ್ಷವೂ ನಾನೇ ಸಿಎಂ ಎಂದು ಸಿದ್ದರಾಮಯ್ಯ ಸಂದೇಶ ನೀಡಿದ್ದಾರೆ.
ಈ ಕಡೆ ನಾಯಕತ್ವ ಬದಲಾವಣೆ ಚರ್ಚೆಗಳಿಗೆ ಹೈಕಮಾಂಡ್ ಬ್ರೇಕ್ ಹಾಕಬೇಕುಶಾಸಕರು ಕೂಡ ಬಾಯಿಗೆ ಬ್ರೇಕ್ ಹಾಕಿ ಕೊಳ್ಳಬೇಕು ಅಂತಾ ಸಚಿವ ರಾಮಲಿಂಗಾರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ.
ಡಿಕೆಶಿ ಹೇಳಿಕೆ ವಿಚಾರವಾಗಿ ಮಾತಾಡಿದ ಎಂ.ಬಿ ಪಾಟೀಲ್, ವೀಕ್ಷಕರನ್ನು ಕಳುಹಿಸಿ ಅಭಿಪ್ರಾಯ ಕೇಳಿದ ಬಳಿಕ ಹೈಕಮಾಂಡ್ ನಿರ್ಣಯ ತಗೊಳ್ತುತ್ತೆ.ಇದೇ ನಮ್ಮ ಪಕ್ಷದ ಪದ್ದತಿ ಅಂದ್ರು. ಸದ್ಯಕ್ಕೆ ನಮ್ಮಲ್ಲಿ ಯಾವ ಕ್ರಾಂತಿಯೂ ಇಲ್ಲ.ಸಿಎಂ ಊಟಕ್ಕೆ ಕರೆದಿದ್ರು ಹೋಗಿದ್ವಿ.ಊಟ ಚೆನ್ನಾಗಿತ್ತು.ಮಾಡ್ಕೊಂಡು ಬಂದ್ವಿ.ಅದನ್ನ ಬಿಟ್ಟು ಜನರಲ್ ಆಗಿ ಮಾತಾಡಿದ್ದೇವೆ ಅಷ್ಟೇ ಅಂದ್ರು.
ಈ ಕಡೆ ಸಿದ್ದು- ಡಿಕೆಶಿ ನಡುವಿನ ಶೀತಲ ಸಮರ ತಾರಕ್ಕೇರುತ್ತಿದೆ. ಇಬ್ಬರೂ ಪರಸ್ಪರ ಅಂತರ ಕಾಯ್ದುಕೊಳ್ತಿದ್ದಾರೆ. ಜೋಡೆತ್ತಿನಂತಿದ್ದವರು ನಾನೊಂದು ತೀರ. ನೀನೊಂದು ತೀರಾ ಎನ್ನುತ್ತಿದ್ದಂತೆ ಕಾಣ್ತಿದೆ. ಸಿಎಂ ಭಾಗವಹಿಸ್ತಿರೋ ಕಾರ್ಯಕ್ರಮಗಳಿಗಿ ಡಿಸಿಎಂ ಮತ್ತೆ ಮತ್ತೆ ಗೈರಾಗ್ತಿದ್ದಾರೆ. ಇಂದು ನೃಪತುಂಗ ವಿವಿಯ ನೂತನ ಶೈಕ್ಷಣಿಕ ಕಟ್ಟದ ಉದ್ಘಾಟನಾ ಕಾರ್ಯ ಕ್ರಮದಿಂದಲೂ ಡಿಸಿಎಂ ಡಿಕೆಶಿ ದೂರ ಉಳಿದಿದ್ದಾರೆ. ಈ ಹಿಂದೆ ದಸರಾ ಉದ್ಘಾಟನೆ,ವಾಲ್ಮೀಕಿ ಜಯಂತಿ ಸಮಾರಂಭ ಗಳಿಗೂ ಗೈರಾಗಿದ್ರು.ಇದೀಗ ಶೈಕ್ಷಣಿಕ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಿಂದಲೂ ದೂರ ಉಳಿದಿದ್ದಾರೆ. ಸರ್ಕಾರಕ್ಕೆ ಎರಡೂವರೆ ವರ್ಷ ಆಗ್ತಿರುವ ಹೊತ್ತಲ್ಲೇ ಡಿಕೆಶಿ ನಡೆ ಅಚ್ಚರಿ ಮೂಡಿಸ್ತಿದೆ.ಎರಡೂವರೆ ವರ್ಷ ಅವಧಿಗೆ ಪವರ್ ಶೇರಿಂಗ್ ಒಪ್ಪಂದ ಆಗಿದೆ ಅಂತಾ ಡಿಕೆ ಶಿವಕುಮಾರ್ ಹೇಳಿದ್ರು.ಈ ಮೂಲಕ ಸಿಎಂ ಕುರ್ಚಿಗೆ ತೀವ್ರ ಪಟ್ಟುಹಿಡಿಯುತ್ತಿದ್ದಾರೆ ಎನ್ನಲಾಗ್ತಿದೆ.ನಿನ್ನೆ ಸಿಎಂ ಡಿನ್ನರ್ ಮೀಟಿಂಗ್ ನಲ್ಲಿ ನಾಮಕಾವಸ್ತೆ ಭಾಗಿಯಾಗಿದ್ದ ಡಿಸಿಎಂ, ಒಂದೇ ತಾಸಿನಲ್ಲಿ ಸಿಎಂ ಔತಣಕೂಟದಿಂದ ತೆರಳಿದ್ರು.
ಒಟ್ಟನಲ್ಲಿ ಒಂದ್ಕಡೆ ಸಂಪುಟ ಪುನರ್ ರಚನೆ ಕಸರತ್ತು ಜೋರಾಗ್ತಿದ್ರೆ ಮತ್ತೊಂದೆಡೆ,ಸಿಎಂ ಕುರ್ಚಿಯ ಗದ್ದಲವೂ ತಾರಕಕ್ಕೇರುತ್ತಿದೆ.ಬಿಹಾರ ಚುನಾವಣಾ ಫಲಿತಾಂಶ ನಂತ್ರ ಸಂಪುಟ ಪುನರ್ ರಚನೆಗೆ ಹೈಕಮಾಂಡ್ ತೀರ್ಮಾನಿಸಿದೆ.ಹಿರಿಯ ಸಚಿವರಿಗೆ ಪಕ್ಷ ಸಂಘಟನೆ ಜವಾಬ್ದಾರಿ ನೀಡಲು ಮುಂದಾಗಿದ್ದಾರೆ.