ಬೆಂಗಳೂರು: ರಾಜ್ಯದಲ್ಲೀಗ ಗ್ರಾಮ ಪಂಚಾಯಿತಿ ಚುನಾವಣೆಯದ್ದೇ ಸದ್ದು. ಮೊದಲ ಹಂತದ ಮತದಾನ ಡಿ.22ರಂದು ನಡೆಯಲಿದೆ. ನಾಮಪತ್ರ ಸಲ್ಲಿಕೆ ಸೋಮವಾರದಿಂದಲೇ ಆರಂಭವಾಗಿದೆ. ಟಫ್​ ಫೈಟ್​ ಎನಿಸಿರುವ ಲೋಕಲ್​ ವಾರ್​ನಲ್ಲಿ ಕೆಲವೆಡೆ ಅವಿರೋಧ ಆಯ್ಕೆಗೆ ಕಸರತ್ತು ನಡೆದಿದೆ. ಅದಕ್ಕಾಗಿ ಸದಸ್ಯ ಸ್ಥಾನ ಬಿಕರಿ ಅಸ್ತ್ರ ಪ್ರಯೋಗ ಬಹುತೇಕ ಕಡೆ ನಡೆಯುತ್ತಿದೆ. ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಆರ್ಥಿಕ ಸ್ಥಿತಿವಂತರ ಪಾಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ರಾಜ್ಯ ಚುನಾವಣಾ ಆಯೋಗ ಸಜ್ಜಾಗಿದೆ.


COMMERCIAL BREAK
SCROLL TO CONTINUE READING

ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳನ್ನು ಹರಾಜು ಹಾಕುವವರ ವಿರುದ್ಧ ಮೊಕದ್ದಮೆ ಹೂಡಿ ಎಫ್​​ಐಆರ್(FIR)​ ದಾಖಲಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ರಾಜ್ಯ ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹರಾಜು ಮಾಡಿರುವ ಸಾಕ್ಷಿ ಸಿಕ್ಕಿರುವ ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ 13 ಜನರ ವಿರುದ್ಧ ಎಫ್​​ಐಆರ್​ ದಾಖಲಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತರು ತಿಳಿಸಿದ್ದಾರೆ.


Satish Jarkiholi: ಡಿಕೆಶಿ ರಾಜೀನಾಮೆಗೆ ಒತ್ತಾಯ! ಸ್ಪಷ್ಟಪಡಿಸಿದ ಸತೀಶ್ ಜಾರಕಿಹೊಳಿ


ಹರಾಜು ಹಾಕಿ ಸದಸ್ಯತ್ವ ಪಡೆಯುವುದು ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಕೃತ್ಯವಾಗುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ವಿರೋಧ. ಚುನಾವಣೆಗಳನ್ನು ನಡೆಸಬೇಕು. ಸೋಲು, ಗೆಲುವು ಬೇರೆ. ಆದ್ದರಿಂದಲೇ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವುದು ಅಗತ್ಯವಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೂ ಈ ನಿಟ್ಟಿನಲ್ಲಿ ಸೂಚನೆ ನೀಡಲಾಗಿದೆ ಎಂದು ಬಸವರಾಜು ತಿಳಿಸಿದರು.


ರಾಜ್ಯದಲ್ಲಿ ವೃದ್ಧಾಪ್ಯ ಮತ್ತು ವಿಧವಾ ವೇತನ ಸ್ಥಗಿತ: ಅದಕ್ಕೆ ಸಿಎಂ ಏನಂದ್ರು ಗೊತ್ತಾ?