)
ಬೆಂಗಳೂರು : ರಾಜ್ಯ ಕಾಂಗ್ರೆಸ್ನಲ್ಲಿ ಅಧಿಕಾರದ ಗದ್ದುಗೆಯ ಗುದ್ದಾಟ ತೆರೆಮರೆ ಹಿಂದೆ ಜೋರಾಗಿ ನಡೆಯುತ್ತಿದೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ನವರಿಗೆ ಶುಭ ಸುದ್ದಿ ಎಂಬಂತೆ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ದರಾಮಯ್ಯಗೆ ಅಭಯ ನೀಡಿದೆ. ಆಡಳಿತವನ್ನು ಇನ್ನಷ್ಟು ಚುರುಕುಗೊಳಿ ಸುವಂತೆ ಅಪ್ಪಣೆ ಮಾಡಿದ್ದು ಸಿಎಂಗೆ ದೀಪಾವಳಿ ಧಮಕಾ ಖುಷಿ ವಿಚಾರ ಸಿಕ್ಕಂತಾಗಿದೆ.
ಆಡಳಿತಾತ್ಮಕ ವಿಚಾರದಲ್ಲಿ ತಮ್ಮ ನಿರ್ಧಾರವೇ ಅಂತಿಮ ಎಂದಿರೋ ಕೈ ಹೈಕಮಾಂಡ್ ಅಡಳಿತಕ್ಕೆ ವೇಗ ಮುಟ್ಟಿಲು ಸೂಚಿಸಿದೆ.ನೀವು ಯಾವುದೇ ನಿರ್ಧಾರ ಕೈಗೊಂಡರು ಅದಕ್ಕೆ ಯಾರು ಅಡ್ಡಿ ಬರುವುದಿಲ್ಲ. ನಿಮ್ಮ ಅಧಿಕಾರದಲ್ಲಿ ನೀವು ನಿರ್ಧಾರ ಕೈಗೊಳ್ಳಲು ಸ್ವತಂತ್ರರು ಹಾಗೂ ಸಶಕ್ತರು ಎಂದು ಸೂಚಿಸಿದೆ. ಕೆಲವು ನೇಮಕಾತಿಯಲ್ಲೂ ಸ್ವತಂತ್ರ ನಿರ್ಧಾರ ಮಾಡಿ ಎಂದು ಹೇಳಿದೆ ಪಕ್ಷ ಹಾಗೂ ಸರ್ಕಾರದ ಇಮೇಜ್ ಹೆಚ್ಚಿಸುವ ಕೆಲಸ ನಿಮ್ಮಿಂದ ಅಗುತ್ತಿದೆ ಅದು ನಿರಂತರ ವಾಗಿ ಆಗಲಿ ಎಂದು ಕಾಂಗ್ರೆಸ್ ವರಿಷ್ಟರು ಸೂಚಿಸಿದ್ದಾರೆ ಎನ್ನಲಾಗಿದೆ.
ಇನ್ನು ಸ್ಥಳೀಯ ವಿಚಾರಗಳಲ್ಲಿ ತಮ್ಮ ನಿರ್ಧಾರಕ್ಕೆ ನಮ್ಮ ಸಹಮತವಿದೆ ಎಂದು ಹೈಕಮಾಂಡ್ ಹೇಳಿದೆ. ತಮ್ಮ ಅನುಭವ ಪಕ್ಷದ ಇತರರಿಗೆ ಮಾದರಿಯಾಗಿದೆ. ಆಡಳಿತ ಯಂತ್ರಕ್ಕೆ ವೇಗ ನೀಡಿ.ಇನ್ನು ಮುಂಬರುವ ಸ್ಥಳೀಯ ಸಂಸ್ಥೆಯ ಚುನಾವಣೆಗೆ ನಿಮ್ಮದೇ ನೇತೃತ್ವ ಇರಲಿದೆ ಎಂದಿ ಹೇಳುವ ಮೂಲಕ ನವಂಬರ್ ಕ್ರಾಂತಿಯೇ ಸುಳ್ಳು ಎಂಬಯದನ್ನ ಒತ್ತಿ ಹೇಳಿದೆ.ಇನ್ನು ವಿರೋಧ ಪಕ್ಷಗಳ ಪಿತೂರಿಗೆ ತಕ್ಕ ಉತ್ತರವನ್ನ ನೀಡಿ.ಸಂಪುಟ ಪುನಾರಚನೆ ವಿಚಾರದಲ್ಲಿ ತಮ್ಮ ನಿರ್ಧಾರಕ್ಕೆ ನಾವು ಮನ್ನಣೆ ನೀಡುತ್ತೇವೆ ಎಂದು ಹೇಳುವ ಮೂಲಕ ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಎಂಬುವುದು ಪರೋಕ್ಷ ವಾಗಿ ಹೇಳಿದಂತಿದೆ.
ಒಟ್ಟಾರೆ ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ದೊಡ್ಡ ಅಭಯ ನೀಡಿದೆ.ಆದರೆ ರಾಜ್ಯ ಕಾಂಗ್ರೆಸ್ನಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಬೆಳೆ ಬೆಳವಣಿಗೆಯನ್ನು ಗಮನಿಸಿ ದರೆ ನವಂಬರ್ ಕ್ರಾಂತಿಯೋ,ಅಥವಾ ಶಾಂತಿಯೋ ಎಂಬುದು ತೀವ್ರ ಕುತೂಹಲ ಕ್ಕೆ ಕಾರಣವಾಗಿದೆ.