)
ಬೆಂಗಳೂರು: ಬೆಂಗಳೂರಿನ ಬ್ಯಾಸವೇಶ್ವರನಗರದ ಬಳಿಯ ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಮನುಷ್ಯತ್ವಕ್ಕೂ ಮೀರಿದ ಹೃದಯವಿದ್ರಾವಕ ಘಟನೆ ನಡೆದಿದೆ. ತಿಗಳರಪಾಳ್ಯ ನಿವಾಸಿಯಾಗಿರುವ 24 ವರ್ಷದ ಚಂದ್ರಿಕಾ ಎಂಬ ಮಹಿಳೆ, ಹಣಕಾಸು ಮತ್ತು ಕುಟುಂಬದ ಕಲಹದಿಂದಾಗಿ ತನ್ನ ಒಂದೂವರೆ ವರ್ಷದ ಮಗಳು ಚಾರ್ವಿಗೆ ವಿಷವಾಯ್ತು ಟೀ ಕುಡಿಸಿ, ತಾನೂ ಅದೇ ಟೀ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಪೊಲೀಸರ ಪ್ರಕಾರ, ಘಟನೆ ದಿನ ಚಂದ್ರಿಕಾಳ ಗಂಡ ಯೋಗೇಶ್ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ದಾರುಣ ಕೃತ್ಯ ನಡೆದಿದ್ದು, ಟೀಗೆ ಇಲಿ ಪಾಷಾಣ (ಮೂಷಕನಾಶಕ) ಬೆರೆಸಿ ಮಗು ಚಾರ್ವಿಗೆ ಕುಡಿಸಿದ್ದಾರೆ. ತಾನೂ ಅದೇ ಟೀ ಕುಡಿದ ಬಳಿಕ ಗಂಡನಿಗೆ ಕರೆಮಾಡಿ ಘಟನೆಯ ವಿವರ ತಿಳಿಸಿದ್ದಾರೆ. ತಕ್ಷಣ ಮನೆಗೆ ಬಂದ ಯೋಗೇಶ್ ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ದುರಾದೃಷ್ಟವಶಾತ್, ಮಗು ಚಾರ್ವಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರೆ, ತಾಯಿ ಚಂದ್ರಿಕಾ ಪ್ರಾಣಾಪಾಯದಿಂದ ಪಾರಾಗಿ, ಇದೀಗ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.
ಈ ಘಟನೆ ಸಾಮಾಜಿಕವಾಗಿ ಹಲವು ಪ್ರಶ್ನೆಗಳನ್ನು ಎತ್ತಿದ್ದು, ಮಾನಸಿಕ ಒತ್ತಡ, ಕುಟುಂಬ ಕಲಹ ಹಾಗೂ ಆರ್ಥಿಕ ಸಮಸ್ಯೆಗಳ ಪರಿಣಾಮವಾಗಿ ತಾಯಿ ತನ್ನ ಮಾದರಿಯ ಕರ್ತವ್ಯವನ್ನೂ ಮರೆತ ಸ್ಥಿತಿ ಅಂತ ಜನತೆಯಲ್ಲಿ ತೀವ್ರ ಬೇಸರ ವ್ಯಕ್ತವಾಗಿದೆ.