)
Mandya DCC Bank Election: ಮಂಡ್ಯ ಡಿಸಿಸಿ ಬ್ಯಾಂಕಿನ ಒಟ್ಟು 12 ನಿರ್ದೇಶಕ ಸ್ಥಾನಗಳ ಪೈಕಿ ಎಂಟು ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು ಚುನಾವಣೆಗೂ ಮುನ್ನವೇ ಮಂಡ್ಯ ಡಿಸಿಸಿ ಬ್ಯಾಂಕ್ ಕಾಂಗ್ರೆಸ್ ವಶವಾಗಿದೆ. ಈ ಮೂಲಕ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಸಂಸದೀಯ ಕ್ಷೇತ್ರದಲ್ಲಿ ಕಾಂಗ್ರೆಸ್ ಇತಿಹಾಸ ಸೃಷ್ಟಿಸಿದೆ. ನವೆಂಬರ್ 02ರಂದು ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯಲಿದ್ದು ಇನ್ನುಳಿದ 4 ಸ್ಥಾನಗಳಿಗೆ ಮಾತನಾಡ ನಡೆಯಲಿದೆ.
ಮಂಡ್ಯ ಡಿಸಿಸಿ ಬ್ಯಾಂಕಿನ 12 ನಿರ್ದೇಶಕ ಸ್ಥಾನಗಳಲ್ಲಿ 8 ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಎನ್. ಚಲುವರಾಯಸ್ವಾಮಿ, ಸಹಕಾರ ಕ್ಷೇತ್ರದ ಸದಸ್ಯರು, ಕಾರ್ಯಕರ್ತರಿಗೆ ಅಭಿನಂದನೆ. ಇತಿಹಾಸದಲ್ಲೇ 8 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ಮತ್ತೊಂದು ಆಯ್ಕೆಯಾಗುತ್ತದೆ ಎಂದರು.
ಶಾಸಕರು, ಪಕ್ಷದ ಮುಖಂಡರು ಜವಾಬ್ದಾರಿ ತೆಗೆದುಕೊಂಡು ಚುನಾವಣೆ ಮಾಡಿದ್ದಾರೆ. ನಾನು ಸಹಕಾರ ಕ್ಷೇತ್ರದಿಂದ ಬಂದಿಲ್ಲ ಸ್ಥಳಿಯ ಪಂಚಾಯತ್ ನಿಂದ ಬಂದೆ. ಸಹಕಾರ ಕ್ಷೇತ್ರ ಕಟ್ಟಿದ್ದು ಶಂಕರೇಗೌಡ್ರು. ಸಹಕಾರ ಕ್ಷೇತ್ರ ಜನರಿಗೆ ಹತಿರವಾಗಿದೆ. ಕೆಲವರು ರಾಜಕೀಯ ವಾಗಿ ಮಾತನಾಡ್ತಾರೆ ಟೀಕೆ ಮಾಡ್ತಾರೆ. ನಮ್ಮ ಗೆಲುವಿಗೆ ಕಾರಣರಾದ ಕಾರ್ಯಕರ್ತರಿಗೆ ಶಕ್ತಿ ತುಂಬುವುದು ನಮ್ಮ ಕೆಲಸ. ಕಾಂಗ್ರೆಸ್ ಅತೀ ಹೆಚ್ಚು ಸ್ಥಾನವನ್ನು ಗಳಿಸಿ ಅಧಿಕಾರ ಪಡೆದಿದೆ. ನಮ್ಮ ಪಕ್ಷ ಎಲ್ಲರಿಗೂ ಅವಕಾಶ ಕೊಟ್ಟು ಬೆಂಬಲಿಸುತ್ತಿದೆ. ನೂರಾರು ಕೋಟಿಯನ್ನ ರೈತರಿಗೆ ಸಾಲ ಕೊಟ್ಟಿದೆ. ನಮ್ಮ ಸರ್ಕಾರ ಬಂದ ಮೇಲೆ ಬದಲಾವಣೆ ಬೆಳಕಾಗಿದೆ ಎಂದರು.
12ನಿರ್ದೇಶಕರ ಪೈಕಿ 8 ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಕೇಂದ್ರದ ಉಕ್ಕಿನ ಸಚಿವರ ಕ್ಷೇತ್ರದಲ್ಲಿ ಕಾಂಗ್ರೆಸ್ ಇತಿಹಾಸ ಸೃಷ್ಟಿಸಿದೆ. ಜಿಲ್ಲೆಯಲ್ಲಿ ಜೆಡಿಎಸ್ ಪ್ರಬಲವಾಗಿದೆ. ಅವರ ತರ ಕಾಂಗ್ರೆಸ್ ಲೆಕ್ಕಕ್ಕಿಲ್ಲ ಅಂತ ಹೇಳಲ್ಲ. ಜೆಡಿಎಸ್ ಗೆ ಬಿಜೆಪಿ ಸಪೋರ್ಟ್ ಇದ್ದರೂ ಜನರು ಕಾಂಗ್ರೆಸ್ ಕೈ ಹಿಡಿದ್ದಿದ್ದಾರೆ. ಎಲ್ಲರಿಗೂ ಧನ್ಯವಾದಗಳು ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಚುನಾವಣೆ ಗೆದ್ದಾಗ ಹಿಗ್ಗುವುದು, ಸೋತಾಗ ಓಡೋಗೋದು ಎರಡೂ ತಪ್ಪು ಎಂದ ಸಚಿವರು, ನಾನು ಯಾವಾಗಲೂ ಹಿಗ್ಗಲ್ಲ, ಅವಕಾಶ ಸಿಕ್ಕಾಗ ಕೆಲಸ ಮಾಡ್ತೇವೆ. ನಾವು ಜೆಡಿಎಸ್ ನ ಮುಗಿಸಲ್ಲ, ನಾನು ಜೆಡಿಎಸ್ ನಲ್ಲಿದ್ದಾಗಲೂ ನೂರಾರು ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೆ. ಕಾಂಗ್ರೆಸ್ ಇವಾಗ ಹೆಚ್ಚಿನ ಜವಾಬ್ದಾರಿ ಕೊಟ್ಟಿದೆ. ನಾವು ನಮ್ಮ ಪಕ್ಷ ಟೀಮ್ ವರ್ಕ್ ಮಾಡ್ತಿದ್ದೇವೆ. ಜಿಲ್ಲೆಯ ಅಭಿವೃದ್ಧಿ ಮಾಡ್ತಿದ್ದೇವೆ. ಜೆಡಿಎಸ್ ಗೆ ನಾನು ಟೀಕೆ, ಮಾಡಲ್ಲ ಎಂದರು.
ಜೆಡಿಎಸ್ ಗೆದ್ದು ನಾವು ಏನಾದರೂ ಈ ಪರಿಸ್ಥಿತಿಯಲ್ಲಿದ್ರೆ ನಾವೆಲ್ಲರು ಒಂದು ತಿಂಗಳು ಊರು ಬಿಡಬೇಕಿತ್ತು ಅಷ್ಟು ಅವರ ಕಾರ್ಯಕರ್ತರು ಟೀಕಿಸ್ತಿದ್ರು. ಜೆಡಿಎಸ್ ನಾಯಕರು ನಮ್ಮ ಬಗ್ಗೆ ಲಘುವಾಗಿ ಮಾತಾಡ್ತಿದ್ರು. ಅವರ ಬಗ್ಗೆ ನಾವು ಟೀಕೆ ಮಾಡಲ್ಲ, ಲಘುವಾಗಿ ಮಾತನಾಡಲ್ಲ.
ಚುನಾವಣೆಯನ್ನ ಸ್ಪೋಟಿವ್ ಆಗಿ ತೆಗೆದುಕೊಳ್ಳಿ. ಜೆಡಿಎಸ್ ನವರು ಕೆಲವರು ಚೇಸ್ಟೆ ಬಿಟ್ಟು ಸೋಲು-ಗೆಲುವನ್ನ ಸಮವಾಗಿ ತಕ್ಕೊಳ್ಳಿ ಎಂದು ಸಚಿವ ಚಲುವರಾಯಸ್ವಾಮಿ ಕಿವಿಮಾತು ಹೇಳಿದರು.