ಮೈಸೂರಿನಲ್ಲಿ ಲೇಡಿಸ್ ಹಾಸ್ಟೆಲ್'ಗೆ ನುಗ್ಗಿದ ವಿಕೃತ ಕಾಮಿ; ದಾಂಧಲೆ

ಹಾಸ್ಟೆಲ್ ವಿದ್ಯಾರ್ಥಿನಿಯರ ರೂಮಿಗೆ ನುಗ್ಗಿ ಮೊಬೈಲ್ ಕದ್ದೊಯ್ದ ಘಟನೆ ಶನಿವಾರ ರಾತ್ರಿ ನಡೆದಿದೆ.  

Last Updated : Jul 22, 2018, 12:19 PM IST
ಮೈಸೂರಿನಲ್ಲಿ ಲೇಡಿಸ್ ಹಾಸ್ಟೆಲ್'ಗೆ ನುಗ್ಗಿದ ವಿಕೃತ ಕಾಮಿ; ದಾಂಧಲೆ title=

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಲೇಡೀಸ್ ಹಾಸ್ಟೆಲ್'ಗೆ ನುಗ್ಗಿದ ವಿಕೃತ ಕಾಮಿಯೊಬ್ಬ ಯುವತಿಯರ ಒಳಉಡುಪುಗಳನ್ನು ಕದ್ದು, ಹಾಸ್ಟೆಲ್ ವಿದ್ಯಾರ್ಥಿನಿಯರ ರೂಮಿಗೆ ನುಗ್ಗಿ ಮೊಬೈಲ್ ಕದ್ದೊಯ್ದ ಘಟನೆ ಶನಿವಾರ ರಾತ್ರಿ ನಡೆದಿದೆ.

ಕೆ.ಆರ್.ಆಸ್ಪತ್ರೆ ನರ್ಸಿಂಗ್ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ರಾತ್ರೋರಾತ್ರಿ ನುಗ್ಗಿದ ಕಳ್ಳನೋರ್ವ, ಹಾಸ್ಟೆಲ್ ನಲ್ಲಿ ಒಣಗಲು ಹಾಕಿದ್ದ ಬಟ್ಟೆಗಳಲ್ಲಿ ವಿದ್ಯಾರ್ಥಿನಿಯ ಒಳಉಡುಪು ಹಿಡಿಡು ವಿಕೃತವಾಗಿ ವರ್ತಿಸಿದನಲ್ಲದೆ, ವಿದ್ಯಾರ್ಥಿನಿಯರ ಕೊಠಡಿಗೆ ನುಗ್ಗಿ ಅವರಿಂದ ಮೊಬೈಲ್ ಕಿತ್ತೊಕೊಂದಿದ್ದಾನೆ. ಕೂಡಲೇ ಇದನ್ನು ಪ್ರತಿಭಟಿಸಿದ ವಿದ್ಯಾರ್ಥಿನಿಯ ಕಟ್ಟು ಹಿಸುಕು ಕೊಲೆ ಮಾಡುವ ಬೆದರಿಕೆ ಹಾಕಿ, ಪರಾರಿಯಾಗಿದ್ದಾನೆ ಎನ್ನಲಾಗಿದೆ. 

ಇದೀಗ ಆತನ ಉಪಟಳ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪೋಲಿಸ್ ಅಧಿಕಾರಿಗಳು ಆರೋಪಿಯ ಹುಡುಕಾಟದಲ್ಲಿದ್ದಾರೆ. 

Trending News