'ಕೈ' ಬಿಟ್ಟು 'ಕಮಲ' ಹಿಡಿಯಲು ಸಜ್ಜಾದ ರಾಜ್ಯಸಭಾ ಸಂಸದ ಕೆ.ಸಿ. ರಾಮಮೂರ್ತಿ

ನಾನು ಯಾವುದೇ ಕಾಂಗ್ರೆಸ್ ನಾಯಕರ ಬಗ್ಗೆ ಆರೋಪ ಮಾಡುವುದಿಲ್ಲ. ಎಲ್ಲರೂ ನನ್ನನ್ನು ಗೌರವಯುತವಾಗಿ ನಡೆಸಿಕೊಂಡಿದ್ದಾರೆ- ಕೆ.ಸಿ. ರಾಮಮೂರ್ತಿ

Yashaswini V Yashaswini V | Updated: Oct 17, 2019 , 05:34 AM IST
'ಕೈ' ಬಿಟ್ಟು 'ಕಮಲ' ಹಿಡಿಯಲು ಸಜ್ಜಾದ ರಾಜ್ಯಸಭಾ ಸಂಸದ ಕೆ.ಸಿ. ರಾಮಮೂರ್ತಿ

ನವದೆಹಲಿ: ಕಾಂಗ್ರೆಸ್ ರಾಜ್ಯಸಭಾ ಸಂಸದ ಕೆ.ಸಿ. ರಾಮಮೂರ್ತಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ಸೇರಲು ನಿರ್ಧರಿಸಿದ್ದಾರೆ.

ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಸಿ. ರಾಮಮೂರ್ತಿ, ರಾಜ್ಯಸಭಾ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿರುವುದು ಸತ್ಯ. 

ಒಂದು ವರ್ಷದಿಂದಲೇ ಕಾಂಗ್ರೆಸ್ ಬಿಡುವ ಬಗ್ಗೆ ಚಿಂತಿಸುತ್ತಿದ್ದೆ. ಈಗ ಕಾಲ ಕೂಡಿ ಬಂದಿದೆ. ಯಾವುದೇ ಕಾಂಗ್ರೆಸ್ ನಾಯಕರನ್ನೂ ನಾನು ದೂಷಿಸುವುದಿಲ್ಲ. ಎಲ್ಲರೂ ನನ್ನನ್ನು ಗೌರವಯುತವಾಗಿ ನಡೆಸುಕೊಂಡಿದ್ದಾರೆ. ದೇಶದ ಪ್ರಗತಿಯ ಜೊತೆ ಇರಬೇಕೆಂದು ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಬಿಜೆಪಿ ಸೇರಲು ನಿರ್ಧರಿಸಿದ್ದೇನೆ ಎಂದರು.

ಬಿಜೆಪಿ ಸೇರುವ ಬಗ್ಗೆ ಈವರೆಗೂ ನಾನು ಯಾವ ಬಿಜೆಪಿ ನಾಯಕನ್ನೂ ಸಂಪರ್ಕಿಸಿಲ್ಲ ಎಂದು ತಿಳಿಸಿದ ರಾಮಮೂರ್ತಿ ಈಗ ಬಿಜೆಪಿ ನಾಯಕರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸುವೆ ಎಂದು ತಿಳಿಸಿದರು.