)
Lokayukta Raid: ಕೊಪ್ಪಳ ಜಿಲ್ಲೆಯ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕರಾದ ಶೇಕು ಚೌವ್ಹಾಣ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಅಧಿಕಾರಿಗಳು ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆಹಚ್ಚಿದ್ದು, ಅಧಿಕಾರಿಗಳನ್ನು ಬೆಚ್ಚಿಬೀಳುವಂತೆ ಮಾಡಿದೆ.
ಲೋಕಾಯುಕ್ತ ಇನ್ಸ್ಪೆಕ್ಟರ್ ಸುನೀಲ್ ಮೇಗಳಮನಿ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ 54 ಲಕ್ಷ ರೂ. ನಗದು, ಬ್ಯಾಂಕ್ ಖಾತೆಗಳಲ್ಲಿ 26 ಲಕ್ಷ ರೂ. ಬ್ಯಾಲೆನ್ಸ್, 750 ಗ್ರಾಂ ಬಂಗಾರ, 4 ಕೆ.ಜಿ ಬೆಳ್ಳಿ, 13 ಸೈಟ್, 7 ಎಕರೆ ಜಮೀನು ಹಾಗೂ ಕೊಪ್ಪಳ ಮತ್ತು ಹುಬ್ಬಳ್ಳಿಯಲ್ಲಿರುವ ಮನೆಗಳ ದಾಖಲೆಗಳು ಸಿಕ್ಕಿವೆ.
ಇದು ಅಷ್ಟೇ ಅಲ್ಲದೆ, ದಾಳಿಯಲ್ಲಿ ಚೌವ್ಹಾಣ್ ಅವರ ಹೆಸರಿನಲ್ಲಿ ನೊಂದಾಯಿತ ಕಾರು, ಬೈಕ್ ಸೇರಿ ಒಟ್ಟು ₹2.38 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಎಲ್ಲವೂ ಕಾನೂನುಬಾಹಿರವಾಗಿ ಗಳಿಸಲಾಗಿದೆ ಎಂಬ ಶಂಕೆಯ ಮೇಲೆ ತನಿಖೆ ಮುಂದುವರೆಯುತ್ತಿದೆ.
ಈ ದಾಳಿ ರಾಜ್ಯದ ಬೃಹತ್ ಮಟ್ಟದ ಭ್ರಷ್ಟಾಚಾರದ ಮತ್ತೊಂದು ಉದಾಹರಣೆ ಎಂಬಂತೆ ಹೊರಹೊಮ್ಮಿದ್ದು, ಶೇಖು ಚೌವ್ಹಾಣ್ ವಿರುದ್ಧ ಮುಂದಿನ ದಿನಗಳಲ್ಲಿ ಕ್ರಿಮಿನಲ್ ಪ್ರಕರಣದ ದಾಖಲಾತಿ ಸಾಧ್ಯತೆ ಇದೆ.