monkey video : ಗ್ರಾಹಕರ ರೀತಿ ಚೇರ್ ಮೇಲೆ ಹೋಗಿ ಕುಳಿತಿದೆ. ಕೋತಿಯ ಈ ವರ್ತನೆ ಅಲ್ಲಿದ್ದವರಿಗೆ ಅಚ್ಚರಿ ಮೂಡಿಸಿದೆ.

monkey video : ಕೋತಿಗಳ ವರ್ತನೆ ಹಲವು ಬಾರಿ ಮನುಷ್ಯರನ್ನು ಹೋಲುತ್ತದೆ. ಅವುಗಳ ಹಾವ ಭಾವ ಕೂಡ ಹಲವು ಬಾರಿ ಮಾನವನಂತೆಯೇ ಭಾಸವಾಗುತ್ತದೆ. ಕೋತಿಗಳು ಸಹ ಅದೆಷ್ಟೋ ಬಾರಿ ಮಾನವನನ್ನು ಹೋಲುವಂತೆ ಕೆಲವು ಕ್ರಿಯೆಗಳನ್ನು ಮಾಡಿದ ಉದಾಹರಣೆಗಳಿವೆ. ಕೋತಿಗಳ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿರೋ ಸುಬ್ಬಣ್ಣ ಅನ್ನೋರ ಮಾಲೀಕತ್ವ ಹೋಟೆಲ್ ಗೆ ಕೋತಿಯೊಂದು ಎಂಟ್ರಿ ಕೊಟ್ಟಿದೆ. ಈ ವೇಳೆ ಯಾರಿಗೂ ಹೆದರದೇ ಗ್ರಾಹಕರ ರೀತಿ ಚೇರ್ ಮೇಲೆ ಹೋಗಿ ಕುಳಿತಿದೆ. ಕೋತಿಯ ಈ ವರ್ತನೆ ಅಲ್ಲಿದ್ದವರಿಗೆ ಅಚ್ಚರಿ ಮೂಡಿಸಿದೆ.
ದಿಢೀರ್ ಹೋಟೆಲ್ ಗೆ ಬಂದ ಕೋತಿಗೆ ಹೋಟೆಲ್ ಮಾಲೀಕ ಸುಬ್ಬಣ್ಣ ಅವರು ಒಗ್ಗರಣೆ, ಮಿರ್ಚಿ, ಪಲಾವ್ ಕೊಟ್ಟಿದ್ದಾರೆ. ಮಾಲೀಕರು ಕೊಟ್ಟ ಟಿಫನ್ ಅನ್ನ ಕುರ್ಚಿ ಮೇಲೆ ಕುಳಿತು ಸವಿದು ಮತ್ತೆ ವಾಪಸ್ ತೆರಳಿದೆ.
ಕೋತಿ ಗ್ರಾಹಕರ ರೀತಿ ಬಂದು ಚೇರ್ ಮೇಲೆ ಕುಳಿತು ಟಿಫಿನ್ ಸವಿದಿರೋ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಮಂಗನ ಈ ವರ್ತನೆ ಅನೇಕರಿಗೆ ಆಶ್ಚರ್ಯ ತರಿಸಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.