)
Karnataka SSLC Mid Term Exam Time Table 2025 : ಕರ್ನಾಟಕ ಎಸ್ಎಸ್ಎಲ್ಸಿ (10ನೇ ತರಗತಿ) ಅರ್ಧ ವಾರ್ಷಿಕ ಪರೀಕ್ಷೆಗಳು 2025-26 ಸೆಪ್ಟೆಂಬರ್ 12 ರಿಂದ ಪ್ರಾರಂಭವಾಗಿವೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್ಇಎಬಿ) ನಡೆಸುವ ಈ ಪರೀಕ್ಷೆಗಳು ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನದ ನಿರ್ಣಾಯಕ ಭಾಗವಾಗಿದೆ.
ಪ್ರಥಮ ಭಾಷೆ, ಇಂಗ್ಲಿಷ್, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಮತ್ತು ಇತರ ವಿಷಯಗಳನ್ನು ಒಳಗೊಂಡ ಪರೀಕ್ಷೆಯ ವೇಳಾಪಟ್ಟಿ ಇಲ್ಲಿದೆ. 12 ಸೆಪ್ಟೆಂಬರ್ 2025 ರಿಂದ 19 ಸೆಪ್ಟೆಂಬರ್ 2025 ರ ವರೆಗೆ ಪರೀಕ್ಷೆ ನಡೆಯಲಿದೆ.
ವಿಷಯವಾರು ವೇಳಾಪಟ್ಟಿ ಇಲ್ಲಿದೆ
>> ಪ್ರಥಮ ಭಾಷೆ - ಸೆಪ್ಟೆಂಬರ್ 12
>> ವಿಜ್ಞಾನ, ರಾಜ್ಯಶಾಸ್ತ್ರ, ಹಿಂದುಸ್ತಾನಿ, ಸಂಗೀತ, ಕರ್ನಾಟಕ ಸಂಗೀತ - ಸಪ್ಟೆಂಬರ್ 13
>> ದ್ವಿತೀಯ ಭಾಷೆ - ಸಪ್ಟೆಂಬರ್ 15
>> ಗಣಿತ ಸಮಾಜಶಾಸ್ತ್ರ - ಸಪ್ಟೆಂಬರ್ 16
>> ತೃತೀಯ ಭಾಷೆ, ಎನ್ ಎಸ್ ಕ್ಯೂ ಎಫ್ ವಿಷಯಗಳು - ಸಪ್ಟೆಂಬರ್ 17
>> ಸಮಾಜ ವಿಜ್ಞಾನ - ಸಪ್ಟೆಂಬರ್ 18
>> ಜಿಟಿಎಸ್ ಪರೀಕ್ಷೆ - ಸಪ್ಟೆಂಬರ್ 19
ಪರೀಕ್ಷೆ ನಡೆಯುವ ಸಮಯ : ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತ ಪರೀಕ್ಷೆಯು ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು, ಉಳಿದ ಎಲ್ಲಾ ವಿಷಯಗಳು ಬೆಳಗ್ಗೆ 10.30 ಕ್ಕೆ ಆರಂಭವಾಗಲಿದೆ ಎಂದು ಪರೀಕ್ಷಾ ಮಂಡಳಿ ತಿಳಿಸಿದೆ.
ಇದನ್ನೂ ಓದಿ: ಆನೇಕಲ್ನ 2 ದೇವಾಲಯದ ಬೀಗ ಮುರಿದು ಕಳ್ಳತನ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.