)
Menstrual leave in Karnataka: ಮಹಿಳಾ ಸರ್ಕಾರಿ ನೌಕರರಿಗೆ ನೀಡಲಾಗಿರುವ ಋತುಚಕ್ರ ರಜೆ ಕುರಿತು ಸರ್ಕಾರಿ ಪುರುಷ ನೌಕರರು ಅಸಮಾಧನ ವ್ಯಕ್ತಪಡಿಸಿದ್ದು, ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.. ವರ್ಷಕ್ಕೆ 12 ದಿನಗಳು ಎಂದರೇ ತಿಂಗಳಿಗೆ ಒಂದು ಋತುಚಕ್ರ ರಜೆ ನೀಡುವ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ..
ಹೌದು ಸಚಿವಾಲಯದ ಶಿಷ್ಟಾಚಾರ ವಿಭಾಗದ ಕೆಲ ಅಧಿಕಾರಿಗಳು ಹಾಗೂ ನೌಕರರು ಈ ಪತ್ರ ಬರೆದು, ಪ್ರತಿಯನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಿಗೂ ಕಳುಹಿಸಿದ್ದಾರೆ.. ಸಮರ್ಪಕ ಅಧ್ಯಯನವಿಲ್ಲದೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿ, ಈಗಾಗಲೇ ನೀಡಿರುವ ರಜೆಗಳನ್ನು ಮಹಿಳಾ ನೌಕರರು ಬಳಸಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ತಿಂಗಳಿಗೊಂದು ಹೆಚ್ಚುವರಿ ರಜೆ ನೀಡುವುದು ಸಮಂಜಸವಲ್ಲ.. ಇದರಿಂದ ಪುರುಷ ನೌಕರರ ಮೇಲೆ ಹೆಚ್ಚು ಕೆಲಸದ ಒತ್ತಡ ಬೀಳಲಿದೆ.. ಜೊತೆಗೆ ಈ ನಿರ್ಧಾರದಿಂದ ಪುರುಷ ಮತ್ತು ಮಹಿಳಾ ನೌಕರರ ನಡುವೆ ವೈಮನಸ್ಸು ಹೆಚ್ಚಾಗುವ ಸಾಧ್ಯತೆಯೂ ಇದೆ.. ಅದರಲ್ಲೂ ಶಿಕ್ಷಣ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಇಲಾಖೆಗಳಲ್ಲಿ ಮಹಿಳಾ ನೌಕರರೇ ಜಾಸ್ತಿ ಇರುವುದರಿಂದ ಕೆಲಸದಲ್ಲಿ ತೊಂದರೆಗಳು ಉಂಟಾಗಬಹುದು ಎಂಬ ಕಳವಳ ಹೊರಹಾಕಿದ್ದಾರೆ..
ಈ ಋತುಚಕ್ರ ರಜೆಯಿಂದ ಕೆಲಸಗಳು ಪೆಂಡಿಗ್ ಉಳಿದು, ಕೊನೆಗೆ ಮಹಿಳಾ ನೌಕರರಿಗೆ ಸಂಕಷ್ಟ ಎದುರಾಗಬಹುದು.. ಈ ರಜೆ ನೀಡುವ ವಿಚಾರದಲ್ಲಿ ಸಮಗ್ರ ಅಧ್ಯಯನ ನಡೆಸಿ, ಮುಖ್ಯವಾಗಿ ಪುರುಷ–ಮಹಿಳಾ ನೌಕರರ ಕಾರ್ಯಭಾರ ಸಮತೋಲನದ ಕುರಿತು ಯೋಚಿಸಬೇಕು ಎಂದು ಮನವಿ ಮಾಡಲಾಗಿದೆ.
ಇನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರಿ ನೌಕರರ ಸಂಘ ವಿರೋಧ ವ್ಯಕ್ತಪಡಿಸಿ, ತಾವು ಮಹಿಳಾ ನೌಕರರ ಪರವಾಗಿ ನಿಲ್ಲುವುದಾಗಿ ಸ್ಪಷ್ಟನೆ ನೀಡಿದ್ದಾರೆ.. ಈ ಬಗ್ಗೆ ಪ್ರತಿಕ್ರಿಯಿಸಿದ ಸಂಘದ ನಾಯಕರು, ʼಕೆಲ ಪುರುಷ ನೌಕರರು ಸರ್ಕಾರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂಬ ಕಾರಣಕ್ಕೆ ಎಲ್ಲ ಪುರುಷರೂ ಋತುಚಕ್ರ ರಜೆಗೆ ವಿರೋಧಿಸುತ್ತಿದ್ದಾರೆ ಎಂಬರ್ಥವಲ್ಲʼ.. ಎಂದು ಹೇಳಿದ್ದಾರೆ.
ಜೊತೆಗೆ.. ʼಮಹಿಳೆಯರು ಆ ಸಮಯದಲ್ಲಿ ಅನುಭವಿಸುವ ದೈಹಿಕ ಮತ್ತು ಮಾನಸಿಕ ನೋವುಗಳು ಪುರುಷರಿಗಿಲ್ಲ.. ಇಂತಹ ನಿರ್ಧಾರ ಕೈಗೊಳ್ಳುವ ಮೊದಲು ಸಮತ್ರ ಅಧ್ಯಯನ ಮಾಡಿಯೇ ನಿರ್ಧಾರ ತೆಗೆದುಕೊಳ್ಳಲಾಗಿರುತ್ತದೆ.. ಮಹಿಳಾ ನೌಕರರು ಆತಂಕಪಡಬೇಕಾದ ಅವಶ್ಯಕತೆ ಇಲ್ಲ.. ಸಂಪೂರ್ಣ ರಾಜ್ಯ ಸರ್ಕಾರಿ ನೌಕರರ ಸಂಘ ಮಹಿಳಾ ನೌಕರರ ಪರವಾಗಿ ನಿಂತೇ ನಿಲ್ಲುತ್ತದೆ..ʼ ಎಂದು ಸ್ಪಷ್ಟನೆ ನೀಡಿದೆ.
ಈ ನಡುವೆ ಪತ್ರ ಬರೆದಿರುವ ಅಧಿಕಾರಿಗಳು ಮತ್ತು ನೌಕರರಿಗೆ ತಿಳಿಸಿ ಹೇಳುವ ಕೆಲಸವನ್ನು ಮಾಡಲಾಗುವುದು.. ಈ ಕುರಿತು ಈಗಾಗಲೇ ಉತ್ತರವನ್ನೂ ನೀಡಲಾಗಿದೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.