ಬೆಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ.. ಹಿಂದೂ ಯುವಕನ ಜೊತೆ ಪಾರ್ಕ್ ಬಳಿ ಕುಳಿತಿದ್ದಕ್ಕೆ ಮುಸ್ಲಿಂ ಯುವಕರ ದರ್ಪ..! 

ಶಿವಮೊಗ್ಗ, ಉಡುಪಿ, ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಕೇಸ್ ಗಳು ವರದಿ ಆಗ್ತಿದ್ವು. ಈಗ ಬೆಂಗಳೂರಿನಲ್ಲೂ ಕೂಡ ನಾಲ್ಕೈದು ಜನ ಮುಸ್ಲಿಂ ಯುವಕರು ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿ ಅರೆಸ್ಟ್ ಆಗಿದ್ದಾರೆ. ತಮ್ಮ ಪಾಡಿಗೆ ತಾವು ಹೋಗೋದು ಬಿಟ್ಟು ಯುವಕ ಯುವತಿಯನ್ನ ಪ್ರಶ್ನೆ ಮಾಡಿ, ತಾವೇ ವಿಡಿಯೋ ಮಾಡಿ ವೈರಲ್ ಮಾಡಿ ತಾವೇ ಅರೆಸ್ಟ್ ಆಗಿದ್ದಾರೆ.

Written by - Krishna N K | Last Updated : Apr 11, 2025, 08:16 PM IST
    • ಮುಸ್ಲಿಂ ಯುವಕರು ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿ ಅರೆಸ್ಟ್ ಆಗಿದ್ದಾರೆ.
    • ತಾವೇ ವಿಡಿಯೋ ಮಾಡಿ ವೈರಲ್ ಮಾಡಿ ತಾವೇ ಅರೆಸ್ಟ್ ಆಗಿದ್ದಾರೆ.
    • ಧರ್ಮ ರಕ್ಷಣೆ ಸೋಗಿನಲ್ಲಿ ನೈತಿಕ ಪೊಲೀಸ್ ಗಿರಿ ತೋರಿದ್ದಾರೆ.
ಬೆಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ.. ಹಿಂದೂ ಯುವಕನ ಜೊತೆ ಪಾರ್ಕ್ ಬಳಿ ಕುಳಿತಿದ್ದಕ್ಕೆ ಮುಸ್ಲಿಂ ಯುವಕರ ದರ್ಪ..! 

ಬೆಂಗಳೂರು : ಈ ವಿಡಿಯೋ ಒಮ್ಮೆ ನೋಡಿದ್ರಿ ಅಲ್ವಾ.ವಿಡಿಯೋ ನೋಡಿದ್ರೆ ಇದು ಎಲ್ಲೋ ಮಂಗಳೂರು ಅಥವಾ ಉಡುಪಿಯಲ್ಲಿ ಆಗಿರ್ಬೋದು ಅಂತಾ ಅನ್ಸಿರುತ್ತೆ. ಆದ್ರೆ ಈ ಘಟನೆ ನಡೆದಿದ್ದು ಬೆಂಗಳೂರಿನಲ್ಲಿ. ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸುವರ್ಣ ಲೇಔಟ್ ನಲ್ಲಿರೋ ಪಾರ್ಕ್ ವೊಂದರ ಬಳಿ ಮುಸ್ಲಿಂ ಯುವಕರು ಧರ್ಮ ರಕ್ಷಣೆ ಸೋಗಿನಲ್ಲಿ ನೈತಿಕ ಪೊಲೀಸ್ ಗಿರಿ ತೋರಿದ್ದಾರೆ. ಮಾರಲ್ ಪೊಲೀಸಿಂಗ್ ಮಾಡಿದ್ದ ಓರ್ವ ಅಪ್ರಾಪ್ತ ಸೇರಿ ಐವರನ್ನ ಪೊಲೀಸ್ರು ಬಂಧಿಸಿದ್ದಾರೆ.

Add Zee News as a Preferred Source

ಅಂದ್ಹಾಗೆ ಕಳೆದ ವಾರ ಅಂದ್ರೆ ಮಾರ್ಚ್ 4ನೇ ತಾರೀಖು ಸಂಜೆ 4 ಗಂಟೆ ಸುಮಾರಿಗೆ ನಡೆದಿರುವ ಘಟನೆ ಇದು. ಓರ್ವ ಮುಸ್ಲಿಂ ಯುವತಿ ಹಿಂದೂ ಧರ್ಮದ ಸ್ನೇಹಿತನ ಜೊತೆ ಬೈಕ್ ನಲ್ಲಿ ಕೂತು ಮಾತಾಡ್ತಿದ್ಲು. ಈ ವೇಳೆ ಏಕಾಏಕಿ ಬಂದಿದ್ದ ಐವರು ಮುಸ್ಲಿಂ ಯುವಕರು ಯುವತಿಯನ್ನ ಪ್ರಶ್ನೆ ಮಾಡಿದ್ದಾರೆ. ಇಲ್ಯಾಕ್ ಬಂದಿದೀಯಾ. ಈತನ ಜೊತೆ ಯಾಕಿದ್ಯಾ..? ಮನೇಲಿ ಹೇಳಿ ಬಂದಿದ್ಯಾ..? ನಿಮ್ಮ ಮನೆಯವ್ರ ನಂಬರ್ ಕೊಡು ಅಂತಾ ಧರ್ಮ ರಕ್ಷಣೆ ಹೆಸ್ರಲ್ಲಿ ನೈತಿಕ ಗಿರಿ ತೋರಿದ್ದಾರೆ.

ಇದನ್ನೂ ಓದಿ:ಅಯ್ಯೋ ಅಯೋಧ್ಯೆ ರಾಮ.. ನಿನ್ನ ಸನ್ನಿಧಿಯಲ್ಲಿ ಇದೆಂಥಾ ಪಾಪದ ಕೆಲಸ..! ಮಹಿಳಾ ಭಕ್ತರು ಸ್ನಾನ ಮಾಡುತ್ತಿದ್ದಾಗ, ಈ ಪಾಪಿ.. 

ಈ ವೇಳೆ ಈತ ನನ್ನ ಸ್ನೇಹಿತ. ಸುಮ್ಮನೆ ಕೂತು ಮಾತಾಡ್ತಿದ್ವಿ ಅಷ್ಟೇ ಅಂತಾ ಯುವತಿ ಸಮಾಧಾನದಿಂದ ಉತ್ತರ ಕೊಟ್ರೂ ಕೇಳದ ಮುಸ್ಲಿಂ ಯುವಕರು ಮೊಬೈಲ್ ತೆಗೆದು ವಿಡಿಯೋ ರೆಕಾರ್ಡ್ ಮಾಡಿ ಮತ್ತೆ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಯುವಕನ ಮೇಲೆ ಹಲ್ಲೆಗೆ ಯತ್ನಿಸಿ ವಿಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.‌‌

ಇನ್ನು ಘಟನೆ ಸಂಬಂಧ ಯುವತಿಯಿಂದ ದೂರು ಪಡೆದಿದ್ದ ಚಂದ್ರಾಲೇಔಟ್ ಪೊಲೀಸ್ರು ಓರ್ವ ಅಪ್ರಾಪ್ತ ಸೇರಿ ಐವರನ್ನ ಬಂಧಿಸಿದ್ದಾರೆ. ಮಹೀನ್, ಮನ್ಸೂರ್, ಅಫ್ರಿದಿ ಪಾಷಾ ಹಾಗೂ ವಾಸೀಂ ಖಾನ್ ಎಂಬುವರನ್ನ ಬಂಧಿಸಿದ್ದಾರೆ. ಆರೋಪಿಗಳೆಲ್ಲರೂ ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯ ನಿವಾಸಿಗಳಾಗಿದ್ದು, ವೆಲ್ಡಿಂಗ್ ಹಾಗೂ ಸ್ಕ್ರಾಪ್ ಕೆಲಸ ಮಾಡುತ್ತಿದ್ದಾರೆ.‌ ಇನ್ನು ಈ ಪಾರ್ಕ್ ಬಳಿ ಕೆಲ ಯುವಕ ಯುವತಿಯರು ಈ ರೀತಿ ಬೈಕ್ ಮೇಲೆ ಕುಳಿತುಕೊಳ್ಳುವುದು. ಸುತ್ತಾಡುವುದು.ಇದೇ ಪಾರ್ಕ್ ಬಳಿ ಕೆಲವರು ಎಣ್ಣೆ ಹೊಡೆಯೋದು ಮಾಡುತ್ತಾರಂತೆ. ಇನ್ನೂ ಘಟನೆ ಬಗ್ಗೆ ಡಿಸಿಪಿ ಹೇಳಿದ್ದಿಷ್ಟು.

ಇದನ್ನೂ ಓದಿ:2 ಡಿವೋರ್ಸ್‌ ಆದ್ರೂ ಸುಮ್ಮನಿರದೆ.. 18ರ ಹರೆಯದ ಬಾಲಕನನ್ನೇ ಪ್ರೀತಿಸಿ ಮದುವೆಯಾದ 30 ವರ್ಷದ ಅಂಟಿ..! 

ಸದ್ಯ ಘಟನೆ ಸಂಬಂಧ ಗಲಭೆಗೆ ಯತ್ನಿಸಿರುವ ಆರೋಪದಡಿ ನಾಲ್ವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿರೋ ಚಂದ್ರಾಲೇಔಟ್ ಪೊಲೀಸ್ರು ತೀವ್ರ ತನಿಖೆ ನಡೆಸ್ತಿದ್ದಾರೆ. ಧರ್ಮದ ವಿಚಾರವಾಗಿ ಈ ರೀತಿಯಾದಂತಹ ಘಟನೆಗಳು ಬೆಂಗಳೂರಿನಲ್ಲಿ ವರದಿಯಾಗಿರಲಿಲ್ಲ. ನಮ್ಮ ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಎನ್ನದೇ ಎಲ್ಲಾ ಧರ್ಮೀಯರು ಬೇಧ-ಬಾವ ಇಲ್ಲದೇ ಸ್ನೇಹಿತರಾಗಿ ಇರೋದು. ಒಟ್ಟಿಗೆ ಕುಳಿತು ಮಾತನಾಡೋದು ತಪ್ಪಾ ಅನ್ನೋ ಪ್ರಶ್ನೆ ಎದ್ದಿದೆ. ನೈತಿಕ ಪೊಲಿಸ್ ಗಿರಿ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News