Government Employees Strike: ನಾಳೆಯಿಂದ ರಾಜ್ಯ ಸರ್ಕಾರಿ ನೌಕರರ ಅನಿರ್ಧಿಷ್ಟಾವದಿ ಮುಷ್ಕರ
Karnataka state government employees Strike : ನಾಳೆ ಮುಷ್ಕರ ಕೈಬಿಡುವ ಮಾತೆ ಇಲ್ಲ. ಫೆಬ್ರವರಿಯಲ್ಲಿ ತಕ್ಷಣ ಜಾರಿಯಾಗುತ್ತೆ ಅಂತಾ ಸಿಎಂ ಘೋಷಣೆ ಮಾಡಿದ್ದರು. ಆದ್ರೆ ಇದುವರೆಗೆ ಏಳನೇ ವೇತನ ಜಾರಿಯಾಗಿಲ್ಲ. ಒಂಬತ್ತು ತಿಂಗಳ ಕಾಲ ಈಗಾಗಲೇ ವಿಳಂಬವಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹೇಳಿದ್ದಾರೆ.
ಬೆಂಗಳೂರು : ನಾಳೆಯಿಂದ ರಾಜ್ಯ ಸರ್ಕಾರಿ ನೌಕರರ ಮುಷ್ಕರ ಶುರುವಾಗಲಿದೆ. ಏಳನೇ ವೇತನ ಆಯೋಗ ಜಾರಿಯಾಗುವಂತೆ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಅನಿರ್ದಿಷ್ಟಾವಧಿ ಹೋರಾಟ ನಾಳೆಯಿಂದಲೇ ಶುರುವಾಗಲಿದೆ. ಯಾವುದೇ ಗೊಂದಲವಿಲ್ಲದೇ ಮುಷ್ಕರ ಆರಂಭ ಆಗಲಿದೆ.
ಈ ಕುರಿತು ಸುದ್ದಗೋಷ್ಠಿ ನಡೆಸಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ನಾಳೆ ಮುಷ್ಕರ ಕೈಬಿಡುವ ಮಾತೆ ಇಲ್ಲ. ಫೆಬ್ರವರಿಯಲ್ಲಿ ತಕ್ಷಣ ಜಾರಿಯಾಗುತ್ತೆ ಅಂತಾ ಸಿಎಂ ಘೋಷಣೆ ಮಾಡಿದ್ದರು. ಆದ್ರೆ ಇದುವರೆಗೆ ಏಳನೇ ವೇತನ ಜಾರಿಯಾಗಿಲ್ಲ. ಒಂಬತ್ತು ತಿಂಗಳ ಕಾಲ ಈಗಾಗಲೇ ವಿಳಂಬವಾಗಿದೆ. ಕಡಿಮೆ ಸಂಬಳದಲ್ಲಿ ಸರ್ಕಾರಿ ನೌಕರರು ಕೆಲಸ ಮಾಡ್ತಿದ್ದಾರೆ. ಆದ್ರೆ ಅಭಿವೃದ್ಧಿಯಲ್ಲಿ ಕರ್ನಾಟಕ ಮುಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ಸವಾರರಿಗೆ ಗುಡ್ ನ್ಯೂಸ್
ವೇತನ ಆಯೋಗಕ್ಕೆ ಪತ್ರ ಕೊಟ್ಟು ಸರ್ಕಾರ ವರದಿ ಪಡೆದುಕೊಂಡಿಲ್ಲ. ವೇತನ ಆಯೋಗದ ಅಧ್ಯಕ್ಷ ಸುಧಾಕರ್ ಅವ್ರ ಜೊತೆ ಚರ್ಚೆ ಮಾಡಲಾಗಿದೆ. ಪ್ರತಿಭಟನೆಗೆ ಹೋಗುವ ಬಗ್ಗೆ ನಿನ್ನೆಯೂ ಮಾತಾನಾಡಿದ್ದೇನೆ. ನಾಳೆ ಕ್ಲಾಸ್ ಎಕ್ಸಾಂ ಇದೆ- ಯಾವ ಪರೀಕ್ಷೆಯೂ ನಡೆಯಲ್ಲ. ಪ್ರಾಥಮಿಕ, ಪ್ರೌಢ ಕಾಲೇಜು ಉಪನ್ಯಾಸಕರು ಪ್ರತಿಭಟನೆಯಲ್ಲಿ ಭಾಗಿಯಾಗ್ತಾರೆ ಎಂದಿದ್ದಾರೆ.
ಸರ್ಕಾರ ನಡೆಸಿಕೊಂಡ ರೀತಿಯ ಬಗ್ಗೆ ಬೇಸರವಾಗಿದೆ. ಡ್ಯೂಟಿ ಅವರ್ ಹೆಚ್ಚು ಮಾಡಿ ಟಾರ್ಗೆಟ್ ಹೆಚ್ಚು ಮಾಡಿ ನಾವು ತಯಾರಿದ್ದೇವೆ. ನಿಗಮ ಮಂಡಳಿ ಬಿಡಿಎ ಬಿಬಿಎಂಪಿ ಕಂದಾಯ ಸಬ್ ರಿಜಿಸ್ಟರ್ ಆಫೀಸ್ RTO ರೆವಿನ್ಯೂ ಕಚೇರಿ ಜಲಮಂಡಳಿ ಎಲ್ಲಾ ಕಚೇರಿ ಏಕಕಾಲಕ್ಕೆ ಬಂದ್ ಆಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಲ್ಲಿ ಗುರಿ ಮೀರಿ ಶೇ.126 ರಷ್ಟು ಸಾಧನೆ: ಸಚಿವ ಡಾ.ಕೆ.ಸುಧಾಕರ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.