Karnataka Bandh Live Update: ನೀರು ಬಿಡಲು ಸಾಧ್ಯವಿಲ್ಲ, ನಾಳೆಯೇ ಸುಪ್ರೀಂಗೆ ಮರುಪರಿಶೀಲನಾ ಅರ್ಜಿ - ಸಿಎಂ

Fri, 29 Sep 2023-9:39 pm,

Karnataka Bandh Live Updates: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಇಂದು ಕರ್ನಾಟಕ ಬಂದ್​ಗೆ ಕರೆ ಕೊಡಲಾಗಿದೆ. ಜೊತೆಗೆ ಶುಕ್ರವಾರ ಪ್ರತಿಭಟನೆಯೂ ಇನ್ನಷ್ಟು ಹೆಚ್ಚಾಗುವ ಸಂಭವವಿದೆ. ಕರ್ನಾಟಕ ಬಂದ್ ಮತ್ತು ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ, ವಿಶೇಷವಾಗಿ ಕಾವೇರಿ ಜಲನಾಯನ ಪ್ರದೇಶದ ವ್ಯಾಪ್ತಿಯಲ್ಲಿ ಭಾರೀ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.

Karnataka Bandh Over Cauvery Water Row Live: ರಾಜ್ಯದಲ್ಲಿ ಈ ಬಾರಿ ತೀವ್ರ ಮಳೆಯ ಅಭಾವವಿದ್ದು ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೆ ಏರುತ್ತಿದ್ದರೂ ರಾಜ್ಯದ ಜಲಾಶಯಗಳಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಇಂದು ಕರ್ನಾಟಕ ಬಂದ್​ಗೆ ಕರೆ ಕೊಡಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರತಿಭಟನೆ ಕಾವು ಜೋರಾಗಿದೆ. ಅಲ್ಲಲ್ಲಿ ರಸ್ತೆ ತಡೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Latest Updates

  • ನಾಳೆಯೇ ಸುಪ್ರೀಂಗೆ ಮರುಪರಿಶೀಲನಾ ಅರ್ಜಿ - ಸಿಎಂ

    COMMERCIAL BREAK
    SCROLL TO CONTINUE READING

    - ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳು, ಅಡ್ವೊಕೇಟ್ ಜನರಲ್ ಅವರೊಂದಿಗಿನ ಸಭೆ 

    - ಕಾವೇರಿ ನೀರು ನಿರ್ವಹಣಾ ಮಂಡಳಿ ಹಾಗೂ ಸುಪ್ರೀಂಕೋರ್ಟ್ ಮುಂದೆ ನಾಳೆಯೇ ನಮ್ಮ ಬಳಿ ನೀರು ಇಲ್ಲ, ನೀರು ಬಿಡಲು ಸಾಧ್ಯವಿಲ್ಲ ಎಂದು  ಮರುಪರಿಶೀಲನಾ ಅರ್ಜಿ ಹಾಕಲಾಗುವುದು. 

    - ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ಮಾಜಿ ಅಡ್ವೊಕೇಟ್ ಜನರಲ್‌ಗಳು ಇಂದು ಸಭೆಯಲ್ಲಿ ಭಾಗವಹಿಸಿದ್ದರು. 

    - ಅವರ ಅನುಭವದ ಆಧಾರದ ಮೇಲೆ ಕೆಲವು ಅಭಿಪ್ರಾಯ, ಸಲಹೆಗಳನ್ನು ನೀಡಿದ್ದಾರೆ. ಅವರ ಸಲಹೆಗಳನ್ನು ಪರಿಗಣಿಸಿ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ.  

     

     

     

     

  • ಸಿಎಂ ಭೇಟಿಯಾದ ಕರವೇ ಅಧ್ಯಕ್ಷ ನಾರಾಯಣಗೌಡ

    COMMERCIAL BREAK
    SCROLL TO CONTINUE READING

    - ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸಿಡಬ್ಲ್ಯೂಎಂಎ ಆದೇಶ

    - ಸಿಎಂ ಗೃಹಕಚೇರಿ ಕೃಷ್ಣಾಗೆ ಕರವೇ ಅಧ್ಯಕ್ಷ ನಾರಾಯಣಗೌಡ ಭೇಟಿ

    - ಸಿಎಂ ಸಿದ್ದರಾಮಯ್ಯ ಜೊತೆ ನಾರಾಯಣಗೌಡ ಚರ್ಚೆ  

  • ಕರ್ನಾಟಕ ಬಂದ್ : ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಮಾತು 

    COMMERCIAL BREAK
    SCROLL TO CONTINUE READING

    - ಬಂದ್ ಮಾಡೋದ್ರಿಂದ ಈಗ ಹರಿಯುತ್ತಿರುವ ನೀರು ನಿಲ್ಲಲ್ಲ

    - ಕಾವೇರಿಗಾಗಿ ಪ್ರತಿಭಟನೆ ಮಾಡುವುದನ್ನು ಸ್ವಾಗತಿಸುತ್ತೇನೆ

    - ಆದರೆ ಆ ನೆಪದಲ್ಲಿ ಕರ್ನಾಟಕ ಬಂದ್ ಮಾಡೋದು ಒಳ್ಳೆಯದಲ್ಲ 

    - ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿಕೆ 

  • ಕಾವೇರಿಗಾಗಿ ಉಪವಾಸ ಸತ್ಯಾಗ್ರಹ 

    COMMERCIAL BREAK
    SCROLL TO CONTINUE READING

    - ಸರ್ವ ಸಂಘಟನೆಗಳ ಒಕ್ಕೂಟದಿಂದ ಉಪವಾಸ ಸತ್ಯಾಗ್ರಹ

    - ಫ್ರೀಡಂ ಪಾರ್ಕ್‌ನಲ್ಲಿ ನಿನ್ನೆ ಬೆಳಗ್ಗೆಯಿಂದ ಉಪವಾಸ ಸತ್ಯಾಗ್ರಹ

    - ಅನ್ನ, ನೀರು ಸೇವಿಸದೆ ಪ್ರತಿಭಟನರ

    - ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ 

  • ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಬಂದ್ ನಿರ್ವಹಣೆ : ಡಿಕೆಶಿ 

    COMMERCIAL BREAK
    SCROLL TO CONTINUE READING

    - ಕರ್ನಾಟಕ ಬಂದ್ ಮಾಡುವುದು ಅವಶ್ಯಕತೆ ಇರಲಿಲ್ಲ

    - ಪ್ರತಿಭಟನೆ ಮಾಡಲು ಯಾರಿಗೂ ನಾವು ಅಡ್ಡಿ ಮಾಡುವುದಿಲ್ಲ ಎಂದು ಹೇಳಿದ್ದೆವು

    - ಅದರಂತೆ ಬಂದ್ ವೇಳೆಯಲ್ಲಿ ಸಾವರ್ಜನಿಕರಿಗೆ ತೊಂದರೆಯಾಗದಂತೆ ರಕ್ಷಣೆ ಕೊಟ್ಟಿದ್ದೇವೆ

    - ಸಾರಿಗೆ, ದಿನನಿತ್ಯ ಬಳಕೆಯ ವಸ್ತುಗಳ ಲಭ್ಯತೆಗೆ ತೊಂದರೆ ಆಗದಂತೆ ನೋಡಿಕೊಂಡಿದ್ದೇವೆ 

    - ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆ 

  • ಸಹಜ ಸ್ಥಿತಿಗೆ ಬೆಂಗಳೂರು

    COMMERCIAL BREAK
    SCROLL TO CONTINUE READING

    - ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಇಂದು ಕರ್ನಾಟಕ ಬಂದ್‌ ಮಾಡಲಾಗಿತ್ತು

    - ಇದೀಗ ಬೆಂಗಳೂರು ಸಹಜ ಸ್ಥಿತಿಗೆ ಮರಳುತ್ತಿದೆ

    - ಜನರ ಓಡಾಟ, ವಾಹನಗಳ ಸಂಚಾರ ಹೆಚ್ಚುತ್ತಿದೆ

  • ಕೋಲಾರದಲ್ಲಿ ಸಂಸದ ಮುನಿಸ್ವಾಮಿ‌ ಹೇಳಿಕೆ 

    COMMERCIAL BREAK
    SCROLL TO CONTINUE READING

    -  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೇಮಕ ಮಾಡಿರುವ‌ ವಕೀಲರು ಸದ್ಯದ ಪರಿಸ್ಥಿತಿ ಮನವರಿಕೆ ಮಾಡಿಕೊಡುವಲ್ಲಿ ವಿಫಲ. 

    -  ಇದರಿಂದ ರಾಜ್ಯಕ್ಕೆ ಇವತ್ತು ಈ ಪರಿಸ್ಥಿತಿ ಬಂದಿದೆ. ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಬಿಡುವ CWMA ಆದೇಶ.

    -  ಕಾಂಗ್ರೆಸ್ ಸರ್ಕಾರ ರಾಜ್ಯದ ಜನ್ರಿಗೆ ಚಿಪ್ಪು ಕೊಡುವುದು ಗ್ಯಾರಂಟಿ.

    -  ರಾಜ್ಯದ ಸಂಸದರು ಪ್ರಹ್ಲಾದ ಜೋಶಿ  ಮತ್ತು ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ನೇತೃತ್ವದಲ್ಲಿ ರೂಪ ರೇಷಗಳನ್ನು ತೀರ್ಮಾನ ಮಾಡಲಾಗುವುದು.

    -  ಈಗಾಗಲೇ ರಾಜ್ಯದ ಸಂಸದರು ಕೇಂದ್ರಕ್ಕೆ ಮನವರಿಕೆ ಮಾಡಲಾಗಿದೆ. ಕೇಂದ್ರದ ಸಚಿವರಿಗೂ ರಾಜ್ಯದ ಪರಿಸ್ಥಿತಿ ಹೇಳಲಾಗಿದೆ.

    -  ಕೋಲಾರದಲ್ಲಿ ಸಂಸದ ಮುನಿಸ್ವಾಮಿ‌ ಹೇಳಿಕೆ 

  • ಹಸಿಮೆಣಸಿನಕಾಯಿ ತಿಂದು ಆಕ್ರೋಶ

    COMMERCIAL BREAK
    SCROLL TO CONTINUE READING

    - ತಮಿಳುನಾಡಿಗೆ ನೀರು ಹರಿಸುವಂತೆ ಪ್ರಾಧಿಕಾರ ಆದೇಶ ಹಿನ್ನೆಲೆ 
    - ಹಸಿಮೆಣಸಿನಕಾಯಿ ತಿಂದು ಆಕ್ರೋಶ 
    - ಪ್ರಾಧಿಕಾರ ರೈತರ ಬಾಯಿ ಮೆಣಸಿನಕಾಯಿ ಹಾಕಿದೆ ಎಂದು ಆಕ್ರೋಶ 
    - ಶಿವಕುಮಾರ್ ಆರಾಧ್ಯ ಎಂಬಾತನಿಂದ ಮೆಣಸಿನಕಾಯಿ ತಿಂದು ಆಕ್ರೋಶ 
    - ರಸ್ತೆಯಲ್ಲಿ ಉರುಳುಸೇವೆ ನಡೆಸಿ ಆಕ್ರೋಶ 
    -  ಸಿಎಂ ವಿರುದ್ಧ ಘೋಷಣೆ ಕೂಗಿ ಆಕ್ರೋಶ 

  • ನಮ್ಮ ರೈತರಿಗೆ ಅನ್ಯಾಯವಾಗುತ್ತಿದೆ : ರಿಷಬ್ ಶೆಟ್ಟಿ

    COMMERCIAL BREAK
    SCROLL TO CONTINUE READING

    - ಮತ್ತೆ ತಮಿಳುನಾಡಿಗೆ ಕಾವೇರಿ ನೀರನ್ನ ಹರಿಸಲು CWMA ಆದೇಶ

    - ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ರಿಷಬ್ ಶೆಟ್ಟಿ

    - ನಮಗೆ ನೀರಿಲ್ಲ, ಬೇರೆಯವರಿಗೆ ಎಲ್ಲಿ ಕೊಡಲು ಸಾಧ್ಯ?

    - ನಮ್ಮ ರೈತರಿಗೆ ಅನ್ಯಾಯವಾಗುತ್ತಿದೆ

    - ಸಮಸ್ಯೆ ಬಗ್ಗೆ ಎರಡು ಸರ್ಕಾರಗಳೂ ಕೂತು ಮಾತನಾಡಬೇಕು 

     

  • ನ್ಯಾಯಮೂರ್ತಿಗಳು ಮತ್ತು ಹಿರಿಯ ವಕೀಲರ ಜತೆ ಸಭೆ ಆರಂಭ

    COMMERCIAL BREAK
    SCROLL TO CONTINUE READING

    -೯ ಮಂದಿ ನಿವೃತ್ತ ನ್ಯಾಯಮೂರ್ತಿ ಗಳು ಹಾಗೂ ೧೦ ಮಂದಿ‌ ಸರ್ಕಾರದ ಪ್ರತಿನಿಧಿ ಸಭಯಲ್ಲಿ‌ ಭಾಗಿ..
    -ಸಿಎಂ ಡಿಸಿಎಂ ಕಾನೂನು‌ ಸಚಿವರು ಸೇರಿ ಸಭೆಯಲ್ಲಿ ಭಾಗಿ
     

  • ಸಿಎಂ ಸಿದ್ದರಾಮಯ್ಯ ಹೇಳಿಕೆ
    -ಸಿಡಬ್ಲ್ಯೂಎಂಎ ಆದೇಶದ ಬಗ್ಗೆ ಕಾನೂನು ತಜ್ಞರ ಜತೆ ಚರ್ಚೆ ಮಾಡ್ತೇವೆ
    -ಈ ಆದೇಶವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆ ಮಾಡಬಹುದಾ ಅಂತ ಕಾನೂನು ತಂಡದ ಜೊತೆ ಚರ್ಚೆ 
    -ಇವತ್ತು ನಿವೃತ್ತ ನ್ಯಾಯಾಧೀಶರ ಸಭೆ ಕರೆದಿದ್ದೇನೆ
    -ಇವರ ಜತೆಗೂ ಮಾತಾಡಿ ಮುಂದೇನು ಮಾಡಬೇಕು ಅಂತ ನೋಡ್ತೇವೆ
    -ನಾವು ವಾಸ್ತವ ಅಂಶಗಳನ್ನು ಸಿಡಬ್ಲ್ಯೂಆರ್‌ಸಿ, ಸಿಡಬ್ಲ್ಯೂಎಂಎ ಮುಂದೆ ಇಟ್ಟಿದ್ದೇವೆ
    -ಆದರೂ ನಮಗೆ ನ್ಯಾಯ ಸಿಕ್ತಾ ಇಲ್ಲ

  • CWRC ಆದೇಶ ಎತ್ತಿ ಹಿಡಿದ CWMA ಸಭೆ

    COMMERCIAL BREAK
    SCROLL TO CONTINUE READING

    - ಪ್ರತಿದಿನ 3000 ಕ್ಯೂಸೆಕ್ ನೀರು ಬಿಡಲು ಸೂಚನೆ
    - 18 ದಿನಗಳ ಕಾಲ ನೀರು ಬಿಡಲು ಸೂಚನೆ
    - CWMA ಸಭೆಯಲ್ಲಿ ಗಲಾಟೆ
    - ಕರ್ನಾಟಕ ಮತ್ತು ತಮಿಳುನಾಡು ಅಧಿಕಾರಿಗಳ ನಡುವೆ ಗಲಾಟೆ

     

  • ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಆರಂಭ

    COMMERCIAL BREAK
    SCROLL TO CONTINUE READING

    -ದೆಹಲಿಯ CWMA ಕಚೇರಿಯಲ್ಲಿ ನಡೆಯುತ್ತಿರೋ ಸಭೆ
    -ಕರ್ನಾಟಕದಿಂದ ರಾಕೇಶ್ ಸಿಂಗ್ ಸಭೆಯಲ್ಲಿ ಭಾಗಿ
    -ಜೊತೆಗೆ ತಮಿಳುನಾಡು ಮತ್ತು ಪುದುಚೇರಿ ಅಧಿಕಾರಿಗಳು ಭಾಗಿ
    -ಇಂದು ಕರ್ನಾಟಕದಿಂದ ನೀರು ಬಿಡದಿರೋ ಬಗ್ಗೆ ಸಭೆಯಲ್ಲಿ ಪ್ರಸ್ತಾಪ

     

  • ನಟ ವಸಿಷ್ಠ ಸಿಂಹ ಭಾಷಣ

    COMMERCIAL BREAK
    SCROLL TO CONTINUE READING

    - ನಾವು ಸಿನಿಮಾದವರಾಗಿ ಬಂದಿಲ್ಲ

    - ಒಂದು‌ ಕುಟುಂಬದವರಾಗಿ ಬಂದಿದ್ದೇವೆ

    - ಯಾರು ಬಂದ್ರು, ಬಂದಿಲ್ಲ‌ ಅಂತಲ್ಲ

    - ಒಗ್ಗಟ್ಟಾಗಿ‌ ಹೋರಾಡಬೇಕು ಜಯ ಸಿಗಬೇಕು

  • ಮುಖ್ಯಮಂತ್ರಿ ಚಂದ್ರು ಹೇಳಿಕೆ

    COMMERCIAL BREAK
    SCROLL TO CONTINUE READING

    -ನಮ್ಮ ಜತೆ ಮುಖ್ಯಮಂತ್ರಿಗಳ ಸುಧೀರ್ಘ ಚರ್ಚೆ ಮಾಡಿದ್ದಾರೆ
    -ಸಿಎಂ ಒಂದು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋ ಭರವಸೆ ನಮಗೆ ಸಿಕ್ಕಿದೆ 
    - ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಳ್ಳದಿದ್ದರೆ ನಮ್ಮ ಹೋರಾಟ ನಿಲ್ಲುವುದಿಲ್ಲ 
    -ಸಂಜೆ CWMA ತೀರ್ಪು ನೋಡಿ ನಿರ್ಧಾರ

  • Karnataka Bandh : ನಟಿ ಶ್ರುತಿ ಭಾಷಣ -  

    COMMERCIAL BREAK
    SCROLL TO CONTINUE READING

    - ಈ ಪ್ರತಿಭಟನೆ ಪ್ರದರ್ಶನ ಮಾಡೋಕೆ ಅಲ್ಲ

    - ಒಗ್ಗಟ್ಟು ಪ್ರದರ್ಶನಕ್ಕಾಗಿ ಈ ಹೋರಾಟ

    - ಪ್ರತಿಭಟನೆ, ಬಂದ್ ಗೆ ದೊಡ್ಡ ಶಕ್ತಿ ಇದೆ

    - ಗೋಕಾಕ್ ಚಳುವಳಿಗೆ ಡಾ.ರಾಜ್ ಕುಮಾರ್ ಬಂದ್ಮೇಲೆ ಅದಕ್ಕೆ ಬಂದ ಘನತೆಯೇ ಬೇರೆ

    - ನಾನು ಯಾವುದೇ ಪಕ್ಷದ ಪರ, ವಿರೋಧವಾಗಿ ಬಂದಿಲ್ಲ

    - ಒಬ್ಬ ಕನ್ನಡತಿಯಾಗಿ ಬಂದಿರುವೆ 

    - ನಮಗೇ ಕುಡಿಯೋಕೆ ನೀರಿಲ್ಲ, ತಮಿಳುನಾಡಿಗೆ ಮೂರನೇ ಬೆಳೆಗೆ ನೀರು ಬೇಕಂತೆ

    - ಕಾವೇರಿ ನಮ್ಮವಳು, ನಮ್ಮ‌ ರೈತರಿಗೆ ನೀರು ಬೇಕು, ನಮಗೆ ಕುಡಿಯಲು ನೀರು 

  •  ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ಭೇಟಿಯಾದ ನಿಯೋಗ :
    - ಸಭೆಯಲ್ಲಿ ನಾಲ್ಕು ಬೇಡಿಕೆ ಇಟ್ಟ ಸಂಘಟನೆಗಳ ಮುಖಂಡರು
    - ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ತಕ್ಷಣ ನಿಲ್ಲಿಸಬೇಕು
    -ವಿಶೇಷ ಅಧಿವೇಶನ ಕಡೆದು ನಿರ್ಣಯ ಪಾಸ್ ಮಾಡಬೇಕು
    -ಅವೈಜ್ಞಾನಿಕವಾಗಿ ರಚನೆ ಆಗಿರುವ ಪ್ರಾಧಿಕಾರವನ್ನ ರದ್ದು ಮಾಡಲು ಒತ್ತಾಯಿಸಬೇಕು 
    -ಹೊಸ ಸಂಕಷ್ಟ ಸೂತ್ರ ರಚಿಸುವಂತೆ ಕೇಂದ್ರಕ್ಕೆ ಒತ್ತಾಯಿಸಬೇಕು
    -ಈ ನಾಲ್ಕು ಬೇಡಿಕೆ ಮುಂದಿಟ್ಟ ನಿಯೋಗ 

  • ಅಕ್ಟೋಬರ್ 5 ರಂದು ಕೆ.ಆರ್ ಎಸ್ ಮುತ್ತಿಗೆ - ವಾಟಾಳ್ 
    -ಸಂಜೆ ಆರು ಗಂಟೆವರೆಗೂ ಬಂದ್ ಮುಂದುವರೆಯುತ್ತೆ
    -ಆರು ಗಂಟರ ಬಳಿಕ ಬಂದ್ ವಾಪಸ್
    -ಇಂದು ಸಂಜೆ ಎಲ್ಲಾ ಸಂಘಟನೆಗಳೊಂದಿಗೆ ಸಭೆ ಇದೆ
    -ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ
    -ಅಕ್ಟೋಬರ್ 5 ರಂದು ಕೆ.ಆರ್ ಎಸ್ ಮುತ್ತಿಗೆ ಹಾಕುತ್ತೇವೆ
    - ಐದು ಸಾವಿರಕ್ಕೂ ಹೆಚ್ಚು ವಾಹನಗಳಿಂದ ಮುತ್ತಿಗೆ 

  • ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿಕೆ
    - ಪ್ರತಿಭಟನೆ ಮಾಡಬಹುದು ಬಂದ್ ಮಾಡಕ್ಕಾಗಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ
    -ಬಂದ್ ಮಾಡಬಹುದು, ಪ್ರತಿಭಟನೆ ಮಾಡಕ್ಕಾಗಲ್ಲ ಅಂತಾ ಬೆಂಗಳೂರು ಪೊಲೀಸ್ ಕಮಿಷನರ್ ಹೇಳಿದ್ದಾರೆ
    -ಗೃಹ ಸಚಿವರ ಹೇಳಿಕೆಗೂ ಕಮಿಷನರ್ ಹೇಳಿಕೆಗೂ ತಾಳ ಮೇಳ ಇಲ್ಲ
    -ಈಗಲಾದರೂ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಸಮರ್ಪಕ ವಾದ ಮಾಡಬೇಕು
    -ಇಂದು ರೈತರ ಜೊತೆಗೆ ಸಿಎಂ ಮಾಡುತ್ತಿರುವ ಸಭೆಯನ್ನು ಮೊದಲೇ ಮಾಡಬೇಕಿತ್ತು
    -ಸರ್ಕಾರ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದೇ  ಇರುವುದು ದುರ್ದೈವ.
    - ಸಂಕಷ್ಟ ಇದ್ದಾಗ ಸರ್ಕಾರ ಯಾವ ರೀತಿ ಜನರ ಜೊತೆ ನಿಲ್ಲುತ್ತದೆ ಎಂಬುದರಿಂದ ಸರ್ಕಾರದ ಜೀವಂತಿಕೆ ಗೊತ್ತಾಗುತ್ತದೆ
    -ಕಾವೇರಿ ವಿಚಾರದಲ್ಲಿ ಸರ್ಕಾರದ ಜೀವಂತಿಕೆ ಇಲ್ಲ
    -ಸರ್ಕಾರದ ಈಗಿನ ಸಭೆಗಳ ಫಲಿತಾಂಶ ಏನೂ ದೊಡ್ಡ ಪ್ರಮಾಣದಲ್ಲಿ ಆಗುವುದಿಲ್ಲ.

  • ಡಿಸಿಎಂ ಡಿ ಕೆ  ಶಿವಕುಮಾರ್ ಹೇಳಿಕೆ
    -ಇವತ್ತು ಕಾವೇರಿ ಬಂದ್ ಅವಶ್ಯಕತೆ ಇರಲಿಲ್ಲ.
    -ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಾ ಇದ್ದಾರೆ
    -ರಾಜ್ಯದ ಜನತೆ ರಕ್ಷಣೆ ಮಾಡಲು ಪೊಲೀಸ್ ಭದ್ರತೆ ಹೆಚ್ಚಿಸಿದ್ದೇವೆ
    -ವಾಹನಗಳು ಎಂದಿನಂತೆ ಓಡಾಡುತ್ತಿವೆ
    -ಶಾಂತಿಯುತ ಬಂದ್ ನಡೀತಾ ಇದೆ
    -ಮಧ್ಯಾಹ್ನ CWMA ಸಭೆ ದೆಹಲಿಯಲ್ಲಿ ನಡೆಯುತ್ತದೆ 
    -ರಾಜ್ಯದ ಪರವಾಗಿ ಅಧಿಕಾರಿಗಳು ಭಾಗಿಯಾಗ್ತಾರೆ
    -ಇದಾದ ಬಳಿಕ ಕಾನೂನು ತಜ್ಞರ ಜೊತೆ ಸಿಎಂ ಸಭೆ 
    -ಕಾವೇರಿ ವಿಚಾರದಲ್ಲಿ ಯಾರೆಲ್ಲ ವಾದ ಮಂಡಿಸಿದ್ದಾರೆ ಅವರೆಲ್ಲ ಭಾಗಿಯಾಗುತ್ತಾರೆ 
    -ಇವತ್ತಿನ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ
    -ಕೆಲವರು ನನ್ನ ಬೇಜವಾಬ್ದಾರಿ ಬಗ್ಗೆ ಮಾತನಾಡುತ್ತಾರೆ 
    -ಅವರ ಹಾಗೆ ನಾನು ಮಾತನಾಡಲ್ಲ
    -ನನಗೆ ಅವರಗಿಂತ ಜವಾಬ್ದಾರಿ ಹೆಚ್ಚಿದೆ
    -ಜವಾಬ್ದಾರಿಯುತ ಸಚಿವನಾಗಿ ನಾನು ಮಾತನಾಡಬೇಕು
    -ಈ ಬಂದ್ ಮುಗಿಯಲಿ, ನಾವು ಚರ್ಚೆ ಮಾಡುತ್ತಿದ್ದೇವೆ
    -ಕಾವೇರಿ ವಿಚಾರದಲ್ಲಿ ಸಂಕಷ್ಟ ಸೂತ್ರ ಹೆಣೆಯುವ ಬಗ್ಗೆ ಮಾತನಾಡುತ್ತಿದ್ದೇವೆ
    -ಇವತ್ತು ಇದೇ ವಿಚಾರವಾಗಿ ಕಾನೂನು ತಜ್ಞರ ಜೊತೆ ಸಭೆ
    -ಸಂಕಷ್ಟ ಸೂತ್ರ ನಾವು ರೆಡಿ ಮಾಡಿಕೊಳ್ಳುತ್ತೇವೆ
    -ಆ ಬಳಿಕ ಕೋರ್ಟ್ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ

  • ಕಾವೇರಿ ಬಗ್ಗೆ ಶಿವರಾಜ್ ಕುಮಾರ್ ಮಾತು : 

    COMMERCIAL BREAK
    SCROLL TO CONTINUE READING

    -ಕಾವೇರಿ ತಾಯಿಗೆ ನೋವಾಗಿದೆ
    -ಅಲ್ಲೂ ಹೋಗಬೇಕು, ಇಲ್ಲೂ ಇರ್ಬೇಕು
    -ಕಲಾವಿದರು ಬಂದು ಏನ್ ಮಾಡಬೇಕು ಹೇಳಿ
    -ರೈತ ಅನ್ನೋದು ಕಾಮನ್ ಪದ
    -ಎಲ್ಲಾ ರೈತರು ಒಂದೇ ಅಲ್ವಾ..?
    -ನ್ಯಾಯಾಲಯದಲ್ಲಿ ಸಮಸ್ಯೆ ಬಗೆಹರಿಬೇಕು
    -ಗಲಾಟೆ ಮಾಡಿದ್ರೆ ಏನೂ ಆಗಲ್ಲ
    -ಒಬ್ಬ ತಮಿಳು ನಟನಿಗೆ ನಿನ್ನೆ ಅವಮಾನವಾಗಿದೆ
    -ಮನಸ್ಸಿಂದ ಯೋಚನೆ ಮಾಡಿ
    -ಹೋರಾಟಕ್ಕೆ ಮರ್ಯಾದೆ ಇರಲ್ಲ, ಇನ್ನೊಬ್ಬರಿಗೆ  ನೋವು ಮಾಡಬಾರದು
    -ಕನ್ನಡ ಜನ ತುಂಬಾ ಒಳ್ಳೆಯವರು
    -ನಟ ಸಿದ್ಧಾರ್ಥ್ ಅವರ ಕ್ಷಮೆ ಕೇಳಿದ ಶಿವಣ್ಣ
    -ಯಾರು ಬೇಜಾರು ಮಾಡ್ಕೋಬೇಡಿ
    -ನಾನು ಹೃದಯದಿಂದ ಮಾತಾಡ್ತೀನಿ
    -ಇವತ್ತು ಇರ್ತೀವಿ, ನಾಳೆ ಇರಲ್ಲ
    -ಎಲ್ಲರೂ  ಒಂದೇ ಇಲ್ಲಿ

  • ಎಂಎಲ್ ಸಿ, ಹಿರಿಯ ನಟಿ ಉಮಾಶ್ರೀ ಭಾಷಣ :
    -ಅಣ್ಣವ್ರಾ ಕುಟುಂಬ ಜೊತೆಗಿದ್ದಿದ್ದು ದೊಡ್ಡ ಶಕ್ತಿ ಕೊಟ್ಟಿದೆ
    -ಶಿವಣ್ಣ ಕೊಟ್ಟ ಶಕ್ತಿ ಬಹಳ ದೊಡ್ಡದ್ದು
    -ಅವರ ಹಿಂದೆ ನಾವು ಇರುತ್ತೇವೆ
    -ಆಗಲೇ ಈ ಹೋರಾಟಕ್ಕೆ ಘನತೆ
    -ಕನ್ನಡ ನೆಲ, ಜಲಕ್ಕೆ ಮೊದಲ ಆದ್ಯತೆ ಕೊಡ್ಬೇಕು
    -ನಮ್ಮ ರೈತರ ಉಳಿವಿಗಾಗಿ ಇದು ಅನಿವಾರ್ಯ
    -ಮಳೆ ಬಾರದಿದ್ದಾಗ, ಬರ ಬಂದಾಗ ಇದೇ ಸಮಸ್ಯೆ ಆಗುತ್ತೆ
    -ಇದು‌ ಅಂತರಾಜ್ಯ ಸಮಸ್ಯೆ, ಕೇಂದ್ರ ಪರಿಹಾರ ಸೂಚಿಸಬೇಕು

  • ಕೈ ಕೊಯ್ದುಕೊಂಡು ರಕ್ತ ಚೆಲ್ಲಿದ ಕನ್ನಡ ಹೋರಾಟಗಾರರು

    COMMERCIAL BREAK
    SCROLL TO CONTINUE READING

    - ರಕ್ತ ಕೊಡ್ತೀವಿ, ನೀರು ಕೊಡಲ್ಲ ಎಂದು ಕೈ ಕೊಯ್ದುಕೊಂಡು ಹೋರಾಟ
    -ಪ್ರತಿಭಟನೆ ವೇಳೆ ಕೈ ಕೊಯ್ದುಕೊಂಡ ಕನ್ನಡ ರಾಜು
    - ಕಳಸ ತಾಲೂಕಿನಲ್ಲಿ ಪ್ರತಿಭಟನೆ ವೇಳೆ ಕೈ ಕೊಯ್ದುಕೊಂಡ ಕನ್ನಡ ರಾಜು
    -ರೈತ ಸಂಘ, ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ
    -ಪ್ರತಿಭಟನೆ ವೇಳೆ ಏಕಾಏಕಿ ಕೈಕೊಯ್ದುಕೊಂಡು ಹೋರಾಟ

     

  • ಕಾವೇರಿಗಾಗಿ ಹೋರಾಟಕ್ಕೆ ಇಳಿದ ಶ್ವಾನ

    COMMERCIAL BREAK
    SCROLL TO CONTINUE READING

    - ಫ್ರೀಡಂ ಪಾರ್ಕ್ ನಲ್ಲಿ ಶ್ವಾನ ಪ್ರತಿಭಟನೆ
    -ತಮಿಳುನಾಡು ಸಿಎಂ‌ ಸ್ಟಾಲಿನ್ ಪ್ರತಿಕೃತಿ ಕಚ್ಚಿ ಪ್ರತಿಭಟನೆ
    - ಮಂಡ್ಯದಿಂದ ಬೆಂಗಳೂರಿನವೆರೆಗೆ ಸಾಗಿ ಬಂದ ಶ್ವಾನ
    -ಸ್ಟಾಲಿನ್ ಪ್ರತಿಕೃತಿ ಬಾಯಿಯಿಂದ ಹಿಡಿದ ಸಾಗಿದ ಶ್ವಾನ

  • ಬಂದ್ ಗೆ ಬಿಜೆಪಿ ಸಂಪೂರ್ಣ ಬೆಂಬಲ  - ತೇಜಸ್ವಿ ಸೂರ್ಯ
    -ಬಂದ್ ಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಿದೆ.
    -Cwma ಎದರು ವಸ್ತು ಸ್ಥಿತಿ ತಿಳಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ
    -ತೇಜಸ್ವಿ ಸೂರ್ಯ ಹೇಳಿಕೆ
    -ರಾಜ್ಯದಲ್ಲಿ ರೈತಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ 
    -ರೈತರ ಈ ಹೋರಾಟದ ಪರ ಬಿಜೆಪಿ ನಿಂತಿದೆ
    - ನಮ್ಮಲ್ಲೇ ಕೊರತೆ ಇದ್ದಾಗ ತಮಿಳುನಾಡಿಗೆ ನೀರು ಹರಿಸ್ತಿದೆ
    -ಸಿಡಬ್ಲ್ಯೂಆರ್‌ಸಿ, ಸಿಡಬ್ಲ್ಯೂಎಂಎ ಗಳ ಮುಂದೆ ರಾಜ್ಯದ ಸಂಕಷ್ಟ ಪರಿಸ್ಥಿತಿ‌ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ
    -ನೀರಿನ‌ ವಿಚಾರದಲ್ಲಿ ಸರ್ಕಾರ ರಾಜಕೀಯ ಮಾಡ್ತಿದೆ
    -ಬೇರೆಯವರ ಮೇಲೆ ಗೂಬೆ ಕೂರಿಸಿ ತನ್ನ ವೈಫಲ್ಯ ಮುಚ್ಚಿ ಹಾಕುತ್ತಿರುವ ಸರ್ಕಾರ
    -ನಾಡು, ನುಡಿ, ಜಲಕ್ಕಾಗಿ ಬಿಜೆಪಿ, ಜೆಡಿಎಸ್ ಒಂದಾಗಿ ಹೋರಾಟ ನಡೆಸ್ತಿದೆ

    COMMERCIAL BREAK
    SCROLL TO CONTINUE READING

    -ತೇಜಸ್ವಿ ಸೂರ್ಯ ಹೇಳಿಕೆ

  • ಹೆದ್ದಾರಿ ತಡೆಯಲು ಯತ್ನಿಸಿದ ಪ್ರತಿಭಟನಾಕಾರರ ಬಂಧನ

    COMMERCIAL BREAK
    SCROLL TO CONTINUE READING

    -ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿ ತಡೆಯಲು ಹೋರಾಟಗಾರರ ಯತ್ನ
    -ಹೋರಾಟಗಾರರನ್ನ ವಶಕ್ಕೆ ಪಡೆದ ಅತ್ತಿಬೆಲೆ ಪೊಲೀಸರು
    -ಸುಮಾರು 20 ಕ್ಕೂ ಅಧಿಕ ಮಂದಿ ಪ್ರತಿಭಟನಾಕಾರರು ವಶಕ್ಕೆ
    -ಅತ್ತಿಬೆಲೆ ಗಡಿಯಲ್ಲಿ ನೀರನ್ನು ತಲೆ ಮೇಲೆ ಸುರಿದು ವಿನೂತನ ಪ್ರತಿಭಟನೆ, ಪ್ರತಿಭಟನಾಕಾರರನ್ನ ಬಂಧಿಸಿದ ಪೊಲೀಸರು

  • ವಾಟಾಳ್ ನಾಗರಾಜ್, ಸಾರಾ ಗೋವಿಂದ್ ಪೊಲೀಸರ ವಶಕ್ಕೆ
    - ಪ್ರತಿಭಟನೆ ವೇಳೆ ವಾಟಾಳ್ ನಾಗರಾಜ್, ಸಾರಾ ಗೋವಿಂದ್ ವಶಕ್ಕೆ 
    - ಟೌನ್ ಹಾಲ್ ಬಳಿ ಬರುತ್ತಿದ್ದಂತೆ ವಶಕ್ಕೆ ಪಡೆದ ಪೊಲೀಸರು

  • ಸ್ಯಾಂಡಲ್ ವುಡ್ ಒಗ್ಗಟ್ಟಿನ ಮಂತ್ರ

    COMMERCIAL BREAK
    SCROLL TO CONTINUE READING

    -ರಕ್ತ ಕೊಡ್ತೀವಿ, ಕಾವೇರಿ ನೀರು ಮಾತ್ರ ಕೊಡಲ್ಲ
    -ಮೊದಲು ನಮ್ಮ ಮನೆ ಚೆನ್ನಾಗಿರಬೇಕು
    -ಆಮೇಲೆ ಪಕ್ಕದ ಮನೆಯ ಬಗ್ಗೆ ಚಿಂತೆ ಮಾಡೋಣ
    -2 ರಾಜ್ಯದ ರೈತರಿಗೂ ಒಳ್ಳೆದಾಗಲಿ
    -ನಮ್ಮ ರೈತರು ಸಾಯೋದು ಬೇಡ
    -ನಮ್ಮ ನೀರು, ನಮ್ಮ ಹಕ್ಕು 
    -ಫಿಲಂ ಚೇಂಬರ್ ಹೋರಾಟಕ್ಕೆ ತಾರೆಯರ ಸಾಥ್

  • ಸಿಎಂ ನಿವಾಸಕ್ಕೆ ಗೃಹ ಸಚಿವರ ಭೇಟಿ :

    COMMERCIAL BREAK
    SCROLL TO CONTINUE READING

    ಕಾವೇರಿ ನೀರನ್ನ ತಮಿಳುನಾಡಿಗೆ ಹರಿಸುತ್ತಿರುವ ಸರ್ಕಾರದ ಕ್ರಮ ಖಂಡಿಸಿ ಸಂಘಟನೆಗಳ ಬಂದ್ ಕರೆ ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ನಿವಾಸ ಕಾವೇರಿಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಭೇಟಿ  ನೀಡಿದ್ದಾರೆ. ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಪರಮೇಶ್ವರ್ ಸಿಎಂ  ನಿವಾಸಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ. 

  • ರಾಜ್ಯ ಸರ್ಕಾರದ ವಿರುದ್ದ ವಾಟಾಳ್ ಕಿಡಿ 
    -ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿಕೆ
    -ಕಾವೇರಿ ನೀರಿಗಾಗಿ ನಾವು ಕರೆ ನೀಡಿರುವ ಬಂದ್​​ಗೆ ಉತ್ತಮ ಪ್ರತಿಕ್ರಿಯೆ
    -ಬಂದ್​ಗೆ ಸಹಕಾರ ನೀಡಿದ ರಾಜ್ಯದ ಜನತೆ ಧನ್ಯವಾದ ತಿಳಿಸುತ್ತೇನೆ
    -ಸರ್ಕಾರ ನಮ್ಮ ಕಾರ್ಯಕರ್ತರನ್ನು ತಡೆದು ಬಂಧಿಸುತ್ತಿದ್ದಾರೆ 
    -ಪೊಲೀಸ್ ಗೂಂಡಾಗಿರಿ, ದೌರ್ಜನ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ
    -ಶಾಂತಿಯುತವಾಗಿ ಪ್ರತಿಭಟನೆ, ಮೆರವಣಿಗೆ ಮಾಡಿದ್ರೆ ತಪ್ಪಾ
    - ಟೌನ್​​​ಹಾಲ್​ ಮುಂದೆ ಪ್ರತಿಭಟನೆಗೆ ಅವಕಾಶ ನೀಡದೆ ದೌರ್ಜನ್ಯ
    -ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸುತ್ತೇನೆ
    -ಕಾವೇರಿ ನದಿ ನೀರು ವಿಚಾರವಾಗಿ ನ್ಯಾಯ ಸಿಗುವವರೆಗೂ ಹೋರಾಟ
    ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿಕೆ

  • ಬುರ್ಖಾ ಧರಿಸಿ ಖಾಲಿ ಬಿಂದಿಗೆ ಹಿಡಿದು ವಾಟಾಳ್ ಪ್ರತಿಭಟನೆ
    -ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಬಂದ್
    -ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟನೆ
    -ಬುರ್ಖಾ ಧರಿಸಿ ಖಾಲಿ ಬಿಂದಿಗೆ ಹಿಡಿದು ವಾಟಾಳ್ ವಿನೂತನ ಪ್ರತಿಭಟನೆ
    -ಬೆಂಗಳೂರಿನ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದ ಬಳಿ ಪ್ರತಿಭಟನೆ

  • ರೂಪೇಶ್ ರಾಜಣ್ಣ ವಶಕ್ಕೆ
    -ಟೌನ್ ಹಾಲ್ ಬಳಿ ಪ್ರತಿಭಟನೆಗೆ ಯತ್ನ
    -ಹೋರಾಟಗಾರ ರೂಪೇಶ್ ರಾಜಣ್ಣ ವಶಕ್ಕೆ
    - ರೂಪೇಶ್ ಅವರನ್ನು ವಶಕ್ಕೆ ಪಡೆದ ಪೊಲೀಸರು

  • ಪ್ರತಿಭಟನೆಯಲ್ಲಿ ಚಿತ್ರರಂಗದ ಗಣ್ಯರು 
    ಕಾವೇರಿ ನೀರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಜನನದ ಚಿತ್ರರಂಗ ಸಾಥ್ ಕೊಟ್ಟಿದೆ. ಚಿತ್ರರಂಗದ ಗಣ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಪ್ರಣಯ ರಾಜ ಶ್ರೀನಾಥ್, ಉಮಾಶ್ರೀ, ರೂಪಿಕಾ,ಲೂಸ್ ಮಾದ ಯೋಗಿ, ಅನುಪ್ರಭಾಕರ್, ಪದ್ಮ ವಾಸಂತಿ,ಅನಿರುದ್ದ್, ಪೂಜಾ ಗಾಂಧಿ, ಪ್ರಮೀಳಾ ಜೋಷಾಯ್, ಸುಂದರ್ ರಾಜ್, ಶ್ರೀನಿವಾಸ್ ಮೂರ್ತಿ, ನವೀನ್ ಕೃಷ್ಣ, ಲಹರಿ ವೇಲು, ಧರ್ಮ ಕೀರ್ತಿರಾಜ್ ಭಾಗಿ..

     

  • ಎಂಕೆ ಸ್ಟ್ಯಾಲಿನ್ ಗೆ ತಿಥಿ ಆಚರಿಸಿದ ರೈತರು
    -ನಗರದ ಮುಖ್ಯ ಸರ್ಕಲ್‌ನಲ್ಲಿ ವಿನೂತನ ಪ್ರತಿಭಟನೆ 
    - ಎಂಕೆ ಸ್ಟ್ಯಾಲಿನ್ ಗೆ ತಿಥಿ ಆಚರಿಸಿದ ರೈತರು
    - ನಗರದ ಮುಖ್ಯ ಸರ್ಕಲ್‌ನಲ್ಲಿ ತಮಿಳುನಾಡು ಸಿಎಂ ಗೆ ತಿಥಿ ಮಾಡಿದ ರೈತರು
    - ಎಣ್ಣೆ, ಚಿನ್, ಮಟನ್, ಸಿಗರೇಟ್ ಇಟ್ಟು ಪುಣ್ಯತಿಥಿ 
    -ಮುಖ್ಯ ಸರ್ಕಲ್ ನಲ್ಲಿ ಸ್ಟ್ಯಾಲಿನ್ ಭಾವಚಿತ್ರ ಇಟ್ಟು ತಿಥಿ ಆಚರಣೆ
    -ಹೂವಿನ ಹಾರ ಹಾಕಿ ಅಗರಬತ್ತಿ ಹಚ್ಚಿ, ಪುರೋಹಿತರಿಂದ ಪೂಜೆ

  • ರಾಜ್ಯದ ಸಂಸದರ ಭಾವಚಿತ್ರಕ್ಕೆ ರಕ್ತದಲ್ಲಿ ಅಭಿಷೇಕ
    -ಚಿತ್ರದುರ್ಗದಲ್ಲಿ ಕರುನಾಡ ವಿಜಯಸೇನೆ ಕಾರ್ಯಕರ್ತರಿಂದ ಪ್ರತಿಭಟನೆ
    -ರಾಜ್ಯದ ಸಂಸದರ ಭಾವಚಿತ್ರಕ್ಕೆ ರಕ್ತದಲ್ಲಿ ಅಭಿಷೇಕ
    - ರಕ್ತದಿಂದ ಅಭಿಷೇಕ ಮಾಡಿದ ಕರುನಾಡ ವಿಜಯಸೇನೆ ಕಾರ್ಯಕರ್ತರು
    - ಸಂಸದ ಎ. ನಾರಾಯಣಸ್ವಾಮಿ ಭಾವಚಿತ್ರಕ್ಕೆ ರಕ್ತದಲ್ಲಿ ಅಭಿಷೇಕ
    - ಪ್ರತಿಭಟನೆ ವೇಳೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

  • ಬೆಂಗಳೂರಿನ ಕೆಆರ್ ಪುರದಲ್ಲಿ ಹೆಚ್ಚುತ್ತಿದೆ ಬಂದ್ ಕಾವು 
    - ಮೂರ್ನಾಲು ಸಂಘಟನೆಗಳಿಂದಒಟ್ಟಿಗೆ ಪ್ರತಿಭಟನೆ. 
    -ಕರವೇ ಪ್ರವೀಣ್ ಶೆಟ್ಟಿ ಬಣ, ಭಾರತೀಯರ ಸೇವಾ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ ಜನಸೇನೆ, ಡಾ . ರಾಜ್ ಕುಮಾರ್ ಅಭಿಮಾನಿ ಬಳಗದಿಂದ ಪ್ರತಿಭಟನೆ 
    -ಕೆಆರ್ ಪುರದ ಸಂತೆಯಲ್ಲಿ ಹೂ ಮಳಿಗೆ ಹೊರೆತುಪಡಿಸಿ ಬಹುತೇಕ ಅಂಗಡಿಗಳು ಬಂದ್
    -ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರಿಂದ ಬಿಗಿ  

  • ಪೊಲೀಸರು ಮತ್ತು ಹೋರಾಟಗಾರ ನಡುವೆ ವಾಗ್ವಾದ :
    - ಮಲ್ಲೇಶ್ವರಂ ಬ್ರಿಡ್ಜ್ ಬಳಿ ಶಿವರಾಮೇಗೌಡ ಬಣದಿಂದ ಉಗ್ರ ಪ್ರತಿಭಟನೆ..
    ಪ್ರತಿಭಟನೆ ಆರಂಭಿಸುತ್ತಿದಂತೆ ಪೊಲೀಸರು ಮತ್ತು ಹೋರಾಟಗಾರ ನಡುವೆ ವಾಗ್ವಾದ
    -ಶಿವರಾಮೇಗೌಡ ಸೇರಿದಂತೆ ಪ್ರತಿಭಟನಕಾರನ್ನ ವಶಕ್ಕೆ ಪಡೆದ ಪೊಲೀಸರು
    -ಇದಕ್ಕೂ ಮುನ್ನ ಸ್ಟಾಲಿನ್ ಪೋಟೋ ಗೆ ಪ್ರಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರತಿಭಟನಕಾರರು

  • ಮೈಸೂರಿನಲ್ಲಿ  ಕಾವೇರುತ್ತಿರುವ ಪ್ರತಿಭಟನೆ.
    ಬಸ್ ನಿಲ್ದಾಣದ ಮುಂಭಾಗ  ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಪ್ರತಿಭಟನಾಕಾರರು. 
    ಕಾವೇರಿ ಕ್ರಿಯಾ ಸಮಿತಿ ಹೆಸರಿನಲ್ಲಿ ಒಗ್ಗೂಡಿ ಪ್ರತಿಭಟನೆ.
    ರೈತ ಮುಖಂಡರು, ಕನ್ನಡಪರ ಸಂಘಟನೆಗಳು, ಚಳವಳಿಗಾರರು ಒಟ್ಟಿಗೆ ಸೇರಿ ಪ್ರತಿಭಟನೆ.
    ಸಂಸದರು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ

  • ತಮಿಳುನಾಡು ವಾಹನಗಳಿಗೆ ಒದ್ದು ರೈತರ ಆಕ್ರೋಶ. 

    COMMERCIAL BREAK
    SCROLL TO CONTINUE READING

    -ಚಾಮರಾಜನಗರದಲ್ಲಿ ಹೆಚ್ಚಿದ ರೈತರ ಆಕ್ರೋಶ. 
    -ತಮಿಳು ವಾಹನದ ನಂಬರ್ ಪ್ಲೇಟ್ ಗೆ ಒದ್ದ ರೈತರು. 
    -ಪ್ರತಿಭಟನಾಕಾರರನ್ನು ನೋಡಿ ಗಾಬರಿಯಾದ ತಮಿಳಿಗರು. 
    -ಚಾಮರಾಜನಗರದಿಂದ ತಮಿಳುನಾಡಿಗೆ ಹೋಗುತ್ತಿದ್ದ ಕಾರ್. 
    -ತಕ್ಷಣ ವಾಹನ ವಾಪಸ್ ಕಳುಹಿಸಿದ ಪೊಲೀಸರು.
    -ತಮಿಳು ಚಲನ ಚಿತ್ರ ಪೋಸ್ಟ್ ಗಳನ್ನ ಹರಿದು ಆಕ್ರೋಶ ಹೊರಹಾಕಿದ  ರೈತರು. 
    -ನಗರ ಸಿದ್ದಾರ್ಥ ಚಿತ್ರಮಂದಿರಕ್ಕೆ ನುಗ್ಗಿ ಪೋಸ್ಟರ್ ಗಳನ್ನು ಹರಿದ ಪ್ರತಿಭಟನಾಕಾರರು. 
    -ಚಾಮರಾಜನಗರದಲ್ಲಿ ಕ್ಷಣ ಕ್ಷಣಕ್ಕೂ ತೀವ್ರವಾಗುತ್ತಿರುವ ಹೋರಾಟ.

  • ಬಂದ್ ಗೆ ಮಾಲ್ ಗಳ ಬೆಂಬಲ :
    - ಅಖಂಡ ಕರ್ನಾಟಕ ಬಂದ್ ಗೆ ಬೆಂಗಳೂರಿನ ಮಾಲ್ ಗಳು ಬೆಂಬಲ
    -ನಗರದ ಎಲ್ಲಾ ಮಾಲ್ ಗಳ ಬೆಂಬಲ. 
    - ಬೆಳಗ್ಗೆ ಆರರಿಂದ ಸಂಜೆ ಆರು ಗಂಟೆವರೆಗೆ ಮಾಲ್ ಗಳು ಸಂಪೂರ್ಣ ಬಂದ್ 

  • ಸಿದ್ದರಾಮಯ್ಯ ಪ್ರತಿಕೃತಿ ಸುಡಲು ಪೊಲೀಸರ ವಿರೋಧ

    COMMERCIAL BREAK
    SCROLL TO CONTINUE READING

    - ಸಿ.ಎಂ. ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಪ್ರತಿ ಕೃತಿ ಎಳೆದಾಡಿದ ಪೊಲೀಸರು 
    -ಬಿಜೆಪಿ ಕಾರ್ಯಕರ್ತರು-ಪೊಲೀಸರ ಮಧ್ಯೆ ಪ್ರತಿಕೃತಿ ಎಳೆದಾಟ
    -ಸಿದ್ದರಾಮಯ್ಯ ಪ್ರತಿಕೃತಿ ಸುಡಲು ಪೊಲೀಸರ ವಿರೋಧ
    - ಸಿ.ಎಂ. ಪ್ರತಿಕೃತಿ ಹಿಡಿದು ಎಳೆದಾಡಿದ ಪೋಲೀಸರು ಬಿಜೆಪಿ ಕಾರ್ಯಕರ್ತರು
    -ಪೊಲೀಸರ ವಿರೋಧದ ನಡುವೆಯೂ ಸಿಎಂ, ಡಿಸಿಎಂ ಪ್ರತಿಕೃತಿ ದಹನ
    - ಚಿಕ್ಕಮಗಳೂರು ನಗರದ ಬಿಜೆಪಿ ಕಚೇರಿ ಬಳಿ ಘಟನೆ

  • ಚಾಮರಾಜನಗರದಲ್ಲಿ ತೀವ್ರ ಸ್ವರೂಪ ಪಡೆಯುತ್ತಿರೋ ಪ್ರತಿಭಟನೆ
    -ಹಸಿರು ಟವೆಲ್ ನಿಂದ ನೇಣು ಹಾಕಿಕೊಳ್ಳಲು ಮುಂದಾದ ರೈತ
    -ಪ್ರತಿಭಟನಾನಿರತ ರೈತ ಅಸ್ವಸ್ಥ
    -ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಘಟನೆ
    -ತಮಿಳುನಾಡು ಗಡಿ ಬಂದ್ ಮಾಡಿ ಪ್ರತಿಭಟನೆ ವೇಳೆ ಘಟನೆ
    -ಬೆಳಗ್ಗಯಿಂದ ತಿಂಡಿ ತಿನ್ನದೆ, ನೀರು ಕುಡಿಯದೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತ
    -ಸುಸ್ತಾಗಿ ರಸ್ತೆಯಲ್ಲಿ ಕುಸಿಡು ಬಿದ್ದ ರೈತ
    -ಪೊಲೀಸ್ ಜೀಪ್ ನಲ್ಲೇ ಆಸ್ಪತ್ರೆಗೆ ರವಾನೆ

  • ಕೆಐಎಎಲ್ ನಲ್ಲಿ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ವಶಕ್ಕೆ 
    -ಕೆಐಎಎಲ್ ನಲ್ಲಿ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು
    -ನಮ್ಮ ಕರ್ನಾಟಕ ಸೇನೆಯಿಂದ ಪ್ರತಿಭಟನೆ
    - ಪ್ರತಿಭಟನಕಾರರನ್ನ ವಶಕ್ಕೆ ಪಡೆದ ಪೋಲಿಸರು
    - ಆರು ಮಂದಿ ಕಾರ್ಯಕರ್ತರನ್ನ ವಶಕ್ಕೆ ಪಡೆದ ಪೋಲಿಸರು

  •  ಡಿಕೆ ಶಿವಕುಮಾರ್ ನಿವಾಸಕ್ಕೆ ಹೆಚ್ಚಿನ ಭದ್ರತೆ  :
    -ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಭದ್ರತೆ ಹೆಚ್ಚಳ
    - ಹೆಚ್ಚಿನ ಬ್ಯಾರಿಕೆಡ್ ಪೊಲೀಸ್ ಭದ್ರತೆ ನಿಯೋಜನೆ
    - ಮುನ್ನೆಚ್ಚರಿಕೆ ಕ್ರಮವಾಗಿ ಸದಾಶಿವನಗರ ನಿವಾಸಕ್ಕೆ ಭದ್ರತೆ

     

  • ಸುಮ್ಮನೆ ಯಾರನ್ನೂ ಬಂಧಿಸುವುದಿಲ್ಲ - ಡಾ.ಜಿ ಪರಮೇಶ್ವರ್ 
     
    ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿಕೆ
    -ನಾವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ
    -ಪ್ರತಿಭಟನೆ, ಬಂದ್ ಮಾಡೋರಿಗೆ ಮನವಿ ಮಾಡಿದ್ದೇನೆ
    -ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದೇನೆ
    - ಸುಮ್ಮನೆ ಯಾರನ್ನೂ ಬಂಧಿಸುವುದಿಲ್ಲ
    -ಕಾನೂನು ವಿರುದ್ಧ ನಡೆದುಕೊಂಡರೆ ಬೇರೆ ವಿಧಿಯಿಲ್ಲ
    -ದೇಶದಲ್ಲಿ ಬಂದ್ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಕೊಟ್ಟಿದೆ 
    -ನಾವು ಸರಿಯಾದ ಕ್ರಮ ತೆಗೆದುಕೊಳ್ಳಲಿಲ್ಲ ಎಂದರೆ ಕೋರ್ಟ್ ಸರ್ಕಾರವನ್ನು ಹೊಣೆ ಮಾಡುತ್ತದೆ
    -ಇವತ್ತು CWMA‌ಮಿಟಿಂಗ್ ಇದೆ
    -ಅವರು ಏನು ತೀರ್ಮಾನ ಮಾಡ್ತಾರೆ ನೋಡಬೇಕು
    -ಕಾನೂನು ರೀತಿಯಲ್ಲಿ ನಡೆದುಕೊಳ್ಳಬೇಕು, ರಾಜ್ಯದ ಹಿತ ಕಾಪಡಬೇಕು
    -ಸಂಕಷ್ಟ ಸೂತ್ರ ನೀಡಿ ಎಂದು ಮನವಿ ಮಾಡ್ತೇವೆ
    -ತೀರ್ಪು ಬರಲಿ ನೋಡೋಣ ಏನು ಆಗುತ್ತೆ ಅಂತ
    -ಸಾಮಾನ್ಯವಾಗಿ ನೀರು ಹೋಗುತ್ತಿದೆ
    -ಗೇಟ್ ತೆಗೆದು ನೀರು ಬಿಡುವ ಪರಿಸ್ಥಿತಿ ಇಲ್ಲ

  • ವಶಕ್ಕೆ ಪಡೆದಿರುವ ಹೋರಾಟಗಾರರನ್ನು ಬಿಡುಗಡೆಗೆ ಹೆಚ್ ಡಿಕೆ ಆಗ್ರಹ :

    COMMERCIAL BREAK
    SCROLL TO CONTINUE READING

    -ಕಾವೇರಿ ಹೋರಾಟಕ್ಕೆ ಇಡೀ ಕರುನಾಡು ಮಿಡಿದಿದೆ. 
    -ಇಂದಿನ ಬಂದ್ ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    -ನಾಡು, ನುಡಿ, ನೆಲಜಲದ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು. 
    -ಕನ್ನಡ ಕುಟುಂಬದಲ್ಲಿ ಹಾಸುಹೊಕ್ಕಾಗಿರುವ ಈ ಸಾಮರಸ್ಯ, ಐಕ್ಯತೆ ನೆರೆ ರಾಜ್ಯಗಳಿಗೆ ಎಚ್ಚರಿಕೆ ಗಂಟೆ ಆಗಬೇಕು. 
    - ಸರಕಾರವೂ ಕನ್ನಡ ಭಾವನೆಗಳನ್ನು ದಮನ ಮಾಡಬಾರದು. 
    - ವಶಕ್ಕೆ ಪಡೆದಿರುವ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು. 
    -ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ 

     

  • ಕಲಬುರಗಿ ವಿಮಾನ ನಿಲ್ದಾಣದ ಬಳಿ ಪ್ರತಿಭಟನೆ :

    COMMERCIAL BREAK
    SCROLL TO CONTINUE READING

    -ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಹೋರಾಟಗಾರರ ಪ್ರತಿಭಟನೆ 
    -ನಮ್ಮ ಕರ್ನಾಟಕ ಸೇನೆಯಿಂದ ವಿಮಾನ ನಿಲ್ದಾಣದ ಮುಂಭಾಗ ಪ್ರತಿಭಟನೆ 
    - ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ

  • ಹಾವೇರಿಯಲ್ಲಿ ಕರವೇ ರಕ್ತ ಚಳುವಳಿ :
    -ಹಾವೇರಿ ಜಿಲ್ಲೆಯಲ್ಲಿ ಕಾವೇರಿ ನೀರಿಗಾಗಿ ಪ್ರತಿಭಟನೆ

    COMMERCIAL BREAK
    SCROLL TO CONTINUE READING

    -ಸಿರಿಂಜ್ ನಲ್ಲಿ ರಕ್ತ ತೆಗೆದು ಪ್ರತಿಭಟನೆ ಮಾಡಿದ ಕಾರ್ಯಕರ್ತರು
    -ಕರವೇ ಕಾರ್ಯಕರ್ತರಿಂದ ಹಾವೇರಿಯಲ್ಲಿ ಪ್ರತಿಭಟನೆ
    -ಕರವೇ ನಾರಾಯಣಗೌಡ ಬಣದಿಂದ ಪ್ರತಿಭಟನೆ
    -ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ
    -ರಸ್ತೆಯಲ್ಲಿ ಬಸ್ಸಿಗೆ ಅಡ್ಡವಾಗಿ ಮಲಗಿ ಪ್ರತಿಭಟನೆ
    -ಪ್ರತಿಭಟನಾಕಾರರನ್ನ ವಶಕ್ಕೆ ಪಡೆದ ಪೊಲೀಸರು

  • ಆನೇಕಲ್ ನಲ್ಲಿ ಕರ್ನಾಟಕ ಬಂದ್ ಗೆ ಭಾಗಶಃ ಬೆಂಬಲ 
    - ಹಣ್ಣಿನ‌ ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ 
    -ಬೆಂಗಳೂರು ಹೊರವಲಯದ ಸಿಂಗೇನಾ ಅಗ್ರಹಾರದಲ್ಲಿರುವ ಹಣ್ಣಿನ ಮಾರುಕಟ್ಟೆ
    -ರಾಜ್ಯದ ಅತೀ ದೊಡ್ಡ ಹಣ್ಣಿನ‌ ಮಾರುಕಟ್ಟೆ
    -ದಕ್ಷಿಣ ರಾಜ್ಯಗಳ ವಿವಿಧ ಭಾಗಗಳಿಂದ ರೈತರಿಂದ ಇಲ್ಲಿ ಹಣ್ಣು ಮಾರಾಟ 
    - ಎಂದಿನಂತೆ ಜನಜಂಗುಳಿ ಇಲ್ಲದೇ ಸಾಧಾರಣವಾಗಿ ನಡೆಯುತ್ತಿರುವ ವಹಿವಾಟು 

  • ತಮಿಳುನಾಡಿನತ್ತ ರಾಜ್ಯದ ಬಸ್ಸುಗಳು :
    -ಕರ್ನಾಟಕ ಬಂದ್ ನಡುವೆ ತಮಿಳುನಾಡಿನತ್ತ ರಾಜ್ಯದ ಬಸ್ಸುಗಳು
    - ಎಂದಿನಂತೆ ಅಪರೇಟ್ ಆದ ರಾಜ್ಯದ ಬಸ್ಸುಗಳು
    - ಆನೇಕಲ್, ಮಾಲೂರು ಘಟಕದಿಂದ ಬಸ ಸಂಚಾರ 
    - ಹೊಸೂರು ಆನೇಕಲ್ ಮತ್ತು ಹೊಸೂರು ಮಾಲೂರು ಮಾರ್ಗದಲ್ಲಿ ಸಂಚಾರ
    - ಮುಂಜಾಗ್ರತಾ ಕ್ರಮವಾಗಿ ತಮಿಳುನಾಡು ಪೊಲೀಸರಿಂದ ಭದ್ರತೆ
    -ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಕ್ರಮ
    - ತಮಿಳುನಾಡು ಗಡಿಯಲ್ಲಿಯೇ ತಮಿಳುನಾಡು ವಾಹನಗಳು ವಾಪಸ್
    - ತಮಿಳುನಾಡು ವಾಹನಗಳನ್ನು ತಡೆದು ವಾಪಸ್ ಕಳುಹಿಸುತ್ತಿರುವ ತಮಿಳುನಾಡು ಪೊಲೀಸರು

  • ಪ್ರತಿಭಟನಕಾರರು ಪೊಲೀಸ್ ವಶಕ್ಕೆ :

    COMMERCIAL BREAK
    SCROLL TO CONTINUE READING

    -ಧಾರವಾಡದಲ್ಲಿ  ಪ್ರತಿಭಟನಾಕಾರರಿಂದ ರಸ್ತೆ ತಡೆ 
    -ರಸ್ತೆ ತಡೆ ಕೈಬಿಡುವಂತೆ ಪೊಲೀಸರ ಸೂಚನೆ
    -ಆದರೂ ಒಪ್ಪದ ಪ್ರತಿಭಟನಕಾರರು
    - ಈ ಹಿನ್ನೆಲೆಯಲ್ಲಿ ವಶಕ್ಕೆ ಪಡೆದ ಪೊಲೀಸರು 
    -ರಸ್ತೆ ತಡೆ ಮಾಡಿದ್ದ ಹೋರಾಟಗಾರರು ವಶಕ್ಕೆ 
    -ಧಾರವಾಡ ಜ್ಯುಬಿಲಿ ಸರ್ಕಲ್‌ನಲ್ಲಿ ವಶಕ್ಕೆ

  • ತಮಿಳುನಾಡಿನ ವಿರುದ್ಧ ಘೋಷಣೆ :
    - ಟೌನ್ ಹಾಲ್ ಬಳಿ ಪ್ರತಿಭಟನೆಗೆ ಬಂದ ಹೋರಾಟಗಾರರನ್ನ ವಶಕ್ಕೆ ಪಡೆದ ಪೊಲೀಸರು
    - ಬಿಎಂಟಿಸಿ ಬಸ್ ಹತ್ತಿಸಿ ಕಳುಹಿಸಿದ ಪೊಲೀಸರು
    - ತಮಿಳುನಾಡಿನ ವಿರುದ್ಧ ಘೋಷಣೆ ಕೂಗಿದ ಹೋರಾಟಗಾರರು

  • ಕಾಲ್ನಡಿಗೆ ಜಾಥಾಗೆ ಪೊಲೀಸರ ತಡೆ :
    -ನಾಗರಬಾವಿ ಬಿಡಿಎ ಕಾಂಪ್ಲೆಂಕ್ಸ್ ನಿಂದ ಕಾಲ್ನಡಿಗೆ ಜಾಥಾ ಆರಂಭಿಸಿದ್ದ ಕನ್ನಡಿಗರ ಧ್ವನಿ ವೇದಿಕೆ ಸದಸ್ಯರು 
    - ವೇದಿಕೆಯ ಅಧ್ಯಕ್ಷ ಅನಿಲ್ ಕುಮಾರ್  ಬಂಧಿಸಿದ ಪೊಲೀಸರು  
    - ಕಾಲ್ನಡಿಗೆ ಜಾಥಾ ತಡೆದು ಅರೆಸ್ಟ್ ಮಾಡಿದ ಪೊಲೀಸರು  
    -ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ಜಾಥಾಗೆ ತಡೆ

  • ಬಂದ್ ಬೆಂಬಲಿಸಲು ಬಿಎಸ್ ವೈ ಕರೆ 

    COMMERCIAL BREAK
    SCROLL TO CONTINUE READING

    -ಎಲ್ಲರೂ ಬಂದ್ ಗೆ ಸಹಕಾರ ನೀಡಬೇಕು 
    - ಬಂದ್ ಯಶಸ್ವಿಯಾಗುತ್ತದೆ ಅನ್ನುವ ವಿಶ್ವಾಸ ನನಗೆ ಇದೆ
    -ಯಶಸ್ವಿಯಾಗಿ ಯಾವುದೇ ಗೊಂದಲ ಇಲ್ಲದೇ ಎಲ್ಲರೂ ಬಂದ್ ಗೆ ಸಹಕಾರ ಕೊಡಲಿ
    ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ

  • ಪೊಲೀಸರು - ಪ್ರತಿಭಟನಾಕಾರರ ನಡುವೆ ತಳ್ಳಾಟ, ನೂಕಾಟ  

    COMMERCIAL BREAK
    SCROLL TO CONTINUE READING

    -ಬೆಳಗಾವಿಯಲ್ಲಿ ಕನ್ನಡ ಪರ ಹೋರಾಟಗಾರರಿಂದ ಪ್ರತಿಭಟನೆ.
    -ಕೇಂದ್ರ ಬಸ್ ನಿಲ್ದಾಣದ ಮುಂದೆ ಕರವೇ ಕಾರ್ಯಕರ್ತರ ಧರಣಿ.
    -ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು.
    -ಪೊಲೀಸರು ಹಾಗೂ ಹೋರಾಟಗಾರ ನಡುವೆ ತಳ್ಳಾಟ, ನೂಕಾಟ.
    -ಬಸ್ ಗೆ ಅಡ್ಡ ಮಲಗಿ ಪ್ರತಿಭಟನಾಕಾರರ ಆಕ್ರೋಶ.
    -20ಕ್ಕೂ ಹೆಚ್ಚು ಕಾರ್ಯಕರ್ತರು ಪೊಲೀಸ ವಶಕ್ಕೆ.

  • ಇಂದಿನ CWMA ಸಭೆಯಲ್ಲಿ ಸಂಕಷ್ಟ ಸೂತ್ರದ ರಚನೆಗೆ ಆಗ್ರಹ 

    COMMERCIAL BREAK
    SCROLL TO CONTINUE READING

    - ಸಂಕಷ್ಟ ಸೂತ್ರದ ಭಾಗವಾಗಿ ಮೇಕೆದಾಟು ಯೋಜನೆ ವಿಚಾರ CWMA ಮುಂದೆ ಮಂಡನೆ ಸಾಧ್ಯತೆ 
    - ಈ ಹಿಂದೆ ಸುಪ್ರೀಂಕೋರ್ಟ್ ನಲ್ಲಿ ಮೇಕೆದಾಟು ವಿಚಾರ ಅರ್ಜಿ ವಿಚಾರಣೆ ನಡೆಸಲು ಕೋರಿದಾಗ CWMA ಮುಂದೆ ಪ್ರಸ್ತಾಪಿಸಿ ಎಂದಿದ್ದ ಸುಪ್ರೀಂ
    -  ಈ ಹಿನ್ನಲೆ ಯಲ್ಲಿ ಇಂದಿನ ಸಭೆಯಲ್ಲಿ ಪ್ರಸ್ತಾಪಿಸಲಿರುವ ಕರ್ನಾಟಕ
    - ಸಂಕಷ್ಟದ ವರ್ಷಕ್ಕೆ ಪರಿಹಾರ ನೀಡುವಂತೆ ಸಭೆ ಮುಂದೆ ವಿಚಾರ ಮಂಡನೆ
    -CWRC ತೀರ್ಮಾನಕ್ಕೆ ವಿರೋಧ, ಸಂಕಷ್ಟ ಸೂತ್ರ ರಚೆನೆಗೆ ಡಿಮ್ಯಾಂಡ್, ಬ್ಯಾಕ್ ಲಾಗ್ ನೀರು ಹರಿಸಲು‌ ಅಸಾಧ್ಯವೆಂದು ಪ್ರಬಲ ವಾದ ಮಂಡನೆ
    -ಕೃಷಿ, ಜಲ ತಜ್ಞರ ಸಮಿತಿ ರಚಿಸಿ ಕಾವೇರಿ ನದಿ ಪಾತ್ರದಲ್ಲಿ ಅಧ್ಯಯನ ನಡೆಸಿ ವಸ್ತುಸ್ಥಿತಿ ವರದಿಗೆ ಆಗ್ರಹ

     

  • ಇಂದು ದೆಹಲಿಯಲ್ಲಿ ಕಾವೇರಿ ನದಿ ನೀರಿನ ಹಂಚಿಕೆಯ ಮಹತ್ವದ ಸಭೆ: 
    *  ಇಂದು ಮದ್ಯಾನ್ಹ 2 ಗಂಟೆಗೆ ನಡೆಯಲಿರೋ CWMA ಸಭೆ
    * ಸಭೆಯಲ್ಲಿ ಕರ್ನಾಟಕದಿಂದ ಅಧಿಕಾರಿಗಳು ಭಾಗಿಯಾಗಲಿದ್ದಾರೆ
    *  ಕರ್ನಾಟಕದ ಜೊತೆಗೆ ತಮಿಳುನಾಡು,ಪುದುಚೇರಿ, ಮತ್ತು ಕೇರಳ ಅಧಿಕಾರಿಗಳು ಭಾಗಿ
    * ಇಂದಿನ ಸಭೆ ತುಂಬಾ ಮಹತ್ವದಾಗಿದ್ದು,
    * CWRC ಆದೇಶವನ್ನ ಮಾರ್ಪಾಡು ಮಾಡಿ ಹೊಸ ಆದೇಶ ನೀಡುವ ಸಾದ್ಯತೆ ಇದೆ
    * ಸದ್ಯ ಕರ್ನಾಟಕ ಪ್ರತಿ ದಿನ 3000 ಕ್ಯೂಸೆಕ್ ನೀರನ್ನ 18 ದಿನಗಳಕಾಲ ಬಿಡುವಂತೆ ಆದೇಶಿಸಿದ CWRC  
    * CWRC ತೀರ್ಮಾನದ ವಿರುದ್ದ ಮೇಲ್ಮನವಿ ಸಲ್ಲಿಸಲಿರುವ ರಾಜ್ಯ ಸರ್ಕಾರ
    * ಜೂನ್‌ ತಿಂಗಳಿಂದ ಸೆಪ್ಟಂಬರ್ 15 ವರೆಗೆ ತಮಿಳುನಾಡಿಗೆ  12 TMC ಬಾಕಿ ಉಳಿಸಿಕೊಂಡಿದೆ.
    * ಬ್ಯಾಕ್ ಲಾಗ್ ನೀರನ್ನ ಬಿಡುವಂತೆ ತಮಿಳುನಾಡಿನ ತಕರಾರಿಗೆ ಪ್ರಬಲ ವಿರೋಧ ವ್ಯಕ್ತಪಡಿಸಲಿರುವ ಕರ್ನಾಟಕ
    * CWMA ಸಭೆಯ ತೀರ್ಮಾನದ ಬಳಿಕ  ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಬಗ್ಗೆ‌ ಸರ್ಕಾರದ ನಿರ್ಧಾರ

     

  • ಕರ್ನಾಟಕ ಬಂದ್:ಫಿಲಂ ಚೇಂಬರ್ ಬಳಿ ಯಾವುದೇ ಕಾರಣಕ್ಕೂ ಪ್ರತಿಭಟನೆ ಮಾಡುವ ಹಾಗಿಲ್ಲ
    - ಒಂದು ವೇಳೆ ಫಿಲಂ ಚೇಂಬರ್ ಬಳಿ ಪ್ರತಿಭಟನೆ ಮಾಡಿದ್ರು ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬರನ್ನು ಕೂಡ ಅರೆಸ್ಟ್ ಮಾಡಲಾಗುತ್ತೆ
    -  ಪ್ರತಿಭಟನೆ ಮಾಡೋದೆ ಆದ್ರೆ ಫ್ರೀಡಂ ಪಾರ್ಕ್ ಬಳಿ ಮಾಡಲು ಅವಕಾಶವಿದೆ
    - ಹೈ ಕೋರ್ಟ್ ಆರ್ಡರ್ ಹಿನ್ನೆಲೆ ಇಲ್ಲಿ ಯಾರು ಕೂಡ ಪ್ರತಿಭಟನೆ ಮಾಡುವ ಹಾಗಿಲ್ಲ
    - ಒಂದು ವೇಳೆ ಶಿವಣ್ಣ ಅಥವಾ ಸಿನಿಮಾ ನಟ್ರು ಯಾರೇ ಇಲ್ಲಿ ಪ್ರತಿಭಟನೆ ಮಾಡಿದ್ರು ಕೂಡ ಅವರನ್ನ ಇಲ್ಲಿ ಅರೆಸ್ಟ್ ಮಾಡಲಾಗುತ್ತೆ ಅಂತ ಹೇಳಿ ಇಲ್ಲಿ ಪೊಲೀಸರು ಹೇಳುತ್ತಿದ್ದಾರೆ

  • ಕರ್ನಾಟಕ ಬಂದ್ ಹಿನ್ನಲೆ: ಟೌನ್ ಹಾಲ್ ಬಳಿ ಪೊಲೀಸ್ ಬಂದೋಬಸ್ತ್
    ಡಿಸಿಪಿ ಕೇಂದ್ರ ವಿಭಾಗ ಮಾರ್ಗದರ್ಶನ ದಲ್ಲಿ ಭದ್ರತೆ
    - ಪೊಲೀಸ್ ಬಂದೋಬಸ್  ಐದು ಟೀಮ್ ಗಳನ್ನ ನೇಮಿಸಿರುವ ಕೇಂದ್ರ ಡಿಸಿಪಿ
    - ಪ್ರತಿಭಟನೆ ಮಾಡಲು ಬರುವ ಪ್ರತಿಭಟನಾಕಾರರನ್ನು  ವಶಕ್ಕೆ ಪಡೆಯಲು ಸೂಚನೆ
    - ಟೌನ್ ಹಾಲ್ ಬಳಿ 15ಕ್ಕೂ ಹೆಚ್ಚು ಬಿಎಂಟಿಸಿ ಬಸ್ಸುಗಳನ್ನು ನಿಲ್ಲಿಸಿರುವ ಪೊಲೀಸರು 
    - ಪ್ರತಿಭಟನೆ ಮಾಡಲು ಬರುವ ಹೋರಾಟಗಾರರನ್ನು ಬಸ್ನಲ್ಲಿ ಫ್ರೀಡಂ ಪಾರ್ಕಿಗೆ ಕಳಿಸಲು ಸೂಚನೆ .

  • ಗಡಿಯಲ್ಲಿ ಪೊಲೀಸರ ಭದ್ರತೆಗೆ ಎಲ್ಲಾ ಕ್ರಮ ಕೈಗೊಂಡಿದ್ದೇವೆ:- 
    >> ಅತ್ತಿಬೆಲೆ ಗಡಿಯಲ್ಲಿ ಪರಿಶೀಲನೆ ಬಳಿಕ ಎಸ್. ಪಿ ಹೇಳಿಕೆ.
    >> ಬೆಂಗಳೂರು ಗ್ರಾಮಾಂತರ ಎಸ್.ಪಿ ಮಲ್ಲಿಕಾರ್ಜುನ್ ಬಾಲದಂಡಿ.
    >> ಅತ್ತಿಬೆಲೆಯಲ್ಲಿ 50 ಜನರನ್ನು ವಶಕ್ಕೆ ಪಡೆದಿದ್ದೇವೆ.
    >> ಆನೇಕಲ್ ತಾಲ್ಲೂಕಿನ ಸೋಲೂರು ಹಾಗೂ ಚಂದಾಪುರದಲ್ಲೂ ಬಂದನ ಮಾಡಲಾಗಿದೆ.
    >> ದೊಡ್ಡಬಳ್ಳಾಪುರ ಹಾಗೂ ನೆಲಮಂಗಲದಲ್ಲಿ ಭದ್ರತೆ ಮಾಡಿದ್ದೇವೆ.
    >> ಹೊಸಕೋಟೆ,ದೇವನಹಳ್ಳಿಯಲ್ಲೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
    >> ಅತ್ತಿಬೆಲೆ ಗಡಿಯಲ್ಲಿ ಸುರಕ್ಷತೆಗೆ 200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಿದ್ದೇವೆ.
    >> 4 ಕೆಎಸ್ಆರ್ಪಿ ತುಕಡಿ, ಡಿ ವೈ ಎಸ್ ಪಿ ಹಾಗೂ ಇನ್ಸ್ಪೆಕ್ಟರ್ಗಳ ನಿಯೋಜನೆ.
    >> ಗಡಿ ಬಳಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ.
    >> ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ವಾಹನಗಳ ತಡೆ ಮಾಡಿದ್ದಾರೆ.
    >> ಆನೇಕಲ್ ತಾಲ್ಲೂಕಿನಲ್ಲಿ ಬಿಗೀ ಭದ್ರತೆ ಕೈಗೊಳ್ಳಲಾಗಿದೆ.
    >> ಅಹಿತಕರ ಘಟನೆ ನಡೆಯದಂತೆ ಸೂಕ್ತ ವ್ಯವಸ್ಥೆ ಕೈಗೊಂಡಿದ್ದೇವೆ.
    >> ಅತ್ತಿಬೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಎಸ್.ಪಿ ಹೇಳಿಕೆ

  • ಕೋಲಾರ ಬ್ರೇಕಿಂಗ್: 
    * ಕಾವೇರಿ ನೀರಿಗಾಗಿ ಅಖಂಡ ಕರ್ನಾಟಕ ಬಂದ್ ಹಿನ್ನೆಲೆ.
    * ಪ್ರಯಾಣಿಕರಿಲ್ಲದೆ ಬಣಗುಟ್ಟುತ್ತಿರುವ ರೈಲು ನಿಲ್ದಾಣ.
    * ಕೋಲಾರ ಜಿಲ್ಲೆ ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ಜನರಿಲ್ಲ.
    * ನಿತ್ಯ ಸಾವಿರಾರು ಜನರು ತುಂಬಿ ತುಳುಕುತ್ತಿದ್ದ ನಿಲ್ದಾಣ ಖಾಲಿ ಖಾಲಿ.
    * ನಿಲ್ದಾಣದಲ್ಲಿ ಕಂಡು ಬಂದ ಕೇವಲ ಬೆರಳೆಣಿಕೆಯಷ್ಟು ಪ್ರಯಾಣಿಕರು.
    * ಬೆಂಗಳೂರು, ಆಂಧ್ರ ಪ್ರದೇಶ, ತಮಿಳುನಾಡು, ಸೇರಿದಂತೆ ಉತ್ತರ ಭಾರತಕ್ಕೂ ಸಂಪರ್ಕ ಕಲ್ಪಿಸುವ ಬಂಗಾರಪೇಟೆ ರೈಲು ನಿಲ್ದಾಣ.

  • ಕೋಲಾರ ಬ್ರೇಕಿಂಗ್; 
    >> ಕೋಲಾರದಲ್ಲಿ ಬಲವಂತವಾಗಿ ಬಂದ್ ಮಾಡಿಸುತ್ತಿರುವ ಪ್ರತಿಭಟನಕಾರರು.
    >> ನಗರದಲ್ಲಿ ಬೈಕ್ ರ್ಯಾಲಿ ಮಾಡುವ ಮೂಲಕ ಬಂದ್ ಗೆ ಆಗ್ರಹ.
    >> ರಿಲಯನ್ಸ್ ಮಾರ್ಟ್ ಹಾಗೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿ ಆಗ್ರಹ.
    >> ಬಂದ್ ಮಾಡಿಸಿ ಧಿಕ್ಕಾರ ಕೂಗಿ ಆಕ್ರೋಶ.
    >> ಬಲವಂತವಾಗಿ ಬಂದ್ ಮಾಡದಂತೆ ಜಿಲ್ಲಾಡಳಿತ ಸೂಚನೆ.
    >> ಜಿಲ್ಲಾಡಳಿತ ಸೂಚನೆ ನಡುವೆಯೂ ಬಲವಂತವಾಗಿ ಬಂದ್.

  • ರಾಯಚೂರು ಬ್ರೇಕಿಂಗ್:  
    * ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿವಾದ ವಿಚಾರ 
    * ರೈತ ಸಂಘಟನೆಗಳು ಹಾಗೂ ಕನ್ನಡ ಪರ ಸಂಘಟನೆಗಳು 
    * ಕರ್ನಾಟಕ ಬಂದ್ ಕರೆ  ಹಿನ್ನೆಲೆ - ರಾಯಚೂರಿನಲ್ಲಿ ಬಂದ್ ಇಲ್ಲ 
    * ಎಂದಿನಂತೆ ಆರಂಭಗೊಂಡ ಜನಜೀವನ
    * ಎಂದಿನಂತೆ ಬಸ್, ಆಟೋ ಸಂಚಾರ ಆರಂಭ 
    * ಜಿಲ್ಲೆಯ ಎಲ್ಲಾ ಕಡೆ ಬಸ್ ಸಂಚಾರ  
    * ಶಾಲಾ ಕಾಲೇಜುಗಳು ಕೂಡ ಆರಂಭ 
    *  ಶಾಲಾ ಕಾಲೇಜುಗಳಿಗೆ  ಬರುತ್ತಿರುವ ಮಕ್ಕಳು 
    * ಮಾರುಕಟ್ಟೆ ದಿನಸಿ ಅಗಂಡಿಗಳು ಸರಕುಗಳು ದಿನನಿತ್ಯ ದಂತೆ ಆರಂಭ 
    * ಕನ್ನಡ ಪರ ಸಂಘಟನೆಗಳು  8 ಗಂಟೆಗೆ ಪ್ರತಿಭಟನೆ ಶುರು

  • ಕರ್ನಾಟಕ ಬಂದ್: ಸ್ತಬ್ಧಗೊಂಡ ಮದ್ದೂರು ಪಟ್ಟಣ.!
    - ಮದ್ದೂರು ಬಂದ್‌ಗೆ ಕರೆ ನೀಡಿರುವ ರೈತ, ಕನ್ನಡ, ಪ್ರಗತಿಪರ ಸಂಘನೆಗಳು.
    - ಅಂಗಡಿ ಮುಂಗಟ್ಟು ಮುಚ್ಚಿ ಸ್ತಬ್ದವಾದ ಮದ್ದೂರು ಪಟ್ಟಣ.
    - ಪೇಟೆ ಬೀದಿ ಅಂಗಡಿ ಮುಂಗಟ್ಟು ಕ್ಲೋಸ್.
    - ಪಟ್ಟಣದ ಎಲ್ಲ ಅಂಗಡಿ ಮುಗ್ಗಟ್ಟುಗಳು ಬಂದ್.
    - ಆಸ್ಪತ್ರೆ, ಮೆಡಿಕಲ್, ಹಾಲಿನ ಬೂತ್ ಓಪನ್.
    - ಕೆಲವೇ ಕ್ಷಣಗಳಲ್ಲಿ ಮದ್ದೂರು ಪಟ್ಟಣಾದ್ಯಂತ ಪ್ರತಿಭಟನೆಯ ರ‌್ಯಾಲಿ ಆರಂಭ.

     

  • ಮಂಡ್ಯ ಬ್ರೇಕಿಂಗ್:
    ತಮಿಳುನಾಡು ಸಿಎಂ ಸ್ಟಾಲಿನ್ ಭಾವಚಿತ್ರ ಹಿಡಿದು ತಮ್ಮ ಕೈ ಕೊಯ್ದುಕೊಂಡು ಆಕ್ರೋಶ ವ್ಯಕ್ತಪಡಿಸ್ತಿದ್ದ ಪ್ರತಿಭಟನಾಕಾರರು 
    ಸ್ಟಾಲಿನ್ ಭಾವಚಿತ್ರ ಕಿತ್ತೊಯ್ದ ಪೊಲೀಸರು.
    ಮಂಡ್ಯದ ಸಂಜಯ ವೃತ್ತದಲ್ಲಿ ಘಟನೆ.
    ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರ ಪ್ರತಿಭಟನೆ ವೇಳೆ ಘಟನೆ.

  • ದೇವನಹಳ್ಳಿ..ಬ್ರೇಕಿಂಗ್ 
    >> ಸಂಪೂರ್ಣ ಕರ್ನಾಟಕ ಬಂದ್ ಹಿನ್ನಲೆ
    >> ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಎನ್.ಶಿವಶಂಕರ್ ಆದೇಶ
    >> ಇಂದು ಬಸ್ ಸಂಚಾರ ಸ್ಥಗಿತ
    >> ಶಾಲೆ ಕಾಲೇಜುಗಳಿಗೆ ಶಿಕ್ಷಕ ಶಿಕ್ಕರ ಸಂಚಾರ ಕಷ್ಟ
    >> ವಿದ್ಯಾರ್ಥಿಗಳು ಸಹ‌ ಶಾಲೆ ಕಾಲೇಜುಗಳಿಗೆ ಬರುವುದು ಕಷ್ಟ
    >> ಯಾರಿಗೂ ಯಾವುದೇ ಅಹಿತಕರ ಘಟನೆ ಆಗದಿರಲಿ ಎಂಬ ಮುನ್ನೆಚ್ಚರಿಕೆ ಹಿನ್ನಲೆ
    >> 29-09-2023ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಶಾಲಾ ಕಾಲೇಜುಗಳಿಗೆ ರಜೆ
    >> ರಜೆ ಘೋಷಿಸಿ ಆದೇಶಿಸಿರುವ ಜಿಲ್ಲಾಧಿಕಾರಿ ಎನ್.ಶಿವಶಂಕರ್..

     

  • ಕಾವೇರಿಗಾಗಿ ಕರ್ನಾಟಕ ಬಂದ್..!  ಸ್ಯಾಂಡಲ್ ವುಡ್ ನಿಂದ ಸಂಪೂರ್ಣ ಬೆಂಬಲ:
    ಶೂಟಿಂಗ್ ಸ್ಥಗಿತ, ಸಿನಿಮಾ ಪ್ರದರ್ಶನಕ್ಕೆ ಬ್ರೇಕ್
    ಫಿಲ್ಮ್ ಚೇಂಬರ್, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ವಿತರಕರ ಸಂಘ, ಪ್ರದರ್ಶಕರ ಸಂಘ, ಕಿರುತೆರೆ ಕಲಾವಿದರ ಸಂಘದಿಂದಲೂ ಬಂದ್ ಗೆ ಬೆಂಬಲ

  • ರೈತರಿಗೆ ಮೋಸ ಮಾಡಿದ ಸರ್ಕಾರವೆಂದು ಕಿವಿ ಮೇಲೆ ಹೂವಿಟ್ಟುಕೊಂಡು ಪ್ರತಿಭಟನೆ 

    COMMERCIAL BREAK
    SCROLL TO CONTINUE READING

    ಚಾಮರಾಜನಗರ:  ಕರೆ ನೀಡಿರುವ ಕರ್ನಾಟಕ ಬಂದ್ ಗೆ ಗಡಿಜಿಲ್ಲೆ ಚಾಮರಾಜನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ರೈತರು, ಕನ್ನಡಪರ ಸಂಘಟನೆಗಳು, ದಲಿತಪರ ಹೋರಾಟಗಾರರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ  ಚಾಮರಾಜನಗರದ ಭುವನೇಶ್ವರಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ, ಷರೀಫ್ ವೃತ್ತ, ಗುಂಡ್ಲುಪೇಟೆ ವೃತ್ತ, ಸಂತೇಮರಹಳ್ಳಿ ವೃತ್ತ, ಅಂಗಡಿ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಆಕ್ರೋಶ ಹೊರಹಾಕಿದರು. ಗುಂಡ್ಲುಪೇಟೆ ವೃತ್ತದಲ್ಲಿ ಸತ್ತೊದ್ರಪ್ಪ, ಸತ್ತೋದ್ರಪ್ಪ ಎಂದು ಎಂಪಿಗಳು, ಶಾಸಕರು, ಸಚಿವರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ನೃತ್ಯ ಮಾಡಿದರು. ಸಂತೇಮರಹಳ್ಳಿ ವೃತ್ತದಲ್ಲಿ ಕಿವಿ ಮೇಲೆ ಗುಲಾಬಿ ಹೂಗಳನ್ನು ಇಟ್ಟುಕೊಂಡು  ರೈತರ ಕಿವಿ ಮೇಲೆ ಹೂವಿಡುವ ಸರ್ಕಾರ ಎಂದು ಆಕ್ರೋಶ ಹೊರಹಾಕಿದರು.
     

  • ಕೊಪ್ಪಳದಲ್ಲಿ ಕಾವೇರಿ ಕಿಚ್ಚು: 
    ರಾಷ್ಟ್ರೀಯ ಹೆದ್ದಾರಿಯಲ್ಲಿ  ಕನ್ನಡ ಪರ ಸಂಘಟನೆ ಪ್ರತಿಭಟನೆ..
    ಹೆದ್ದಾರಿಯಲ್ಲಿ ಉರಳು ಸೇವೆ ಮಾಡಿ ಪ್ರತಿಭಟನೆ ಮಾಡಿದ ಹೋರಾಟಗಾರರು..
    ರಾಷ್ಟ್ರೀಯ ಹೆದ್ದಾರಿ 50  ರಲ್ಲಿ ಕಾವೇರಿಗಾಗಿ ಪ್ರತಿಭಟನೆ..
    ಬೆಳ್ಳಂಬೆಳ್ಳಗ್ಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕನ್ನಡ ಸಂಘಟನೆಗಳ ಹೋರಾಟ..
    ತಮಿಳುನಾಡಿನ ಲಾರಿ ತಡೆದು ಪ್ರತಿಭಟನೆ..
    ಪ್ರತಿಭಟನೆ ಮಾಡ್ತಿದ್ದಂತ್ತೆ ಪೊಲೀಸರ ಆಗಮನ..
    ಪ್ರತಿಭಟನೆಗೆ ನಿರ್ಬಂಧ ಏರಿದ ಪೊಲೀಸರು..
    ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು..

  • ಮಂಡ್ಯದಲ್ಲಿ ಶುರುವಾಯ್ತು ಕಾವೇರಿ ಕಿಚ್ಚು.
    ಅಖಂಡ ಕರ್ನಾಟಕ ಬಂದ್ ಹಿನ್ನೆಲೆ.
    ಮಂಡ್ಯದಲ್ಲಿ ಆರಂಭಗೊಂಡ ಪ್ರತಿಭಟನೆ.
    ಮಂಡ್ಯದ ಸಂಜಯ ಸರ್ಕಲ್ ನಲ್ಲಿ ಪ್ರತಿಭಟನೆ.
    ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ
    ಹೆದ್ದಾರಿಯಲ್ಲಿ ಕುಳಿತು ಆಕ್ರೋಶ.

  • ಇಂದು ಕರ್ನಾಟಕ ಬಂದ್ ಹಿನ್ನೆಲೆ:
    ಕಲಬುರ್ಗಿಯಲ್ಲಿ ಬೆಳ್ಳಂಬೆಳಿಗ್ಗೆ ಪ್ರತಿಭಟನೆಗೆ ಇಳಿದ ಹೋರಾಟಗಾರರು
    ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಪ್ರತಿಭಟನೆ 
    ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ
    ತಮಿಳುನಾಡಿಗೆ ಕಾವೇರಿ ನೀರು ನಿಲ್ಲಿಸುವಂತೆ ಪ್ರತಿಭಟನಾಕಾರರ ಒತ್ತಾಯ
    ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ 
    ಮುನ್ನೆಚ್ಚರಿಕೆಯಾಗಿ ಕೇಂದ್ರ ಬಸ್ ನಿಲ್ದಾಣದ ಬಳಿ ಬಿಗಿ ಪೊಲೀಸ್ ಬಂದೋಬಸ್ತ
    ನಗರದಲ್ಲಿ ವಾಹನಗಳ ಓಡಾಟ ಹಾಗೂ ಬಸ್ ಸಂಚಾರ ಸುಗಮ
    ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು
    ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನೆ ಮಾಡುತ್ತಿದ್ದ ಹೋರಾಟಗಾರರು
    ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರನ್ನು ವಶಕ್ಕೆ ಪಡೆದ ಪೊಲೀಸರು

  • ಅತ್ತಿಬೆಲೆ ಗಡಿಯಲ್ಲಿ ಹೈ ಅಲರ್ಟ್:
    ಪೊಲೀಸರಿಂದ ಗಡಿಯಲ್ಲಿ ಕಟ್ಟೆಚ್ಚರ
    ಸುಮಾರು ನೂರಕ್ಕೂ ಅಧಿಕ ಮಂದಿ ಪೊಲೀಸರ ನಿಯೋಜನೆ
    ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್
    ಬೆಂಗಳೂರು ಗ್ರಾಮಾಂತರ ಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ

  • ಹುಬ್ಬಳ್ಳಿ - ಕಾವೇರಿಗಾಗಿ ಇಂದು ಕರ್ನಾಟಕ ಬಂದ್ ಹಿನ್ನೆಲೆ
    - ಹೋರಾಟ ಮಾಡದಂತೆ ಹೋರಾಟಗಾರರಿಗೆ ಪೊಲೀಸರಿಂದ ನೋಟಿಸ್ ಜಾರಿ
    - ತಮಿಳುನಾಡಿಗೆ ನೀರು ಹರಿಸುವಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ಇದೆ
    - ನ್ಯಾಯಾಲಯದ ಆದೇಶ ಪಾಲಿಸಲು ಸೂಚನೆ
    - ಏನಾದರೂ ಅವಘಡ ಆದರೆ ಹೋರಾಟಗಾರರೇ ಹೊಣೆ
    - ಆದರೂ ರಸ್ತೆಗೆ ಇಳಿಯುವ ಹೋರಾಟಗಾರರು

  • ಮಂಡ್ಯದಲ್ಲಿ ನಿಷೇಧಾಜ್ಞೆ ಜಾರಿ.
    - ಇಂದು ಅಖಂಡ ಕರ್ನಾಟಕ ಬಂದ್ ಹಿನ್ನೆಲೆ ಮಂಡ್ಯ ಉಪವಿಭಾಗ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ.
    - 144 ಸೆಕ್ಷನ್ ಜಾರಿ ಮಾಡಿ ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಆದೇಶ.
    - ಮಂಡ್ಯ ಜಿಲ್ಲೆಯಾದ್ಯಂತ ವಿವಿಧ ಸಂಘಟನೆಗಳಿಂದ ಬಂದ್ ಕರೆ ಹಿನ್ನೆಲೆ.
    - ಮಂಡ್ಯ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿ.
    - ಮೈ-ಬೆಂ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಹಾಗೂ ರೈಲುಗಳು ಸಂಚರಿಸುವ ನಿಟ್ಟಿನಲ್ಲಿ.
    - ಇಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿ. 
    - ಮೈ-ಬೆಂ ರಾಷ್ಟ್ರೀಯ ಹೆದ್ದಾರಿ ಮದ್ದೂರು ತಾಲ್ಲೂಕಿನ ನಿಡಘಟ್ಟ ಬಾರ್ಡರ್ ನಿಂದ - - - ಮಂಡ್ಯ ತಾಲ್ಲೂಕಿನ ತೂಬಿನಕೆರೆ ಬಾರ್ಡರ್ ವರೆಗೆ ನಿಷೇಧ.

  • ವಿಜಯನಗರಕ್ಕೆ ತಟ್ಟದ ಬಂದ್ ಬಿಸಿ: 
    >> ಬೆಳ್ಳಂ- ಬೆಳಗ್ಗೆ ಜನಜೀವನ ಯಥಾಸ್ಥಿತಿ 
    >> ವಿಜಯನಗರ ಜಿಲ್ಲೆಯಲ್ಲಿ ಕೇವಲ ಪ್ರತಿಭಟನೆಗೆ ಸೀಮಿತವಾಗುತ್ತೆ ಬಂದ್ ಕರೆ 
    >> ಇಂದು ಬೆಳಗ್ಗೆ 11 ಗಂಟೆಗೆ ಹೊಸಪೇಟೆಯ ಗಾಂಧಿ ಚೌಕ್ ನಿಂದ ಡಾ. ಪುನೀತ್ ರಾಜ್‍ಕುಮಾರ್ ವೃತ್ತದವರೆಗೆ ಮೆರವಣಿಗೆ 
    >> ರೈತ, ಕನ್ನಡ, ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ 
    >> ಶಾಲಾ/ ಕಾಲೇಜು, ಅಂಗಡಿ ಮುಗ್ಗಟ್ಟು, ವ್ಯಾಪಾರ, ಆಸ್ಪತ್ರೆ ಎಂದಿನಂತೆ 
    >> ಎಂದಿನಂತೆ ಬೆಳಗ್ಗೆಯೇ ಬಸ್ ಗಳು ಕೆಲಸ ಪ್ರಾರಂಭ
    >> ಆಟೋ ಸಂಚಾರ ಎಂದಿನಂತೆ

  • Karnataka Bandh Live Updates:
    ಮೆಜೆಸ್ಟಿಕ್ ನಲ್ಲಿ  ಬಸ್ ಗಳಿದ್ರೂ ಬಾರದ ಪ್ರಯಾಣಿಕರು
    ಮೆಜೆಸ್ಟಿಕ್ ನಲ್ಲಿ ಎಂದಿನಂತೆ ರಸ್ತೆಗಿಳಿದ ಬಸ್ ಗಳು
    ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ಗಳು ಸಂಚಾರ
    ರಾಜ್ಯದ ವಿವಿಧ ಭಾಗಕ್ಕೆ ಕೆಎಸ್ ಆರ್ ಸಿ ಬಸ್ ಗಳ ಕಾರ್ಯಾಚರಣೆ
    ನಗರದ ಎಲ್ಲಾ ಭಾಗಕ್ಕೂ ಬಿಎಂಟಿಸಿ ಬಸ್ ಗಳ ಕಾರ್ಯಾಚರಣೆ
    ಬೆಳಗ್ಗೆ ಐದು ಗಂಟೆಗೆ ನಗರದಲ್ಲಿ ಬಿಎಂಟಿಸಿ ಬಸ್ ಗಳ ಸಂಚಾರ ಆರಂಭ

  • ಚಾಮರಾಜನಗರ ಜಿಲ್ಲೆ ಬ್ರೇಕಿಂಗ್ :- 
    *ಪ್ರತಿಭಟನೆಯ ಮೂಲಕ ರಸ್ತೆಗೆ ಇಳಿದ ಜೆಡಿಎಸ್ ಕಾರ್ಯಕರ್ತರು. 

    COMMERCIAL BREAK
    SCROLL TO CONTINUE READING

    *ಸರ್ಕಾರಿ ಬಸ್ ನಿಲ್ದಾಣದ ಮುಂದೆ ಧರಣಿ ನಡೆಸುತ್ತಿರುವ ಪ್ರತಿಭಟನಾಕಾರರು. 

    *ಸಂಪೂರ್ಣವಾಗಿ  ಸ್ಥಗಿತವಾಗಿರುವ ಕೆಎಸ್ ಆರ್.ಟಿಸಿ ಬಸ್ ನಿಲ್ದಾಣ. 

    *ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ‌ ನಡೆಸುತ್ತಿರುವ ಪ್ರತಿಭಟನಾಕಾರರು.

  • ಕರ್ನಾಟಕ ಬಂದ್ ಹಿನ್ನೆಲೆ: ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಹೈ ಸೆಕ್ಯೂರಿಟಿ
    >> ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ
    >> ನಾಲ್ಕು ರಿಸರ್ವ್ ವ್ಯಾನ್, ಒಂದು ವಾಟರ್ ಜೆಟ್ ಸೇರಿ ನೂರಕ್ಕು ಹೆಚ್ಚು ಪೊಲೀಸರ ನಿಯೋಜನೆ
    >> ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿರುವ ಪೊಲೀಸ್ ಇಲಾಖೆ
    >> ಟೌನ್ ಹಾಲ್ ನಿಂದ ಪ್ರತಿಭಟನಾ ಮೆರವಣಿಗೆ ಹಿನ್ನೆಲೆ
    >> ಮೈಸೂರು ಬ್ಯಾಂಕ್ ಸರ್ಕಲ್ ಬಳಿಯೇ ತಡೆ ಇಡಿಯಲಿರುವ ಪೊಲೀಸರು
    >> ಪ್ರತಿಭಟನಾಕಾರರನ್ನ ಬಂಧಿಸಲು ಈಗಾಗಲೇ ಸಿದ್ದತೆ
    >> ನೂರಾರು ಪೊಲೀಸರನ್ನ ಸ್ಥಳದಲ್ಲಿ ನಿಯೋಜನೆ
    >> ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಇಪ್ಪತ್ತಕ್ಕೂ ಹೆಚ್ಚು ಬಿಎಂಟಿಸಿ ಬಸ್ ಗಳ ನಿಯೋಜನೆ
    >> ಪ್ರತಿಭಟನಾಕಾರರನ್ನ ತಡೆದು ಬಸ್ ಗಳಲ್ಲಿ ಬಂಧಿಸಿ ಕರೆದೊಯ್ಯಲು ಫ್ಲ್ಯಾನ್

  • ಕೋಲಾರ ಬ್ರೇಕಿಂಗ್: 
    ಕಾವೇರಿಗಾಗಿ ಅಖಂಡ ಕರ್ನಾಟಕ ಬಂದ್ ಹಿನ್ನೆಲೆ.
    ಕೋಲಾರ ಜಿಲ್ಲೆಯಲ್ಲಿ ಬಂದ್ ಗೆ ಉತ್ತಮ ಬೆಂಬಲ.
    ಅಂಗಡಿ ಮುಂಗಟ್ಟು ಮುಚ್ಚಿ ಬಂದ್.
    ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್.

  • ಆನೇಕಲ್ ಬ್ರೇಕಿಂಗ್: 
    - ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ
    - ರಾಜ್ಯ ಗಡಿಭಾಗ ಸೋಲೂರು ಗಡಿಭಾಗದಲ್ಲಿ ಪ್ರತಿಭಟನೆ
    - ಆನೇಕಲ್ ತಾಲ್ಲೂಕಿನ ಗಡಿಭಾಗ ಸೋಲೂರು
    - ಕರವೇ ಶಿವರಾಮೇಗೌಡ ಬಣದಿಂದ ಪ್ರತಿಭಟನೆ ಆರಂಭ
    - ರಸ್ತೆ ತಡೆ ನಡೆಸಿ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರ ಆಕ್ರೋಶ
    - ಟೈರ್ಗೆ ಬೆಂಕಿ ಹಚ್ಚಿ ಧಿಕ್ಕಾರವನ್ನ ಕೂಗಿ ಆಕ್ರೋಶ ಹೊರಹಾಕುತ್ತಿರುವ ಹೋರಾಟಗಾರರು
    - ಕಾವೇರಿ ನೀರು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಹರಿಸಬಾರದು ಎಂದು ಪ್ರತಿಭಟನೆ.

  • ಇಂದು ಅಖಂಡ 'ಕರ್ನಾಟಕ ಬಂದ್': ಕಾವೇರಿ ನೀರಿಗಾಗಿ ಒಂದೇ ಸೂರಿನಡಿ 'ಸ್ಯಾಂಡಲ್ ವುಡ್'- ಶಿವರಾಜ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ
    * 'ಕಾವೇರಿ ನಮ್ಮದು' ಎಂಬ ಚಿತ್ರರಂಗದ ಘೋಷಣೆ
    * ಪ್ರತಿಭಟನೆಗೆ ಎಲ್ಲಾ ಸ್ಟಾರ್ ಗಳು ಬರ್ತಾರಾ ಎಂಬ ಪ್ರಶ್ನೆ..!
    * ಫಿಲಂ ಚೇಂಬರ್ ಮುಂದೆ ಸ್ಟಾರ್ ಗಳ ಪ್ರತಿಭಟನೆ
    * ಕಾವೇರಿ ನೀರಿಗಾಗಿ ಚಿತ್ರರಂಗದ ಪ್ರತ್ಯೇಕ ಹೋರಾಟ
    * 'ಕರ್ನಾಟಕ ಬಂದ್'ಗೆ ನಟ-ನಟಿಯರ ಬೆಂಬಲ
    * ರಾಜ್ಯದ್ಯಂತ ಥಿಯೇಟರ್ ಗಳು ಬಂದ್
    * ಇಂದು ಯಾವುದೇ ಸಿನಿಮಾ ಪ್ರದರ್ಶನವಿಲ್ಲ
    * ಸಂಜೆಯ ನಂತರ ಶೋಗಳು ಚಾಲೂ
    * ಶೂಟಿಂಗ್, ಸ್ಟುಡಿಯೋ ಹಾಗೂ ಚಿತ್ರರಂಗದ ಎಲ್ಲ ಕೆಲಸಗಳು ಸ್ಥಗಿತ
    * ರ್‍ಯಾಲಿಯಲ್ಲಿ ಪಾಲ್ಗೊಳ್ಳಲಿರುವ ನಟರು
    * ಕಾವೇರಿ ಹೋರಾಟಕ್ಕೆ ಚಿತ್ರೋದ್ಯಮದ ಬಲ
    * ಫಿಲಂ ಚೇಂಬರ್ ನಿಂದ ಟೌನ್ ಹಾಲ್ ವರೆಗೆ ರಾಲಿ
    * ಚಿತ್ರರಂಗದ ಪ್ರತಿಭಟನೆಯನ್ನು ಮುನ್ನಡೆಸಲಿರೋ ಶಿವಣ್ಣ

  • ಇಂದು ಕರ್ನಾಟಕ ಬಂದ್ ಹಿನ್ನೆಲೆ..
    - ಬಂದ್ ಕಂಟ್ರೋಲ್ ಗೆ ರೆಡಿಯಾಗಿರೋ ಪೊಲೀಸ್ ಇಲಾಖೆ..
    - ಬೆಳ್ಳಂ ಬೆಳಗ್ಗೆ ಫಿಲ್ಡಿಗಿಳಿದಿರೋ ಪೊಲೀಸರು..
    - ಫ್ರೀಡಂ ಪಾರ್ಕ್ ಬಳಿ ಪೊಲೀಸ್ ಬಿಗಿ ಬಂದೋಬಸ್ತ್..
    - ಬೇರೆ ಬೇರೆ ಕಡೆ ಪ್ರತಿಭಟನೆ ಮಾಡೋರನ್ನ ಫ್ರೀಡಂ ಪಾರ್ಕ್ ಗೆ ಕರೆತರಲಿರೋ ಪೊಲೀಸರು..
    - ಬೇರೆ ಕಡೆ ಪ್ರತಿಭಟನೆಗೆ ಅವಕಾಶ ನೀಡದ ಹಿನ್ನೆಲೆ..
    - ಎಲ್ಲರನ್ನೂ ವಶಪಡೆದು ಫ್ರೀಡಂ ಪಾರ್ಕ್ ಬಳಿ ಕರೆ ತರಲಿರೋ ಪೊಲೀಸರು..

  • ಗದಗ ಜಿಲ್ಲೆಯಲ್ಲಿ ಬಹುತೇಕ ಬಂದ್ ಆಚರಣೆ ಇಲ್ಲ:

    • COMMERCIAL BREAK
      SCROLL TO CONTINUE READING

      ಇಂದು ಕರ್ನಾಟಕ ಬಂದ್ ಹಿನ್ನೆಲೆ

    • ವಿವಿಧ ಸಂಘಟನೆಗಳಿಂದ ಪ್ರತಿಭಟನೆ

    • ರೈತ ಸಂಘಟನೆಗಳು ಕನ್ನಡಪರ ಸಂಘಟನೆಗಳಿಂದ ಸಾಂಕೇತಿಕವಾಗಿ ಪ್ರತಿಭಟನೆ

    • ಜಿಲ್ಲೆಯಲ್ಲಿ ಬಹುತೇಕ ಬಂದ್ ಆಚರಣೆ ಇಲ್ಲ

    • ಕೆ‌ಎಸ್‌ಆರ್‌ಟಿ‌ಸಿ, ಆಟೋ, ಗೂಡ್ಸ್, ಶಾಲಾ ಕಾಲೇಜು, ಹೊಟೆಲ್ ಯಥಾಸ್ಥಿತಿ

    • ಗದಗ ಜಿಲ್ಲೆಯಲ್ಲಿ ಬಹುತೇಕ ಬಂದ್ ಬಿಸಿ ತಟ್ಟೋದಿಲ್ಲ

    • ಜಿಲ್ಲೆಯಲ್ಲಿ ಬಲವಂತವಾಗಿ ಬಂದ್ ಆಚರಣೆ ಮಾಡುವಂತಿಲ್ಲ ಅಂತ ಗದಗ ಡಿಸಿ ಖಡಕ್ ಎಚ್ಚರಿಕೆ

  • ಚಿಕ್ಕೋಡಿ ಬ್ರೇಕಿಂಗ್
    - ಕಾವೇರಿ ನದಿ ನೀರು ವಿಚಾರವಾಗಿ ಇಂದು ಕರ್ನಾಟಕ ಬಂದ್ ವಿಚಾರ-
    - ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಬಂದ್‌ಗೆ ಇಲ್ಲ ಸಂಪೂರ್ಣ ಬೆಂಬಲ
    - ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ, ರಾಯಬಾಗ, ಕಾಗವಾಡ, ಅಥಣಿಯಲ್ಲಿ ಎಂದಿನಂತೆ ಜನಜೀವನ
    - ಚಿಕ್ಕೋಡಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು, ಖಾಸಗಿ ವಾಹನಗಳ ಸಂಚಾರ ಯಥಾಸ್ಥಿತಿ
    - ಕಾವೇರಿ ಹೋರಾಟ ಬೆಂಬಲಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲಿರುವ ಕೆಲ ಸಂಘಟನೆಗಳು
    - ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಿರುವ ಕನ್ನಡಪರ, ರೈತಪರ ಸಂಘಟನೆಗಳು

  • ಕೋಲಾರ ಬ್ರೇಕಿಂಗ್
    ಬೆಂಕಿಗೆ ನೀರು ಸುರಿದ ಪೊಲೀಸರು.
    ಕೋಲಾರ ಬಸ್‌ ನಿಲ್ದಾಣದ ವೃತ್ತದಲ್ಲಿ ಟೈರ್ ಗೆ ಬೆಂಕಿಯಿಟ್ಟು ಪ್ರತಿಭಟನೆ ಮಾಡುತ್ತಿದ್ದ ಪ್ರತಿಭಟನಾಕಾರರು.
    ಸ್ಥಳಕ್ಕೆ‌ ಆಗಮಿಸಿದ ಪೊಲೀಸರು ಬೆಂಕಿಗೆ‌ ನೀರು ಸುರಿದು ಬೆಂಕಿ ನಂದಿಸಿದರು.
    ಕರ್ನಾಟಕ ಬಂದ್ ಗೆ‌ ಬೆಂಬಲ‌ ವ್ಯಕ್ತಪಡಿಸಿ ರಸ್ತೆಗಳಿದ ಪ್ರತಿಭಟನಾಕಾರರು.
    ಟೈರ್ ಗೆ ಬೆಂಕಿ‌ ಹಚ್ಚಿ ಆಕ್ರೋಶ.
    ಕನ್ನಡ‌ ಸೇನೆ,‌ರೈತ ಸಂಘ, ನೀರಾವರಿ ಹೋರಾಟ ಸಮಿತಿ, ಸೇರಿದಂತೆ‌ ಅನೇಕ‌ ಪ್ರಗತಿಪರ‌ ಸಂಘಟನೆಗಳು ಬೆಂಬಲ.

  • ಚಾಮರಾಜನಗರ: ತಮಟೆ ಬಾರಿಸಿ ರಸ್ತೆ ತಡೆ, ಅರೆ ಬೆತ್ತಲೆ ಉರುಳುಸೇವೆ

    COMMERCIAL BREAK
    SCROLL TO CONTINUE READING

    ಚಾಮರಾಜನಗರ: ಕರ್ನಾಟಕ ಬಂದ್ ಹಿನ್ನೆಲೆ ಚಾಮರಾಜನಗರದಲ್ಲಿ ಇಂದು ಬೆಳಗ್ಗೆ 6 ರಿಂದಲೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಭುವನೇಶ್ವರಿ ವೃತ್ತದಲ್ಲಿ ಕಬ್ಬು ಬೆಳೆಗಾರರ ಸಂಘ,  ಕನ್ನಡಪರ ಸಂಘಟನೆಗಳು ರಸ್ತೆ ತಡೆ ನಡೆಸಿ ತಮಿಳುನಾಡು ಹಾಗೂ ರಾಜ್ಯ ಸರ್ಜಾರದ ವಿರುದ್ಧ ಆಕ್ರೋಶ ಹೊರಹಾಕಿದರು. 

    ರೈತ ಮುಖಂಡ ಹಳ್ಳಿಕೆರೆಹುಂಡಿ ಹುಂಡಿ ಭಾಗ್ಯರಾಜ್, ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಮಟೆ ಬಾರಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಅದಾದ ನಂತರ, ರಸ್ತೆ ಮಧ್ಯದಲ್ಲಿ ಅರೆಬೆತ್ತಲೆಯಾಗಿ ಉರುಳುಸೇವೆ ನಡೆಸಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಬಂದಪ್ಪ ಬಂದ್ದು-ಕರ್ನಾಟಕ ಬಂದ್ ಎಂದು ತಮಟೆ ಬಾರಿಸಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಪ್ರತಿಭಟನಾಕಾರರು ಧರಣಿ ನಡೆಸುತ್ತಿದ್ದಾರೆ.

  • ಕೋಲಾರ ಬ್ರೇಕಿಂಗ್: 
    ರಾಜ್ಯವ್ಯಾಪಿ ಬಂದ್ ಹಿನ್ನಲೆ, ಕೋಲಾರದಲ್ಲಿ ಟೈರ್ ಗೆ ಬೆಂಕಿ ಹಾಕಿ ಆಕ್ರೋಶ.
    ಕೋಲಾರದಲ್ಲಿ ಬಂದ್ ಗೆ ಬೆಂಬಲ.
    ಬೆಳಗ್ಗೆ 5.30 ಕ್ಕೆ ರಸ್ತೆಗಿಳಿದ ಸಂಘಟನೆಗಳು.
    ಕೋಲಾರ ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ.
    ಟೈರ್ ಗೆ ಬೆಂಕಿ ಹಾಕಿ ಪ್ರತಿಭಟನೆ.
    ಸರ್ಕಾರದ ವಿರುದ್ದ ದಿಕ್ಕಾರಗಳನ್ನ  ಕೂಗಿ ಆಕ್ರೋಶ.
    ಬೆಳಂಬೆಳಗ್ಗೆ ರಸ್ತೆಗಿಳಿದ ಬಸ್ ಹಾಗೂ ಅಟೋ ತಡೆದ ಪ್ರತಿಭಟನಾಕಾರರು.
    ಪ್ರತಿಭಟನೆಯಲ್ಲಿ ಹಲವು ಸಂಘಟನೆಗಳ ಮುಖಂಡರು ಭಾಗಿ.

  • ಧಾರವಾಡ: 
    ಕಾವೇರಿಗಾಗಿ ಕರ್ನಾಟಕ ಬಂದ್ ಹಿನ್ನೆಲೆ
    ಧಾರವಾಡದಲ್ಲಿ ಇಲ್ಲ ಬಂದ್ ಬಿಸಿ
    ಎಂದಿನಂತೆ ಆರಂಭಗೊಂಡ ಜನಜೀವನ
    ಎಂದಿನಂತೆ ಬಸ್, ಆಟೋ ಸಂಚಾರ
    ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ಬಸ್‌ಗಳ ಓಡಾಟ
    ಅವಳಿ ನಗರ ಮಧ್ಯದ ಖಾಸಗಿ ಬಸ್‌ಗಳ ಓಡಾಟ ಆರಂಭ
    ಬಿ.ಆರ್.ಟಿ.ಎಸ್ ಬಸ್ ಸೇವೆಯೂ ಆರಂಭ
    ಬೆಳಗ್ಗೆ 7ರ ನಂತರ ಆರಂಭಗೊಳ್ಳಲಿರೊ ಪ್ರತಿಭಟನೆ

  • ಕರ್ನಾಟಕ ಸಂಘಟನೆಗಳ ಒಕ್ಕೂಟದ‌ ಅಧ್ಯಕ್ಷ ಡಾ. ವಿಶ್ವನಾಥ್ ಜಿ.ಪಿ. ನೇತೃತ್ವದಲ್ಲಿ ಹೋರಾಟ
    - ರಸ್ತೆ ತಡೆ ಮೂಲಕ ಪೊರಕೆ ಚಳುವಳಿ, ತಮಿಳುನಾಡು ಸಿಎಂ ಸ್ಟಾಲಿನ್ ಗೆ ಚಪ್ಪಲಿ ಸೇವೆ 
    - ಬೆಳಗ್ಗೆ 7:30ಕ್ಕೆ ತುಮಕೂರು ರಾಷ್ಟ್ರೀಯ ಹೆದ್ದಾರಿ ತಡೆದು, 
    - ಪೊರಕೆ ಚಳುವಳಿ ಮತ್ತು ತಮಿಳುನಾಡು ಸಿಎಂ ಸ್ಟಾಲಿನ್ ಗೆ ಚಪ್ಪಲಿ ಸೇವೆ 
    - ಸ್ಥಳ: ಲಿಂಕ್ ರೋಡ್ ಸರ್ಕಲ್, (ಲುಲು ಮಾಲ್ ಸಮೀಪ) ರಾಜಾಜಿನಗರ, ಬೆಂಗಳೂರು.

  • ಬಿಎಂಟಿಸಿ ಬಸ್ ಸ್ಟ್ಯಾಂಡ್ ನಲ್ಲಿ ಕ್ರಿಕೆಟ್ ಆಟವಾಡಲಿರುವ ಕನ್ನಡಪರ ಹೋರಾಟಗಾರರು 
    - ಬೆಳಗ್ಗೆ ಏಳು ಗಂಟೆಗೆ ನಡೆಯಲಿರುವ ಪ್ರತಿಭಟನಾ ಕ್ರಿಕೆಟ್
    - ಮಾಜಿ ಫಿಲ್ಮ್ ಛೇಂಬರ್ ಅಧ್ಯಕ್ಷ, ಹಿರಿಯ ಕನ್ನಡಪರ ಹೋರಾಟಗಾರ ಸಾರಾ ಗೋವಿಂದು, ಕನ್ನಡಸೇನೆಯ ರಾಜ್ಯಾಧ್ಯಕ್ಷ ಕೆ.ಆರ್ ಕುಮಾರ್ ಹಾಗೂ ಗಿರೀಶ್ ಗೌಡ ಕ್ರಿಕೆಟ್ ಆಡಲಿದ್ದಾರೆ

  • ಟೋಲ್ ಗಳ ಬಳಿ ಪ್ರತಿಭಟನೆ:- 
    - ಬೆಂಗಳೂರು - ನೆಲಮಂಗಲ ಬಳಿಯ ನವಯುಗ ಟೋಲ್.
    - ಬೆಂಗಳೂರು - ದೇವನಹಳ್ಳಿ ಏರ್ಪೋಟ್ ಬಳಿಯ ಟೋಲ್.
    - ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ ವೇ ಬಳಿಯ ಕಣಮಿಣಕಿ ಟೋಲ್, ರಾಮನಗರ ಟೋಲ್, ಶ್ರೀರಂಗಪಟ್ಟಣ ಟೋಲ್.
    - ಮೈಸೂರು - ಊಟಿ ರಸ್ತೆ ಟೋಲ್.
    - ಟೀ ನರಸೀಪುರ ಟೋಲ್.
    - ಹಾಸನ - ಬೆಂಗಳೂರು ಹೆದ್ದಾರಿ ಟೋಲ್.
    - ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಟೋಲ್.

    COMMERCIAL BREAK
    SCROLL TO CONTINUE READING

    ಬೆಂಗಳೂರಿನ ದಿಕ್ಕು ದಿಕ್ಕಲ್ಲೂ ಹೆದ್ದಾರಿ ತಡೆಗೆ ಪ್ಲ್ಯಾನ್:-
    ಬೆಂಗಳೂರು ಸುತ್ತ ಪ್ರತಿಭಟನೆ ಚಕ್ರವ್ಯೂಹ ರಚನೆಗೆ ಕನ್ನಡ ಸಂಘಟನೆಗಳ ಸಿದ್ದತೆ
    ಇಂದು ನಗರ ಬಿಟ್ಟು ಬೇರೆ ಊರುಗಳಿಗೆ ಹೋಗುವವರಿದ್ರೆ ಹುಷಾರ್
    ಇತರೆ ಜಿಲ್ಲೆಗಳಿಂದ ಬೆಂಗಳೂರನ್ನ ಸಂಪರ್ಕಿಸೋ ಹೆದ್ದಾರಿಗಳನ್ನ ತಡೆಯಲು ಪ್ಲ್ಯಾನ್
    ಬೆಂಗಳೂರಿಗೆ ಸಂಪರ್ಕಿಸೋ ಯಾವೆಲ್ಲ ಹೆದ್ದಾರಿಗಳಲ್ಲಿ ಜೋರಾಗಲಿದೆ ಪ್ರತಿಭಟನೆ ಕಾವು

    - ಬೆಂಗಳೂರು - ಹೊಸುರು ಅತ್ತಿಬೆಲೆ ಬಳಿ.
    - ಬೆಂಗಳೂರು - ಮೈಸೂರು. ಕೆಂಗೇರಿ ಬಳಿ
    - ಬೆಂಗಳೂರು - ಮಂಗಳೂರು ನೆಲಮಂಗಲ ಬಳಿ ಹೈವೆ ಜಂಕ್ಷನ್
    - ಬೆಂಗಳೂರು - ಕನಕಪುರ. ಕೊಣನಕುಂಟೆ ಬಳಿ.
    - ಬೆಂಗಳೂರು - ದೇವನಹಳ್ಳಿ ಏರ್ಪೋಟ್ ರಸ್ತೆ.
    - ಬೆಂಗಳೂರು - ಆಂಧ್ರ ಹೆದ್ದಾರಿ

  • ಯಾವೆಲ್ಲ ಪ್ರಮುಖ ಹೆದ್ದಾರಿ ತಡೆಯುವ ಪ್ಲ್ಯಾನ್?
    - ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ ವೇ
    - ಹುಣಸನಹಳ್ಳಿ - ರಾಮನಗರ
    - ಮಂಡ್ಯ - ಹಾಸನ
    - ಬಂಗಾರಪೇಟೆ - ಕೋಲಾರ
    - ಜೇವರ್ಗಿ ಶ್ರೀರಂಗಪಟ್ಟಣ
    - ಚಿಕ್ಕಮಗಳೂರು - ಚಿತ್ರದುರ್ಗ
    - ದಾವಣಗೆರೆ - ಚಿಕ್ಕಮಗಳೂರು
    - ಕೊಡಗು - ಶಿವಮೊಗ್ಗ
    - ತುಮಕೂರು - ಮೈಸೂರು
    - ಚಾಮರಾಜನಗರ - ಈರೋಡು
    - ನಂಜನಗೂಡು - ಊಟಿ ರೋಡು
    - ಚಿತ್ರದುರ್ಗ - ಬೆಂಗಳೂರು ಗ್ರಾಮಾಂತರ

  • Karnataka Bandh Live Updates:
    ಹಲವು ರಸ್ತೆಗಳಲ್ಲಿ ಇಂದು ಸಾಲು ಸಾಲು ಪ್ರತಿಭಟನೆ:-

    >> ಕಾವೇರಿಗಾಗಿ ಸರ್ಕಾರದ ವಿರುದ್ಧ ಕನ್ನಡ ಪರ ಹೋರಾಟಗಾರರ ಬಂದ್ ಅಸ್ತ್ರ 
    >> ರಾಜ್ಯ ಬಂದ್ ಕರೆ ಕೊಟ್ಟಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್
    >> ವಾಟಾಳ್ ನಾಗರಾಜ್ ಕರೆಗೆ ಸಂಪೂರ್ಣ ರಾಜ್ಯ ಸ್ಥಬ್ಧ ಆಗುತ್ತಾ?
    >> ಇಂದು ಅಖಂಡ ಕರ್ನಾಟಕ ಬಂದ್.. ಬಂದ್.. ಬಂದ್.. 
    >> ಕರುನಾಡಿನ ವ್ಯಾಪಿ ಪಸರಿಸಲಿದೆ ಕಾವೇರಿಗಾಗಿ ಬಂದ್ ನಾ ಕಿಚ್ಚು
    >> ಇಂದು ಮಹಾ ದಿಗ್ಭಂದನಕ್ಕೆ ಕನ್ನಡ ಸಂಘಟನೆಗಳ ಪ್ಲ್ಯಾನ್
    >> ರಸ್ತೆ ರಸ್ತೆಯಲ್ಲೂ ಕಾವೇರಲಿದೆ ಕಾವೇರಮ್ಮನಿಗಾಗಿ ಹೋರಾಟದ ಕಿಚ್ಚು
    >> ಇಂದು ಟೋಲ್ ಗೇಟ್, ರಾಷ್ಟ್ರೀಯ ಹೆದ್ದಾರಿಗಳನ್ನ ತಡೆಯಲು ಹೋರಾಟಗಾರರ ಪ್ಲ್ಯಾನ್
    >> ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲೇ ಪ್ರತಿಭಟಿಸೋಕೆ ಕನ್ನಡ ಸಂಘಟನೆಗಳ ತಯಾರಿ

  • ಕೋಲಾರ ಬ್ರೇಕಿಂಗ್: 
    ಕಾವೇರಿಗಾಗಿ ಕರ್ನಾಟಕ ಬಂದ್ ಹಿನ್ನಲೆ.
    ಕೋಲಾರದಿಂದ ಕೆ.ಎಸ್.ಆರ್.ಟಿ.ಸಿ ಸಂಚಾರ ಆರಂಭ.
    ಮುಂಜಾನೆ ಬಸ್ ಗಳ ಸಂಚಾರ ಎಂದಿನಂತೆ ಆರಂಭ.
    ಬೆಂಗಳೂರು ಮುಳಬಾಗಿಲು, ಶ್ರೀನಿವಾಸಪುರ, ಕೆ ಜಿ ಎಫ್ ಕಡೆಗೆ ಸಂಚಾರ ಆರಂಭಿಸಿದ ಬಸ್ ಗಳು.

    COMMERCIAL BREAK
    SCROLL TO CONTINUE READING

    ಆಟೋ ಸಂಚಾರ ಆರಂಭ.
    ಸ್ಥಳಕ್ಕೆ ಬಾರದ ಪ್ರತಿಭಟನಾಕಾರರು.
    ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ. 
    ಜಿಲ್ಲೆಯಲ್ಲಿ ಯಾವುದೇ ಸೆಕ್ಷನ್ ಜಾರಿಯಾಗಿಲ್ಲ. 
    ಬಲವಂತದ ಬಂದ್ ಮಾಡಬಾರದೆಂದು ಎಸ್ಪಿ ನಾರಾಯಣ್ ಸೂಚನೆ.

  • ಕರ್ನಾಟಕ ಬಂದ್ ಆದರೂ ಸಿಲಿಕಾನ್ ಸಿಟಿಯಲ್ಲಿ ಎಂದಿನಂತೆ ಇರಲಿದೆ ನಮ್ಮ ಮೆಟ್ರೋ ಸೇವೆ
    * ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲೂ ಇರಲಿದೆ‌ ಮೆಟ್ರೋ ಸೇವೆ
    * ಎಂದಿನಂತೆ ಬೆಳಗ್ಗೆ 6 ಗಂಟೆಗೆ ಮೆಟ್ರೋ ಸೇವೆ ಆರಂಭ
    * ನಮ್ಮ ಮೆಟ್ರೋ ನಿಗಮದಿಂದ ಪ್ರಕಟಣೆ

  • ಕರ್ನಾಟಕ ಬಂದ್  ಹಿನ್ನಲೆ ದಾವಣಗೆರೆ ವಿಶ್ವ ವಿದ್ಯಾಲಯದ ಪರೀಕ್ಷೆಗಳು ಮುಂದೂಡಿಕೆ:
    >> ದಾವಣಗೆರೆ ವಿವಿಯ ಸ್ನಾತಕೋತ್ತರ ಪದವಿ ಪರೀಕ್ಷೆಗಳು ಮುಂದೂಡಿಕೆ.
    >> ಸೆ.29 ರಂದು ನಡೆಯಬೇಕಿದ್ದ ಸ್ನಾತಕೋತ್ತರ ಪದವಿ ಪರೀಕ್ಷೆಗಳು.
    >> ಇಂದು ನಡೆಯಬೇಕಿದ್ದ ಪರೀಕ್ಷೆಗಳನ್ನ ಅ.1 ರಂದು ನಡೆಸಲು ವಿವಿ ನಿರ್ಧಾರ.

  • ಇವತ್ತು ಏನಿರುತ್ತೆ? ಏನಿರಲ್ಲ? 
    ಏನಿರುತ್ತೆ?

    • COMMERCIAL BREAK
      SCROLL TO CONTINUE READING

      ನಮ್ಮ ಮೆಟ್ರೋ

    • ವಿಮಾನ ಸೇವೆ

    • ರೈಲು ಸೇವೆ

    • ಅಂಚೆ ಕಚೇರಿ

    • ಕೆ‌ಎಸ್‌ಆರ್‌ಟಿ‌ಸಿ 

    • ಬಿ‌ಎಮ್‌ಟಿ‌ಸಿ

    • ಬಾರ್ (ಕೆಲವು ಕಡೆ ಇರಲ್ಲ)

    • ಮೆಡಿಕಲ್ 

    • ಆಂಬುಲೆನ್ಸ್

    • ಹಾಲಿನ ಅಂಗಡಿ

     ಏನಿರಲ್ಲ?

    • ಹೋಟೇಲ್ ಗಳು

    • ಸಿನಿಮಾ ಹಾಲ್

    • ಮಾಲ್ ಗಳು

    • ಆಟೋ, 

    • ಕ್ಯಾಬ್

    • ರಾಷ್ಟ್ರೀಯ ಹೆದ್ದಾರಿ ಬಂದ್ ಬೇಕರಿ 

    • ಓಲಾ ಉಬರ್

    • ಶಾಲೆ 

    • ಕಾಲೇಜು 

    • ಎಪಿಎಂಸಿ ಬಂದ್

    • ಆಟೋ

    • ಟ್ಯಾಕ್ಸಿ

    • ರೆಸ್ಟೋರೆಂಟ್

    • ಚಿತ್ರಮಂದಿರ 

    • ಸರಕು ಸಾಗಣೆ ವಾಹನ 

    • ಶಾಪಿಂಗ್ ಮಾಲ್ 

    • ಪೆಟ್ರೋಲ್ ಬಂಕ್

    • ಬೀದಿ ಬದಿ ವ್ಯಾಪಾರಿಗಳು

    • ಓಲಾ ಉಬರ್

    • ಖಾಸಗಿ ಶಾಲೆ

    • ಒಡವೆ ಅಂಗಡಿ

  • ಕನ್ನಡ ನಾಡಿನ ಜೀವನದಿಗಾಗಿ ಇಂದು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಬೆಂಗಳೂರು ಬಂದ್
    ಜೀವ ಜಲಕ್ಕಾಗಿ ಇಂದು ಇಡೀ ಕರುನಾಡು ಸ್ಥಬ್ಧ.. ಸ್ಥಬ್ದ.!
    ಕಾವೇರಿಗಾಗಿ ಇಂದು ಕರ್ನಾಟಕ ಬಂದ್ ಕರೆ ಕೊಟ್ಟ ವಾಟಾಳ್ ನಾಗರಾಜ್ ಒಕ್ಕೂಟ
    ಹೋಟೆಲ್  ಊಟ ನಂಬಿ ರಸ್ತೆಗೆ ಬಂದ್ರೆ ಹಸಿವು ಕಟ್ಟಿಟ್ಟ ಬುತ್ತಿ
    ನೀವು ರಸ್ತೆಗಿಳಿದು ಸಿಟಿ ಸುತ್ತಿ ಬರೋಣ ಅಂದ್ರೆ ಸರಿಯಾದ ಟೈಂಗೆ ಬಸ್ ಸಿಗೋದು ಡೌಟ್
    ಶಾಪಿಂಗ್ ಮಾಡೋಣ ಅಂತಾ ಮಾಲ್ ಹೋದ್ರೆ ಓಪನ್ ಇರೋದಿಲ್ಲ
    ಸಿನಿಮಾ ನೋಡೋಣ ಅಂತ ಅಂದುಕೊಂಡರೆ ಥಿಯೇಟರ್ ಓಪನ್ ಇರಲ್ಲ 

  • ಅಹಿತಕರ ಘಟನೆ ನಡೆಯದಂತೆ ನಗರದ  ಮತ್ತು ತಾಲೂಕಿನ  ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ....
    ರೈಲು ನಿಲ್ದಾಣ, ಬಸ್ ನಿಲ್ದಾಣ ಮತ್ತು ಮೈ ಬೆಂ ಹೆದ್ದಾರಿಗೆ ಬಿಗಿ ಪೊಲೀಸ್ ಬಂದೋಬಸ್ತ್.....
    ಬಂದ್ ವಿಫಲಗೊಳಿಸಲು ಪೊಲೀಸರಿಂದ  ರೈಲು ನಿಲ್ದಾಣ ಮತ್ತು ಮೈ-ಬೆಂ ಹೆದ್ದಾರಿಗೆ ನಿಷೇಧಾಜ್ಞೆ ಆದೇಶ..... 
    ಮೈ- ಬೆಂ ಹೆದ್ದಾರಿ ಮತ್ತು ರೈಲು ತಡೆ ನಡೆಸದಂತೆ ಪೊಲೀಸರಿಂದ ನಿಷೇಧಾಜ್ಞೆ ಅಸ್ತ್ರ....
    ಜಿಲ್ಲೆಯಾದ್ಯಂತ  ಎಲ್ಲಾ ತಾಲೂಕಿನಲ್ಲೂ ಕರ್ನಾಟಕ ಬಂದ್ ಗೆ ಉತ್ತಮ  ಬೆಂಬಲ...
    ತಾಲೂಕು ಕೇಂದ್ರಗಳಲ್ಲೂ ಬಂದ್ ಮಾಡಿ  ಪ್ರತಿಭಟನೆ ನಡೆಸಲು ಸಿದ್ದತೆ.....

  • ಬಂದ್ ನಿಂದ ಮೈ- ಬೆಂ ಹೆದ್ದಾರಿಯಲ್ಲಿ  ವಿರಳವಾದ ವಾಹನ ಸಂಚಾರ...
    ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ  ನಗರದ ರಸ್ತೆಗಳು...
    ಬಂದ್ ನಿಂದಾಗಿ ಜಿಲ್ಲೆಯಲ್ಲಿ ರಸ್ತೆಗೆ ಇಳಿಯದ ಕೆ‌ಎಸ್‌ಆರ್‌ಟಿ‌ಸಿ ಬಸ್ ಗಳು...
    ಬೆಳ್ಳಿಗ್ಗೆ 6  ಗಂಟೆಯಿಂದಲೇ ಬಂದ್ ಬೆಂಬಲಿಸಿ ಹೋರಾಟ ಕ್ಕಿಳಿಯಲು ಸಜ್ಜಾಗಿರುವ ಸಂಘಟನೆಗಳು..... 

  • ಕಾವೇರಿಗಾಗಿ ಕರ್ನಾಟಕ ಬಂದ್ ಗೆ ಕರೆ ಹಿನ್ನೆಲೆ.....
    ಕಾವೇರಿಗಾಗಿ ಕರ್ನಾಟಕ ಬಂದ್ ಗೆ ಸ್ತಬ್ಧವಾಗಲಿರೋ ಸಕ್ಕರೆ ಜಿಲ್ಲೆ....
    ಸಕ್ಕರೆ ನಾಡು ಮಂಡ್ಯದಲ್ಲಿ ಕರ್ನಾಟಕ ಬಂದ್ ಗೆ ಜನರ ಉತ್ತಮ ಪ್ರತಿಕ್ರಿಯೆ....
    ಕರ್ನಾಟಕ ಬಂದ್ ಬೆಂಬಲ ಸೂಚಿಸಿ ಅಂಗಡಿ ಬಾಗಿಲು ಮುಚ್ಚಿ ವರ್ತಕರ ಬೆಂಬಲ.....
    ಬಂದ್ ಗೆ ಬೆಂಬಲಿಸಿ ಬೋರ್ಡ್ ಹಾಕಿದ ನಗರದ ಹೋಟೇಲ್ ಗಳು, ಚಿತ್ರ ಮಂದಿರ ಗಳು.....
    ಜಿಲ್ಲಾಡಳಿತದಿಂದ ಈಗಾಗಲೇ ಜಿಲ್ಲಾದ್ಯಂತ ಶಾಲಾ ಕಾಲೇಜಿಗೆ ರಜೆ ಘೋಷಣೆ....

ZEENEWS TRENDING STORIES

By continuing to use the site, you agree to the use of cookies. You can find out more by Tapping this link