ಬಂಡೀಪುರ ಅರಣ್ಯದಲ್ಲಿ ಕಾರು ನಿಲ್ಲಿಸಿ ವ್ಯಕ್ತಿ ಪರಾರಿ: ಪಿಸ್ತೂಲ್, ಐಫೋನ್ ಪತ್ತೆ

ಇಂದು ಬೆಳಗಿನಜಾವ 3.30 ರ ಸುಮಾರಿಗೆ ಈತ ಚೆಕ್ ಪೋಸ್ಟ್ ಬಳಿ ಬಂದಾಗ ಅರಣ್ಯ ಇಲಾಖೆ ತಪಾಸಣೆ ಮಾಡಲು ಮುಂದಾಗುತ್ತಿದ್ದಂತೆ ಪರಾರಿಯಾಗಿದ್ದನು. ಅದಾದ ಬಳಿಕ, ಈತನ ಕಾರು ಈಗ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.   

Written by - Chetana Devarmani | Last Updated : Nov 7, 2025, 07:36 PM IST
  • ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ
  • ಅರಣ್ಯದಲ್ಲಿ ಕಾರು ನಿಲ್ಲಿಸಿ ವ್ಯಕ್ತಿ ಪರಾರಿ
ಬಂಡೀಪುರ ಅರಣ್ಯದಲ್ಲಿ ಕಾರು ನಿಲ್ಲಿಸಿ ವ್ಯಕ್ತಿ ಪರಾರಿ: ಪಿಸ್ತೂಲ್, ಐಫೋನ್ ಪತ್ತೆ

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯದಲ್ಲಿ ವ್ಯಕ್ತಿಯೋರ್ವ ಕಾರನ್ನು ನಿಲ್ಲಿಸಿ ಪರಾರಿಯಾಗಿದ್ದು ಕಾರಲ್ಲಿ ಒಂದು ಪಿಸ್ತೂಲ್, ಐಫೋನ್ ಪತ್ತೆಯಾದ ಘಟನೆ ನಡೆದಿದೆ.

Add Zee News as a Preferred Source

ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ಅರಣ್ಯ ವಲಯದ ಸೊಳ್ಳೆಕಟ್ಟೆ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ‌. ಕೆಎ-42 ಎನ್-4696 ನೋಂದಣಿಯ ಕಾರು ಇದಾಗಿದ್ದು ಕಾರೊಳಗೆ ಪಿಸ್ತೂಲ್ ಹಾಗೂ ಐಫೋನ್ ಪತ್ತೆಯಾಗಿದೆ.

ಇಂದು ಬೆಳಗಿನಜಾವ 3.30 ರ ಸುಮಾರಿಗೆ ಈತ ಚೆಕ್ ಪೋಸ್ಟ್ ಬಳಿ ಬಂದಾಗ ಅರಣ್ಯ ಇಲಾಖೆ ತಪಾಸಣೆ ಮಾಡಲು ಮುಂದಾಗುತ್ತಿದ್ದಂತೆ ಪರಾರಿಯಾಗಿದ್ದನು. ಅದಾದ ಬಳಿಕ, ಈತನ ಕಾರು ಈಗ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. 

ಈ ಕುರಿತು ಬಂಡೀಪುರ ಆರ್ ಎಫ್ಓ ಮಹಾದೇವಯ್ಯ ಪ್ರತಿಕ್ರಿಯಿಸಿ, ಕಾರಿನ ಚಾಲಕನ ಸುಳಿವು ಇನ್ನೂ ಗೊತ್ತಾಗಿಲ್ಲ, ಕಾರು ಪರಿಶೀಲಿಸಿದ ವೇಳೆ ಪಿಸ್ತೂಲ್ ಪತ್ತೆಯಾಗಿದ್ದು ಕಾರು, ಪಿಸ್ತೂಲ್, ಐಫೋನ್ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಈ ಬಗ್ಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ತೇರ್ಗಡೆ ಅಂಕಗಳನ್ನು ಕಡಿಮೆ ಮಾಡುವುದು ಬೇಡ-ಸರ್ಕಾರಕ್ಕೆ ಪುರುಷೋತ್ತಮ ಬಿಳಿಮಲೆ ಆಗ್ರಹ

ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸಿ- ಸುಪ್ರೀಂ ಆದೇಶ

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News