ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಕಾಗೆ ಬೇಡಿಕೆ; ತಮ್ಮದೇ ಸರ್ಕಾರದ ವಿರುದ್ಧ ಕೈ ಶಾಸಕನ ಸೆಡ್ಡು!

ಚಳಿಗಾಲದ ಅಧಿವೇಶನ ಪ್ರಾರಂಭವಾಗಿ ನಾಲ್ಕು ದಿನ ಮುಗಿದಾಯ್ತು. ಇದ್ರಲ್ಲಿ ಮೂರು ದಿನಗಳ ಕಾಲ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಮೀಸಲಿಟ್ಟಿದ್ದು ಗಮನ ಸೆಳೆಯಿತು. 

Written by - Chetana Devarmani | Last Updated : Dec 11, 2025, 09:31 PM IST
  • ಡಿಕೆಶಿ ಸಿಎಂ ಕುರ್ಚಿ ಕನಸಿಗೆ ಸುನೀಲ್ ಕುಮಾರ್ ಹಾಡಿನ ಮೂಲಕ ಲೇವಡಿ
  • ಸಿ.ಎಸ್.ಅಶ್ವಥ್ ಹಾಡಿನ ಮೂಲಕ ಡಿಕೆಶಿ ಕಾಲೆಳೆದ ಬಿಜೆಪಿ ಶಾಸಕ
ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಕಾಗೆ ಬೇಡಿಕೆ; ತಮ್ಮದೇ ಸರ್ಕಾರದ ವಿರುದ್ಧ ಕೈ ಶಾಸಕನ ಸೆಡ್ಡು!

ಬೆಳಗಾವಿ : ಚಳಿಗಾಲದ ಅಧಿವೇಶನ ನಾಲ್ಕನೇ ದಿನಕ್ಕೆ ಕಾಲಿಡ್ತು..ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆ ಇಂದೂ ಮುಂದುವರೆದ್ವು..ಹಲವು ಶಾಸಕರು ತಮ್ಮ ಅಭಿಪ್ರಾಯವನ್ನ ಮಂಡಿಸಿದ್ರು..ಇದೇ ವೇಳೆ ಸಿಎಂ ಕುರ್ಚಿ ಕಿತ್ತಾಟದ ಬಗ್ಗೆಯೂ ಪ್ರಸ್ತಾಪವಾಯ್ತು..ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗು ಕೇಳಿ ಬಂತು..ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಮಾಜಿ ಸಿಎಂ ಯಡಿಯೂರಪ್ಪಗೆ ಟಾಂಗ್ ಕೊಟ್ಟು, ಸಿಎಂ ಸಿದ್ದರಾಮಯ್ಯ ದೇವರಾಜ್ ಅರಸು ದಾಖಲೆ ಮುರಿಯುವ ಬಗ್ಗೆ ಮಹತ್ವದ ಮಾತಾಡಿ, ಉ ಕ ಸಮಗ್ರ ಅಭಿವೃದ್ಧಿಗೆ ಆಗ್ರಹ ಮಾಡಿದ್ರು.  ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

Add Zee News as a Preferred Source

ಚಳಿಗಾಲದ ಅಧಿವೇಶನ ಪ್ರಾರಂಭವಾಗಿ ನಾಲ್ಕು ದಿನ ಮುಗಿದಾಯ್ತು. ಇದ್ರಲ್ಲಿ ಮೂರು ದಿನಗಳ ಕಾಲ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಮೀಸಲಿಟ್ಟಿದ್ದು ಗಮನ ಸೆಳೆಯಿತು. ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದ ಶಾಸಕರೆಲ್ಲರು ಈ ಭಾಗದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದು ವಿಶೇಷ ವಾಗಿತ್ತು.ಇಲ್ಲಿನ ನೀರಾವರಿ ಯೋಜನೆಗಳಿಗೆ ಬೇಕಾದ ಅನುದಾನ,ಮೂಲಸೌಕರ್ಯಗಳ ಕೊರತೆ,ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗಳ ಬಗ್ಗೆ ಗಮನಸೆಳೆಯಲಾಯ್ತು.ದಕ್ಷಿಣ ಕರ್ನಾಟಕಕ್ಕೆ ಕೊಡು ವಷ್ಟೇ ಒತ್ತನ್ನ ಈ ಭಾಗಕ್ಕೂ ಕೊಡುವಂತೆ ಶಾಸಕರು ಸರ್ಕಾರಕ್ಕೆ ಆಗ್ರಹಿಸಿದ್ರು.ಈ ಭಾಗದ ಜ್ವಲಂತ ಸಮಸ್ಯೆ, ಬಡತನ,ನಿರುದ್ಯೋಗಳ ಬಗ್ಗೆಯೂ ಪ್ರಸ್ತಾಪಿಸಿ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡಿದ್ರು.

ಇನ್ನು ಉತ್ತರ ಕರ್ನಾಟಕ ಭಾಗದ ಚರ್ಚೆಯೆ ವೇಳೆ ಕಾಂಗ್ರೆಸ್ ಶಾಸಕ ರಾಜುಕಾಗೆ ತಮ್ಮ ಸರ್ಕಾರದ ವಿರುದ್ಧವೇ ಅಸಮಾಧಾನ ಹೊರ ಹಾಕಿದ್ರು.ಅಷ್ಟೇ ಅಲ್ಲ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆಯನ್ನ ಬಹಿರಂಗವಾಗಿಯೇ ಸದನದ ಮುಂದಿಟ್ರು. ಪ್ರತಿಭಾರಿ ಈ ಭಾಗದಲ್ಲಿ ಸದನ ನಡೆಯುತ್ತೆ,ಇಲ್ಲಿನ ಸಮಸ್ಯೆಗಳ ಬಗ್ಗೆಯೂ ಚರ್ಚೆಯಾಗುತ್ತೆ,ಆದ್ರೆ ಪರಿಹಾರ ಮಾತ್ರ ಶೂನ್ಯ ಅಂತ ಆರೋಪಿಸಿದ್ರು..ಈ ಭಾಗದ ಬಹಳಷ್ಟು ಬಡಜನ ಬೆಂಗಳೂರನ್ನೇ ಇಲ್ಲಿಯ ವರೆಗೆ ನೋಡಿಲ್ಲ, ಅಷ್ಟರ ಮಟ್ಟಿಗೆ ಇಲ್ಲಿ ಬಡತನ ಇದೆ..ನೀರಾವರಿ ಯೋಜನೆ ಗಳಿಗೆ ಅನುದಾನ ಸಿಗ್ತಿಲ್ಲ, ಬೆಳಗಾವಿಯಲ್ಲಿ ೧೦ ತಾಲೂಕುಗಳಿದ್ವು,ಈಗ ಹೊಸದಾಗಿ ಐದು ತಾಲೂಕು ರಚನೆಯಾಗಿವೆ.ಆದರೆ ತಾಲೂಕು ಆಡಳಿತಕ್ಕೆ ಸ್ಬಂತ ಕಚೇರಿಯೇ ಇಲ್ಲ,ಬಾಡಿಗೆ ಕಟ್ಟದಲ್ಲಿಯೇ ತಾಲೂಕು ಕಚೇರಿ ಕೆಲಸ ಮಾಡಬೇಕಿದೆ ಅಂತ ಆಕ್ರೋಶ ಹೊರ ಹಾಕಿದ್ರು.ಕಾಗವಾಡದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ೮.೬೦ ಕೋಟಿ‌ ಘೋಷಿಸಿದ್ರು,ಆದ್ರೆ ವರ್ಷವಾದ್ರೂ ಹಣ ಬಿಡುಗಡೆ ಯಾಗಲಿಲ್ಲ.ಬೇರೆ ಕಚೇರಿಗಳಿಗೆ ೧೩,೧೪ ಲಕ್ಷ ಕೊಡ್ತಾರೆ,ಆದ್ರೆ ನಮಗೆ ಹೆಚ್ಚು ಕೊಡೋಕೆ ಬರಲ್ಲ ಅಂತ ಹೇಳ್ತಾರೆ,ಇದು ಎಷ್ಟರ ಮಟ್ಟಿಗೆ ಸರಿ ಅಂತ ಅಸಮಾಧಾನ ಹೊರ ಹಾಕಿದ್ರು.ಅದಕ್ಕೆ ನಾನು ಪ್ರತ್ಯೇಕ ರಾಜ್ಯ ಕೇಳ್ತಿರೋದು ಅನ್ನೋದನ್ನ ಸಮರ್ಥನೆ ಮಾಡಿಕೊಂಡ್ರು.

ಇನ್ನು ಉತ್ತರ ಕರ್ನಾಟಕದ ಚರ್ಚೆಯ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರ ಹಾಗೂ ಪ್ರತಿಪಕ್ಷ ಎರಡನ್ನೂ ತರಾಟೆಗೆ ತೆಗೆದುಕೊಂಡ್ರು..ನಮಗೆ ನಾವೇ ಆತ್ಮವಂಚನೆ ಮಾಡಿಕೊಳ್ತಿದ್ದೇವೆ,ಕಳೆದ ೬೯ ವರ್ಷಗಳಿಂದ ಇಲ್ಲಿಂದಲೇ‌ಲೋಕಸಭೆ ಹಾಗೂ ವಿಧಾನಸಭೆಗೆ ಆರಿಸಿ ಬರ್ತಿದ್ದೇವೆ..ಆದ್ರೆ ಈ ಭಾಗದ ಸಮಗ್ರ ಅಭಿವೃದ್ಧಿಯ ಬಗ್ಗೆ ಮಾತ್ರ ಮರೆತುಬಿಟ್ಟಿದ್ದೇವೆ..ದಕ್ಷಿಣ ಕರ್ನಾಟಕದಂಗೆ ನಾವ್ಯಾರು ಇಲ್ಲಿನ ಅಭಿವೃದ್ಧಿ ಬಗ್ಗೆ ಸರ್ಕಾರದ ಮೇಲೆ ಬೀಳೋದಿಲ್ಲ..ಯಾವುದೇ ಡಿಮ್ಯಾಂಡ್ ಹೆಚ್ಚು ಮಾಡೋದಿಲ್ಲ ಹಾಗಾಗಿಯೇ ಇಲ್ಲಿನ ಅಭಿವೃದ್ಧಿಗೆ ಅವಕಾಶಗಳು ಸಿಗ್ತಿಲ್ಲ ಅಂತ ಈ ಭಾಗದ ಶಾಸಕರ ಅಸಡ್ಡೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ..ಈ ಭಾಗದ ಅಭಿವೃದ್ಧಿ ಮಾಡ್ತೇವೆ ಅಂತ ಒಬ್ಬರು ಕೂಡಲಸಂಗಮದಲ್ಲಿ ಆಣೆ ಮಾಡಿದ್ರು,ಮತ್ತೊಬ್ಬರು ಅಭಿವೃದ್ಧಿ ಮಾಡ್ತೇನೆಂದು ರಕ್ತದಲ್ಲಿ ಪತ್ರ ಬರೆದುಕೊಟ್ರು..ಆದ್ರೆ ಅಭಿವೃದ್ಧಿ ಮಾತ್ರ ಮಾಡಲೇ ಇಲ್ಲ,ನಾನು ಇದೆಲ್ಲದರ ಬಗ್ಗೆ ಧ್ವನಿ ಎತ್ತುತ್ತಿದ್ದೆ,ಅದಕ್ಕೆ ನನ್ನನ್ನ ಪಕ್ಷದಿಂದ ಉಚ್ಚಾಟಿಸಿದ್ರು..ಆದರೆ ಅದಕ್ಕೆ ಡೋಂಟ್ ಕೇರ್ ಎಂದು ಯತ್ಬಾಳ್ ಗರಂ ಆದ್ರು..ಇಲ್ಲಿ ಐದು ದಿನ ಸದನ ನಡೆಸ್ತೀರ,ಶನಿವಾರ ಬಂದ್ರೆ ಗೋವಾಗೆ ಹೋಗ್ತೀರ,ನಾಗಪುರದಲ್ಲಿ ೧ ತಿಂಗಳು ಸದನ ನಡೆಸ್ತಾರೆ,ಅಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳು ಇರುತ್ವೆ,ಇಲ್ಲಿ ಏನಿದೆ ಹೇಳಿ,ದಕ್ಷಿಣದವರು ೧೫ ಬಾರಿ ಸಿಎಂ ಆದ್ರೆ ಈಭಾಗದವರು ೮ ಬಾರಿ ಆದ್ರು,ಬಹುಶ ಸಿದ್ರಾಮಯ್ಯ ದಾಖಲೆ ನಿರ್ಮಿಸ್ತಾರೆ ಅಂತ ಲೇವಡಿ ಮಾಡಿದ್ರು. ಅಲ್ಲದೇ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಮತ್ತೆ ಗುಟುರಿದ ಯತ್ನಾಳ್, ನಮ್ಮ ಸರ್ಕಾರ ಇದ್ದಾಗ  ಶಿವಮೊಗ್ಗಕ್ಕೆ ಬೆಣ್ಣೆ, ವಿಜಯಪುರಕ್ಕೆ ಸುಣ್ಣದಂತೆ ಮಾಡಿದ್ರು. ನಾನು ಯಾರಿಗೂ ಅಂಜದೇ ಹೋರಾಟ ಮಾಡಿದ್ದಕ್ಕೆ, ಶಿವಮೊಗ್ಗದಂತೆ ವಿಜಯಪುರದಲ್ಲೂ ಇವಾಗ ವಿಮಾನ ನಿಲ್ದಾಣ ವಾಗಿದೆ.. ನಾನು ಇನ್ನೂ ಹತ್ತು ಬಾರಿ ಉಚ್ಚಾಟನೆ ಆದರೂ, ಮತ್ತೆ ನನ್ನದೇ ಆದ ಪಕ್ಷ ಕಟ್ಟಿ ಜನರಿಂದ ಗೆದ್ದು ಬರುತ್ತೇನೆ, ಇದಕ್ಕೆಲ್ಲ ನಾನು ಭಯ ಪಡುವುದಿಲ್ಲ ಎಂದು ಗುಡುಗಿದ್ರು‌

ಇನ್ನು ಉತ್ತರ ಕರ್ನಾಟಕದ ಚರ್ಚೆವೇಳೆ ಶಾಸಕ ಅರವಿಂದ ಬೆಲ್ಲದ್ ಮಾತನಾಡ್ತಿದ್ರು.ಮೇಕೆ ದಾಟು ಯೋಜನೆಯ ಪಿತಾಮಹ ಡಿಕೆ ಶಿವಕುಮಾರ್,ಆದರೆ ಯೋಜನೆಯಲ್ಲಿ ಮತ ಪಡೆದು ಗೆದ್ದು ಕಾಂಗ್ರೆಸ್ ಇದುವರೆಗೂ ಯೋಜನೆ ಅನುಷ್ಠಾನ ಮಾಡಿಲ್ಲ, ಈಗಾಗಲೇ ತಮಿಳುನಾಡು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕಾರ ಮಾಡಿದೆ ಎಂದರು, ಈ ವೇಳೆ ಮಧ್ಯಪ್ರವೇಶ ಮಾಡಿದ ಡಿಸಿಎಂ ಡಿಕೆಶಿ  ಯೋಜನೆ ಜಾರಿಗೆ ನಿಮ್ಮೆಲ್ಲರ ಸಹಕಾರ ಬೇಕೆಂದು ಕೈ ಮುಗಿದು ಕೇಳಿದ್ರು.ಇದನ್ನು ಗಮನಿಸಿದ ಬಿಜೆಪಿ ಶಾಸಕ ಸುನೀಲ್ ಕುಮಾರ್ ಎದ್ದು ನಿಮಗೆ ಇಷ್ಟೊಂದು ನಯ ವಿನಯ ಎಲ್ಲಿ ಬಂತು ಅಂತ ಕಿಚಾಯಿಸಿದ್ರು..ಸಿ.ಎಸ್.ಅಶ್ವಥ್ ಅವರದ್ದು ಕಾಣದ ಕಡಲಿಗೇ ಅಂಬಲಿದೆ ಮನ ಅಂತ ಹಾಡಿದೆ,ಅದೇ ರೀತಿ ಕಾಣದ ಕುರ್ಚಿಗೆ ಹಂಬಲಿಸಿದೆ ಮನ,ಕೂರಬೇಕುಒಂದು ದಿನ ಅಂತ ನಿಮ್ಮ ಮನಸ್ಸೂ ಹೊರಟಿದೆ ಅಂತ ಲೇವಡಿ ಮಾಡಿದ್ರು.ಸುನೀಲ್ ಕುಮಾರ್ ಮಾತಿಗೆ ಇಡೀ ಸದನ ನಗೆಗಡಲಲ್ಲಿ ತೇಲ್ತು.

ಒಟ್ನಲ್ಲಿ ಇವತ್ತಿನ ಕಲಾಪ ಉತ್ತರ ಕರ್ನಾಟಕ ಭಾಗದ ಮೇಲಿನ ಚರ್ಚೆ,ಶಾಸಕರ ಅಭಿಪ್ರಾಯ ಮಂಡನೆ,ಅಲ್ಲಲ್ಲಿ ಸಿಎಂ ಕುರ್ಚಿ ಕಿತ್ತಾಟದ ಬಗ್ಗೆ ಕಾಲೆಳೆಯುವ ಮೂಲಕ ಮುಗಿದೋಯ್ತು..ನಾಳೆ ಸಿಎಂ ಸದನಕ್ಕೆ ಉತ್ತರ ಕರ್ನಾಟಕದ ಚರ್ಚೆಗೆ ಉತ್ತರ ಕೊಡುವ ಸಾಧ್ಯತೆ ಇದೆ.

ಇದನ್ನೂ ಓದಿ: ದೆಹಲಿ ಗಲಭೆ ಪ್ರಕರಣ: ಸಹೋದರಿಯ ಮದುವೆಗೆ ಉಮರ್ ಖಾಲಿದ್‌ಗೆ ಮಧ್ಯಂತರ ಜಾಮೀನು

ಇದನ್ನೂ ಓದಿ: ನನ್ನ ಚೇರ್ ಅತಂತ್ರದಲ್ಲಿಲ್ಲ, ಭದ್ರವಾಗಿದೆ.. ನಿಮ್ಮ ಚೇರ್ ನೊಡ್ಕಳಿ! ವಿಪಕ್ಷಗಳಿಗೆ ಸಿಎಂ ಕೌಂಟರ್‌

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News