ಹಾಲು ಸಂಗ್ರಹಣೆಯಲ್ಲಿ ಕರ್ನಾಟಕಕ್ಕೆ 2 ನೇ ಸ್ಥಾನ
ಕರ್ನಾಟಕ ರಾಜ್ಯವು ಹಾಲು ಸಂಗ್ರಹಣೆಯಲ್ಲಿ ದೇಶದಲ್ಲಿಯೇ 2 ನೇ ಸ್ಥಾನ ಪಡೆದಿದೆ.
ಬೆಂಗಳೂರು : ಕರ್ನಾಟಕ ರಾಜ್ಯವು ಹಾಲು ಸಂಗ್ರಹಣೆಯಲ್ಲಿ ದೇಶದಲ್ಲಿಯೇ 2 ನೇ ಸ್ಥಾನ ಪಡೆದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯ ಸರ್ಕಾರವು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಹೈನುಗಾರಿಕೆಗೆ ನೀಡಿದ ಅತ್ಯಧಿಕ ಪ್ರೋತ್ಸಾಹದ ಫಲವಾಗಿ ಕರ್ನಾಟಕವು ಹಾಲು ಸಂಗ್ರಹಣೆಯಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ನಮ್ಮ ಈ ಯೋಜನೆಗಳು ಕೇವಲ ಹಾಲು ಉತ್ಪಾದನೆಗೆ ಸೀಮಿತವಾಗದೆ ಮಹಿಳೆಯರ, ಆರ್ಥಿಕ ದುರ್ಬಲರ ಬದುಕಿಗೆ ಆಸರೆಯಾಗುವಂತೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ಅಮೃತ ಯೋಜನೆಯಡಿ 10 ಸಾವಿರ ವಿಧವೆ ಹಾಗೂ ನಿರ್ಗತಿಕ ಮಹಿಳೆಯರ ಸ್ವಾವಲಂಬಿ ಬದುಕಿಗೆ ಹೈನುಗಾರಿಕೆ ಘಟಕ ಸ್ಥಾಪಿಸಿರುವ ಸರ್ಕಾರ, 16,400 ಫಲಾನುಭವಿಗಳಿಗೆ ರೂ. 100 ಕೋಟಿ ಅನುದಾನದಲ್ಲಿ ಹೈನುಘಟಕ ನಿರ್ಮಿಸಿದೆ.
ಅಲ್ಲದೆ, ಸರ್ಕಾರದ ವತಿಯಿಂದ ಪಶುಭಾಗ್ಯ ಯೋಜನೆಯಡಿ ವಾಣಿಜ್ಯ ಬ್ಯಾಂಕುಗಳಿಂದ ಗರಿಷ್ಠ ರೂ. 1.20 ಲಕ್ಷಗಳವರೆಗೆ ಹಂದಿ, ಕೋಳಿ ಸಾಕಾಣಿಕೆಗೆ ಸಹಾಯಧನ ನೀಡಲಾಗುತ್ತಿದ್ದು, ಇದು ರಾಜ್ಯದ ಹೈನುಗಾರಿಕೆ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.