Satish Jarkiholi: ಡಿಕೆಶಿ ರಾಜೀನಾಮೆಗೆ ಒತ್ತಾಯ! ಸ್ಪಷ್ಟಪಡಿಸಿದ ಸತೀಶ್ ಜಾರಕಿಹೊಳಿ
ನಮ್ಮದು ಸಾಮೂಹಿಕ ನಾಯಕತ್ವ. ಸೋಲಿನ ಹೊಣೆಗೆ ಡಿ.ಕೆ. ಶಿವಕುಮಾರ್ ಒಬ್ಬರೇ ಕಾರಣವಲ್ಲ. ಅವರು ರಾಜೀನಾಮೆ ಕೊಡಬೇಕಾದ ಅಗತ್ಯವಿಲ್ಲ
ಬೆಂಗಳೂರು: ನಮ್ಮದು ಸಾಮೂಹಿಕ ನಾಯಕತ್ವ. ಸೋಲಿನ ಹೊಣೆಗೆ ಡಿ.ಕೆ. ಶಿವಕುಮಾರ್ ಒಬ್ಬರೇ ಕಾರಣವಲ್ಲ. ಅವರು ರಾಜೀನಾಮೆ ಕೊಡಬೇಕಾದ ಅಗತ್ಯವಿಲ್ಲ. ಉಪಚುನಾವಣೆಯಲ್ಲಿ ಆಡಳಿತಾರೂಢ ಪಕ್ಷವೇ ಗೆಲ್ಲುತ್ತೆ. ಹಾಗಾಗಿ ರಾಜೀನಾಮೆ ಅಗತ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ಸೋಲಿನ ಹೊಣೆ ಹೊತ್ತು ಡಿ.ಕೆ.ಶಿವಕುಮಾರ್(D.K.Shivakumar) ರಾಜೀನಾಮೆ ನೀಡಬೇಕೆಂಬ ಈಶ್ವರಪ್ಪ ಹೇಳಿಕೆಗೆ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ವೃದ್ಧಾಪ್ಯ ಮತ್ತು ವಿಧವಾ ವೇತನ ಸ್ಥಗಿತ: ಅದಕ್ಕೆ ಸಿಎಂ ಏನಂದ್ರು ಗೊತ್ತಾ?
ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಗ ಕಾಂಗ್ರೆಸ್ ಅಧಿಕಾರದಿಂದ ದೂರ ಇರಬಹುದು. ಆದರೆ, ರಾಷ್ಟ್ರಮಟ್ಟದಲ್ಲಿ ಮತದಾನ ಪ್ರಮಾಣ ನಮಗೆ ಜಾಸ್ತಿ ಇದೆ. ಆದರೂ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ ಎಂದರು.
ಚುನಾವಣಾ ರಾಜಕೀಯಕ್ಕೆ 'ರಿಟೈರ್ಮೆಂಟ್' ಹೇಳಿದ 'ಮಾಜಿ ಸ್ಪೀಕರ್'..!
ಸೋಲು, ಗೆಲುವು ಸಾಮಾನ್ಯ. ಎಪ್ಪತ್ತು ವರ್ಷದಲ್ಲಿ ಎರಡ್ಮೂರು ಬಾರಿ ಹೀಗೆ ಆಗಿದೆ. ಮತ್ತೆ ಕಾಂಗ್ರೆಸ್ ಗೆ ಕಾಲ ಬಂದೇ ಬರಲಿದೆ. ನಮ್ಮ ಪಕ್ಷಕ್ಕೆ ಮೇಲೆ ಬರುವ ಶಕ್ತಿ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹಿರಿಯ ನಾಯಕನನ್ನು ಭೇಟಿಯಾಗಿ ಜೆಡಿಎಸ್‌ಗೆ ಆಹ್ವಾನ ನೀಡಿದ ಹೆಚ್ ಡಿಕೆ..!