ಬೆಂಗಳೂರು: ಮಹಾದಾಯಿ ವಿಚಾರದಲ್ಲಿ ಗೋವಾದ ನ್ಯಾಯಾಂಗ ನಿಂದನೆಯ ಆರೋಪಕ್ಕೆ ಮಹದಾಯಿ ನ್ಯಾಯಾಧಿಕರಣದ ಮುಂದೆ ಪ್ರತಿಕ್ರಯಿಸಿರುವ ಕರ್ನಾಟಕ ಗೋವಾದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಅದು ಪ್ರತಿಕ್ರಯಿಸಿದೆ.


COMMERCIAL BREAK
SCROLL TO CONTINUE READING

ಮಹಾದಾಯಿ ನ್ಯಾಯಧಿಕರಣದಲ್ಲಿ ಕರ್ನಾಟಕವು ಕಳಸಾ-ಬಂಡೂರಿ ನಾಲಾ ಕಾಮಗಾರಿ ಆರಂಭಿಸಿದೆ ಎಂದು ಖ್ಯಾತೆ ತೆಗೆದಿದ್ದ ಗೋವಾಗೆ ಇಂದು ಕರ್ನಾಟಕವು ನ್ಯಾಯಾಧಿಕರಣದ ಮುಂದೆ ಉತ್ತರ ನೀಡಿದೆ.


ಗೋವಾದ ಜಲಸಂಪನ್ಮೂಲ ಮಂತ್ರಿ ವಿನೋದ್ ಪಾಲೇಕರ್ ರವರು  ಕರ್ನಾಟಕಕ್ಕೆ ಮಾಹಿತಿ ನೀಡದೆ ಕಾಮಗಾರಿಯ ಬಗ್ಗೆ ಪರಿಶೀಲನೆ ಮಾಡಿದ್ದಲ್ಲದೆ ಕನ್ನಡಿಗರನ್ನು ಹರಾಮಿಗಳು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನು ಕರ್ನಾಟಕವು ಗೋವಾದ ಸರ್ವಾಧಿಕಾರಿ ನಡೆ ಎಂದು ಖಂಡಿಸಿದೆ.


ನ್ಯಾಯಾಧಿಕರಣದ ಮುಂದೆ ಗೋವಾದ ಮುಖ್ಯಮಂತ್ರಿ ಮತ್ತು ಕರ್ನಾಟಕದ ಮುಖ್ಯಮಂತ್ರಿ  ಸಿದ್ದರಾಮಯ್ಯನವರ ಪತ್ರಗಳನ್ನು ಅವರು ವಿಚಾರಣೆ ವೇಳೆ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.