)
Leopard Attack On Calf: ಚಿರತೆ ದಾಳಿ ನಡೆಸಿ ಕೊಟ್ಟಿಗೆಯಲ್ಲಿ ಕಟ್ಟಾಗಿದ್ದ ಕರುವನ್ನು ಹೊತ್ತೊಯ್ದು ತಿಂದು ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮರಳಾಪುರದಲ್ಲಿ ನಡೆದಿದೆ.
ಮರಳಾಪುರ ಗ್ರಾಮದ ವೀರಪ್ಪ ಎಂಬವರ ತೋಟದಲ್ಲಿ ಈ ಚಿರತೆ ದಾಳಿ ನಡೆದಿದ್ದು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವನ್ನು ಸುಮಾರು 500 ಮೀ. ದೂರಕ್ಕೆ ಎಳೆದೊಯ್ದು ತಿಂದು ಹಾಕಿದೆ.
ಚಿರತೆ ಹೆಜ್ಜೆ ಗುರುತುಗಳ ಜೊತೆ ಚಿರತೆ ಮರಿಗಳ ಹೆಜ್ಜೆ ಗುರುತು ಕೂಡ ಇದ್ದು ಇದು ಸ್ಥಳೀಯ ರೈತರ ಆತಂಕಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ಕೊಟ್ಟು ಪರಿಹಾರಕ್ಕೆ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ- ಕನ್ನಡ ಮಾತನಾಡಿದ್ದಕ್ಕೆ ಕಾಲೇಜಿನಿಂದಲೇ ಶಿಕ್ಷಕನ ವಜಾ..!
ಚಿರತೆ ಉಪಟಳ ಹೆಚ್ಚಿದ್ದು ಜಮೀನುಗಳಿಗೆ ತೆರಳಲು ಭಯಪಡುವ ಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ಚಿರತೆ ಸೆರೆ ಹಿಡಿಯಬೇಕೆಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.