ಕಾಂಗ್ರೆಸ್ ಬಿಟ್ಟರೂ "ಕೈ" ಬಿಡದೆ ಎಸ್.ಎಂ.ಕೆ.ಗೆ ಬೀಳ್ಕೊಡುಗೆ : ಹಿಂದೆ ಸರಿದ ಬಿಜೆಪಿ

ಕುಟುಂಬ ಜವಾಬ್ದಾರಿ ನಿಭಾಯಿಸುವ ಜವಾಬ್ದಾರಿ ಡಿಕೆ ಕುಟುಂಬಕ್ಕೆ ಇತ್ತು, ಆದರೆ ಎಸ್ ಎಂ ಕೆ ಅವರ ರಾಜಕೀಯ ಕೊನೆಯ ಹೆಜ್ಜೆ ಬಿಜೆಪಿ. ಬಿಜೆಪಿ ಹಿರಿಯ ನಾಯಕರು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಂತಿಮ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದರೂ, ಪಕ್ಷದಾದ್ಯಂತ ನಿಜವಾದ ನಾಯಕನಾಗಿ ಅವರನ್ನು ಬಿಂಬಿಸುವ, ಗೌರವ ಸಲ್ಲಿಸುವ ಪ್ರಕ್ರಿಯೆಯಲ್ಲಿ ಹಿಂದೆ ಸರಿದಂತಿದೆ.. ಹೆಚ್ಚಿನ ಮಾಹಿತಿ.. ಇಲ್ಲಿದೆ...

Written by - Prashobh Devanahalli | Last Updated : Dec 11, 2024, 04:45 PM IST
    • ಕುಟುಂಬ ಜವಾಬ್ದಾರಿ ನಿಭಾಯಿಸುವ ಜವಾಬ್ದಾರಿ ಡಿಕೆ ಕುಟುಂಬಕ್ಕೆ ಇತ್ತು,
    • ಆದರೆ ಎಸ್ ಎಂ ಕೆ ಅವರ ರಾಜಕೀಯ ಕೊನೆಯ ಹೆಜ್ಜೆ ಬಿಜೆಪಿ.
    • ಕಮಲದ ನಾಯಕರು ಹೆಚ್ಚಾಗಿ ಕಾಣಿಸಿಕೊಳ್ಳದೆ ಇರುವುದು ಕೂಡ ಎದ್ದು ಕಾಣಿಸಿದ ಸಂಗತಿ.
ಕಾಂಗ್ರೆಸ್ ಬಿಟ್ಟರೂ "ಕೈ" ಬಿಡದೆ ಎಸ್.ಎಂ.ಕೆ.ಗೆ ಬೀಳ್ಕೊಡುಗೆ : ಹಿಂದೆ ಸರಿದ ಬಿಜೆಪಿ title=

ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಬೀಗರು ಹಾಗೂ ರಾಜಕೀಯ ಗುರು ಅವರ ಪಾರ್ಥಿವ ಶರೀರ ದರ್ಶನ, ಅಂತಿಮ ಯಾತ್ರೆ ಹಾಗೂ ಅಂತ್ಯ ಸಂಸ್ಕಾರ ವರೆಗೆ ಮನೆ ಮಗನ ರೀತಿ ನಿಂತಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ, ಆದರೆ ರಾಜಕೀಯ ಕೊನೆಯ ಹೆಜ್ಜೆ ಇಟ್ಟಂತ ಪಕ್ಷ ಬಿಜೆಪಿ, ಆದರೆ ಕಮಲದ ನಾಯಕರು ಹೆಚ್ಚಾಗಿ ಕಾಣಿಸಿಕೊಳ್ಳದೆ ಇರುವುದು ಕೂಡ ಎದ್ದು ಕಾಣಿಸಿದ ಸಂಗತಿ. 

ಬಿಜೆಪಿಯ ನಿಷ್ಕ್ರಿಯತೆ: ಕುಟುಂಬ ಜವಾಬ್ದಾರಿ ನಿಭಾಯಿಸುವ ಜವಾಬ್ದಾರಿ ಡಿಕೆ ಕುಟುಂಬಕ್ಕೆ ಇತ್ತು, ಆದರೆ ಎಸ್ ಎಂ ಕೆ ಅವರ ರಾಜಕೀಯ ಕೊನೆಯ ಹೆಜ್ಜೆ ಬಿಜೆಪಿ. ಬಿಜೆಪಿ ಹಿರಿಯ ನಾಯಕರು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಂತಿಮ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದರೂ, ಪಕ್ಷದಾದ್ಯಂತ ನಿಜವಾದ ನಾಯಕನಾಗಿ ಅವರನ್ನು ಬಿಂಬಿಸುವ, ಗೌರವ ಸಲ್ಲಿಸುವ ಪ್ರಕ್ರಿಯೆಯಲ್ಲಿ ಹಿಂದೆ ಸರಿದಂತಿದೆ. ಬಿ.ಎಸ್. ಯಡಿಯೂರಪ್ಪ ಅವರು ಸದಾಶಿವನಗರ ನಿವಾಸದಲ್ಲಿ ಅವರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿ ಹಾಗೂ ಮದ್ದೂರಿನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದರು. ಆದರೆ ಪಕ್ಷದ ಅಧಿಕೃತ ವೇದಿಕೆಯಿಂದ ಕೃಷ್ಣ ಅವರನ್ನು ಸ್ಮರಿಸುವ ಅಥವಾ ಅವರ ಕೊಡುಗೆಗಳನ್ನು ಗುರುತಿಸುವಂತಹ ಕಾರ್ಯಕ್ರಮಗಳು ನಡೆದಿಲ್ಲ.

ಇದನ್ನೂ ಓದಿ:ಎಸ್‌ಎಂ ಕೃಷ್ಣ ನಿಧನ: ಒಕ್ಕಲಿಗ ಸಂಪ್ರದಾಯದ ಪ್ರಕಾರ ಅಂತಿಮ ವಿಧಿವಿಧಾನ

ಹೌದು, ಎಸ್ ಎಂ ಕೃಷ್ಣ ಬಿಜೆಪಿ ಗೆ ಬಂದ ನಂತರ ಅಭ್ಯರ್ಥಿ ಆಗದೆ ಬಿಜೆಪಿ ಮುಖಂಡರ ಮಾರ್ಗದರ್ಶನ ನೀಡುವ ಮೂಲಕ 2018ರ ವಿಧಾನ ಸಭೆಯಲ್ಲಿ,2019ರ ಲೋಕಸಭೆ ಸಕ್ರಿಯರಾಗಿದ್ರು..2023ರ ವಿಧಾನ ಸಭೆ ಚುನಾವಣೆಗೂ ಮುನ್ನ ರಾಜೀಕೀಯ ನಿವೃತ್ತ ಘೋಷಿಸಿದ್ರು.ಜೊತೆಗೆ 2018 ರ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಪ್ರಯತ್ನ ನಡೆಸಿ ಸಫಲರಾದ್ರು. ಆದರೆ ವಿವಿಧ ಕಾರಣಕ್ಕೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ ಕೃಷ್ಣ ಅವರನ್ನ ಪಕ್ಷ " ಇವರು ನಮ್ಮ ನಾಯಕ" ಎಂದು ಬಿಂಬಿಸಲು ನಿಷ್ಕ್ರಿಯವಾಗಿದೆ. ಪಕ್ಷದ ವೇದಿಕೆ ಅಗಲಿದ ಗಣ್ಯರಿಗೆ ಸಂತಾಪ ಸಭೆ ಅಥವಾ ಅವರು ನೀಡಿದ ಮಾರ್ಗದರ್ಶನ ಸ್ಮರಿಸಲು ಪ್ರಯತ್ನಿಸಿಲ್ಲ. ಬಿಜೆಪಿ ನಾಯಕರು ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿ ಕುಟುಂಬ ವರ್ಗಕ್ಕೆ ಧೈರ್ಯ ಮಾಡಿದ್ದಾರೆ, ಆದರೆ ಬಿಜೆಪಿ ಅಧಿಕೃತವಾಗಿ ಹೇಳುವಷ್ಟು ಸ್ಮರಣೆ ಮಾಡಿದ್ದು ಕಂಡುಬಂದಿಲ್ಲ. 

ಸಂಸದ ತೇಜಸ್ವಿ ಸೂರ್ಯ ಕೃಷ್ಣ ಪ್ರಶಸ್ತಿ ಸ್ಥಾಪನೆಗೆ ಮನವಿ : ಈ ಮದ್ಯೆ ಸಂಸದ ತೇಜಸ್ವಿ ಸೂರ್ಯ, ಕರ್ನಾಟಕ ಕಂಡ ಅತ್ಯಂತ ಮುತ್ಸದ್ಧಿ, ದೂರದೃಷ್ಟಿಯ ನಾಯಕರಾಗಿದ್ದ ಮಾಜಿ ಮುಖ್ಯಮಂತ್ರಿ ಶ್ರೀ ಎನ್ ಎಂ ಕೃಷ್ಣ ರವರ ಅಗಲಿಕೆ ನಾಡಿನ ಜನತೆಯನ್ನು ದುಖ ತಪ್ತರನ್ನಾಗಿಸಿದೆ. ನಾಡಿನ ಸಮಗ್ರ ಅಭಿವೃದ್ಧಿಗೆ ಅವರ ಕೊಡುಗೆ ಮತ್ತು ಬೆಂಗಳೂರು ನಗರವನ್ನು ಅಂತರಾಷ್ಟ್ರೀಯ ಮಟ್ಟದ ನಗರವನ್ನಾಗಿಸಲು ಜಾರಿಗೆ ತಂದ ದೂರದೃಷ್ಟಿಯ ಯೋಜನೆಗಳು ಅನುಕರಣೀಯ, ಅವರ ಅಭಿವೃದ್ಧಿ ಪರ, ಸಭ್ಯ, ಮೌಲ್ಯಯುತ ರಾಜಕಾರಣ ಕನ್ನಡಿಗರಿಗೆ ಸ್ಫೂರ್ತಿ ಶ್ರೀ ಎಸ್ ಎಂ ಕೃಷ್ಣ ರವರ ಹೆಸರಿನಲ್ಲಿ, ಅವರ ಸಾಧನೆಗಳು, ನೆನವುಗಳು & ಮೌಲ್ಯಗಳನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪ್ರಶಸ್ತಿಯೊಂದನ್ನು ಸ್ಥಾಪನೆ ಮಾಡಿ, ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಕ್ರಮ ಕೈಗೊಳ್ಳುವಂತೆ ನಾನು ತಮ್ಮಲ್ಲಿ ವಿನಂತಿಸುತ್ತೇನೆ, ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಎಸ್‌ಎಂ ಕೃಷ್ಣ ನಿಧನ: ಹುಟ್ಟೂರಲ್ಲಿ ನೀರವ ಮೌನ, ಮದ್ದೂರು ಬಂದ್

ಕ್ಲಾಸ್ ಹಾಗೂ ಮಾಸ್ ರಾಜಕಾರಿಣಿ ಎಸ್ ಎಂ ಕೃಷ್ಣ ಅವರ ಅಂತ್ಯ ಸಂಸ್ಕಾರ ಲೈವ್ ಕೂಡ ಕಾಂಗ್ರೆಸ್ ತಮ್ಮ ಅಧಿಕೃತ ಪೇಜ್ ನಲ್ಲಿ ಪ್ರಸಾರ ಮಾಡಿದೆ, ಪ್ರೊಟೋಕೊಲ್ ಪ್ರಕಾರ ಸರ್ಕಾರಿ ಗೌರವ ನೀಡಿದರೆ ಸಾಕು, ಆದರೆ ಎಸ್ ಎಂ ಕೃಷ್ಣ ಅವರು ಕಾಂಗ್ರೆಸ್ ಬಿಟ್ಟರು ಕಾಂಗ್ರೆಸ್ ಎಸ್ ಎಂ ಕೃಷ್ಣ ರಂತ ನಾಯಕನನ್ನು ಬಿಡಲಿಲ್ಲ ಎಂಬ ರೀತಿ ಅಂತ್ಯ ಕಾಲದಲ್ಲಿ ಪಕ್ಷ ಮುಂದೆ ನಿಂತು ಕೆಲಸ ಮಾಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News