ಮಂಗಳೂರು: ದುಷ್ಕರ್ಮಿಗಳ ಮಾರಣಾಂತಿಕ ದಾಳಿಗೆ ತುತ್ತಾಗಿದ್ದ ಅಬ್ದುಲ್ ಬಶೀರ್(48) ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

ಜ.3ರಂದು ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಅವರನ್ನು ಹತ್ಯೆ ಮಾಡಲಾಗಿತ್ತು. ಅದೇ ದಿನದಂದು ತಮ್ಮ ಫಾಸ್ಟ್ ಫುಡ್ ಅಂಗಡಿಯಿಂದ ಕೆಲಸ ಮುಗಿಸಿ ರಾತ್ರಿ 11.30ರ ಸುಮಾರಿಗೆ ಮನೆಗೆ ತೆರಳುತ್ತಿದ್ದ ವ್ಯಾಪಾರಿ ಅಬ್ದುಲ್ ಬಶೀರ್ ಮೇಲೆ ಕೊಟ್ಟಾರ ಚೌಕಿಯಲ್ಲಿ 3 ಬೈಕ್ ನಲ್ಲಿ ಬಂದ 7 ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದರಿಂದ ಕುತ್ತಿಗೆ, ತಲೆ ಹಾಗೂ ಹೊಟ್ಟೆಯ ಭಾಗಕ್ಕೆ ದುಷ್ಕರ್ಮಿಗಳು ಬಲವಾಗಿ ಇರಿದ ಪರಿಣಾಮ ಕಿಡ್ನಿ ಸಂಪೂರ್ಣವಾಗಿ ನಿಷ್ಕ್ರಿಯವಾಗಿತ್ತು. 


ತೀವ್ರವಾಗಿ ಗಾಯಗೊಂಡ ಇವರನ್ನು ಸ್ಥಳೀಯರು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಿದ್ದರು. ನಾಲ್ಕು ದಿನ ಜೀವನ್ಮರಣ ಸ್ಥಿತಿಯಲ್ಲಿದ್ದ ಬಷೀರ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.  ಬಶೀರ್ ಮೃತದೇಹವನ್ನು ಕೂಳೂರು ಮಸೀದಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.


ಎ.ಜೆ. ಆಸ್ಪತ್ರೆಗೆ ಶಾಸಕ ಮೊಯ್ದಿನ್ ಬಾವ, ಕಮೀಷನರ್ ಟಿ.ಆರ್ ಸುರೇಶ್ ಭೇಟಿ ನೀಡಿದ್ದು, ಮಂಗಳೂರಿನಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.