ಬೆಂಗಳೂರು: ನವೆಂಬರ್ ನಲ್ಲಿ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಆಗೋದು ಬಹುತೇಕ ಕನ್ಫರ್ಮ್ ಆಗಿದೆ.ಸಿಎಂ ಕೂಡ ಸುಳಿವು ಕೊಟ್ಟಿದ್ದಾರೆ.ಹಿರಿಯ ಸಚಿವರು ಮಂತ್ರಿಗಿರಿ ಉಳಿಸಿಕೊಳ್ಳಲು ಕಸರತ್ತು ನಡೆಸ್ತಿದ್ರೆ, ಸಚಿವ ಸ್ಥಾನದ ಆಕಾಂಕ್ಷಿಗಳು ಆ್ಯಕ್ಟೀವ್ ಆಗಿದ್ದಾರೆ.ಸಿಎಂ, ಡಿಸಿಎಂ ಕೈ ಕಾಲು ಹಿಡಿದು ಸಂಪುಟ ಸೇರಲು ತೀವ್ರ ಲಾಬಿ ಶುರು ಮಾಡಿದ್ದಾರೆ.
ನವೆಂಬರ್ ನಲ್ಲಿ ಸಂಪುಟ ಪುನರ್ ರಚನೆ ಫಿಕ್ಸ್ ಆದಂತೆ ಕಾಣ್ತಿದೆ.ಖುದ್ದು ಸಿಎಂ ಸಿದ್ದರಾಮಯ್ಯ ಅವ್ರೇ ಸುಳಿವು ಬಿಟ್ಟುಕೊಟ್ಟಿದ್ದಾರೆ.ಬಿಹಾರ ಎಲೆಕ್ಷನ್ ಆದ್ಮೇಲೆ ನೋಡೋಣ ಅಂತಾ ಸಿಎಂ ಹೇಳಿದ್ದಾರೆ.ಸದ್ಯ ಡಜನ್ ಗೂ ಹೆಚ್ಚು ಸಚಿವರನ್ನ ಕೈ ಬಿಡಲು ಹೈಕಮಾಂಡ್ ಚಿಂತನೆ ನಡೆಸಿದ್ದು, ತಮ್ಮ ಸ್ಥಾನ ಉಳಿಸಿಕೊಳ್ಳಲು ಸಚಿವರು ಪರದಾಡ್ತಿದ್ದಾರೆ..ಮತ್ತೊಂದೆಡೆ ಸಚಿವ ಸ್ಥಾನದ ಆಕಾಂಕ್ಷಿಗಳು ಆ್ಯಕ್ಟೀವ್ ಆಗಿದ್ದು, ಸಿಎಂ,ಡಿಸಿಎಂ ಹಾಗೂ ಹೈಕಮಾಂಡ್ ನಾಯಕರನ್ನ ನಾ ಮುಂದು, ತಾ ಮುಂದು ಎಂದು ಭೇಟಿ ಮಾಡ್ತಿದ್ದಾರೆ.
ನಿನ್ನೆ ಸಿಎಂ ಭೇಟಿ ಮಾಡಿರುವ ಬೇಳೂರು ಗೋಪಾಲಕೃಷ್ಣ, ಬಿ.ಆರ್.ಪಾಟೀಲ್ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.ಪುನರ್ ರಚನೆ ವೇಳೆ ತಮ್ಮನ್ನ ಪರಿಗಣಿಸುವಂತೆ ಡಿಮ್ಯಾಂಡ್ ಮಾಡಿದ್ದಾರೆ.ಮತ್ತೊಬ್ಬ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಶಿವಲಿಂಗೇಗೌಡ, ಡಿಕೆಶಿ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ.ಬಿ.ಕೆ ಹರಿಪ್ರಸಾದ್,ಟಿಬಿ ಜಯಚಂದ್ರ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸ್ತಿದ್ದಾರೆ.ಬಸವರಾಜ ರಾಯರೆಡ್ಡಿಯವರೂ ಸಿಎಂಗೆ ಒತ್ತಾಯಿಸಿದ್ದಾರೆ.
ಸಚಿವ ಸ್ಥಾನ ಕೇಳಿದ್ರೆ ತಪ್ಪೇನಿದೆ ಎಂದು ಬೇಳೂರು ಶಾಸಕ ಗೋಪಾಲಕೃಷ್ಣ ನೇರವಾಗಿ ಡಿಮ್ಯಾಂಡ್ ಇಟ್ಟಿದ್ದಾರೆ.ಸಂಪುಟ ಪುನರ್ ರಚನೆ ಮಾಡಿದ್ರೆ ಒಳ್ಳೇದು.ನಮಗೆ ಕೇಳೋ ಹಕ್ಕಿದೆ ಎಂದು ತಿಳಿಸಿದ್ದಾರೆ.ಈ ಕುರಿತಾಗಿ ಪ್ರತಿಕ್ರಿಯಿಸಿರುವ ಬಿ.ಆರ್ ಪಾಟೀಲ್ ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತೆ.ಸ್ಥಾನಮಾನಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚರ್ಮದಿಂದ- ಹೃದಯದದವರೆಗೆ, ಹುಣಸೆ ಬೀಜಗಳನ್ನು ಎಸೆಯಬೇಡಿ, ಅವುಗಳನ್ನ ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತೆ?
ಈ ಕಡೆ ಸಿಎಂ ಡಿನ್ನರ್ ಮೀಟಿಂಗ್ ಕರೆದಿದ್ದು ಸಂಪುಟ ಪುನರ್ ರಚನೆ ವಿಚಾರಕ್ಕಲ್ಲ.ಅಂಥದ್ದೇನೂ ಇಲ್ಲ ಅಂತಾ ಪರಮೇಶ್ವರ್ ಬೇರೆಯದ್ದೇ ರೀತಿಯಲ್ಲಿ ಹೇಳಿದ್ದಾರೆ.ಒಟ್ನಲ್ಲಿ ಹಿರಿಯ ಸಚಿವರ್ಯಾರೂ ಸಂಪುಟ ಪುನರ್ ರಚನೆ ಬಯಸ್ತಿಲ್ಲ. ತಮ್ಮ ಮಂತ್ರಿಗಿರಿಯನ್ನ ಉಳಿಸಿಕೊಳ್ಳಲು ನೋಡ್ತಿದ್ದಾರೆ.ಆದ್ರೆ ಶಾಸಕರು ಬಿಡ್ತಿಲ್ಲ.ಪುನರ್ ರಚನೆ ಆಗಲೇಬೇಕು ಅಂತಾ ಪಟ್ಟು ಹಿಡಿದಿದ್ದಾರೆ.ಸಿಎಂ, ಡಿಸಿಎಂ ಕೈ ಕಾಲು ಹಿಡಿದು, ಲಾಬಿ ನಡೆಸ್ತಿದ್ದಾರೆ.
ವರದಿ: ರಾಚಪ್ಪ.ಸುತ್ತೂರು
ಪೊಲಿಟಿಕಲ್ ಬ್ಯುರೋ.
ಜೀ ಕನ್ನಡ ನ್ಯೂಸ್









