Siddaramaiah: ಸಿದ್ದರಾಮಯ್ಯ ಒಬ್ಬ ಡಕೋಟಾ: ಟಗರಿಗೆ ತಿರುಗೇಟು ನೀಡಿದ ಸಚಿವ

ಯಡಿಯೂರಪ್ಪನವರದ್ದು ಡಕೋಟಾ ಸರ್ಕಾರ ಎಂದಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸಚಿವ ಎಸ್‌.ಟಿ.ಸೋಮಶೇಖರ್ ತಿರುಗೇಟು

Last Updated : Feb 8, 2021, 03:45 PM IST
  • ಯಡಿಯೂರಪ್ಪನವರದ್ದು ಡಕೋಟಾ ಸರ್ಕಾರ ಎಂದಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸಚಿವ ಎಸ್‌.ಟಿ.ಸೋಮಶೇಖರ್ ತಿರುಗೇಟು
  • ಸರ್ಕಾರ 'ಟೇಕ್ ಆಫ್' ಅಲ್ಲ ಸಂಪೂರ್ಣ 'ಆಫ್ ಆಗಿ ಕೆಟ್ಟು ನಿಂತಿರುವ ಡಕೋಟ ಬಸ್ ನಂತಾಗಿದೆ ಎಂದು ವ್ಯಂಗ್ಯ
  • ಅವರೇ ಒಬ್ಬರು ಡಕೋಟಾ. ವಿರೋಧ ಪಕ್ಷದ ನಾಯಕರಾಗಿ ಸರಿಯಾಗಿ ಕೆಲಸ ಕೂಡ ಮಾಡುತ್ತಿಲ್ಲ. ಸಿಎಂ ಯಡಿಯೂರಪ್ಪ ಕೊರೋನಾ ಕಾಲದಲ್ಲೇ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ತಿರುಗೇಟು
Siddaramaiah: ಸಿದ್ದರಾಮಯ್ಯ ಒಬ್ಬ ಡಕೋಟಾ: ಟಗರಿಗೆ ತಿರುಗೇಟು ನೀಡಿದ ಸಚಿವ title=

ಮೈಸೂರು: ಯಡಿಯೂರಪ್ಪನವರದ್ದು ಡಕೋಟಾ ಸರ್ಕಾರ ಎಂದಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸಚಿವ ಎಸ್‌.ಟಿ.ಸೋಮಶೇಖರ್ ತಿರುಗೇಟು ಕೊಟ್ಟಿದ್ದಾರೆ.

ಇತ್ತೀಚೆಗೆ ವಿಧಾನಸಭೆ ಅಧಿವೇಶನದ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿ ಚರ್ಚೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಅವರು, ಸರ್ಕಾರ 'ಟೇಕ್ ಆಫ್' ಅಲ್ಲ ಸಂಪೂರ್ಣ 'ಆಫ್ ಆಗಿ ಕೆಟ್ಟು ನಿಂತಿರುವ ಡಕೋಟ ಬಸ್ ನಂತಾಗಿದೆ ಎಂದು ವ್ಯಂಗ್ಯವಾಡಿದ್ದರು.

Maneka Gandhi: ಮೇನಕಾ ಗಾಂಧಿಗೆ ನೋಟಿಸ್ ನೀಡಿದ ಮೈಸೂರು ಕೋರ್ಟ್‌..!

ಇನ್ನು ಇದಕ್ಕೆ ಸೋಮಶೇಖರ್(ST Somashekhar) ಮೈಸೂರಿನಲ್ಲಿ ಇಂದು ಪ್ರತಿಕ್ರಿಯಿಸಿದ್ದು, ಅವರೇ ಒಬ್ಬರು ಡಕೋಟಾ. ವಿರೋಧ ಪಕ್ಷದ ನಾಯಕರಾಗಿ ಸರಿಯಾಗಿ ಕೆಲಸ ಕೂಡ ಮಾಡುತ್ತಿಲ್ಲ. ಸಿಎಂ ಯಡಿಯೂರಪ್ಪ ಕೊರೋನಾ ಕಾಲದಲ್ಲೇ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.

'ಸಭಾಪತಿ ಸ್ಥಾನಕ್ಕಾಗಿ ಮಾತ್ರ BJP-JDS ಮೈತ್ರಿ ಹೊರತು ಜನವಿರೋಧಿ ನೀತಿಗಳಿಗಲ್ಲ'

ಕೆಲವರಿಗೆ ಯಾವಾಗ್ಲೂ ಮಾತನಾಡುವ ಚಟ. ಈ ಮೂಲಕ ಪ್ರಚಾರದ ಹುಚ್ಚು. ಅದಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಆದ್ರೆ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಎಂದು ಸಚಿವ ಎಸ್ ಟಿ ಸೋಮಶೇಖರ್ ಕಿಡಿಕಾರಿದ್ದಾರೆ.

B.Sriramulu: ಸಿದ್ದುಗೆ ಭರ್ಜರಿ ತಿರುಗೇಟು ನೀಡಿದ ಸಚಿವ ಶ್ರೀರಾಮುಲು

ಕಳೆದ ನಾಲ್ಕು ತಿಂಗಳಿನಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಆದ್ರೆ ಅವರ ಒಂದು ಮಾತು ಸಹ ನಡೆದಿಲ್ಲ. ಅವರಿಗೆ ಮಾತನಾಡುವ ಚಟ, ಹೀಗಾಗೇ ಅವರ ಮಾತಿಗೆ ಯಾವುದೇ ಕಿಮ್ಮತ್ತಿಲ್ಲ ಎಂದು ಟಾಂಗ್ ಕೊಟ್ಟರು.

Cheapest Recharge Plans - ರೂ.200ಕ್ಕೂ ಕಮ್ಮಿ ಬೆಲೆಗೆ ಉಚಿತ ಕರೆ, 42 GB ಡೇಟಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News