ಕರ್ನಾಟಕ ಚುನಾವಣಾ ಫಲಿತಾಂಶಗಳು 2018 LIVE

Tue, 15 May 2018-6:13 pm,

ಮೈತ್ರಿಗೆ ಮುಂದಾದ ಕಾಂಗ್ರೆಸ್, ಜೆಡಿಎಸ್.

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯ ವಿಧಾಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. 
ಕರ್ನಾಟಕದ ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ವಿಧಾನಸಭಾ ಕ್ಷೇತ್ರಗಳಿಗೆ ಮೇ 12(ಶನಿವಾರ) ಮತದಾನ ನಡೆದಿತ್ತು. ಈ ಬಾರಿಯ ಚುನಾವಣೆಯಲ್ಲಿ  ದಾಖಲೆಯ 72.5% ಮತದಾನ ನಡೆದಿದೆ. 222 ವಿಧಾನಸಭಾ ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38 ಸ್ಥಾನ ಗಳಿಸಿದೆ. ಇಬ್ಬರು ಪಕ್ಷೇತರ ಅಭ್ಯ್ರಥಿಗಳು ಜಯ ಗಳಿಸಿದ್ದರೆ. ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಗೆ ಮುಂದಾಗಿವೆ.


COMMERCIAL BREAK
SCROLL TO CONTINUE READING

 

Latest Updates

  • ಸರ್ಕಾರ ರಚಿಸಲು 113 ಮ್ಯಾಜಿಕ್ ನಂಬರ್, ಕಾಂಗ್ರೆಸ್-78, ಜೆಡಿಎಸ್-38 ಮತ್ತು ಇಬ್ಬರು ಪಕ್ಷೇತರರು ಸೇರಿ ನಾವು 118 ಸಂಖ್ಯಾ ಬಲವನ್ನು ಹೊಂದಿದ್ದೇವೆ. ಹಾಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವಂತೆ ಸಂಖ್ಯಾಬಲದ ಆಧಾರದ ಮೇಲೆ ನಮಗೆ ಸರ್ಕಾರ ರಚಿಸಲು ಅವಕಾಶ ಸಿಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

  • ಕಾನೂನು ಬಹಳ ಸ್ಪಷ್ಟವಾಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಂಖ್ಯಾ ಬಲದ ಮೇಲೆ ಸರ್ಕಾರ ರಚಿಸಲು ಅವಕಾಶವಿದೆ. ರಾಜ್ಯಪಾಲರು ಚುನಾವಣಾ ಆಯೋಗದಿಂದ ಪಟ್ಟಿ ತರಿಸಿಕೊಂಡ ನಂತರ ಸಂಖ್ಯಾ ಬಲ ಹೊಂದಿರುವ ನಮಗೆ ಸರ್ಕಾರ  ರಚಿಸಲು ಅವಕಾಶ ಮಾಡಿಕೊಡಲಿದ್ದಾರೆ ಎಂಬ ವಿಶ್ವಾಸ ನಮಗಿದೆ- ಸಿದ್ದರಾಮಯ್ಯ

  • ಇವತ್ತಿನ ಚುನಾವಣಾ ಫಲಿತಾಂಶದ ನಂತರ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ನಾಯಕರು ಚರ್ಚಿಸಿ, ನಮ್ಮ ರಾಷ್ಟ್ರೀಯ ಅಧ್ಯಕ್ಷರಿಗೆ ಬೆಂಬಲ ಸೂಚಿಸುವ ಪತ್ರ ನೀಡಿದ್ದು, ನಾವು ಸರ್ಕಾರ ರಚಿಸಲು ರಾಜ್ಯಪಾಲರಿಗೆ ಪತ್ರ ನೀಡಿ ಮನವಿ ಮಾಡಿದ್ದೇವೆ. ರಾಜ್ಯಪಾಲರು ಚುನಾವಣಾ ಆಯೋಗದ ಮಾಹಿತಿ ಬಂದ ನಂತರ ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ- ಜಂಟಿ ಸುದ್ದಿಗೋಷ್ಠಿಯಲ್ಲಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ

  • ನಾವು ಕಾಂಗ್ರೆಸ್ ಬೆಂಬಲವನ್ನು ಸ್ವೀಕರಿಸಿದ್ದು, ಸರ್ಕಾರ ರಚಿಸಲು ಒಪ್ಪಿದ್ದೇವೆ ಎಂದು ಜೆಡಿಎಸ್ ರಾಜಾಧ್ಯಕ್ಷರಾದ ಕುಮಾರಸ್ವಾಮಿ ಅವರು ಸಹ ಹೇಳಿದ್ದಾರೆ - ಸಿದ್ದರಾಮಯ್ಯ

  • ಅಖಿಲ ಭಾರತ ಕಾಂಗ್ರೆಸ್ ಪಕ್ಷ, ಜೆಡಿಎಸ್ ಪಕ್ಷ ಸರ್ಕಾರ ರಚಿಸಲು ಸಂಪೂರ್ಣ ಬೆಂಬಲ ನೀಡಲು ತೀರ್ಮಾನ ಮಾಡಿದೆ. ಈಗ ನಮ್ಮ ತೀರ್ಮಾನವನ್ನು ರಾಜ್ಯಪಾಲರಿಗೆ ಪತ್ರದ ಮೂಲಕ ತಿಳಿಸಿದ್ದೇವೆ. ನಮ್ಮ ಪಕ್ಷದ ತೀರ್ಮಾನವನ್ನು ಪತ್ರದ ಮೂಲಕ ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡರಿಗೆ ತಿಳಿಸಿದ್ದೇವೆ- ರಾಜ್ಯಪಾಲರ ಭೇಟಿ ಬಳಿಕ ಸಿದ್ದರಾಮಯ್ಯ ಹೇಳಿಕೆ

  • ನಾವು ಜೆಡಿಎಸ್ ಗೆ ಸಂಪೂರ್ಣ ಬೆಂಬಲ ನೀಡಿದ್ದೇವೆ.

  • ಜೆಡಿಎಸ್ ಜತೆ ಜಂಟಿಯಾಗಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ. ರಾಜ್ಯಪಾಲರ ಭೇಟಿ ಬಳಿಕ ಡಾ. ಜಿ. ಪರಮೇಶ್ವರ್ ಹೇಳಿಕೆ

  • ಬೆಂಗಳೂರಿನಲ್ಲಿ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಜಂಟಿ ಹೇಳಿಕೆ

  • ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚಿಸಲು ಸಾಕಷ್ಟು ಸಂಖ್ಯಾ ಬಲ ಹೊಂದಿವೆ. ಸಂಖ್ಯಾಬಲವಿಲ್ಲದೆ ಸರ್ಕಾರ ರಚಿಸಲು ಬಿಜೆಪಿಗೆ ಸಾಧ್ಯವಿಲ್ಲ- ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ

  • ರಾಜಭವನದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು

  • ರಾಜಭವನದಲ್ಲಿ ಮಲ್ಲಿಕಾರ್ಜುನ ಖರ್ಗೆ, ಎಚ್.ಡಿ. ಕುಮಾರಸ್ವಾಮಿ, ಗುಲಾಂ ನಬಿ ಆಜಾದ್ ಮತ್ತು ಸಿದ್ದರಾಮಯ್ಯ

  • ಎರಡೂ ಪಕ್ಷದ ನಾಯಕರಿಂದ ರಾಜ್ಯಪಾಲರಿಗೆ ಮನವಿ ಪತ್ರ

  • ನಮಗೆ ಸರ್ಕಾರ ರಚಿಸಲು ಅನುಮತಿ ಕೊಡಿ ಎಂದು ಮನವಿ ಮಾಡಿದ ಉಭಯ ಪಕ್ಷದ ನಾಯಕರು

  • ಸಮ್ಮಿಶ್ರ ಸರ್ಕಾರಕ್ಕೆ ಉಭಯ ಪಕ್ಷಗಳ ಸಮ್ಮತಿ ಇದೆ, ರಾಜ್ಯಪಾಲರ ಬಳಿ ಹಕ್ಕುಪತ್ರ ಮಂಡಿಸಿದ ಎರಡೂ ಪಕ್ಷಗಳ ನಾಯಕರು

  • ರಾಜ್ಯದಲ್ಲಿ ಮತ್ತೆ ಆರಂಭವಾಯ್ತು ರೆಸಾರ್ಟ್ ರಾಜಕಾರಣ. ಪಂಜಾಬ್, ಆಂಧ್ರಕ್ಕೆ ಶಾಸಕರನ್ನು ಕರೆದೊಯ್ಯಲು ಪ್ಲಾನ್

  • ರಾಜಭವನಕ್ಕೆ ಕಾಂಗ್ರೆಸ್ ನಾಯಕರು ಭೇಟಿ

  • ನಾವು ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೇವೆ. ನಮಗೆ ಸರ್ಕಾರ ರಚಿಸಲು ನಮಗೆ ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದ್ದೇವೆ- ಬಿ.ಎಸ್. ಯಡಿಯೂರಪ್ಪ

  • ರಾಜಭವನದಿಂದ ಹೊರಬಂದ ಬಿ.ಎಸ್.ಯಡಿಯೂರಪ್ಪ, ಅನಂತ್ ಕುಮಾರ್, ಬಿ. ಶ್ರೀರಾಮುಲು

    COMMERCIAL BREAK
    SCROLL TO CONTINUE READING

    ಸರ್ಕಾರ ರಚನೆಗೆ ಒಂದು ವಾರ ಕಾಲಾವಕಾಶ ಕೇಳಿದ ಬಿಜೆಪಿ

  • ರಾಜಭವನಕ್ಕೆ ಆಗಮಿಸಿದ ಎಚ್.ಡಿ. ಕುಮಾರಸ್ವಾಮಿ

  • ರಾಜಭವನದ ಒಳಗೆ ತೆರಳಿದ ಬಿಜೆಪಿ ನಾಯಕರು. 

  • 100% ನಾವು ಸರ್ಕಾರ ರಚಿಸುತ್ತೇವೆ- ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ

    COMMERCIAL BREAK
    SCROLL TO CONTINUE READING

     

  • ಎಚ್.ಡಿ. ದೇವೇಗೌಡರ ಜತೆ ಸಮಾಲೋಚನೆಗಾಗಿ ಗೌಡರ ಪದ್ಮನಾಭ ನಗರ ನಿವಾಸಕ್ಕೆ ಆಗಮಿಸಿದ ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್

  • ಮೇ 18ಕ್ಕೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಸಾಧ್ಯತೆ

  • ಸರ್ಕಾರ ರಚನೆಗೆ ಹಕ್ಕು ಮಂಡಿಸಲಿರುವ ಬಿಎಸ್ವೈ. ಯಡಿಯೂರಪ್ಪಗೆ ಸಾಥ್ ನೀಡಿದ ಅನಂತ್ ಕುಮಾರ್, ಸದಾನಂದ ಗೌಡ

  • ರಾಜಭವನ ತಲುಪಿದ ಬಿ.ಎಸ್. ಯಡಿಯೂರಪ್ಪ

  • ಸರ್ಕಾರ ರಚಸಲು ಹಕ್ಕು ಮಂಡಿಗೆ ರಾಜಭವನದತ್ತ ಹೊರಟ ಎಚ್.ಡಿ.ಕುಮಾರಸ್ವಾಮಿ

  • ನಾಳೆ ಬೆಳಿಗ್ಗೆ 8 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

  • ಎಚ್.ಡಿ. ದೇವೇಗೌಡರ ನಿವಾಸದಿಂದ ಹೋರಾಟ ಎಚ್.ಡಿ. ಕುಮಾರಸ್ವಾಮಿ

  • ನಾವು 5 ಗಂಟೆಗೆ ರಾಜ್ಯಪಾಲರ ಭೇಟಿಗೆ ಅನುಮತಿ ತೆಗೆದುಕೊಂಡಿದ್ದೇವೆ.

  • ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹಾಗಾಗಿ ನಮಗೆ ಸರ್ಕಾರ ರಚಿಸುವ ಅವಕಾಶ ನೀಡಬೇಕೆಂದು ಕೋರಿ ಮನವಿ ಸಲ್ಲಿಸಲು ನಾವು ಸಂಜೆ 5 ಗಂಟೆಗೆ ರಾಜ್ಯಪಾಲರ ಭೇಟಿಗೆ ತೆರಳುತ್ತಿದ್ದೇವೆ.

  • ರಾಜಭವನಕ್ಕೆ ತೆರಳಿದ ಬಿ.ಎಸ್. ಯಡಿಯೂರಪ್ಪ ಹಾಗೂ ಅನಂತ್ ಕುಮಾರ್. ಸರ್ಕಾರ ರಚನೆಗೆ ಅವಕಾಶ ಕೋರಲಿರುವ ಬಿಜೆಪಿ ನಾಯಕರು

  • ಕುತೂಹಲ ಮೂಡಿಸಿದ ಸಿದ್ದರಾಮಯ್ಯ ಹಾಗೂ ದೇವೇಗೌಡರ ಭೇಟಿ

  • ನಾನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಗೆದ್ದಿದ್ದೇನೆ- ಮುಳಬಾಗಿಲಿನ ಪಕ್ಷೇತರ ಶಾಸಕ ನಾಗೇಶ್

  • ದೇವೇಗೌಡರನ್ನು ಭೇಟಿ ಮಾಡಲು ಮುಂದಾದ ಸಿದ್ದರಾಮಯ್ಯ

  • ಪಕ್ಷೇತರ ಶಾಸಕರು ನಮಗೆ ಬೆಂಬಲ ಸೂಚಿಸಿದ್ದಾರೆ. ಪಕ್ಷೇತರರ ಶಾಸಕರಾದ ಶ್ರೀ ನಾಗೇಶ್ ಮತ್ತು ಇತರ ಶಾಸಕರು ನಮ್ಮೊಂದಿಗಿದ್ದಾರೆ. ನಾವು ಕರ್ನಾಟಕದಲ್ಲಿ ಜಾತ್ಯಾತೀತ ಸರ್ಕಾರವನ್ನು ಬಯಸುತ್ತೇವೆ- ಡಿ.ಕೆ. ಶಿವಕುಮಾರ್

  • ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಮುಂದಾದ ಜೆಡಿಎಸ್. ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬೆಂಬಲದ ಪತ್ರ ತಯಾರಿ. ಹಕ್ಕು ಮಂಡಿಸಲು ವಕೀಲರ ಜತೆ ಸೇರಿ ಪತ್ರ ಸಿದ್ದಪಡಿಸಲು ದೇವೇಗೌಡರ ಸೂಚನೆ.

  • ಯಶವಂತಪುರ ವಿಧಾನಸಭಾ ಕ್ಷೇತ್ರದ ಸೋಲಿನ ಬಳಿಕ ನವರಸನಾಯಕ ಜಗ್ಗೇಶ್ ಟ್ವೀಟ್

  • ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲಿರುವ ಜೆಡಿಎಸ್ ಕಾಂಗ್ರೆಸ್ ನಾಯಕರು. ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಅಶೋಕ್ ಗೆಹ್ಲೋಟ್, ಗುಲಾಮ್ ನಬಿ ಅಜಾದ್ ಸೇರಿದಂತೆ ಪ್ರಮುಖ ನಾಯಕರು ಭಾಗಿ. 

  • ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ವೇದಿಕೆ ಸಜ್ಜು. 05:30ಕ್ಕೆ ಖಾಸಗಿ ಹೋಟೆಲ್ ನಲ್ಲಿ ಜೆಡಿಎಸ್ ಕಾಂಗ್ರೆಸ್ ನಾಯಕರ ಮಹತ್ವದ ಮೈತ್ರಿ ಸಭೆ.

  • ಸಂಜೆ 05:30 ರಿಂದ 06:00 ಗಂಟೆವರೆಗೆ ರಾಜ್ಯಪಾಲರ ಭೇಟಿಗೆ ಅನುಮತಿ ಕೋರಿರುವ ಎಚ್ಡಿಕೆ

  • ರಾಜ್ಯಪಾಲರ ಭೇಟಿಗೆ ಅನುಮತಿ ಕೋರಿದ ಎಚ್ ಡಿ ಕೆ

  • ಸರ್ಕಾರ ರಚಿಸಲು ನಾವು ಕಾಂಗ್ರೆಸ್ ಬೆಂಬಲವನ್ನು ಸ್ವೀಕರಿಸಿದ್ದೇವೆ - ಎಚ್.ಡಿ. ಕುಮಾರಸ್ವಾಮಿ

    COMMERCIAL BREAK
    SCROLL TO CONTINUE READING

     

  • ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಿಂದ ರಾಜ್ಯಪಾಲರ ಭೇಟಿ

  • ರಾಜ್ಯಪಾಲರ ಭೇಟಿಗೆ ಸಮಯ ಕೇಳಲು ರಾಜಭವನಕ್ಕೆ ತೆರಳಿದ ಜೆಡಿಎಸ್ ನಿಯೋಗ

  • ಸುದ್ದಿಗೋಷ್ಠಿಯಲ್ಲಿ ಬಿಜೆಪಿಗೆ ನೀಡಿರುವ ಬೆಂಬಲಕ್ಕಾಗಿ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸುವುದಾಗಿ ಬಿಎಸ್ ವೈ ಹೇಳಿದರು. ಆದರೆ ಕಾಂಗ್ರೆಸ್ ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವುದಕ್ಕೆ ಪ್ರಯತ್ನಿಸುತ್ತಿರುವುದನ್ನು ವಿರೋಧಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

  • ಮತ್ತೊಂದೆಡೆ ತೀವ್ರ ಕುತೂಹಲ ಕೆರಳಿಸಿರುವ ಬಿಜೆಪಿ ನಡೆ

  • ಕೆಲವೇ ಕ್ಷಣಗಳಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸುದ್ದಿಗೋಷ್ಠಿ

    COMMERCIAL BREAK
    SCROLL TO CONTINUE READING

    ಕಾಂಗ್ರೆಸ್ ಜತೆ ಮೈತ್ರಿ ಬಗ್ಗೆ ತಿಲಿಸಲಿರುವ ಎಚ್.ಡಿ. ದೇವೇಗೌಡ

  • ದೇವೇಗೌಡರ ನಿವಾಸದಲ್ಲಿ ಎಚ್.ಡಿ. ಕುಮಾರಸ್ವಾಮಿ

  • ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ ಬೆನ್ನೆಲ್ಲೇ ಸುದ್ದಿಗೋಷ್ಠಿ ನಡೆಸಲಿರುವ ಎಚ್ಡಿಡಿ

  • ಕಾಂಗ್ರೆಸ್ ಜತೆ ಮೈತ್ರಿಗೆ ಜೆಡಿಎಸ್ ಷರತ್ತುಗಳು

    COMMERCIAL BREAK
    SCROLL TO CONTINUE READING

    * ಐದು ವರ್ಷ ಸಿಎಂ ಕುರ್ಚಿಗೆ ಬೇಡಿಕೆ

     

  • ರಾಷ್ಟ್ರ ನಾಯಕರ ಜತೆ ಚರ್ಚಿಸಿ ಮುಂದಿನ ಹೆಜ್ಜೆ- ಬಿಎಸ್ವೈ

  • ಕರ್ನಾಟಕದ ಜನತೆ ಬದಲಾವಣೆ ಬಯಸಿ ಮತದಾನ ಮಾಡಿದೆ

  • ಚುನಾವಣೆ ಗೆಲ್ಲಲು ಕಾಂಗ್ರೆಸ್ ವಾಮಮಾರ್ಗ ಅನುಸರಿಸುತ್ತಿದೆ

  • ರಾಜ್ಯದ ಜನತೆ ಸಿದ್ದರಾಮಯ್ಯ ಸರ್ಕಾರವನ್ನು ತಿರಸ್ಕರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ತಮ್ಮ ತವರು ಕ್ಷೇತ್ರದಲ್ಲೇ ಹೀನಾಯವಾಗಿ ಸೋತಿದ್ದಾರೆ.

    COMMERCIAL BREAK
    SCROLL TO CONTINUE READING

     

  • ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಬಿ.ಎಸ್. ಯಡಿಯೂರಪ್ಪ ಸುದ್ಧಿಗೊಷ್ಟಿ

  • ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

  • ರಾಜ್ಯಪಾಲರನ್ನು ಭೇಟಿಯಾದ ಸಿದ್ದರಾಮಯ್ಯ, ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಲಿರುವ ಸಿದ್ದರಾಮಯ್ಯ

  • ನನ್ನ ಹಾಗೂ ಕುಮಾರಸ್ವಾಮಿ ನಡುವಿನ ಭಿನ್ನಾಭಿಪ್ರಾಯ ಬೇರೆ. ನಾನು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ತಲೆಬಾಗುತ್ತೇನೆ- ಚಾಮರಾಜಪೇಟೆ ಕ್ಷೇತ್ರದ ವಿಜೇತ ಜಮೀರ್ ಅಹಮದ್

  • ರಾಜಭವನಕ್ಕೆ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಐದು ವರ್ಷಗಳ ಯಶಸ್ವೀ ಆಡಳಿತ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ರಾಜಭವನಕ್ಕೆ ತೆರಳಿದರು.

  • ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ನಿವಾಸದ ಎದುರು ಜಮಾಯಿಸಿರುವ ನೂರಾರು ಕಾರ್ಯಕರ್ತರು.

  • ರಾಜ್ಯಪಾಲರ ನಿವಾಸಕ್ಕೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ನೇತೃತ್ವದ ತಂಡಕ್ಕೆ ಸಿಗದ ಪ್ರವೇಶ. ಬರಿಗೈಯಲ್ಲಿ ಹಿಂದಿರುಗಿದ ತಂಡ.

  • ಜೆಪಿ ನಡ್ಡ, ಧರ್ಮೇಂದ್ರ ಪ್ರಧಾನ್ ಮತ್ತು ಪ್ರಕಾಶ ಜಾವಡೆಕರ್ ಇಂದು ಬೆಂಗಳೂರಿಗೆ

  • ಕಾಂಗ್ರೆಸ್ ಈಗಾಗಲೇ ಸಿಎಂ ಪದವಿ ಬಿಟ್ಟು ಕೊಟ್ಟ ಹಿನ್ನೆಲೆ ಸರ್ಕಾರ ರಚನೆ ಬಗ್ಗೆ ಮಾತುಕತೆ ನಡೆಸುತ್ತಿರುವ ಎಚ್ಡಿಡಿ, ಎಚ್ಡಿಕೆ

  • ಸರ್ಕಾರ ರಚನೆ ಬಗ್ಗೆ ಚರ್ಚಿಸುತ್ತಿರುವ ಎಚ್ಡಿಡಿ, ಎಚ್ಡಿಕೆ

  • ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶಂಕರ್ ಜತೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ಕಾಂಗ್ರೆಸ್ ಪಕ್ಷ ಬೆಂಬಲಿಸುವಂತೆ ಮನವಿ ಮಾಡಿದ ಸಿಎಂ

  • ಅಮಿತ್ ಶಾ ನಿವಾಸಕ್ಕೆ ಆಗಮಿಸಿದ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೆಕರ್

  • ದೆಹಲಿಯಲ್ಲಿ ಬಿಜೆಪಿಯ ಉನ್ನತ ಮಟ್ಟದ ನಾಯಕರ ಸಭೆ.

  • ರಾಜ್ಯದಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದ ಹಿನ್ನೆಲೆ ಮುಂದಿನ ನಿರ್ಧಾರದ ಬಗ್ಗೆ ಬಿಜೆಪಿ ಅಮಿತ್ ಶಾ ನಿವಾಸದಲ್ಲಿ ಸಭೆ

  • ಸಂಪೂರ್ಣ ಫಲಿತಾಂಶ ಹೊರಬಿದ್ದ ಬಳಿಕ ಮುಂದಿನ ನಿರ್ಧಾರ ತಿಳಿಸುತ್ತೇವೆ.  ನಾನು ಕಾಂಗ್ರೆಸ್ ಅಥವಾ ಜೆಡಿ (ಎಸ್) ಬಗ್ಗೆ ಮಾತನಾಡಲು ಬಯಸುವುದಿಲ್ಲ- ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ

  • ಅರ್ಧಗಂಟೆ ಮೊದಲು ಕರೆ ಮಾಡಿ ಜೆಡಿಎಸ್ ವರಿಷ್ಠರ ಜತೆ ಮಾತುಕತೆ ನದೆಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ. ಮೈತ್ರಿ ಬಗ್ಗೆ ಮಾತುಕತೆ ನಡೆಸಿರುವ ಸೋನಿಯಾ. ಸಂಪೂರ್ಣ ಫಲಿತಾಂಶ ಹೊರಬಿದ್ದ ಬಳಿಕ ನಿರ್ಧಾರ ತಿಳಿಸುವುದಾಗಿ ಪ್ರತಿಕ್ರಿಯಿಸಿರುವ ಎಚ್ಡಿಡಿ.

  • ವಿಧಾನಸಭಾ ಚುನಾವಣೆಯ ಅತಂತ್ರ ಪಹ್ಲಿತಾಂಶ ಹಿನ್ನೆಲೆಯಲ್ಲಿ ದೇವೇಗೌಡರ ನಿವಾಸಕ್ಕೆ ಆಗಮಿಸಿದ ಎಚ್.ಡಿ. ಕುಮಾರಸ್ವಾಮಿ

  • ನಾವು (ಕಾಂಗ್ರೆಸ್ ಮತ್ತು ಜೆಡಿಎಸ್) ಇಂದು ಸಂಜೆ ರಾಜ್ಯಪಾಲರನ್ನು ಭೇಟಿಯಾಗುತ್ತೇವೆ: ಕೆ.ಸಿ. ವೇಣುಗೋಪಾಲ್

  • ನಾವು ದೇವೇಗೌಡ ಹಾಗೂ ಕುಮಾರ ಸ್ವಾಮಿ ಅವರ ಜತೆ ದೂರವಾಣಿ ಮೂಲಕ ಮಾತನಾಡಿದ್ದೇವೆ. ಅವರು ನಮ್ಮ ಆಹ್ವಾನವನ್ನು ಸ್ವೀಕರಿಸಿದ್ದಾರೆ- ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್

  • ಜನರ ಆದೇಶವನ್ನು ನಾವು ಸ್ವೀಕರಿಸುತ್ತೇವೆ. ಜನತೆಯ ತೀರ್ಪಿಗೆ ನಾವು ತಲೆ ಬಾಗುತ್ತೇವೆ. ಸರ್ಕಾರ ರಚನೆಗೆ ನಾವು ಸ್ಪಷ್ಟ ಬಹುಮತ ಹೊಂದಿಲ್ಲ.  ಜೆಡಿ (ಎಸ್) ಗೆ ಬೆಂಬಲ ನೀಡಲು ಕಾಂಗ್ರೆಸ್ ಸಿದ್ಧವಾಗಿದೆ - ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ

  • ಅಹ್ಮದ್ ಪಟೇಲ್ ಸೋನಿಯಾ ಗಾಂಧಿ ಆಪ್ತ ಕಾರ್ಯದರ್ಶಿ

  • ದೇವೇಗೌಡರ ಆಪ್ತರನ್ನು ಸಂಪರ್ಕಿಸುತ್ತಿರುವ ಅಹ್ಮದ್ ಪಟೇಲ್

  • ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹೊಣೆ ಹೊತ್ತ ಅಹ್ಮದ್ ಪಟೇಲ್

  • ಕರ್ನಾಟಕ ಚುನಾವಣಾ ಅಖಾಡಕ್ಕೆ ಅಹ್ಮದ್ ಪಟೇಲ್, ಇಂದು ಸಂಜೆ ಬೆಂಗಳೂರಿಗೆ ಆಗಮಿಸಲಿರುವ ಅಹ್ಮದ್ ಪಟೇಲ್

  • 222 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 77 ಸ್ಥಾನ, ಬಿಜೆಪಿ 104, ಜೆಡಿಎಸ್ 39 ಹಾಗೂ ಪಕ್ಷೇತರ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

  • ಇಂದು ಸಂಜೆ 4 ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ

  • ಎಚ್.ಡಿ. ಕುಮಾರಸ್ವಾಮಿಗೆ ಪಟ್ಟ ಕಟ್ಟಲು ಸಿದ್ಧತೆ

  • ಕಾಂಗ್ರೆಸ್-ಜೆಡಿಎಸ್ ನಿಯೋಗದಿಂದ ರಾಜ್ಯಪಾಲರ ಭೇಟಿ

  • ಶಿರಹಟ್ಟಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಮಣ್ಣ ಲಮಾಣಿಗೆ ಗೆಲುವು. ಹಿರೇಕೆರೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ. ಸಿ. ಪಾಟೀಲಗೆ 555 ಮತಗಳ ಅಂತರದಿಂದ ಗೆಲುವು. ವಿಜಯನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಗೆಲುವು. ಬೊಮ್ಮನಹಳ್ಳಿಯಲ್ಲಿ ಬಿಜೆಪಿಯ ಸತೀಶ್ ರೆಡ್ಡಿಗೆ ಗೆಲುವು. 

  • ಯಶವಂತ ಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ಗೆ ಜಯ

  • ಕೊರಟಗೆರೆಯಲ್ಲಿ 9,900 ಮತಗಳ ಅಂತರದಿಂದ ಡಾ. ಜಿ. ಪರಮೇಶ್ವರ್ ಗೆ ಗೆಲುವು. ಶಿರಾ ಕ್ಷೇತ್ರದಲ್ಲಿ ಟಿ.ಬಿ. ಜಯಚಂದ್ರಗೆ ಸೋಲು

  • ಯಶವಂತಪುರದಲ್ಲಿ ಬಿಜೆಪಿ ಅಭ್ಯರ್ಥಿ ಜಗ್ಗೇಶ್ ಗೆ ಹಿನ್ನಡೆ

  • ಗಾಂಧಿನಗರದಲ್ಲಿ ಕಾಂಗ್ರೆಸ್ ದಿನೇಶ್ ಗುಂಡುರಾವ್ ಗೆಲುವು

  • ನಂಜನಗೂಡಿನಲ್ಲಿ ಬಿಜೆಪಿಯ ಹರ್ಷವರ್ಧನ್ ಗೆ ಗೆಲುವು. ಹೊಸಕೋಟೆ ಕಾಂಗ್ರೆಸ್ ನ ಎಂಟಿಬಿ ನಾಗರಾಜ್ ಗೆ ಜಯ. ಹುಣಸೂರು ಕ್ಷೇತ್ರದಲ್ಲಿ ವಿಶ್ವನಾಥ್ ಗೆ ಗೆಲುವು. ಹೆಚ್ ಡಿ ಕೋಟೆಯಲ್ಲಿ ಕಾಂಗ್ರೆಸ್ ನ ಅನಿಲ್ ಕುಮಾರ್ ಗೆ ಜಯ. ಆಳಂದದಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತ ಬಿಆರ್ ಪಾಟೀಲ್ ಗೆ ಸೋಲು. 

  • ಸಕ್ಕರೆ ನಾಡಿನ ಏಳು ಕ್ಷೇತ್ರಗಳಲ್ಲೂ ಜೆಡಿಎಸ್ ಜಯಭೇರಿ

  • ರಾಯಬಾಗದಲಿ ಬಿಜೆಪಿಯ ಹೈಹೊಳೆ ದುರ್ಯೋಧನಗೆ ಗೆಲುವು, ಅರಬಾವಿ ಯಲಿ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿಗೆ ಗೆಲುವು

  • ಹಗರಿಬೊಮ್ಮನ ಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಾ ನಾಯಕ್ ಗೆ ಗೆಲುವು

  • 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಡಾ. ಯತೀಂದ್ರಗೆ ಗೆಲುವು. ವರುಣಾದಲ್ಲಿ ಚೊಚ್ಚಲ ಗೆಲುವು ಸಾಧಿಸಿದ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ

  • ಕಿತ್ತೂರಿನಲ್ಲಿ ಬಿಜೆಪಿಯ ಮಹಾಂತೇಶ್ ದೊಡ್ಡ ಗೌಡರ್, ಮುಧೋಳದಲ್ಲಿ ಬಿಜೆಪಿಯ ಆನಂದ್ ವಿಶ್ವನಾಥ್ ಮಾಮನಿ

  • ವಿರಾಜ ಪೇಟೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ಕೆ.ಜಿ. ಬೋಪಯ್ಯ. ಮಹಾಲಕ್ಷ್ಮಿ ಲೇಔಟ್ ನ ಬಿಜೆಪಿ ಅಭ್ಯರ್ಥಿ ನೆಲ ನರೇಂದ್ರ ಬಾಬುಗೆ ಸೋಲು

  • ದಾಸರಹಳ್ಳಿಯಲ್ಲಿ ಮುನ್ನಡೆ ಸಾಧಿಸಿದ ಜೆಡಿಎಸ್‌ನ ಮಂಜುನಾಥ್‌.

  • ಗೋವಿಂದರಾಜ ನಗರದಲ್ಲಿ ಬಿಜೆಪಿಯ ವಿ. ಸೋಮಣ್ಣ ಗೆಲುವು. ಕಾಂಗ್ರೆಸಿನ ಪ್ರಿಯ ಕೃಷ್ಣ ವಿರುದ್ಧ ಗೆಲುವು ಸಾಧಿಸಿದ ವಿ. ಸೋಮಣ್ಣ

  • ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ​ಕಾಂಗ್ರೆಸ್​ ಅಭ್ಯರ್ಥಿ ರಾಮಲಿಂಗಾರೆಡ್ಡಿ 20,490 ಮತಗಳ ಅಂತರದಿಂದ ಗೆಲುವು

  • ಕಲಘಟಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಎಮ್.ನಿಂಬಣ್ಣವರ್ ಗೆಲುವು. ಮಹಾಲಕ್ಷ್ಮೀ ಲೇಔಟ್ ನಲ್ಲಿ ಜೆಡಿಎಸ್‌ನ ಕೆ.ಗೋಪಾಲಯ್ಯಗೆ ಗೆಲುವು. ಸಿ. ವಿ.ರಾಮನ್ ನಗರ - ಬಿಜೆಪಿಯ ಎಸ್.ರಘುಗೆ ಮುನ್ನಡೆ. ಮಾಗಡಿಯಲ್ಲಿ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಗೆಲುವು.

  • ಕೊರಟಗೆರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಗೆಲುವು

  • ಚಾಮುಂಡೇಶ್ವರಿಯಲ್ಲಿ 30 ಸಾವಿರಕ್ಕೂ ಹೆಚ್ಚು ಅಂತರದಲ್ಲಿ ಸಿಎಂ ಸಿದ್ದರಾಮಯ್ಯಗೆ ಸೋಲು

    COMMERCIAL BREAK
    SCROLL TO CONTINUE READING

     

  • ಚಿತ್ರದುರ್ಗದಲ್ಲಿ 19 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿದ ಬಿಜೆಪಿಯ ತಿಪ್ಪಾರೆಡ್ಡಿ. ಹೆಬ್ಬಾಳದಲ್ಲಿ ಕಾಂಗ್ರೆಸ್ ನ ಬೈರತಿ ಸುರೇಶ್ ಗೆ ಜಯ. ಶಿಡ್ಲಘಟ್ಟ ಕಾಂಗ್ರೆಸ್ ನ ವಿ.ಮುನಿಯಪ್ಪಗೆ ಗೆಲುವು, ಬಾಗೇಪಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಬ್ಬಾರೆಡ್ಡಿಗೆ ಜಯ. ಮಸ್ಕಿ ಕಾಂಗ್ರೆಸ್ ನ ಪ್ರತಾಪ್ ಗೌಡಗೆ ಗೆಲುವು, ಚಿಂತಾಮಣಿ ಜೆಡಿಎಸ್ ನ ಜೆ.ಕೆ.ಕೃಷ್ಣಾರೆಡ್ಡಿಗೆ ಜಯ.

  • ರಾಜಾಜಿನಗರದಲ್ಲಿ ಬಿಜೆಪಿಯ ಸುರೇಶ್ ಕುಮಾರ್ ಗೆ ಗೆಲುವು

  • 18 ಸಾವಿರ ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ ಹ್ಯಾರಿಸ್

  • ಶಿಗ್ಗಾಂವಿ ಬಿಜೆಪಿಯ ಬಸವರಾಜ್ ಬೊಮ್ಮಾಯಿಗೆ ಗೆಲುವು.

  • ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಎಚ್.ಡಿ. ಕುಮಾರಸ್ವಾಮಿಗೆ ಗೆಲುವು

  • ಪುಲಕೇಶಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಖಂಡ ಶ್ರೀನಿವಾಸ ಮೂರ್ತಿ 82ಸಾವಿರ ಮತಗಳ ಗೆಲುವು.

  • ಯಲ್ಲಾಪುರದಲ್ಲಿ ಕಾಂಗ್ರೆಸ್ ಶಿವರಾಂ ಹೆಬ್ಬಾರ್ ಗೆ ಗೆಲುವು. ಹೊನ್ನಾಳಿಯಲ್ಲಿ ಬಿಜೆಪಿ ಎಂ.ಪಿ. ರೇಣುಕಾಚಾರ್ಯ ಗೆಲುವು. ಹರಪನಹಳ್ಳಿಯಲ್ಲಿ ಬಿಜೆಪಿಯ ಕರುಣಾಕರ ರೆಡ್ಡಿಗೆ ಗೆಲುವು

  • ಹರತಾಳು ಹಾಲಪ್ಪಗೆ ಗೆಲುವು. ಸಾಗರದಲ್ಲಿ ಅರಳಿದ ಕಮಲ

  • ಪುಲಕೇಶಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಖಂಡ ಶ್ರೀನಿವಾಸ ಮೂರ್ತಿ 82ಸಾವಿರ ಮತಗಳ ಗೆಲುವು.

  • ತಿಪಟೂರಿನಲ್ಲಿ ಬಿಜೆಪಿಯ ನಾಗೇಶ್ ಗೆ ಗೆಲುವು, ಹುಬ್ಬಳ್ಳಿ ಸೆಂಟ್ರಲ್ ನಲ್ಲಿ ಬಿಜೆಪಿಯ ಜಗದೀಶ್ ಶೆಟ್ಟರ್ ಗೆ ಜಯ

  • ಸೊರಬದಲ್ಲಿ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪಗೆ ಗೆಲುವು, ಜೆಡಿಎಸ್ ಮಧು ಬಂಗಾರಪ್ಪಗೆ ಸೋಲು

  • ದೊಡ್ಡಬಳ್ಳಾಪುರದಲ್ಲಿ 9,969 ಮತಗಳ‌ ಅಂತರದಿಂದ ಗೆಲುವು ಸಾಧಿಸಿದ ಕಾಂಗ್ರೆಸ್‌ ವೆಂಕಟರಮಣಯ್ಯ

  • ಚಾಮುಂಡೇಶ್ವರಿ ಕ್ಷೇತ್ರ17 ಸುತ್ತು ಮುಕ್ತಾಯ. 28,218ಮತಗಳ ಅಂತರ ಕಾಯ್ದುಕೊಂಡ ಜಿ.ಟಿ. ದೇವೇಗೌಡ

    COMMERCIAL BREAK
    SCROLL TO CONTINUE READING

     

  • ಶೃಂಗೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಗೆ ಸೋಲು, ಕಾಂಗ್ರೆಸ್ ಗೆ ಗೆಲುವು. ರಾಜಾಜಿನಗರದಲ್ಲಿ ಬಿಜೆಪಿಯ ಅಭ್ಯರ್ಥಿ ಸುರೇಶ್ ಕುಮಾರ್ ಗೆ ಜಯ. 

  • ಬದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗೆಲುವು. ಕನಕಪುರದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಗೆ ಗೆಲುವು. ವರುಣಾದಲ್ಲಿ ಡಾ. ಯತೀಂದ್ರ ಗೆ ಗೆಲುವು.

    COMMERCIAL BREAK
    SCROLL TO CONTINUE READING

    ಮೂಡಿಗೆರೆ ಬಿಜೆಪಿ ಅಭ್ಯರ್ಥಿ ಎಂ.ಪಿ. ಕುಮಾರಸ್ವಾಮಿಗೆ ಗೆಲುವು.

  • ಅಫ್ಜಲ್ ಪುರ ಕಾಂಗ್ರೆಸ್ ಅಭ್ಯರ್ಥಿ ಎಂ.ವೈ. ಪಾಟೀಲ್ ಗೆ ಗೆಲುವು. ಬಿಜೆಪಿಯ ಮಾಲಿಕಯ್ಯ ಗುತ್ತೇದಾರ್ ಗೆ ಸೋಲು

  • ಬೆಳಗಾವಿ ದಕ್ಷಿಣದಲ್ಲಿ ಬಿಜೆಪಿಯ ಅಭಯ್ ಪಾಟೀಲ್ ಗೆ ಜಯ, ಬೈಂದೂರಿನಲ್ಲಿ ಬಿಜೆಪಿಯ ಸುಕುಮಾರ್ ಶೆಟ್ಟಿಗೆ ಗೆಲುವು, ಕಾಂಗ್ರೆಸ್ ನ ಗೋಪಾಲ ಪೂಜಾರಿಗೆ ಸೋಲು. ಕಾರವಾರದಲ್ಲಿ ಬಿಜೆಪಿಯ ರೂಪಾಲಿ ನಾಯಕ್ ಗೆ ಜಯಭೇರಿ. ಕಾಂಗ್ರೆಸ ಅಭ್ಯರ್ಥಿ ಸತೀಶ್ ಸೈಲ್ ಸೋಲು.  ಬೀಳಗಿಯಲ್ಲಿ ಬಿಜೆಪಿಯ ಮುರುಗೇಶ್ ನಿರಾಣಿ ಗೆಲುವು.

  • ಇಂದು ಬಿಜೆಪಿ ಸಂಸದೀಯ ಸಭೆ. ಮಧ್ಯಾಹ್ನ 3 ಗಂಟೆಗೆ ದೆಹಲಿಗೆ ದೌಡಾಯಿಸಲಿರುವ ಕೇಂದ್ರ ಸಚಿವ ಅನಂತ್ ಕುಮಾರ್.

  • ಗೆಲುವಿನ ಸಂತಸದಲ್ಲಿ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

  • ಯಲಬುರ್ಗಾದಲ್ಲಿ ಸಚಿವ ಬಸವರಾಜ ರಾಯರೆಡ್ಡಿಗೆ ಸೋಲು, ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆಗೆ ಜಯ. ಕುಡಚಿಯಲ್ಲಿ ಬಿಜೆಪಿಯ ಪಿ.ರಾಜೀವ್ ಜಯ, ಹುಕ್ಕೇರಿಯಲ್ಲಿ ಬಿಜೆಪಿಯ ಉಮೇಶ್ ಕತ್ತಿ ಗೆಲುವು ಸಾಧಿಸಿದ್ದಾರೆ. ದಾವಣಗೆರೆ ಉತ್ತರದಲ್ಲಿ ಬಿಜೆಪಿಯ ಎಸ್ ಎ.ರವೀಂದ್ರನಾಥ್ ಜಯಭೇರಿ ಬಾರಿಸಿದ್ದಾರೆ. 

  • ಚಾಮರಾಜಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹ್ಮದ್ ಖಾನ್ ಗೆಲುವು. ಕಾರ್ಕಳದಲ್ಲಿ ಬಿಜೆಪಿಯ ಸುನೀಲ್ ಕುಮಾರ್ ಶೆಟ್ಟಿ ಗೆಲುವು.

    COMMERCIAL BREAK
    SCROLL TO CONTINUE READING

     

  • ಇದು ಬಿಜೆಪಿಗೆ ದೊಡ್ಡ ಗೆಲುವು

    COMMERCIAL BREAK
    SCROLL TO CONTINUE READING

     

  • ಮೊಳಕಾಲ್ಮೂರಿನಲ್ಲಿ ಶ್ರೀರಾಮುಲುಗೆ ಭರ್ಜರಿ ಗೆಲುವು. 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ಬಿ. ಶ್ರೀರಾಮುಲು

  • ಧಾರವಾಡ ಕ್ಷೇತ್ರದಲ್ಲಿ ಬಿಜೆಪಿಯ ಅಮೃತ್ ದೇಸಾಯಿ ಜಯಗಳಿಸಿದ್ದು, ಸಚಿವ ವಿನಯ್ ಕುಲಕುರ್ಣಿ ಸೋಲು ಕಂಡಿದ್ದಾರೆ. ಔರಾದ್ ಕ್ಷೇತ್ರದಲ್ಲಿ ಬಿಜೆಪಿಯ ಪ್ರಭು ಚೌಹಾಣ್ ಗೆ ಗೆಲುವು, ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಅಬ್ಬಯ್ಯ ಪ್ರಸಾದ್ ಗೆ ಜಯ. ಶ್ರೀನಿವಾಸಪುರದಲ್ಲಿ ಹೊಸ ದಾಖಲೆ ಸೃಷ್ಟಿಸಿದ ರಮೇಶ್ ಕುಮಾರ್. ತೇರದಾಳದಲ್ಲಿ ಸಚಿವೆ ಉಮಾಶ್ರೀಗೆ ಸೋಲು,ಬಿಜೆಪಿ ಅಭ್ಯರ್ಥಿ ಸಿದ್ದು ಸವದಿಗೆ ಭರ್ಜರಿ ಗೆಲುವು. ಶ್ರವಣಬೆಳಗೊಳದಲ್ಲಿ ಜೆಡಿಎಸ್ ನ ಸಿಎನ್ ಬಾಲಕೃಷ್ಣಗೆ ಗೆಲುವು.

    COMMERCIAL BREAK
    SCROLL TO CONTINUE READING

     

  • ರಾಮನಗರದಲ್ಲಿ 19,745 ಮತಗಳ ಅಂತರದಿಂದ ಎಚ್.ಡಿ. ಕುಮಾರಸ್ವಾಮಿ ಗೆಲುವು

  • ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಇ. ತುಕಾರಾಂಗೆ ಗೆಲುವು

  • ಚಾಮುಂಡೇಶ್ವರಿಯಲ್ಲಿ ಸುಮಾರು 18,000 ಮತಗಳ ಅಂತರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸೋಲು 

  • ಕುಂದಾಪುರದಲ್ಲಿ ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಗೆಲುವು. ಕಾಪು ನಲ್ಲಿ ಬಿಜೆಪಿಯ ಲಾಲಾಜಿ ಮೆಂಡನ್. ಮಲ್ಲೇಶ್ವರಂನಲ್ಲಿ ಬಿಜೆಪಿಯ ಡಾ. ಸಿ.ಎನ್. ಅಶ್ವಥ್ ನಾರಾಯಣ ಗೆಲುವು. ತೀರ್ಥಹಳ್ಳಿಯಲ್ಲಿ ಬಿಜೆಪಿಯ ಅರಗ ಜ್ಞಾನೇಂದ್ರ ಗೆಲುವು.

    COMMERCIAL BREAK
    SCROLL TO CONTINUE READING

     

  • ಬಬಲೇಶ್ವರದಲ್ಲಿ ಎಂ.ಬಿ. ಪಾಟೀಲ್ ಗೆಲುವು

  • ಚುನಾವಣೆ ಸೋಲಿನ ಬಗ್ಗೆ ಡಿ.ಕೆ. ಶಿವಕುಮಾರ್ ಹೇಳಿಕೆ

  • ದೆಹಲಿಯ ಬಿಜೆಪಿ ಕಚೇರಿ ಎದುರು ಕಾರ್ಯಕರ್ತರ ಹರ್ಷೋದ್ಗಾರ. 

  • ಶಿವಮೊಗ್ಗದಲ್ಲಿ ಕೆ.ಎಸ್. ಈಶ್ವರಪ್ಪ ಮುನ್ನಡೆ

  • ಕೆಜಿಎಫ್ ನಲ್ಲಿ ಕಾಂಗ್ರೆಸಿನ ರೂಪ ಶಶಿಧರ್ ಗೆಲುವು

  • ಹಾಸನದಲ್ಲಿ ಖಾತೆ ತೆರೆದ ಬಿಜೆಪಿ. ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಜಯಭೇರಿ

  • ಬಿಟಿಎಂ ಲೇಔಟ್ ನಲ್ಲಿ ಸಚಿವ ರಾಮಲಿಂಗಾರೆಡ್ಡಿಗೆ ಗೆಲುವು

  • ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಯ ಸಿ.ಎಂ. ಉದಾಸಿ ಮುನ್ನಡೆ, ಚನ್ನಪಟ್ಟಣದಲ್ಲಿ ಎಚ್.ಡಿ. ಕುಮಾರಸ್ವಾಮಿ ಮುನ್ನಡೆ

  • ಹುಬ್ಬಳ್ಳಿ-ಧಾರವಾಡದಲ್ಲಿ ಜಗದೀಶ್ ಶೆಟ್ಟರ್ ಮುನ್ನಡೆ

  • ಮಧ್ಯಾಹ್ನ 03:00 ಗಂಟೆಗೆ ದೆಹಲಿಗೆ ತೆರಳಲಿರುವ ಬಿ.ಎಸ್. ಯಡಿಯೂರಪ್ಪ

  • ಮೇಲುಕೋಟೆ ಕ್ಷೇತ್ರದಲ್ಲಿ ಸಿ.ಎಸ್. ಪುಟ್ಟರಾಜು ಮುನ್ನಡೆ

  • ಚಿಕ್ಕಮಗಳೂರಿನಲ್ಲಿ ಸಿ.ಟಿ. ರವಿ ಗೆಲುವು

  • ವರುಣಾದಲ್ಲಿ 6ನೇ ಸುತ್ತಿನ ಮತಏಣಿಕೆ ಮುಕ್ತಾಯ. 18,173 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಯತೀಂದ್ರ ಮುನ್ನಡೆ.

  • ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇಗೌಡ ಗೆಲುವು. ವಿಜಯನಗರದಲ್ಲಿ‌ ಆರನೇ ಸುತ್ತಿನ ಎಣಿಕೆ ಪೂರ್ಣ. ಕಾಂಗ್ರೆಸ್‌ನ ಆನಂದ್ ಸಿಂಗ್ಗೆ 8,849 ಮತಗಳ ಮುನ್ನಡೆ. ಪದ್ಮನಾಭನಗರದಲ್ಲಿ ಬಿಜೆಪಿಯ ಆರ್.ಅಶೋಕ್ ಗೆ ಜಯ, ಬೊಮ್ಮನಹಳ್ಳಿಯಲ್ಲಿ ಬಿಜೆಪಿಯ ಸತೀಶ್ ರೆಡ್ಡಿಗೆ ಗೆಲುವು. ಪುತ್ತೂರಿನಲ್ಲಿ ಬಿಜೆಪಿಯ ಸಂಜೀವ ಮಠಂದೂರು ಗೆಲುವು

  • ಮತ ಎಣಿಕೆ ವೇಳೆ ಗೋಲ್ ಮಾಲ್ ಮಾಡಿರುವುದಾಗಿ ಆರೋಪಿಸಿ, ಬಬಲೇಶ್ವರದಲ್ಲಿ ಬಿಜೆಪಿಯ ವಿಜುಗೌಡ ಪಾಟೀಲ್ ಪ್ರತಿಭಟನೆ. ಅಧಿಕಾರಿಗಳ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ.

  • ಗುಂಡ್ಲುಪೇಟೆಯಲ್ಲಿ ಕಾಂಗ್ರೆಸಿನ ಗೀತಾ ಮಹಾದೇವ ಪ್ರಸಾದ್ ಗೆ ಹಿನ್ನಡೆ, ಬಿಜೆಪಿಯ ನಿರಂಜನ್ ಕುಮಾರ್ ಮುನ್ನಡೆ

  • ಹೊಸದುರ್ಗ ಬಿಜೆಪಿ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ಗೆ 15 ಸಾವಿರ ಮತಗಳ ಅಂತರದಿಂದ ಗೆಲುವು

  • ಹಳಿಯಾಳದಲ್ಲಿ ಸಚಿವ ಆರ್.ವಿ. ದೇಶಪಾಂಡೆಗೆ ಗೆಲುವು

  • ಜಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ರಾಮಚಂದ್ರಗೆ ಗೆಲುವು

  • ಬಂಟ್ವಾಳ ಕ್ಷೇತ್ರದ ಆರನೇ ಸುತ್ತಿನ ಎಣಿಕೆ ಮುಕ್ತಾಯ. ಸಚಿವ ರಮಾನಾಥ ರೈಗೆ ಹಿನ್ನಡೆ, ಬಿಜೆಪಿಯ ರಾಜೇಶ್ ನಾಯ್ಕ್‌ಗೆ 9,498 ಮತಗಳ ಮುನ್ನಡೆ. 

  • ಚಾಮುಂಡೇಶ್ವರಿಯಲ್ಲಿ ಜಿ.ಟಿ. ದೇವೇಗೌಡ ಮುನ್ನಡೆ

  • ಹುನಗುಂದ ಕಾಂಗ್ರೆಸ್ ನ ವಿಜಯಾನಂದ ಕಾಶೆಪ್ಪನವರ್ ಗೆ ಸೋಲು. ಬಿಜೆಪಿಯ ದೊಡ್ಡನ ಗೌಡ ಪಾಟೀಲ್ ಗೆ ಜಯ

  • ಕೊಳ್ಳೇಗಾಲದಲ್ಲಿ BSPಯ ಎನ್.ಮಹೇಶ್ ಗೆ ಗೆಲುವು.

  • ಪುತ್ತೂರಿನಲ್ಲಿ ಬಿಜೆಪಿಯ ಸಂಜೀವ ಮಠಂದೂರು ಗೆಲುವು. ವಿಜಯನಗರದಲ್ಲಿ ಕಾಂಗ್ರೆಸ್ ನ ಆನಂದ್ ಸಿಂಗ್ ಮುನ್ನಡೆ. ಆನೇಕಲ್ ನಲ್ಲಿ ಬಿಜೆಪಿಯ ನಾರಾಯಣಸ್ವಾಮಿಗೆ ಮುನ್ನಡೆ. 

    COMMERCIAL BREAK
    SCROLL TO CONTINUE READING

     

  • ಮಂಡ್ಯದ 7 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಗೆಲುವು ಸಾಧ್ಯತೆ

  • ಮಂಡ್ಯದ 7 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಗೆಲುವು ಸಾಧ್ಯತೆ

  • ಚಾಮರಾಜ ಪೇಟೆಯಲ್ಲಿ 25 ಸಾವಿರ ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹಮದ್ ಮುನ್ನಡೆ

  • 11ನೇ ಸುತ್ತಿನ ಬಳಿಕವೂ ಹಿನ್ನಡೆ ಕಾಯ್ದುಕೊಂಡ ಸಿಎಂ ಸಿದ್ದರಾಮಯ್ಯ, ಇನ್ನೂ 13 ಸುತ್ತು ಬಾಕಿ

  • ಪದ್ಮನಾಭನಗರ  13 ನೇ ಸುತ್ತಿನಲ್ಲಿ ಬಿಜೆಪಿಯ ಆರ್.ಅಶೋಕ್ 23,600 ಮತಗಳಿಂದ ಮುನ್ನಡೆ

    COMMERCIAL BREAK
    SCROLL TO CONTINUE READING

     

  • ಸೊರಬದಲ್ಲಿ ಬಿಜೆಪಿ ಮುನ್ನಡೆ, ಕುಮಾರ್​ ಬಂಗಾರಪ್ಪ 8836 ಮತಗಳಿಂದ ಮುನ್ನಡೆ

    COMMERCIAL BREAK
    SCROLL TO CONTINUE READING

     

  • ನಂಜನಗೂಡಿನಲ್ಲಿ ಬಿಜೆಪಿಯ ಹರ್ಷವರ್ಧನ್ ಮುನ್ನಡೆ

  • ನರಗುಂದದಲ್ಲಿ ಬಿಜೆಪಿಯ ಸಿ.ಸಿ. ಪಾಟೀಲ್ ಮುನ್ನಡೆ

  • ಶಾಂತಿನಗರದಲ್ಲಿ ಎಚ್.ಎನ್. ಹ್ಯಾರಿಸ್ ಮುನ್ನಡೆ

  • ಮಂಗಳೂರು ದಕ್ಷಿಣದಲ್ಲಿ ಬಿಜೆಪಿಯ ವೇದವ್ಯಾಸ್ ಕಾಮತ್ ಜಯಭೇರಿ

  • ಗದಗ ಕ್ಷೇತ್ರದಲ್ಲಿ ಎಚ್.ಕೆ. ಪಾಟೀಲ್ ಗೆ ಹಿನ್ನಡೆ, 7,429 ಮತಗಳ ಹಿನ್ನಡೆ

  • ಬದಾಮಿಯಲ್ಲಿ ಸಿದ್ದರಾಮಯ್ಯಗೆ ಮುನ್ನಡೆ

  • ಹೊಳಲ್ಕೆರೆಯಲ್ಲಿ ಸಚಿವ ಎಚ್. ಆಂಜನೇಯಗೆ ಸೋಲು, ಆಂಜನೇಯ ವಿರುದ್ಧ 24,800 ಮತಗಳ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಎಂ. ಚಂದ್ರಪ್ಪ

  • ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯಗೆ ಹಿನ್ನಡೆ

  • ತೆರದಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಭಾರೀ ಹಿನ್ನಡೆ

  • ಚಾಮರಾಜನಗರದಲ್ಲಿ ಕಾಂಗ್ರೆಸ್ ಮೊದಲ ಗೆಲುವು. ಕಾಂಗ್ರೆಸಿನ ಪುಟ್ಟರಂಗಶೆಟ್ಟಿ ಗೆಲುವು

  • ಶಿಕಾರಿಪುರದಲ್ಲಿ ಜಯಗಳಿಸಿದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ

    COMMERCIAL BREAK
    SCROLL TO CONTINUE READING

     

  • ಹೊಳೆನರಸಿಪುರದಲ್ಲಿ ಎಚ್.ಡಿ. ರೇವಣ್ಣಗೆ 10 ಸಾವಿರ ಮತಗಳ ಅಂತರದಿಂದ ಗೆಲುವು

  • ಚಾಮರಾಜನಗರ 8ನೇ ಸುತ್ತಿನಲ್ಲಿ ಕಾಂಗ್ರೆಸ್‌ ನ ಪುಟ್ಟರಂಗಶೆಟ್ಟಿಗೆ 7,892 ಮತಗಳಿಂದ ಮುನ್ನಡೆ. 

  • ಬದಾಮಿಯಲ್ಲಿ ಸಿದ್ದರಾಮಯ್ಯಗೆ 3500 ಮತಗಳ ಮುನ್ನಡೆ.

  • ವಿಜಯನಗರದಲ್ಲಿ ಕಾಂಗ್ರೆಸ್‌ನ ಆನಂದ್ ಸಿಂಗ್‌ಗೆ 3711 ಮತಗಳಿಂದ ಮುನ್ನಡೆ. 

    COMMERCIAL BREAK
    SCROLL TO CONTINUE READING

    ಹೊಸಕೋಟೆಯಲ್ಲಿ ಬಿಜೆಪಿ ಶರತ್ ಬಚ್ಚೇಗೌಡಗೆ 8,148 ಮತಗಳ ಮುನ್ನಡೆ, ಎಂ.ಟಿ.ಬಿ. ನಾಗರಾಜ್, ಕಾಂಗ್ರೆಸ್ ಅಭ್ಯರ್ಥಿಗೆ 6,384 ಮತಗಳು

     

  • ಬೈಂದೂರಿನಲ್ಲಿ ಕಾಂಗ್ರೆಸ್ ನ ಗೋಪಾಲ ಪೂಜಾರಿಗೆ ಹಿನ್ನಡೆ, ಬಿಜೆಪಿಯ ಬಿಎಂ ಸುಕುಮಾರ ಶೆಟ್ಟಿ ಮುನ್ನಡೆ.

  • ಬಾದಾಮಿಯಲ್ಲೂ ಸಿಎಂ ಸಿದ್ದರಾಮಯ್ಯಗೆ ಹಿನ್ನಡೆ, ಬಿಜೆಪಿಯ ಬಿ.ಶ್ರೀರಾಮುಲುಗೆ 420ಮತಗಳ ಮುನ್ನಡೆ.

  • ರಾಮನಗರದಲ್ಲಿ 1998 ಅಂತರದಿಂದ ಮುನ್ನಡೆ ಸಾಧಿಸಿರುವ ಎಚ್.ಡಿ. ಕುಮಾರಸ್ವಾಮಿ

  • ಬೆಂಗಳೂರಿನಲ್ಲಿ ಮೂರನೇ ಸುತ್ತಿನ ಮತಎಣಿಕೆ ಮುಕ್ತಾಯ, ಇವರು ಮುನ್ನಡೆ ಸಾಧಿಸಿರುವ ಅಭ್ಯರ್ಥಿಗಳು
    ಸರ್ವಜ್ಞನಗರ - ಕೆ.ಜೆ. ಜಾರ್ಜ್(ಕಾಂಗ್ರೆಸ್)
    ಪುಲಿಕೇಶಿನಗರ - ಅಖಂಡ ಶ್ರೀನಿವಾಸ ಮೂರ್ತಿ(ಕಾಂಗ್ರೆಸ್)
    ಕೆ ಆರ್ ಪುರ - ಭೈರತಿ ಬಸವರಾಜ್(ಕಾಂಗ್ರೆಸ್)
    ಮಲ್ಲೇಶ್ವರಂ - ಅಶ್ವತ್ಥನಾರಾಯಣ(ಬಿಜೆಪಿ)
    ಹೆಬ್ಬಾಳ - ಭೈರತಿ ಸುರೇಶ(ಕಾಂಗ್ರೆಸ್)
    ಮಹಾಲಕ್ಷ್ಮೀ ಲೇ ಔಟ್ - ಗೋಪಾಲಯ್ಯ(ಜೆಡಿಎಸ್)
    ಬಿಟಿಎಂ ಲೇ ಔಟ್ - ರಾಮಲಿಂಗಾರೆಡ್ಡಿ(ಕಾಂಗ್ರೆಸ್) 

    COMMERCIAL BREAK
    SCROLL TO CONTINUE READING

     

  • ಶಿಕಾರಿಪುರ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ 13069 ಮತಗಳ ಮುನ್ನಡೆ. ಸೇಡಂ ಕ್ಷೇತ್ರದ ಎಂಟನೇ ಸುತ್ತಿನ ಮತ ಎಣಿಕೆ ಪೂರ್ಣ. ಬಿಜೆಪಿ ರಾಜಕುಮಾರ ಪಾಟೀಲ 1,816 ಮತಗಳಿಂದ ಮುನ್ನಡೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಶರಣಪ್ರಕಾಶ ಪಾಟೀಲಗೆ ಹಿನ್ನಡೆ. ಕಂಪ್ಲಿಯಲ್ಲಿ ಬಿಜೆಪಿಯ ಸುರೇಶಬಾಬು 1,868 ಮತಗಳಿಂದ ಮುನ್ನಡೆ.

  • ಕೋಲಾರದಲ್ಲಿ ವರ್ತೂರ್ ಪ್ರಕಾಶ್ ಗೆ ಹೀನಾಯ ಸೋಲು

  • ಕೊಲಾರದಲಿ ಜೆಡಿಎಸ್ ನ ಕೆ. ಶ್ರೀನಿವಾಸ ಗೌಡ ಗೆಲುವು

  • ಮಂಗಳೂರಿನಲ್ಲಿ ಯು.ಟಿ. ಖಾದರ್ ಗೆ ಗೆಲುವು

  • ತೀರ್ಥಹಳ್ಳಿಯಲ್ಲೂ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಗೆಲವು, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಗೆ ಸೋಲು

  • ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ಸುತ್ತಿನಲ್ಲಿ 6,476 ಮತಗಳಿಂದ ಡಾ ಯತೀಂದ್ರ ಮುನ್ನಡೆ

    COMMERCIAL BREAK
    SCROLL TO CONTINUE READING

     

  • ಸರಳ ಬಹುಮತದತ್ತ ಬಿಜೆಪಿ. ಬಿಜೆಪಿ ಕಚೇರಿ ಎದುರು ಮೋದಿ ಮೋದಿ ಎಂದು ಘೋಷಿಸುತ್ತಿರುವ ಕಾರ್ಯಕರ್ತರು

    COMMERCIAL BREAK
    SCROLL TO CONTINUE READING

     

  • ಸರ್ವಜ್ಞ ನಗರದಲ್ಲಿ ಕಾಂಗ್ರೆಸ್‌ನ ಕೆ.ಜೆ. ಜಾರ್ಜ್ 16700 ಮತಗಳಿಂದ‌ ಮುನ್ನಡೆ

  • ಮೇಲುಕೋಟೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯಗೆ ಹಿನ್ನಡೆ

  • ಹುಣಸೂರಿನಲ್ಲಿ ಜೆಡಿಎಸ್‌ ಅಭ್ಯರ್ಥಿ ವಿಶ್ವನಾಥ್‌ ಮುನ್ನಡೆ . ಹೊಸಕೋಟೆಯಲ್ಲಿ ಜೆಡಿಎಸ್‌ನ ಶರತ್‌ ಬಚ್ಚೇಗೌಡ ಮುನ್ನಡೆ. ತೇರದಾಳದಲ್ಲಿ ಸಚಿವೆ ಉಮಾಶ್ರೀಗೆ ಮತ್ತೆ ಹಿನ್ನಡೆ. ಬಿಜೆಪಿಯ ಸಿದ್ದುಸವದಿಗೆ 2000 ಮತಗಳಿಂದ ಮುನ್ನಡೆ. ಶಿರಾದಲ್ಲಿ ಕಾಂಗ್ರೆಸ್‌ನ ಸಚಿವ ಟಿ.ಬಿ.ಜಯಚಂದ್ರಗೆ ಹಿನ್ನಡೆ. ಜೆಡಿಎಸ್‌ ಅಭ್ಯರ್ಥಿ ಮುನ್ನಡೆ. ಹಳಿಯಾಳದಲ್ಲಿ ಸಚಿವ ಆರ್‌.ವಿ.ದೇಶ್‌ಪಾಂಡೆಗೆ ಹಿನ್ನಡೆ. 216 ಸ್ಥಾನಗಳ ಪೈಕಿ ಬಿಜೆಪಿ 109 ರಲ್ಲಿ ಮುನ್ನಡೆ. 

  • ಗುಂಡ್ಲುಪೇಟೆಯಲ್ಲಿ ಗೀತಾ ಮಹದೇವಪ್ರಸಾದ್ ಗೆ ಹಿನ್ನಡೆ

  • ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಚಿವ ಯು.ಟಿ.ಖಾದರ್ ಮತ್ತು ಸುಳ್ಯ ಶಾಸಕ ಎಸ್. ಅಂಗಾರ ಮುನ್ನಡೆ

  • ಬದಾಮಿಯಲ್ಲಿ ನಾಲ್ಕನೇ ಸುತ್ತಿನಲ್ಲಿ 331 ಮತಗಳ ಮುನ್ನಡೆ, ಸಿಎಂ ಸಿದ್ದರಾಮಯ್ಯಗೆ ಹಿನ್ನಡೆ

  • 85 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

  • ಮೈತ್ರಿ ಪ್ರಶ್ನೆಯೇ ಇಲ್ಲ ಕೇಂದ್ರ ಸಚಿವ ಸದಾನಂದ ಗೌಡ

  • ಜೆಡಿಎಸ್ ಜತೆ ಮೈತ್ರಿ ಇಂಗಿತ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ 

  • ವರುಣಾ ಕ್ಷೇತ್ರದಲ್ಲಿ ಯತೀಂದ್ರಗೆ 548 ಮತಗಳ ಮುನ್ನಡೆ

  • ಮೂಡುಬಿದಿರೆ ಕ್ಷೇತ್ರದಲ್ಲಿ ಬಿಜೆಪಿಯ ಉಮಾನಾಥ ಕೋಟ್ಯಾನ್ 22,376 ಮತಗಳ ಭಾರಿ ಮುನ್ನಡೆ. ಕೋಟ್ಯಾನ್ ಅವರಿಗೆ 57202 ಮತ. ಕಾಂಗ್ರೆಸ್ ಶಾಸಕ‌ ಅಭಯಚಂದ್ರ ಅವರಿಗೆ 34826 ಮತ

  • ಬಸವನ ಗುಡಿಯಲ್ಲಿ 6ನೇ ಸುತ್ತಿನ ಮತಎಣಿಕೆ ಮುಕ್ತಾಯ

  • ಧಾರವಾಡದಲ್ಲಿ ಸಚಿವ ವಿನಯ್ ಕುಲಕರ್ಣಿಗೆ ಹಿನ್ನಡೆ

  • ಮ್ಯಾಜಿಕ್ ನಂಬರ್ ಸಮೀಪಿಸಿದ ಬಿಜೆಪಿ

  • ಶ್ರವಣ ಬೆಳಗೊಳದಲ್ಲಿ ಜೆಡಿಎಸ್ ನ ಸಿ.ಎನ್. ಬಾಲಕೃಷ್ಣಗೆ ಮುನ್ನಡೆ

  • ಬಿಜೆಪಿ ಸಿಎಂ ಅಭ್ಯರ್ಥಿ ಬಿ.ಎಸ್. ಯದಿಯೂರಪ್ಪ ಮುನ್ನಡೆ. 9800 ಮತಗಳ ಅಂತರದಿಂದ ಮುನ್ನಡೆ

  • ಬ್ಯಾಟರಾಯನಪುರದಲ್ಲಿ ಕಾಂಗ್ರೆಸಿನ ಕೃಷ್ಣಬೈರೇಗೌಡಗೆ ಮುನ್ನಡೆ

  • ಬಿಟಿಎಂ ಲೇಔಟ್ ನಲ್ಲಿ ರಾಮಲಿಂಗಾ ರೆಡ್ಡಿ ಮುನ್ನಡೆ

  • ಮೂಡಬಿದಿರೆಯಲ್ಲಿ ಬಿಜೆಪಿಗೆ ಮೊದಲ ಗೆಲುವು. 22,000 ಮತಗಳ ಅಂತರದಿಂದ ಗೆಲುವು ಸಾಧಿಸಿದ  ಬಿಜೆಪಿಯ ಉಮನಾಥ್‌ ಕೋಟ್ಯಾನ್‌

  • ರಾಮನಗರದಲ್ಲಿ ಮುನ್ನಡೆ ಸಾಧಿಸಿದ ಎಚ್.ಡಿ. ಕುಮಾರಸ್ವಾಮಿ

  • ಮೂಡಬಿದಿರೆಯಲ್ಲಿ ಬಿಜೆಪಿಗೆ ಮೊದಲ ಗೆಲುವು. ಬಿಜೆಪಿಯ ಉಮನಾಥ್‌ ಕೋಟ್ಯಾನ್‌ ಜಯಭೇರಿ. ಕಾಂಗ್ರೆಸ್‌ ಅಭ್ಯರ್ಥಿ ಮಾಜಿ ಸಚಿವ ಅಭಯಚಂದ್ರ ಜೈನ್‌ಗೆ ಸೋಲು. 

    COMMERCIAL BREAK
    SCROLL TO CONTINUE READING

     

  • ಸಿದ್ದರಾಮಯ್ಯಗೆ ಬದಾಮಿಯಲ್ಲಿ 1855 ಮತಗಳ ಮುನ್ನಡೆ

  • ಶಿವಾಜಿನಗರದಲ್ಲಿ ಕಾಂಗ್ರೆಸಿನ ರೋಶನ್ ಬೇಗ್ ಮುನ್ನಡೆ

    COMMERCIAL BREAK
    SCROLL TO CONTINUE READING

     

  • ಶಾಂತಿನಗರದಲ್ಲಿ ಎನ್.ಎ. ಹ್ಯಾರಿಸ್ ಗೆ ಹಿನ್ನಡೆ. ಬಂಟ್ವಾಳದಲ್ಲಿ ಬಿಜೆಪಿಯ ರಾಜೇಶ್ ನಾಯಕ್ ಉಳೇಪಾಡಿ ಮುನ್ನಡೆ. ಶಿಗ್ಗಾಂವಿ ಬಿಜೆಪಿಯ ಬಸವರಾಜ್ ಬೊಮ್ಮಾಯಿ ಮುನ್ನಡೆ. ಮಂಗಳೂರು ದಕ್ಷಿಣ ಬಿಜೆಪಿ ವೇದವ್ಯಾಸ್ ಕಾಮತ್ ಮುನ್ನಡೆ, ಸಾಗರದಲ್ಲಿ ಬಿಜೆಪಿಯ ಹರತಾಳು ಹಾಲಪ್ಪಗೆ 3 ಸಾವಿರ ಮತಗಳ ಹಿನ್ನಡೆ.

  • ಮೂಡಬಿದಿರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಭಯಚಂದ್ರ ಜೈನ್ ವಿರುದ್ಧ ಬಿಜೆಪಿ ಅಭ್ಯರ್ಥಿ ಉಮನಾಥ್ ಕೋಟ್ಯಾನ್ ಭಾರೀ ಮುನ್ನಡೆ.

  • 73 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ

  • ಬೀದರ್ ದಕ್ಷಿಣದಲ್ಲಿ ಅಶೋಕ್ ಖೇಣಿಗೆ ಹಿನ್ನಡೆ

  • ಶಿಕಾರಿಪುರ

  • ಚಾಮರಾಜನಗರದಲ್ಲಿ ಕಾಂಗ್ರೆಸಿನ ಪುಟ್ಟರಂಗ ಶೆಟ್ಟಿ ಮುನ್ನಡೆ

  • ಅಥಣಿಯಲ್ಲಿ ಬಿಜೆಪಿಯ ಲಕ್ಷ್ಮಣ್ ಸವದಿಗೆ ಅಲ್ಪ ಮುನ್ನಡೆ

    COMMERCIAL BREAK
    SCROLL TO CONTINUE READING

    ಬದಾಮಿಯಲ್ಲಿ ಸಿದ್ದರಾಮಯ್ಯಗೆ ಅಲ್ಪ ಮುನ್ನಡೆ

    ಕಲಘಟಗಿಯಲ್ಲಿ ಕಾಂಗ್ರೆಸಿನ ಸಂತೋಷ್ ಲಾಡ್ ಗೆ 1200 ಮತಗಳ ಹಿನ್ನಡೆ 

  • ಕಲಬುರಗಿ ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಅಲ್ಲಮ ಪ್ರಭು ಮುನ್ನಡೆ, ಮಧುಗಿರಿಯಲ್ಲಿ ಜೆಡಿಎಸ್ ನ ವೀರಭದ್ರಯ್ಯ ಮುನ್ನಡೆ.

  • ತೀರ್ಥಹಳ್ಳಿಯಲ್ಲಿ ಬಿಜೆಪಿಯ ಅರಗ ಜ್ಞಾನೇಂದ್ರ ಮುನ್ನಡೆ.

  • ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವರ್ತೂರ್ ಪ್ರಕಾಶ್ ಗೆ ಭಾರೀ ಹಿನ್ನಡೆ

  • ಹೆಬ್ಬಾಳದಲ್ಲಿ ಕಾಂಗ್ರೆಸ್ ನ ಬೈರತಿ ಸುರೇಶ್ ಗೆ ಮುನ್ನಡೆ, ತುರುವೇಕೆರೆ ಬಿಜೆಪಿಯ ಮಸಾಲೆ ಜಯರಾಮ್ ಮುನ್ನಡೆ. ಸಿರಗುಪ್ಪ ಕ್ಷೇತ್ರದಲ್ಲಿ ಬಿಜೆಪಿಯ ಸೋಮಲಿಂಗಪ್ಪ ಮುನ್ನಡೆ,ಚಿಂತಾಮಣಿ ಜೆಡಿಎಸ್ ನ ಕೃಷ್ಣಾ ರೆಡ್ಡಿ ಮುನ್ನಡೆ. ರಾಣೆಬೆನ್ನೂರಿನಲ್ಲಿ ಕೆಪಿಜೆಪಿಯ ಆರ್ ಶಂಕರ್ ಮುನ್ನಡೆ,ಅರಬಾವಿಯಲ್ಲಿ ಬಿಜೆಪಿ ಬಾಲಚಂದ್ರ ಜಾರಕಿಹೊಳಿ ಮುನ್ನಡೆ. ವಿಜಯಪುರ ನಗರ ಕ್ಷೇತ್ರದಲ್ಲಿ ಬಿಜೆಪಿಯ ಬಸನಗೌಡ ಯತ್ನಾಳ್ ಮುನ್ನಡೆ. ಮೂಡಬಿದ್ರೆಯಲ್ಲಿ ಕಾಂಗ್ರೆಸ್ ಅಭಯ್ ಚಂದ್ರ ಜೈನ್ ಗೆ ಮುನ್ನಡೆ

  • ಚನ್ನಪಟ್ಟಣದಲ್ಲಿ 1170 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡ ಎಚ್.ಡಿ. ಕುಮಾರಸ್ವಾಮಿ

  • ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಶ್ ನಾಯ್ಕ್ ಮುನ್ನಡೆ. ಸಚಿವ‌‌‌ ಬಿ.ರಮಾನಾಥ ರೈ ಅವರಿಗೆ 2,038 ಮತಗಳ ಹಿನ್ನಡೆ. 

  • ಹೊನ್ನಾಳಿ ಕ್ಷೇತ್ರದಲ್ಲಿ ಬಿಜೆಪಿಯ ರೇಣುಕಾಚಾರ್ಯ ಗೆ ಹಿನ್ನಡೆ. ಸಿರಗುಪ್ಪ ಬಿಜೆಪಿ ಅಭ್ಯರ್ಥಿ ಸೋಮಲಿಂಗಪ್ಪ ಮುನ್ನಡೆ

    COMMERCIAL BREAK
    SCROLL TO CONTINUE READING

     

  • ಚಳ್ಳಕೆರೆ ಕಾಂಗ್ರೆಸಿನ ರಘುಮೂರ್ತಿ ಮುನ್ನಡೆ, ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಮುನ್ನಡೆ

    COMMERCIAL BREAK
    SCROLL TO CONTINUE READING

     

  • ತೆರದಾಳದಲ್ಲಿ ಕಾಂಗ್ರೆಸಿನ ಉಮಾಶ್ರಿ ಮುನ್ನಡೆ

  • ಕಿತ್ತೂರಿನಲ್ಲಿ ಕಾಂಗ್ರೆಸಿನ ಇನಾಂದಾರ್ ಮುನ್ನಡೆ

    COMMERCIAL BREAK
    SCROLL TO CONTINUE READING

     

  • ಚಾಮುಂಡೇಶ್ವರಿಯಲ್ಲಿ ಐದನೇ ಸುತ್ತಿನಲ್ಲೂ ಸಿದ್ದರಾಮಯ್ಯ ಹಿನ್ನಡೆ. 

  • ಚಾಮುಂಡೇಶ್ವರಿಯಲ್ಲಿ 12,955 ಮತಗಳ ಅಂತರದಿಂದ ಮುಂದಿರುವ ಜಿ.ಟಿ. ದೇವೇಗೌಡ.

    COMMERCIAL BREAK
    SCROLL TO CONTINUE READING

     

  • ಗುಂಡ್ಲುಪೇಟೆ ಕಾಂಗ್ರೆಸ್ ನ ಗೀತಾಮಹದೇವ ಪ್ರಸಾದ್ ಮುನ್ನಡೆ, ಕಾರವಾರ ಜೆಡಿಎಸ್ ನ ಅಸ್ನೋಟಿಕರ್ ಮುನ್ನಡೆ. ಬಳ್ಳಾರಿಯ ಸಂಡೂರಿನಲ್ಲಿ ಕಾಂಗ್ರೆಸ್ ನ ತುಕರಾಮ್ ಗೆ ಮುನ್ನಡೆ, ಮಾಗಡಿ ಕ್ಷೇತ್ರದಲ್ಲಿ ಜೆಡಿಎಸ್ ನ ಮಂಜು ಮುನ್ನಡೆ, ಮಂಗಳೂರು ಉತ್ತರ ಬಿಜೆಪಿಯ ಭರತ್ ಶೆಟ್ಟಿ ಮುನ್ನಡೆ, ಗಾಂಧಿನಗರ ಕಾಂಗ್ರೆಸ್ ನ ದಿನೇಶ್ ಗುಂಡೂರಾವ್ ಮುನ್ನಡೆ.

    COMMERCIAL BREAK
    SCROLL TO CONTINUE READING

     

  • ರಾಣೇಬೆನ್ನೂರಿನಲ್ಲಿ ಕಾಂಗ್ರೆಸ್ ನ ಕೆ.ಬಿ. ಕೋಳಿವಾಡ ಮುನ್ನಡೆ.

  • ಚಾಮುಂಡೇಶ್ವರಿಯಲ್ಲಿ ನಾಲ್ಕನೇ ಸುತ್ತಿನಲ್ಲಿ ಸಿದ್ದರಾಮಯ್ಯ ಹಿನ್ನಡೆ. 
    11,624 ಮತಗಳ ಭಾರೀ ಅಂತರದಲ್ಲಿ ಹಿನ್ನಡೆ ಅನುಭವಿಸುತ್ತಿರುವ ಸಿದ್ದರಾಮಯ್ಯ

  • ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಮಣ್ಣ ಲಮಾಣಿ  6240 ಮತಗಳಿಂದ ಮುನ್ನಡೆ. ಕಾಂಗ್ರೆಸ್ ನ ರಾಮಕೃಷ್ಣ ದೊಡ್ಡಮನಿ ಹಿನ್ನಡೆ

  • ನಂಜನಗೂಡಿನಲ್ಲಿ ಬಿಜೆಪಿಯ ಹರ್ಷವರ್ಧನ್ 4433 ಮತಗಳಿಂದ ಮುನ್ನಡೆ 
    ಕಾಂಗ್ರೆಸ್ ನ ಕಳಲೇ ಕೇಶವಮೂರ್ತಿ ಗೆ ಹಿನ್ನೆಡೆ.

  • ಚಿಂತಾಮಣಿ ಕ್ಷೆತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಡಾ. ಎಂ.ಸಿ. ಸುಧಾಕರ್ ಮುನ್ನಡೆ

  • ಹರಿಹರದಲ್ಲಿ ಜೆಡಿಎಸ್ ನ ಶಿವಶಂಕರಪ್ಪ ಮುನ್ನಡೆ

    COMMERCIAL BREAK
    SCROLL TO CONTINUE READING

     

  • 4,000 ಮತಗಳ ಮುನ್ನಡೆ ಸಾಧಿಸಿರುವ ಪೂರ್ಣಿಮಾ

  • ಹಿರಿಯೂರಿನಲ್ಲಿ ಬಿಜೆಪಿಯ ಪೂರ್ಣಿಮಾ ಮುನ್ನಡೆ

  • ಬಬಲೆಶ್ವರದಲ್ಲಿ 3ನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸಿನ ಎಂ.ಬಿ. ಪಾಟೀಲ್ ಮುನ್ನಡೆ, 4,400 ಮತಗಳ ಮುನ್ನಡೆ ಕಾಯ್ದುಕೊಂಡ ಎಂ.ಬಿ. ಪಾಟೀಲ್

  • ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಆನಂದ್ ಚೋಪ್ರಾ ಮುನ್ನಡೆ

  • ಚಿತ್ತಾಪುರದಲಿ ಸಚಿವ ಪ್ರಿಯಾಂಕ ಖರ್ಗೆ ಮುನ್ನಡೆ

  • ಜೇವರ್ಗಿಯಲ್ಲಿ 2ನೇ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ ಕಾಂಗ್ರೆಸಿನ ಅಜಯ್ ಸಿಂಗ್

  • ಅಫಜಲ್ಪುರದಲ್ಲಿ ಬಿಜೆಪಿಯ ಮಾಲಿಕಯ್ಯ ಗುತ್ತೇದಾರ್ ಮುನ್ನಡೆ

  • ಚಾಮರಾಜನಗರದಲ್ಲಿ ಕಾಂಗ್ರೆಸಿನ ಸಿ. ಪುಟ್ಟರಂಗಶೆಟ್ಟಿ ಮುನ್ನಡೆ

  • ಬದಾಮಿಯಲ್ಲಿ 1575 ಮತಗಳ ಮುನ್ನಡೆ ಸಾಧಿಸಿದ ಸಿದ್ದರಾಮಯ್ಯ

  • ಚಾಮುಂಡೇಶ್ವರಿಯಲ್ಲಿ ನಾಲ್ಕನೇ ಸುತ್ತಿನಲ್ಲೂ ಸಿದ್ದರಾಮಯ್ಯಗೆ ಭಾರೀ ಹಿನ್ನಡೆ

  • ಇಂಡಿಯಲ್ಲಿ ಕಾಂಗ್ರೆಸಿನ ಯಶವಂತರಾಯ ಗೌಡ ಮುನ್ನಡೆ

  • ಬೆಂಗಳೂರಿನ ಸರ್ವಜ್ಞ ನಗರದಲ್ಲಿ ಮೊದಲ ಸುತ್ತಿನಲ್ಲಿ ಕೆ.ಜೆ.ಜಾರ್ಜ್ ಗೆ ಮುನ್ನಡೆ, ಪುಲಕೇಶಿ ನಗರದಲ್ಲಿ ಅಖಂಡ ಶ್ರೀನಿವಾಸ ಮೂರ್ತಿಗೆ ಮುನ್ನಡೆ. ಹೆಬ್ಬಾಳದಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿಗೆ ಮುನ್ನಡೆ, ಕೆ.ಆರ್ ಪುರಂ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಬಸವರಾಜ್ ಮುನ್ನಡೆ.

  • ಹೊಸದುರ್ಗದಲ್ಲಿ ಬಿಜೆಪಿಯ ಗೂಳಿ ಹಟ್ಟಿ ಶೇಖರ್ ಮುನ್ನಡೆ

  • ಕಾಂಗ್ರೆಸ್ - 52

    COMMERCIAL BREAK
    SCROLL TO CONTINUE READING

    ಬಿಜೆಪಿ - 66

    ಜೆಡಿಎಸ್ - 19

    ಇತರರು - 00

  • ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಹಿನ್ನಡೆ, 2,690 ಮತಗಳ ಅಂತರದಿಂದ ಮುಂದಿರುವ ಜಿ.ಟಿ. ದೇವೇಗೌಡ

  • ಬಬಲೇಶ್ವರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ. ಪಾಟೀಲ್ ಮುನ್ನಡೆ

  • ಜೆಡಿಎಸ್ ನ ವೈ.ಎಸ್. ವಿ ದತ್ತಾಗೆ ಹಿನ್ನಡೆ

  • ಶಿಕಾರಿಪುರ, ಸುಳ್ಯ, ಶಿವಮೊಗ್ಗ, ಔರಾದ್‌, ಹುಕ್ಕೇರಿ, ಕಾರ್ಕಳ, ನವಲಗುಂದ, ಆಳಂದ, ಧಾರವಾಡ, ಯಲಹಂಕ, ಮಾಯಕೊಂಡ, ಮಲ್ಲೇಶ್ವರ, ಪದ್ಮನಾಭನಗರ, ಕಲಬುರಗಿ ಉತ್ತರ, ಆಳಂದ, ಚಿತ್ತಾಪುರ, ನಾಗಠಾಣ, ಹಾವೇರಿ, ಸಕಲೇಶಪುರ, ಸೇರಿದಂತೆ ಒಟ್ಟಾರೆ 38 ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ

  • ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಕಾಶ್ ಗೆ ಮುನ್ನಡೆ

  • ಶಿರಸಿಯಲ್ಲಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಮುನ್ನಡೆ

  • ಮೂರನೇ ಸುತ್ತಿನಲ್ಲೂ ಸಿದ್ದರಾಮಯ್ಯಗೆ ಹಿನ್ನಡೆ

  • ಚಾಮುಂಡೇಶ್ವರಿಯಲ್ಲಿ  8440 ಮತಗಳ ಅಂತರದಲ್ಲಿ ಜಿ.ಟಿ. ದೇವೇಗೌಡ ಮುನ್ನಡೆ

  • ಬೊಮ್ಮನಹಳ್ಳಿಯಲ್ಲಿ ಬಿಜೆಪಿಯ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಮುನ್ನಡೆ

  • ಚನ್ನಪಟ್ಟಣದಲ್ಲಿ ಜೆಡಿಎಸ್ ನ ಎಚ್.ಡಿ. ಕುಮಾರಸ್ವಾಮಿ ಮುನ್ನಡೆ

  • ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸಿನ ಲಕ್ಷ್ಮೀ ಹೆಬ್ಬಾಳ್ಕರ್ ಮುನ್ನಡೆ

  • ಹೆಬ್ಬಾಳ ಬಿಜೆಪಿಯ ನಾರಾಯಣ ಸ್ವಾಮಿ ಮುನ್ನಡೆ

    COMMERCIAL BREAK
    SCROLL TO CONTINUE READING

    ಮೊಳಕಾಲ್ಮೂರಿನಲ್ಲಿ ಬಿ. ಶ್ರೀರಾಮುಲುಗೆ ಮುನ್ನಡೆ

  • ಪದ್ಮನಾಭ ನಗರದಲ್ಲಿ ಬಿಜೆಪಿಯ ಆರ್. ಅಶೋಕ್ ಮುನ್ನಡೆ

  • ಚಾಮುಂಡೇಶ್ವರಿಯಲ್ಲಿ ಎರಡನೇ ಸುತ್ತಿನ ಮತಎಣಿಕೆ ಮುಕ್ತಾಯ, ಎರಡನೇ ಸುತ್ತಿನಲ್ಲೂ ಹಿನ್ನಡೆ ಕಾಯ್ದುಕೊಂಡ ಸಿಎಂ ಸಿದ್ದರಾಮಯ್ಯ.  2120 ಮತಗಳ ಮುನ್ನಡೆ ಸಾಧಿಸಿದ ಜೆಡಿಎಸ್ ನ ಜಿ.ಟಿ. ದೇವೇಗೌಡ

  • ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೃಷ್ಣಪ್ಪ ಮುನ್ನಡೆ

  • ಗಾಂಧಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ ಮುನ್ನಡೆ

  • ವರುಣಾದಲ್ಲಿ ಕಾಂಗ್ರೆಸ್ ನ‌ ಡಾ.ಯತೀಂದ್ರ 2064 ಮತಗಳ ಮುನ್ನಡೆ

  • ಬಳ್ಳಾರಿಯಲ್ಲಿ ಬಿಜೆಪಿಯ ಸೋಮಶೇಖರ ರೆಡ್ಡಿ ಮುನ್ನಡೆ 

  • ಕನಕಪುರದಲ್ಲಿ ಕಾಂಗ್ರೆಸಿನ ಡಿಕೆ ಶಿವಕುಮಾರ್ ಮುನ್ನಡೆ, ಶಿಕಾರಿಪುರದಲ್ಲಿ ಬಿ.ಎಸ್. ಯಡಿಯೂರಪ್ಪ ಹಾಗೋ ಶಿವಮೊಗ್ಗದಲ್ಲಿ ಬಿಜೆಪಿಯ ಕೆ.ಎಸ್. ಈಶ್ವರಪ್ಪ ಮುನ್ನಡೆ

  • ಬೆಂಗಳೂರಿನ ಬಿಎಂಎಸ್ ಕಾಲೇಜಿನ ಮತಎಣಿಕೆ ಕೇಂದ್ರದಲ್ಲಿ ಮಾಧ್ಯಮದವರನ್ನು ಕೂಡಿ ಹಾಕಿದ ಚುನಾವಣಾ ಅಧಿಕಾರಿಗಳು. 

  • ಮೈಸೂರಿನಲ್ಲಿ 11 ಕ್ಷೇತ್ರಗಳ ಮತ ಎಣಿಕೆ ಆರಂಭ
    ಚಾಮುಂಡೇಶ್ವರಿ ಕ್ಷೇತ್ರದ ಮತ‌ಎಣಿಕೆಗೆ -14 ಟೆಬಲ್ ವ್ಯವಸ್ಥೆ.
    ಪಿರಿಯಾಪಟ್ಟಣ ಕ್ಷೇತ್ರದ ಮತ‌ಎಣಿಕೆಗೆ - 7 ಟೆಬಲ್ ವ್ಯವಸ್ಥೆ.
    ಹುಣಸೂರು ಕ್ಷೇತ್ರದ ಮತ‌ಎಣಿಕೆಗೆ- 14 ಟೆಬಲ್ ವ್ಯವಸ್ಥೆ.
    ಕೆ.ಆರ್.ನಗರ ಕ್ಷೇತ್ರದ ಮತ‌ಎಣಿಕೆಗೆ - 7 ಟೆಬಲ್ ವ್ಯವಸ್ಥೆ.
    ವರುಣಾ ಕ್ಷೇತ್ರದ ಮತ‌ಎಣಿಕೆಗೆ - 14 ಟೆಬಲ್ ವ್ಯವಸ್ಥೆ.
    ನಂಜನಗೂಡು ಕ್ಷೇತ್ರದ ಮತ‌ಎಣಿಕೆಗೆ - 14 ಟೆಬಲ್ ವ್ಯವಸ್ಥೆ.
    ಟಿ.ನರಸೀಪುರ ಕ್ಷೇತ್ರದ ಮತ‌ಎಣಿಕೆಗೆ - 14 ಟೆಬಲ್ ವ್ಯವಸ್ಥೆ.
    ಹೆಚ್.ಡಿ.ಕೋಟೆ ಕ್ಷೇತ್ರದ ಮತ‌ಎಣಿಕೆಗೆ- 7 ಟೆಬಲ್ ವ್ಯವಸ್ಥೆ.
    ನರಸಿಂಹರಾಜ ಕ್ಷೇತ್ರದ ಮತ‌ಎಣಿಕೆಗೆ -14 ಟೆಬಲ್ ವ್ಯವಸ್ಥೆ.
    ಕೃಷ್ಣರಾಜ ಕ್ಷೇತ್ರದ ಮತ‌ಎಣಿಕೆಗೆ - 7 ಟೆಬಲ್ ವ್ಯವಸ್ಥೆ.
    ಚಾಮರಾಜ ಕ್ಷೇತ್ರದ ಮತ‌ಎಣಿಕೆಗೆ - 7 ಟೆಬಲ್ ವ್ಯವಸ್ಥೆ.

  • ಬದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಮುನ್ನಡೆ

  • ಜೇವರ್ಗಿಯಲ್ಲಿ ಕಾಂಗ್ರೆಸಿನ ಅಜಯ್ ಸಿಂಗ್ ಮುನ್ನಡೆ

  • ದಾವಣಗೆರೆಯಲ್ಲಿ ಅಂಚೆ ಮತ ಎಣಿಕೆ ಅಂತ್ಯ ಕಾಂಗ್ರೆಸ್ 6 ಹಾಗೂ ಬಿಜೆಪಿ 2ರಲ್ಲಿ ಮುನ್ನಡೆ.

  • ಚಾಮುಂಡೇಶ್ವರಿಯಲ್ಲಿ ಆರಂಭಿಕ ಹಿನ್ನಡೆ ಕಂಡ ಸಿದ್ದರಾಮಯ್ಯ

    COMMERCIAL BREAK
    SCROLL TO CONTINUE READING

    ಜೆಡಿಎಸ್  6,904

    ಕಾಂಗ್ರೆಸ್  3,425

    3,479 ಮತಗಳ ಹಿನ್ನೆಡೆ ಹೊಂದಿರುವ ಸಿದ್ದರಾಮಯ್ಯ

  • ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ. ದೇವೇಗೌಡ ಆರಂಭಿಕ ಮುನ್ನಡೆ, ಮೊದಲ ಸುತ್ತಿನಲ್ಲಿ 6904 ಮತಗಳನ್ನು ಪಡೆದ ಜಿ.ಟಿ. ದೇವೇಗೌಡ

  • ಮೂಡಿಗೆರೆಯಲ್ಲಿ ಮೊದಲ ಸುತ್ತು ಮುಕ್ತಾಯ, ಬಿಜೆಪಿಯ ಎಂ.ಪಿ. ಕುಮಾರಸ್ವಾಮಿ ಮುನ್ನಡೆ

    COMMERCIAL BREAK
    SCROLL TO CONTINUE READING

     

  • ಹಳಿಯಾಳದಲ್ಲಿ ಕಾಂಗ್ರೆಸಿನ ಆರ್.ವಿ.ದೇಶಪಾಂಡೆ ಮುನ್ನಡೆ

  • ಪ್ರತಿಷ್ಠೆಯ ಕಣವಾದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ. ದೇವೇಗೌಡ ಆರಂಭಿಕ ಮುನ್ನಡೆ

  • ಮೂಡಿಗೆರೆಯಲ್ಲಿ ಬಿಜೆಪಿಯ ಎಂ.ಪಿ. ಕುಮಾರಸ್ವಾಮಿ ಮುನ್ನಡೆ

    COMMERCIAL BREAK
    SCROLL TO CONTINUE READING

    ಚಿತ್ತಾಪುರದಲ್ಲಿ ಕಾಂಗ್ರೆಸಿನ ಪ್ರಿಯಾಂಕ ಖರ್ಗೆ ಮುನ್ನಡೆ

  • ಅಫ್ಜಲ್ ಪುರದಲ್ಲಿ ಬಿಜೆಪಿಯ ಮಾಲಿಕಯ್ಯ ಗುತ್ತೇದಾರ್ ಮುನ್ನಡೆ

  • ಮಂಗಳೂರಿನ 4 ಕ್ಷೇತ್ರಗಳಲ್ಲಿ 'ಕೈ' ಮುನ್ನಡೆ, 1 ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ

  • ಬೆಂಗಳೂರು ಗ್ರಾಮಾಂತರದಲ್ಲಿ 30 ನಿಮಿಷಗಳ ಕಾಲ  ಮತಎಣಿಕೆ ಮುಂದೂಡಿದ ಅಧಿಕಾರಿಗಳು

  • ಕನಕಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಶಿವಕುಮಾರ್ ಮುನ್ನಡೆ

  • ಮಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯು.ಟಿ. ಖಾದರ್ ಮುನ್ನಡೆ.

  • ಚಾಮರಾಜನಗರ, ಮಂಡ್ಯ ಜಿಲ್ಲೆಯಲ್ಲಿ ಇನ್ನೂ ಆರಂಭವಾಗದ ಮತ ಎಣಿಕೆ

  • ಮಂಗಳೂರಿನಲ್ಲಿ ಯು.ಟಿ. ಖಾದರ್ ಮುನ್ನಡೆ

    COMMERCIAL BREAK
    SCROLL TO CONTINUE READING

     

    ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಮುನ್ನಡೆ

  • ಬಂಟ್ವಾಳದಲ್ಲಿ ಸಚಿವ ರಮಾನಾಥ್ ರೈ ಮುನ್ನಡೆ

  • ನಾವು ನಮ್ಮದೇ ಆದ ಸರ್ಕಾರವನ್ನು ರಚಿಸುವ ಬಗ್ಗೆ ಭರವಸೆ ಹೊಂದಿದ್ದೇವೆ. ಸಿಎಂ ಯಾರು ಎಂಬುದನ್ನು ಪಕ್ಷದ ಹಿರಿಯ ಮುಖಂಡರು ನಿರ್ಧರಿಸುತ್ತಾರೆ- ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ

  • ಬಳ್ಳಾರಿ: ಬಿಜೆಪಿ ಉಪಮುಖ್ಯಮಂತ್ರಿ ಅಭ್ಯರ್ಥಿ ಬಿ.ಶ್ರೀರಾಮುಲು ಮತ ಎಣಿಕೆಗೂ ಮುನ್ನ ಪೂಜೆ ಸಲ್ಲಿಸಿದರು.  ಬಿ.ಶ್ರೀರಾಮುಲು ಬದಾಮಿ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದ್ದಾರೆ.

    COMMERCIAL BREAK
    SCROLL TO CONTINUE READING

     

  • ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್, ಇವಿಎಂ ಮತ್ತು ವಿವಿಪ್ಯಾಟ್ ಶೇ.100 ಎಣಿಕೆಗೆ ಕಾಂಗ್ರೆಸ್ ಮನವಿ ಮಾಡಿದೆ. ಅದು ಸಾಧ್ಯವಾಗದಿದ್ರೆ 5 % ಆದ್ರು ಎಣಿಕೆ ಮಾಡುವಂತೆ ಮನವಿ ಮಾಡಿದ್ದಾರೆ. ನಾವು ಯಾವುದಾದರು ಒಂದು ಕ್ಷೇತ್ರದ ವಿವಿಪ್ಯಾಟ್ ರ್ಯಾಂಡಮ್ ಆಗಿ ಎಣಿಗೆ ಮಾಡುವುದಾಗಿ ತಿಳಿಸಿದ್ದೇವೆ ಎಂದು ತಿಳಿಸಿದರು.

    COMMERCIAL BREAK
    SCROLL TO CONTINUE READING

     

  • ಇವಿಎಂ ಟ್ಯಾಂಪರಿಂಗ್ ಮತ್ತು ಬದಾಮಿ ಕ್ಷೇತ್ರದಲ್ಲಿನ ಅಂಚೆ ಪತ್ರ ಪ್ರಕರಣ ಕುರಿತು ಚುನಾವಣೆ ಆಯೋಗಕ್ಕೆ ದೂರು ನೀಡಿರುವ ಕಾಂಗ್ರೆಸ್.

  • ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜತೆಗೆ ಬದಾಮಿಯಿಂದಲೂ ಕಣಕ್ಕಿಳಿದಿದ್ದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಇಂದು ಬೆಳಗ್ಗೆ ಬಾಗಲಕೋಟೆಯ ಬಾದಾಮಿಗೆ ತೆರಳಲಿದ್ದು, ಆ ನಂತರ ಚಿತ್ರದುರ್ಗಕ್ಕೆ ಭೇಟಿ ನೀಡಲಿದ್ದಾರೆ.

    COMMERCIAL BREAK
    SCROLL TO CONTINUE READING

     

  • ಇಂದು ಸಚಿವ ಡಿಕೆ ಶಿವಕುಮಾರ್ ಗೆ (57)ನೇ ಹುಟ್ಟು ಹಬ್ಬದ ಸಂಭ್ರಮ. ಡಿಕೆಶಿ ಹುಟ್ಟು ಹಬ್ಬ ಹಿನ್ನಲೆ ಮನೆ ಬಳಿ ಸಾವಿರಾರು ಕಾರ್ಯ ಕರ್ತರು ಬರುವ ನಿರೀಕ್ಷೆ.

  • ಪ್ರತಿ ಜಿಲ್ಲೆಯಲ್ಲಿ ಮತ ಎಣಿಕೆ ಕೇಂದ್ರಗಳನ್ನು ಸ್ಥಾಪನೆ. ಇದನ್ನು ಹೊರತುಪಡಿಸಿ ಚಿತ್ರದುರ್ಗದಲ್ಲಿ 2, ದಕ್ಷಿಣ ಕನ್ನಡ 2, ಮೈಸೂರು 2, ತುಮಕೂರಿನಲ್ಲಿ 3 ಹಾಗೂ ಬೆಂಗಳೂರಿನಲ್ಲಿ 4 ಕೇಂದ್ರಗಳಲ್ಲಿ ಮತ ಎಣಿಕೆ. ಮತ ಎಣಿಕೆಗೆ ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಪೂರ್ಣಗೊಂಡಿದೆ. ಮತ ಏಣಿಕೆ ಕಾರ್ಯಕ್ಕೆ ಒಟ್ಟು 11,160 ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link