)
ರಸ್ತೆ ಗುಂಡಿಗಳ ಸಮಸ್ಯೆಯಿಂದಾಗಿ ರೋಸಿ ಹೋದ ಸಿಲಿಕಾನ್ ಸಿಟಿಯ ಜನ ರಸ್ತೆ ಗುಂಡಿಯಲ್ಲಿ ಹೋಮ ಮಾಡಿ ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ. ಭಾರತೀನಗರ ನಿವಾಸಿಗಳ ವೇದಿಕೆಯಿಂದ ಕಾಕ್ಸ್ ಟೌನ್ ನ ತಂಬುಚೆಟ್ಟಿ ಜಂಕ್ಷನ್ ಬಳಿ ರಸ್ತೆ ಗುಂಡಿಗೆ ಹೂವಿನ ಹಾರ ಹಾಕಿ ಅಲಂಕಾರ ಮಾಡಿ ಪುರೋಹಿತರನ್ನು ಕರೆಸಿ ಗುಂಡಿ ಮುಂದೆ ಹೋಮ ಮಾಡಿ ಜಿಬಿಎ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.ಇನ್ನು ನಡು ರಸ್ತೆಯಲ್ಲೆ ಪೂಜೆಗೆ ಕುಳಿತ ಆಟೋ ಚಾಲಕರು ಜಿಬಿಎ ವಿರುಧ್ದ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನೂ ಗುಂಡಿ ಬೆಂಗಳೂರು ಬಗ್ಗೆ ಶಾಸಕ ಸತೀಶ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದು, ಬೆಂಗಳೂರು ಗುಂಡಿ ಮುಚ್ಚದ ರಾಜ್ಯ ಸರ್ಕಾರ ಧರ್ಮಸ್ಥಳದಲ್ಲಿ ಗುಂಡಿ ತೆಗೆಯಲು ಹೊರಟಿದ್ದಾರೆ. ಟ್ಯಾಕ್ಸ್ ಕಟ್ಟಲು ಮಾತ್ರ ಬೆಂಗಳೂರು ಜನ ಬೇಕು ಆದ್ರೆ ಬೆಂಗಳೂರಿನ ಗುಂಡಿ ಮುಚ್ಚಲು ಸರ್ಕಾರ ಮುಂದಾಗುತ್ತಿಲ್ಲ ಈಗಾಗಲೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ಉದ್ಯಮಿಗಳು ಗುಂಡಿ ಬೆಂಗಳೂರಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಹಲವು ಕಂಪನಿಗಳು ಬೇಸರದಲ್ಲಿ ಬೇಕೆ ರಾಜ್ಯಗಳತ್ತ ಮುಖ ಮಾಡಿವೆ , ಇನ್ವೆಸ್ಟ್ ಕರ್ನಾಟಕ ಅಂತಾ ಕರೆಯೋ ಸರ್ಕಾರ ಖಾಸಗೀ ಕಂಪನಿಗಳು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದರೆ. ಅವರ ಸಮಸ್ಯೆಗಳನ್ನು ಬಗೆಹರಿಸದೆ ರಾಜ್ಯ ಬಿಟ್ಟು ಹೋದ್ರೆ ಹೋಗಲಿ ಎಂಬ ಧಾಟಿಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡ್ತಾರೆ. ಗುಂಡಿ ಮುಚ್ಚುವ ಯೋಗ್ಯತೆ ಇಲ್ಲ ಅಂದ್ರೆ ಇನ್ವೆಸ್ಟ್ ಕರ್ನಾಟಕ ಯಾಕೇ ಮಾಡ್ಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇನ್ನೂ ಬೆಂಗಳೂರು ಜನ ಪ್ರತಿಯೊಂದಕ್ಕೂ ಟ್ಯಾಕ್ಸ್ ಕಟ್ಟಿದ್ರು ಸರ್ಕಾರ ಕನಿಷ್ಠ ಗುಂಡಿ ಕೂಡ ಮುಚ್ಚಲು ಸಾಧ್ಯ ಆಗ್ತಿಲ್ಲ ಕೊನೆಗೆ ನಾವು ಪ್ರತಿಭಟನೆ ಮಾಡಿ ಸಾಕಾಗಿ ನಾವುಗಳೇ ಗುಂಡಿ ಮುಚ್ವಲು ಪ್ರಾರಂಭ ಮಾಡಿದ್ದೆವೆ, 15 ದಿನದಲ್ಲಿ ಗುಂಡಿ ಮುಕ್ತ ಬೊಮ್ಮನಹಳ್ಳಿ ಮಾಡುತ್ತೆವೆ ಗ್ರೇಟರ್ ಬೆಂಗಳೂರು ಹೆಸರಲ್ಲಿ ಬೆಂಗಳೂರು ಛಿದ್ರ ಮಾಡಿದ್ದಾರೆ ,ಗ್ರೇಟರ್ ಬೆಂಗಳೂರು ಚುನಾವಣೆಯಲ್ಲು ಕಾಂಗ್ರೆಸ್ ಪಕ್ಷ ಸೋಲುತ್ತದೆ ಎಂದು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿರವರ ಹುಟ್ಟುಹಬ್ಬ ಪ್ರಯುಕ್ತ ಹೆಚ್ಎಸ್ ಆರ್ ಬಡಾವಣೆಯಲ್ಲಿ ಆಯೋಜಿಸಿದ್ದ ಫಿಟ್ ಅಂಡ್ ರನ್ ಕಾರ್ಯಕ್ರಮದಲ್ಲಿ ಸರ್ಕಾರದ ವಿರುಧ್ದ ಆಕ್ರೊಶ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಬೆಂಗಳೂರಿನ ಒಂದೊಂದು ರಸ್ತೆಯಲ್ಲೂ ಸಾವಿಗಾಗಿ ಬಾಯ್ತೆರೆದು ಕಾಯುತ್ತಿರುವ ಗುಂಡಿಗಳ ಮದ್ಯೆ ದಿನ ಬೆಳಗಾದರೆ ಯಾವ ಗುಂಡಿಗೆ ಹಲಿಯಾಗಬೇಕೊ ಎಂಬ ಭಯದಲ್ಲಿ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವ ಪರಿಸ್ಥಿತಿ ಉಂಟಾಗಿದೆ, ಇನ್ನಾದ್ರು ಸರ್ಕಾರ ಮತ್ತು ಜಿಬಿಎ ಗುಂಡಿ ಗಂಡಾಂತರಕ್ಕೆ ಮುಕ್ತಿ ಕಲ್ಪಿಸಿಕೊಡ್ತಾರ ಎಂದು ಕಾದು ನೋಡಬೇಕಿದೆ.