)
Transport Employees Indefinite Strike: ಎಸ್ಮಾಂ ಜಾರಿ ಮಾಡಿದ್ರೂ ಡೋಂಟ್ಕೇರ್ ಎಂದ ಸಾರಿಗೆ ನೌಕರರು ಜಂಟಿ ಕ್ರಿಯಾ ಸಮಿತಿಯಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಾಳೆಯಿಂದ (ಆ.5) ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ನಾಲ್ಕು ನಿಗಮದ ಸಾರಿಗೆ ನೌಕರರು ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ. ಸರ್ಕಾರಿ ಬಸ್ ಸೇವೆ ಸ್ಥಗಿತದಿಂದ ಇದರಿಂದ ಸಾರ್ವಜನಿಕರ ದೈನಂದಿನ ಓಡಾಟಕ್ಕೆ ಅಡಚಣೆ ಉಂಟಾಗಲಿದ್ದು ಶಾಲಾ-ಕಾಲೇಜು, ಕೆಲಸಕ್ಕೆ ಹೋಗುವವರಿಗೆ ತೊಂದರೆಯಾಗಲಿದೆ.
ನಾಳೆ ಬಸ್ ಸೇವೆ ಇರುತ್ತಾ ಇರಲ್ವಾ..? ಇಂದು ನಿರ್ಧಾರ..!
ಬಸ್ ನಿಲ್ಲಿಸಿ ಮುಷ್ಕರಕ್ಕೆ ಸಿದ್ದವಾಗಿರುವ ಸಾರಿಗೆ ನೌಕರರ ನಿರ್ಧಾರದಿಂದಾಗಿ ನಾಳೆ ಸಾರಿಗೆ ವ್ಯವಸ್ಥೆ ಬಂದ್ ಆಗಲಿದೆ. ರಾಜ್ಯಾದ್ಯಂತ 1 ಲಕ್ಷದ 15 ಸಾವಿರ ನೌಕರರು ಮುಷ್ಕರಕ್ಕೆ ಅಣಿಯಾಗಿದ್ದು ಸಾರಿಗೆ ನೌಕರರ ಮನವೊಲಿಕೆಗೆ ಸರ್ಕಾರ ಸರ್ಕಸ್ ನಡೆಸುತ್ತಿದೆ. ಈಗಾಗಲೇ ಕಾರ್ಮಿಕ ಇಲಾಖೆಯಿಂದ 2 ಸಂಧಾನ ಸಭೆ ನಡೆಸಿದ್ರು ಯಾವುದೇ ಪ್ರಯೋಜನವಾಗಿಲ್ಲ. ಇದರ ಬೆನ್ನಲ್ಲೇ ಇಂದು ಸಾರಿಗೆ ನೌಕರರ ಜೊತೆ 11:45_ಕ್ಕೆ ಸಿಎಂ ಹೈವೋಲ್ಟೆಜ್ ಮೀಟಿಂಗ್ ನಡೆಯಲಿದೆ.
ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಸಂಬಂಧ ವಿಧಾನಸೌಧದಲ್ಲಿ ಇಂದು ಬೆಳಿಗ್ಗೆ 11:45ಕ್ಕೆ ಜಂಟಿ ಕ್ರಿಯಾ ಸಮಿತಿ ಹಾಗೂ 12:30ಗೆ ಕರ್ನಾಟಕ ರಾಜ್ಯ ಸಾರಿಗೆ ನೌಕರರ ಒಕ್ಕೂಟ, ಸಾರಿಗೆ ಒಕ್ಕೂಟಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಎರಡು ಸಂಘಟನೆಗಳ ಜೊತೆ ಪ್ರತ್ಯೇಕವಾಗಿ ಸಿಎಂ ಸಭೆ ನಡೆಸಲಿದ್ದಾರೆ. ಸಾರಿಗೆ ಸಂಘಟನೆಗಳ ಮುಖಂಡರುಗಳಾದ ಅನಂತ ಸುಬ್ಬರಾವ್, ನಟರಾಜ್ ಶರ್ಮಾ ಸೇರಿದಂತೆ ಕೆಲವು ಮುಖಂಡರ ಜೊತೆ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಸಾರಿಗೆ ನಿಗಮಗಳ ನಿರ್ದೇಶಕರು ಭಾಗಿಯಾಗಲಿದ್ದಾರೆ.
ಸಾರಿಗೆ ನೌಕರರ ಬೇಡಿಕೆಗಳೇನು..?
- 38 ತಿಂಗಳ ವೇತನ ಬಾಕಿ ಹಣ ನೀಡಬೇಕು
- ಸರ್ಕಾರಿ ನೌಕರರಿಗೆ ನೀಡುವ ವೇತನಕ್ಕೆ ಸರಿಸಮಾನ ವೇತನ ನೀಡಬೇಕು
- ಖಾಸಗೀಕರಣ, ಭ್ರಷ್ಟಾಚಾರ, ಕಾರ್ಮಿಕರ ಕಿರುಕುಳ ನಿಲ್ಲಬೇಕು
- ನಗದು ರಹಿತ ವೈದ್ಯಕೀಯ ಸೌಲಭ್ಯ
- ನಮ್ಮ ಹಕ್ಕಿನ ರಜೆ
- 1-1-2024 ರಿಂದ ವೇತನ ಜಾರಿಗೊಳಿಸುವುದು
- ಉತ್ತಮ ಕ್ಯಾಂಟೀನ್ ವ್ಯವಸ್ಥೆ
- ಈ ಹಿಂದೆ 2020 ಮತ್ತು 2021 ರ ಸಾರಿಗೆ ಮುಷ್ಕರ ಸಂದರ್ಭದಲ್ಲಿ ನೌಕರರ ಮೇಲೆ ಹಾಕಲಾಗಿರುವ ಎಲ್ಲಾ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಬೇಕು
- ಸಾರಿಗೆ ನಿಗಮದ ವಿದ್ಯುತ್ ಚಾಲಿತ ಬಸ್ಗಳಲ್ಲಿ ಸಂಸ್ಥೆಯ ಚಾಲಕರನ್ನೇ ಚಾಲನಾ ಕೆಲಸಕ್ಕೆ ನಿಯೋಜಿಸುವಂತೆ ಮನವಿ.
- ಖಾಸಗಿ ಗುತ್ತಿಗೆದಾರರಿಗೆ ಇ-ಬಸ್ಗಳ ನಿರ್ವಹಣೆಯನ್ನು ನೀಡುವ ಪದ್ಧತಿ ಕೈಬಿಡಬೇಕೆಂದು ಆಗ್ರಹ.
ಸಿಎಂ ಜೊತೆ ಸಭೆಯಲ್ಲಿ ಸರ್ಕಾರಿ ನೌಕರರ ಬೇಡಿಕೆ ಈಡೇರಿಕೆಯಾದ್ರೆ ಮಾತ್ರ ಮುಷ್ಕರ ಕೈಬಿಡೋದು ಎಂದು ನೌಕರರು ತೀರ್ಮಾನಿಸಿದ್ದಾರೆ. ಹಾಗಾಗಿ, ಸಭೆ ಬಳಿಕ ನಾಳೆ ಬಸ್ ಸೇವೆ ಇರುತ್ತಾ ಇರಲ್ವಾ..? ಎಂಬ ಬಗ್ಗೆ ತೀರ್ಮಾನ ಹೊರಬೀಳುವ ನಿರೀಕ್ಷೆಯಿದೆ.
ಪರ್ಯಾಯ ವ್ಯವಸ್ಥೆಗೆ ಮುಂದಾದ ಸರ್ಕಾರ..
ಒಂದೆಡೆ ಸಾರಿಗೆ ನೌಕರರ ಜೊತೆಗೆ ಸಿಎಂ ಸಿದ್ದರಾಮಯ್ಯ ಹೈವೋಲ್ಟೆಜ್ ಸಭೆಗೆ ಮುಂದಾಗಿದ್ದು ಒಂದೊಮ್ಮೆ ಸಭೆ ಯಶಸ್ವಿಯಾಗದಿದ್ದರೆ, ನಾಳೆ ಸಾರಿಗೆ ಸಂಘಟನೆಗಳ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ನಿಗಾವಹಿಸಲು ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಲು ಮುಂದಾಗಿದೆ.
ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ತೊಂದರೆ ಆಗದ ರೀತಿ ವ್ಯವಸ್ಥೆಗೆ ಪ್ರಯತ್ನ ನಡೆಸಿರುವ ಸರ್ಕಾರ ಈಗಾಗಲೇ ಖಾಸಗಿ ಬಸ್ ಆಪರೇಟರ್ ಗಳಿಗೆ ಬಸ್ ಓಡಿಸುವಂತೆ ಮನವಿ ಮಾಡಿದೆ. ರಾಜ್ಯಾದ್ಯಂತ ಸುಮಾರು ಹತ್ತು ಸಾವಿರ ಖಾಸಗಿ ಬಸ್ ಓಡಿಸಲು ಮನವಿ ಮಾಡಲಾಗಿದ್ದು, ಇದಕ್ಕಾಗಿ ಖಾಸಗಿ ಬಸ್ ಮಾಲೀಕರ ಸಂಘವೂ ಸಹ ಕೆಲ ಬೇಡಿಕೆಗಳನ್ನಿಟ್ಟಿದೆ ಎಂದು ವರದಿಯಾಗಿದೆ.
ಐಟಿ ಕಂಪನಿಗಳಿಗೆ WFH:
ನಾಳೆ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಷ್ಕರ ಬಿಸಿ ತಪ್ಪಿಸಲು ಆ. 5ರಿಂದ ಐಟಿ ಕಂಪನಿಗಳ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್- WFH ಗೆ ಅವಕಾಶ ನೀಡಿ. ಇದರಿಂದ ಸಾರಿಗೆ, ಸಂಚಾರಕ್ಕೆ ಅಡೆತಡೆ ನಿವಾರಣೆಯಾಗಲಿದೆ. ಈ ಸಂಬಂಧ ಕಾರ್ಮಿಕ ಇಲಾಖೆ ಮೂಲಕ ಪತ್ರ ಬರೆಯಲು ಸೂಚಿಸುವನೆ ಸಾರಿಗೆ ಆಯುಕ್ತ ಯೋಗೀಶ್ ಅವರಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.