ಕರ್ನಾಟಕ: ಪೋಲಿಸ್ ಮತ್ತು ನ್ಯಾಯಾಂಗ ಎರಡರಲ್ಲೂ ಕೋಟಾಗಳನ್ನು ಪೂರೈಸಿದ ಏಕೈಕ ರಾಜ್ಯ..!

ಇಂಡಿಯಾ ಜಸ್ಟಿಸ್ ರಿಪೋರ್ಟ್ ಕುರಿತು ಚರ್ಚೆ ಮಾಡುತ್ತಾ, ನ್ಯಾಯಮೂರ್ತಿ (ನಿವೃತ್ತ) ಮದನ್ ಬಿ. ಲೋಕೂರ್ ಅವರು, “ನ್ಯಾಯವನ್ನು ಪಡೆದುಕೊಳ್ಳುವ ದಂಡ ಪ್ರಕ್ರಿಯೆಯು ವ್ಯಕ್ತಿಯು ವ್ಯವಸ್ಥೆಯೊಡನೆ ಮೊಟ್ಟಮೊದಲ ಬಾರಿಗೆ ಭೇಟಿಯಾಗುವುದರಿಂದ ಆರಂಭವಾಗುತ್ತದೆ.

Written by - Manjunath Naragund | Last Updated : Apr 15, 2025, 04:23 PM IST
  • ರಾಜ್ಯಗಳ ಒಟ್ಟಾರೆ ಶ್ರೇಯಾಂಕದಲ್ಲಿ ಬಿಹಾರ 13ನೆ ಸ್ಥಾನದಿಂದ 3 ಸ್ಥಾನ ಮೇಲಕ್ಕೇರಿದೆ
  • ಪೋಲಿಸ್‌ನಲ್ಲಿ ಪೋಲಿಸ್ ಶ್ರೇಯಾಂಕದಲ್ಲಿ ಸುಧಾರಿಸಿದೆ 16ನೆ ಸ್ಥಾನದಿಂದ 10ನೆ ಸ್ಥಾನಕ್ಕೆ
  • ಕಾನೂನು ನೆರವಿನಲ್ಲಿ ಸುಧಾರಿತ ಶ್ರೇಯಾಂಕ 16ನೆ ಸ್ಥಾನದಿಂದ 12ನೆ ಸ್ಥಾನಕ್ಕೆ
ಕರ್ನಾಟಕ: ಪೋಲಿಸ್ ಮತ್ತು ನ್ಯಾಯಾಂಗ ಎರಡರಲ್ಲೂ ಕೋಟಾಗಳನ್ನು ಪೂರೈಸಿದ ಏಕೈಕ ರಾಜ್ಯ..!

ಬೆಂಗಳೂರು, 15 ಏಪ್ರಿಲ್ 2025: ಇಂದು ಬಿಡುಗಡೆಯಾದ, ದೇಶದ ನ್ಯಾಯ ಒದಗಣೆಯ ಮೇಲೆ ರಾಜ್ಯ ಏಕೈಕ ಶ್ರೇಯಾಂಕ ವ್ಯವಸ್ಥೆಯಾದ 2025 ಇಂಡಿಯಾ ಜಸ್ಟಿಸ್ ರಿಪೋರ್ಟ್ (IJR), 18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳ ಪೈಕಿ(ತಲಾ ಒಂದು ಕೋಟಿಗಿಂತ ಹೆಚ್ಚಿನ ಜನಸಂಖ್ಯೆಯೊಂದಿಗೆ) ಕರ್ನಾಟಕಕ್ಕೆ 1ನೆ ಶ್ರೇಯಾಂಕ ನೀಡಿದ್ದು, ಕರ್ನಾಟಕವು ಹಿಂದಿನ ಆವೃತ್ತಿಯಿಂದ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಕಾನೂನು ನೆರವಿನಲ್ಲೂ ರಾಜ್ಯಕ್ಕೆ 1ನೆ ಶ್ರೇಯಾಂಕ ದೊರಕಿದ್ದು (2022ರಲ್ಲಿದ್ದ 2ನೆ ಸ್ಥಾನದಿಂದ ಬಡ್ತಿ) ಸೆರೆಮನೆಗಳಲ್ಲೂ ತನ್ನ  2ನೆ ಸ್ಥಾನವನ್ನು ಉಳಿಸಿಕೊಂಡಿದೆ. 

Add Zee News as a Preferred Source

ಒಟ್ಟಾರೆ ಶ್ರೇಯಾಂಕಗಳಲ್ಲಿ, ಇದರ ನಂತರ ಆಂಧ್ರಪ್ರದೇಶ ಬಂದಿದ್ದು, 2022ದಲ್ಲಿದ್ದ ಐದನೇ ಸ್ಥಾನದಿಂದ ಎರಡಕ್ಕೆ ಬಂದಿದ್ದರೆ, ತೆಲಂಗಾಣ (2022 ಶ್ರೇಯಾಂಕ: 3), ಮತ್ತು ಕೇರಳ (2022 ಶ್ರೇಯಾಂಕ: 6). ಸಿಕ್ಕಿಂ (2022: 1), ಏಳು ಸಣ್ಣ ರಾಜ್ಯಗಳ (ತಲಾ ಒಂದು ಕೋಟಿಗಿಂತ ಕಡಿಮೆ ಜನಸಂಖ್ಯೆ ಇರುವ ರಾಜ್ಯಗಳು) ಪೈಕಿ ಅಗ್ರಸ್ಥಾನದಲ್ಲಿದೆ. ಇದರ ನಂತರ ಹಿಮಾಚಲ ಪ್ರದೇಶ (2022: 6) ಮತ್ತು ಅರುಣಾಚಲಪ್ರದೇಶ (2022: 2)ನೆ ಸ್ಥಾನಗಳಲ್ಲಿ ಬರುತ್ತವೆ.

ಇಂಡಿಯಾ ಜಸ್ಟಿಸ್ ರಿಪೊರ್ಟ್(IJR)ಅನ್ನು ಟಾಟಾ ಟ್ರಸ್ಟ್ಸ್ ಪ್ರಾರಂಭಿಸಿತ್ತು ಮತ್ತು ಪ್ರಪ್ರಥಮ ಶ್ರೇಯಾಂಕವನ್ನು 2019ನಲ್ಲಿ ಪ್ರಕಾಶಿಸಲಾಗಿತ್ತ. ಇದು ವರದಿಯ ನಾಲ್ಕನೇ ಆವೃತ್ತಿಯಾಗಿದ್ದು, ಸಾಮಾಜಿಕ ನ್ಯಾಯ ಕೇಂದ್ರ, ಕಾಮನ್ ಕಾಸ್, ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶ್ಇಯೇಟಿವ್, , DAKSH, TISS–ಪ್ರಯಾಸ್, ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಮತ್ತು  IJR’ನ ಡೇಟಾ ಭಾಗೀದಾರನಾದ ಹೌ ಇಂಡಿಯಾ ಲಿವ್ಸ್(How India Lives)ನ ಸಹಯೋಗದ ಭಾಗೀದಾರತ್ವದಿಂದ ಇದು ಹೊರಹೊಮ್ಮಿದೆ. 

ಕಠಿಣವಾದ 24-ತಿಂಗಳುಗಳ ಪ್ರಮಾಣೀಯ ಸಂಶೋಧನೆಯ ಮೂಲಕ IJR 2025, ಹಿಂದಿನ ಮೂರು ಆವೃತ್ತಿಗಳಂತೆಯೇ, ರಾಜ್ಯಗಳ ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡಿ, ಕಡ್ಡಾಯ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸಲು ಅವುಗಳ ನ್ಯಾಯಾಂಗ ಒದಗಣೆ ರಚನೆಗಳ ಸಾಮರ್ಥ್ಯವನ್ನು ವಿಶ್ಲೇಷಿಸಿತು. ಧಿಕೃತ ಸರ್ಕಾರಿ ಮೂಲಗಳಿಂದ ಪಡೆದುಕೊಂಡ ಇತ್ತೀಚಿನ ಅಧಿಕೃತ ಅಂಕಿಅಂಶಗಳ ಆಧಾರದ ಮೇಲೆ ಅದು ನ್ಯಾಯಾಂಗ ಒದಗಣೆಯ ನಾಲ್ಕು ಸ್ತಂಭಗಳಾದ ಪೋಲಿಸ್, ನ್ಯಾಯಾಂಗ, ಸೆರೆಮನೆ ಹಾಗೂ ಕಾನೂನು ನೆರವಿನ ಕುರಿತಾದ ಪ್ರತ್ಯೇಕಗೊಳಿಸಿರಬಹುದಾದ, ಪ್ರವೇಶಾವಕಾಶವಿಲ್ಲದಿರಬಹುದಾದ ಡೇಟಾವನ್ನು ಒಟ್ಟಿಗೆ ತರುತ್ತದೆ. ಪ್ರತಿಯೊಂದು ಸ್ತಂಭವನ್ನೂ, ರಾಜ್ಯದ ಸ್ವಂತ ಘೋಷಿತ ಮಾನದಂಡಗಳು ಹಾಗೂ ಸ್ಥಿಗತಿಗಳ ವಿರುದ್ಧ, ಬಜೆಟ್‌ಗಳು, ಮಾನವ ಸಂಪನ್ಮೂಲಗಳು, ಕೆಲಸದಹೊರೆ, ವೈವಿಧ್ಯತೆ, ಮೂಲಸೌಕರ್ಯ ಮತ್ತು ಪ್ರವೃತ್ತಿಗಳ (ಐದು-ವರ್ಷ ಅವಧಿಯಲ್ಲಿ ಸುಧಾರಿಸುವ ಉದ್ದೇಶ) ಹೋಲಿಸುವ ತ್ರಿಭುಜದ ಮೂಲಕ ವಿಶ್ಲೇಷಿಸಲಾಗಿತ್ತು. ಈ ಆವೃತ್ತಿಯು, 25 ರಾಜ್ಯ ಮಾನವ ಹಕ್ಕುಗಳ ಆಯೋಗಗಳ (ಹೆಚ್ಚಿನ ವಿವರಗಳಿಗೆ SHRC brief ನೋಡಿ) ಸಾಮರ್ಥ್ಯವನ್ನು ಕೂಡ ಪ್ರತ್ಯೇಕವಾಗಿ ವಿಶ್ಲೇಷಿಸುತ್ತದೆ ಮತ್ತು ವೈಕಲ್ಯವಿರುವ ಜನರಿಗಾಗಿ ನ್ಯಾಯಕ್ಕೆ ಮಧ್ಯಸ್ಥಿಕೆ ಮತ್ತು ಪ್ರವೇಶಾವಕಾಶದ ಕುರಿತಾದ ಪ್ರಬಂಧಗಳನ್ನೂ ಒಳಗೊಂಡಿದೆ. 

ಇಂಡಿಯಾ ಜಸ್ಟಿಸ್ ರಿಪೋರ್ಟ್ ಕುರಿತು ಚರ್ಚೆ ಮಾಡುತ್ತಾ, ನ್ಯಾಯಮೂರ್ತಿ (ನಿವೃತ್ತ) ಮದನ್ ಬಿ. ಲೋಕೂರ್ ಅವರು, “ನ್ಯಾಯವನ್ನು ಪಡೆದುಕೊಳ್ಳುವ ದಂಡ ಪ್ರಕ್ರಿಯೆಯು ವ್ಯಕ್ತಿಯು ವ್ಯವಸ್ಥೆಯೊಡನೆ ಮೊಟ್ಟಮೊದಲ ಬಾರಿಗೆ ಭೇಟಿಯಾಗುವುದರಿಂದ ಆರಂಭವಾಗುತ್ತದೆ. ಮುನ್ನೆಲೆ ನ್ಯಾಯ ಒದಗಿಸುವವರನ್ನು, ಅಂದರೆ, ಪೋಲಿಸ್ ಠಾಣೆಗಳು, ಕಾನೂನು ನೆರವು ಒದಗಿಸುವವರು, ಮತ್ತು ಜಿಲ್ಲಾ ನ್ಯಾಯಾಲಯಗಳನ್ನು ಸಜ್ಜುಗೊಳಿಸಿ ಅವರನ್ನು ಸರಿಯಾಗಿ ತರಬೇತುಗೊಳಿಸುವ ನಮ್ಮ ವೈಫಲ್ಯದೊಂದಿಗೆ ನಾವು ಸಾರ್ವಜನಿಕ ವಿಶ್ವಾಸವನ್ನು ಮುರಿಯುತ್ತಿದ್ದೇವೆ.  ಸಮಾನ ನ್ಯಾಯಕ್ಕೆ ನಮ್ಮ ಬದ್ಧತೆಯನ್ನು ಅಳವಡಿಸಿಕೊಳ್ಳುವುದು ಈ ಸಂಸ್ಥೆಗಳ ಉದ್ದೇಶವಾಗಿರಬೇಕು. ನಮ್ಮ ಇಡೀ ನ್ಯಾಯಾಂಗ ಕಾರ್ಯಚೌಕಟ್ಟಿನ ಬಲವು ಸಂಪರ್ಕದ ಈ ಅತಿಮುಖ್ಯ ಮೊದಲ ಅಂಶಗಳ ಮೇಲೆ ನಿಂತಿದೆ. ಇಂಡಿಯಾ ಜಸ್ಟಿಸ್ ರಿಪೋರ್ಟ್‌ನ ನಾಲ್ಕನೇ ಆವೃತ್ತಿಯು ಸಂಪನ್ಮೂಲಗಳಿಗೆ ಸಮರ್ಪಕ ಗಮನ ಇಲ್ಲದ್ದರಿಂದ ಅತೀಕೆಲವು ಸುಧಾರಣೆಗಳು ಮಾತ್ರ ಏರ್ಪಟ್ಟಿರುವುದನ್ನು ತೋರಿಸುತ್ತದೆ. ದುರಾದೃಷ್ಟವಶಾತ್, ಹೊರೆಯು ನ್ಯಾಯವನ್ನು ಕೋರುತ್ತಿರುವ ವ್ಯಕ್ತಿಯ ಮೇಲೇ ಇದೆಯೇ ಹೊರತು, ರಾಜ್ಯವು ಅದನ್ನು ಒದಗಿಸುತ್ತಿಲ್ಲ.” ಎಂದು ಹೇಳಿದರು. 

ಇಂಡಿಯಾ ಜಸ್ಟಿಸ್ ರಿಪೋರ್ಟ್‌ನ ಪ್ರಧಾನ ಸಂಪಾದಕಿ ಮಿಸ್ ಮಾಯಾ ದಾರುವಾಲ, “Aಭಾರತವು ಪ್ರಜಾಸತ್ತಾತ್ಮಕವಾಗಿರುವ ನೂರು ವರ್ಷಗಳ ಅವಧಿಗೆ ಮುನ್ನಡೆಯುತ್ತಿರುವಂತಹ ಸಂದರ್ಭದಲ್ಲಿ, ಸುಧಾರಿತ ನ್ಯಾಯಾಂಗ ವ್ಯವಸ್ಥೆಯಿಲ್ಲದಿದ್ದರೆ, ಕಾನೂನು ರಾಷ್ಟ್ರದ ನಿಯಮ, ಕಾನೂನು ಮತ್ತು ಸಮಾನ ಹಕ್ಕುಗಳ ನಿಯಮದ ಭರವಸೆಯು ಟೊಳ್ಳಾಗಿಯೇ ಉಳಿಯುತ್ತದೆ.  ಸುಧಾರಣೆ ಆಯ್ಕೆಯಲ್ಲ. ಅದು ಅತ್ಯವಸರ. ಉತ್ತಮವಾಗಿ ಸಂಪನ್ಮೂಲವಾದ ನ್ಯಾಯಾಂಗ ವ್ಯವಸ್ಥೆಯು ಸಾಂವಿಧಾನಿಕ ಅವಶ್ಯಕತೆಯಾಗಿದ್ದು, ಇದನ್ನು ಪ್ರತಿಯೊಬ್ಬ ನಾಗರಿಕನಿಗೂ ಲಭ್ಯವಿರುವಂತಹ ಪ್ರತಿನಿತ್ಯದ ವಾಸ್ತವತೆಯಾಗಿ ಅನುಭವಿಸುವ ಅವಕಾಶವಿರಬೇಕು.” ಎಂದು ಹೇಳಿದರು. 

ಕರ್ನಾಟಕದ ಶ್ರೇಯಾಂಕಗಳು:ಸ್ತಂಭವಾರು 

    IJR 4    IJR 3
ಒಟ್ಟಾರೆ    1    1
ಪೋಲಿಸ್    3    2
ಸೆರೆಮನೆಗಳು    2    2
ನ್ಯಾಯಾಂಗ    4    2
ಕಾನೂನು ನೆರವು    1    2

ಕಾನೂನು ನೆರವು: ಪ್ಯಾರಾಲೀಗಲ್ ಸ್ವಯಂಸೇವಕರಲ್ಲಿ ರಾಷ್ಟ್ರೀಯ ಇಳಿಕೆ ಪದ್ಧತಿಯನ್ನು ಮುರಿದ ಕರ್ನಾಟಕ 

ಈ ವರ್ಷ ಕಾನೂನು ನೆರವಿನಲ್ಲಿ ಕರ್ನಾಟಕ ಮೊದಲನೇ ಶ್ರೇಯಾಂಕ ಪಡೆದುಕೊಂಡಿದೆ. ರಾಷ್ಟ್ರವ್ಯಾಪಿಯಾಗಿ, ಪ್ಯಾರಾಲೀಗಲ್ ಸ್ವಯಂಸೇವಕರ ಸಂಖ್ಯೆ ಕಳೆದ ಕೆಲವು ವರ್ಷಗಳಿಂದ ಇಳಿಮುಖವಾಗುತ್ತಿದ್ದರೆ, ಕರ್ನಾಟಕವು ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ತನ್ನ ಪ್ಯಾರಾಲೀಗಲ್ ಸ್ವಯಂಸೇವಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಜನವರಿ 2019ನಲ್ಲಿ 4.9 ನಿಂದ ಸೆಪ್ಟೆಂಬರ್ 2024ನಲ್ಲಿ 7.59 ಗೆ ಏರುವ ಮೂಲಕ ಅದು ದೇಶದ ಅತ್ಯಧಿಕ ಸಂಖ್ಯೆಯ ಸ್ವಯಂಸೇವಕರನ್ನು ಹೊಂದಿದೆ. ಪ್ಯಾನೆಲ್ ವಕೀಲರಲ್ಲಿ ಮಹಿಳೆಯರ ಅತ್ಯಧಿಕ ಪಾಲನ್ನೂ ಕೂಡ ಅದು ಹೊಂದಿದೆ (44%). ಆದಾಗ್ಯೂ, ಗ್ರಾಮಗಳಲ್ಲಿ ಅದರ ಕಾನೂನು ಸೇವಾ ಕೇಂದ್ರಗಲ ಸಂಖ್ಯೆ ಇಳಿದಿದೆ, ಅಂದರೆ 2021-2022 ದಲ್ಲಿದ್ದ174 ಕೇಂದ್ರಗಳಿಂದ 2023-24ನಲ್ಲಿ  ಕೇವಲ 32ಗೆ ಇಳಿದಿದೆ 

ಪೋಲಿಸ್: ಅತಿ ಕಡಿಮೆ ಅಧಿಕಾರಿ ಮಟ್ಟದ ಖಾಲಿಸ್ಥಾನ 

2020-21 ರಲ್ಲಿ ರೂ. 943 ಇದ್ದ ತನ್ನ ಪೋಲಿಸ್ ತಲಾವಾರು ವ್ಯಯವನ್ನು ಕರ್ನಾಟಕ 2022-2023ರಲ್ಲಿ ರೂ. 1261ಗೆ ಹೆಚ್ಚಿಸಿದೆ.
2022 ಮತ್ತು 2023 ನಡುವೆ, ಅದು ತನ್ನ ಕಾನ್ಸ್ಟೇಬಲ್ ಮಟ್ಟದ ಖಾಲಿಸ್ಥಾನವನ್ನೂ ಅರ್ಧದಷ್ಟು ಕಡಿಮೆ ಮಾಡಿಕೊಂಡಿದೆ( 12% ರಿಂದ 6%ಗೆ), ಮತ್ತು ಅಧಿಕಾರಿ ಖಾಲಿಸ್ಥಾನವನ್ನು 11%ನಿಂದ 1%ಗೆ ಇಳಿಸಿಕೊಂಡಿದೆ. ಇದರಿಂದ ರಾಜ್ಯವು ಎಲ್ಲಾ ದೊಡ್ಡ ರಾಜ್ಯಗಳ ಪೈಕಿ ಅತಿಕಡಿಮೆ ಅಧಿಕಾರಿ ಮಟ್ಟದ ಖಾಲಿಸ್ಥಾನವನ್ನು ಹೊಂದಿದ ರಾಜ್ಯವಾಗಿದೆ. ಹೆಚ್ಚುವರಿಯಾಗಿ, ಅಧಿಕಾರಿ ಮತ್ತು ಕಾನ್ಸ್ಟೇಬಲ್ ಮಟ್ಟ ಎರಡರಲ್ಲೂ ಪ.ಜಾ. ಪ.ವ. ಮತ್ತು ಇ.ಹಿ.ವ.ಗಳನ್ನು ಭರ್ತಿ ಮಾಡಿದ ಏಕೈಕ ರಾಜ್ಯ ಇದಾಗಿದೆ. ಎಲ್ಲಾ ಪೋಲಿಸ್ ಠಾಣೆಗಳ ಪೈಕಿ  99% ಪೋಲಿಸ್ ಠಾಣೆಗಳು ಮಹಿಳಾ ಸಹಾಯ ಮೇಜು ಹೊಂದಿವೆ. ಮೇಲಾಗಿ, ಇದು ದೇಶದಲ್ಲಿ ಆಧುನೀಕರಣ ನಿಧಿನೆರವಿನ ಅತ್ಯಧಿಕ ಬಳಕೆಯನ್ನು ಕೂಡ ಹೊಂದಿದೆ.

ಸೆರೆಮನೆಗಳು: ರಾಷ್ಟ್ರೀಯವಾಗಿ, ಸೆರೆಮನೆ ಸಿಬ್ಬಂದಿಯಲ್ಲಿ ಅತ್ಯಧಿಕ ಮಹಿಳೆಯರ ಪಾಲು 

ಸೆರೆಮನೆ ಸಿಬ್ಬಂದಿಯಲ್ಲಿ 33% ಮಹಿಳೆಯರೊಂದಿಗೆ ರಾಜ್ಯದ ಸೆರೆಮನೆಗಳು ರಾಷ್ಟ್ರೀಯವಾಗಿ ಅತ್ಯಧಿಕ ಪಾಲನ್ನು ಹೊಂದಿದೆ. ಇದು ಸೆರೆಮನೆಗಳಲ್ಲಿ ವೀಡಿಯೋ ಸಮಾವೇಶ ಸೌಲಭ್ಯಗಳನ್ನೂ ಸುಧಾರಿಸಿದೆ. ಅಂದರೆ,  2021ದಲ್ಲಿದ್ದ 68%ನಿಂದ 2022ದಲ್ಲಿ 93%ಗೆ. ಆದಾಗ್ಯೂ, ಸೆರೆಮನೆಗಳಲ್ಲಿ ವೈದ್ಯಾಧಿಕಾರಿಗಳ ಪೈಕಿ ಖಾಲಿಸ್ಥಾನ (74%)  ಮತ್ತು ವೈದ್ಯಕೀಯ ಸಿಬ್ಬಂದಿಯ ಖಾಲಿಸ್ಥಾನ (64%) ಇನ್ನೂ ಹೆಚ್ಚಾಗಿಯೇ ಉಳಿದಿದೆ. 

ನ್ಯಾಯಾಂಗ: ಜಿಲ್ಲಾ ನ್ಯಾಯಾಲಯಗಳಲ್ಲಿ ಪ.ಜಾ. ಪ.ವ. ಮತ್ತು ಇ.ಹಿ.ವ.ಗಳಿಗಾಗಿ ಮೀಸಲಾದ ಎಲ್ಲಾ ಸ್ಥಾನಗಳನ್ನೂ ಭರ್ತಿ ಮಾಡಿದೆ 

ಜಿಲ್ಲಾ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರುಗಳ ತನ್ನ ಖಾಲಿಸ್ಥಾನವನ್ನು ರಾಜ್ಯವು ಕಡಿಮೆ ಮಾಡಿಕೊಂಡಿದ್ದು, 2022ದಲ್ಲಿದ್ದ 22%,  2025ನಲ್ಲಿ 16%ಗೆ ಇಳಿದಿದೆ. ಈಗ ಕರ್ನಾಟಕದ ಜಿಲ್ಲಾ ನ್ಯಾಯಾಲಯಗಳಲ್ಲಿ 37% ಮಹಿಳಾ ನ್ಯಾಯಾಧೀಶರುಗಳಿದ್ದಾರೆ. ಉಚ್ಛನ್ಯಾಯಾಲಯವೂ ಕೂಡ, ತನ್ನ ಸಿಬ್ಬಂದಿ ಖಾಲಿಸ್ಥಾನವನ್ನು 26%ನಿಂದ 17%ಗೆ ಕಡಿಮೆ ಮಾಡಿಕೊಂಡಿದೆ. 

IJR 2025, ತಕ್ಷಣದ ಹಾಗೂ ಮೂಲಭೂತ ಸರಿಪಡಿಸುವಿಕೆ ಎರಡನ್ನೂ ಒತ್ತಿಹೇಳಿದೆ. ಖಾಲಿಸ್ಥಾನಗಳ ತುರ್ತು ಭರ್ತಿ ಮತ್ತು ಹೆಚ್ಚಿನ ಪ್ರತಿನಿಧಿತ್ವವನ್ನು ಅದು ಪ್ರಧಾನವಾಗಿ ಗುರುತಿಸಿದೆ. ಅಪರಿವರ್ತನೀಯ ಬದಲಾವಣೆಯನ್ನು ಜಾರಿಗೊಳಿಸಲು ಅದು ನ್ಯಾಯ ಒದಗಣೆಯನ್ನು ಅತ್ಯಾವಶ್ಯಕ ಸೇವೆ ಎಂದು ನಿಯೋಜಿಸಬೇಕೆಂದು ಆಗ್ರಹಿಸಿದೆ. 
---------
ಮೂಲಗಳು:
1.    ಪೋಲಿಸ್: Data on Police Organisation 2023, Bureau of Police Research and Development
2.    ಸೆರೆಮನೆಗಳು: Prison Statistics India 2022, National Crime Records Bureau
3.    ನ್ಯಾಯಾಂಗ: 2024 & 2025- National Judicial Data Grid (NJDG), Court News, Supreme Court of India; eCourts Services; Websites and annual reports of High Courts, Department of Justice
4.    ಕಾನೂನು ನೆರವು: 2024, Statistics from National Legal Services Authority

ಅನುಬಂಧ I: ಒಟ್ಟಾರೆ ರಾಷ್ಟ್ರೀಯ ಶೋಧಗಳು: ಒಂದು ಪಕ್ಷಿನೋಟ 
18 ದೊಡ್ದ ಮತ್ತು ಮಧ್ಯಮ-ಗಾತ್ರದ ರಾಜ್ಯಗಳ ಶ್ರೇಯಾಂಕ:

ರಾಜ್ಯ    ಶ್ರೇಯಾಂಕ 2025    ಶ್ರೇಯಾಂಕ 2022
ಕರ್ನಾಟಕ    1    1
ಆಂಧ್ರಪ್ರದೇಶ    2    5
ತೆಲಂಗಾಣ    3    3
ಕೇರಳ    4    6
ತಮಿಳುನಾಡು    5    2
ಛತ್ತೀಸ್‌ಗಢ    6    9
ಮಧ್ಯಪ್ರದೇಶ    7    8
ಒದಿಶಾ    8    11
ಪಂಜಾಬ್    9    10
ಮಹಾರಾಷ್ಟ್ರ    10    12
ಗುಜರಾತ್    11    4
ಹರಿಯಾಣ    12    13
ಬಿಹಾರ    13    16
ರಾಜಸ್ಥಾನ    14    15
ಝಾರ್ಖಂಡ್    15    7
ಉತ್ತರಾಖಂಡ    16    14
ಉತ್ತರಪ್ರದೇಶ    17    18
ಪಶ್ಚಿಮ ಬಂಗಾಳ    18    17

ಏಳು ಸಣ್ಣ ರಾಜ್ಯಗಳ ಶ್ರೇಯಾಂಕ :

ರಾಜ್ಯ    ಶ್ರೇಯಾಂಕ 2025    ಶ್ರೇಯಾಂಕ 2022
ಸಿಕ್ಕಿಂ    1    1
ಹಿಮಾಚಲ ಪ್ರದೇಶ    2    6
ಅರುಣಾಚಲಪ್ರದೇಶ    3    2
ತ್ರಿಪುರ    4    3
ಮೇಘಾಲಯ    5    4
ಮಿಜೋರಮ್    6    5
ಗೋವಾ    7    7

ಕೆಲವು ಪ್ರೋತ್ಸಾಹದಾಯಕ ಸುಧಾರಣೆಗಳು:
●    ರಾಜ್ಯಗಳ ಒಟ್ಟಾರೆ ಶ್ರೇಯಾಂಕದಲ್ಲಿ ಬಿಹಾರ 13ನೆ ಸ್ಥಾನದಿಂದ 3 ಸ್ಥಾನ ಮೇಲಕ್ಕೇರಿದೆ 
●    ಪೋಲಿಸ್‌ನಲ್ಲಿ ಪೋಲಿಸ್ ಶ್ರೇಯಾಂಕದಲ್ಲಿ ಸುಧಾರಿಸಿದೆ 16ನೆ ಸ್ಥಾನದಿಂದ 10ನೆ ಸ್ಥಾನಕ್ಕೆ 
●    ಕಾನೂನು ನೆರವಿನಲ್ಲಿ ಸುಧಾರಿತ ಶ್ರೇಯಾಂಕ 16ನೆ ಸ್ಥಾನದಿಂದ 12ನೆ ಸ್ಥಾನಕ್ಕೆ  

ಸತತ ಲೋಪದೋಷಗಳು:
●    ಪೋಲಿಸ್ ಮತ್ತು ನ್ಯಾಯಾಂಗದಲ್ಲಿ ಬಿಹಾರ ಅತಿಕಡಿಮೆ ತಲಾವಾರು ವ್ಯಯ ಕಂಡಿದೆ 
●    ಜಿಲ್ಲಾ ನ್ಯಾಯಾಲಯಗಳಲ್ಲಿ 71% ಕೇಸ್‌ಗಳು 3 ವರ್ಷಗಳಿಗಿಂತ ಹೆಚ್ಚಿನ ಕಾಲದಿಂದ ಬಾಕಿ ಇದ್ದು, ದೇಶದಲ್ಲಿ ಇದು ಅತ್ಯಧಿಕವಾಗಿದೆ  

ಕೆಲವು ಪ್ರೋತ್ಸಾಹದಾಯಕ ಸುಧಾರಣೆಗಳು:
●    ಕೇವಲ 1.2%ನಲ್ಲಿ, ಎಲ್ಲಾ ದೊಡ್ಡ ರಾಜ್ಯಗಳ ಪೈಕಿ ಕರ್ನಾಟಕ ಅತಿಕಡಿಮೆ ಅಧಿಕಾರಿ ಮಟ್ಟದ ಖಾಲಿಸ್ಥಾನ ಹೊಂದಿದೆ 
●    ಪೋಲಿಸ್ ಮತ್ತು ನ್ಯಾಯಾಂಗ ಎರಡರಲ್ಲೂ ಪ.ಜಾ. ಪ.ವ. ಮತ್ತು ಇ.ಹಿ.ವ.ಗಳಿಗೆ ಮೀಸಲು ಕೋಟಾಗಳನ್ನು ಪೂರೈಸಿದೆ ಏಕೈಕ ರಾಜ್ಯ 
●    ದೇಶದಲ್ಲಿ ಅತ್ಯಧಿಕ ಸಂಖ್ಯೆಯ ಪ್ಯಾರಾಲೀಗಲ್ ಸ್ವಯಂಸೇವಕರುಸ 

ಸತತ ಲೋಪದೋಷಗಳು:
●    ರಾಜ್ಯದ 80% ಸೆರೆಮನೆವಾಸಿಗಳು ವಿಚಾರಣಾಧೀನ ಖೈದಿಗಳು,  2015ರಿಂದಲೂ ಅತ್ಯಧಿಕ 
●    ಗ್ರಾಮಗಳಲ್ಲಿ ಗಣನೀಯವಾಗಿ ಕಡಿಮೆಯಾದ ಕಾನೂನು ಸೇವಾ ಕೇಂದ್ರಗಳು 157ರಿಂದ ಈಗ 32ಕ್ಕೆ.
●    ಕರ್ನಾಟಕ ಪೋಲಿಸ್ ಇನ್ನೂಕೂಡ ಪುರುಷಪ್ರಧಾನವಾಗಿಯೇ ಇದ್ದು, ಪೋಲಿಸ್‌ನಲ್ಲಿ ಕೇವಲ ಸರಿಸುಮಾರು 9% ಮಹಿಳೆಯರು ಮತ್ತು ಅಧಿಕಾರಿ ಮಟ್ಟದಲ್ಲಿ ಅತ್ಯಲ್ಪ  6% ಮಹಿಳೆಯರು ಇದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Trending News