ಬಡವರಿಗೆ ಕೊರೊನಾ ಬಂದರೆ ಉಚಿತವಾಗಿ ಚಿಕಿತ್ಸೆ ನೀಡಿ: ಪ್ರಧಾನಿ ಮೋದಿಗೆ ಜಿ.ಸಿ. ಚಂದ್ರಶೇಖರ್ ಪತ್ರ

ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಕ್ಕು ಪತ್ರ ಬರೆದು ಸಲಹೆ ನೀಡಿದ್ದೆ. ನನ್ನ ಸಲಹೆಯನ್ನು ಒಪ್ಪಿ ಕರ್ನಾಟಕ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡಲು ಆರಂಭಿಸಿದೆ. 'ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್' ಸ್ಥಾಪಿಸಿದೆ.

Updated: Jun 26, 2020 , 01:14 PM IST
ಬಡವರಿಗೆ ಕೊರೊನಾ ಬಂದರೆ ಉಚಿತವಾಗಿ ಚಿಕಿತ್ಸೆ ನೀಡಿ: ಪ್ರಧಾನಿ ಮೋದಿಗೆ ಜಿ.ಸಿ. ಚಂದ್ರಶೇಖರ್ ಪತ್ರ

ನವದೆಹಲಿ: ಮದ್ದಿಲ್ಲದ ಮಹಾರೋಗ ಕೋವಿಡ್-19 (COVID-19) ತುತ್ತಾದರೇನೆ ಅರ್ಧ ಸತ್ತಂತಾಗುತ್ತದೆ. ಈ ನಡುವೆ ವೈದ್ಯಕೀಯ ಸೌಲಭ್ಯಗಳಿಲ್ಲ, ಇದ್ದರೂ ದುಬಾರಿ ದರ ಭರಿಸಲಾರದೆ ಬಡವರು ತೀವ್ರ ಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಸೇರಿದಂತೆ ಬಿಪಿಎಲ್ ಕಾರ್ಡ್ (BPL Card) ವ್ಯಾಪ್ತಿಯ ಎಲ್ಲಾ ಬಡವರಿಗೆ ಅವರು COVID 19 ರೋಗ ಪೀಡಿತರಾದರೆ ಉಚಿತ ಚಿಕಿತ್ಸೆ ನೀಡಬೇಕೆಂದು ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ (GC Chandrashekhar) ಒತ್ತಾಯಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದಿರುವ ಕಾಂಗ್ರೆಸಿನ‌ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, ದೇಶದಲ್ಲಿ COVID 19 ವ್ಯಾಪಕವಾಗಿ ಬೆಳೆಯುತ್ತಿದೆ. ಇದನ್ನು ನಿಯಂತ್ರಣ ಮಾಡಬೇಕಿದೆ. ಜೊತೆಗೆ ಸೋಂಕು ಪೀಡಿತರಿಗೆ ಸೂಕ್ತವಾದ ಚಿಕಿತ್ಸೆಯ ವ್ಯವಸ್ಥೆಯನ್ನೂ ಮಾಡಬೇಕಾಗುತ್ತದೆ. ಈ‌ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಕ್ಕು ಪತ್ರ ಬರೆದು ಸಲಹೆ ನೀಡಿದ್ದೆ. ನನ್ನ ಸಲಹೆಯನ್ನು ಒಪ್ಪಿ ಕರ್ನಾಟಕ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡಲು ಆರಂಭಿಸಿದೆ. 'ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್' ಸ್ಥಾಪಿಸಿದೆ. ಇದೇ ಮಾದರಿಯನ್ನು ಕೇಂದ್ರ ಸರ್ಕಾರ ಕೂಡ ಅಳವಡಿಸಿಕೊಳ್ಳಬೇಕು.‌ ದೇಶದೆಲ್ಲೆಡೆ ಇರುವ ಬಿಪಿಎಲ್ ಕಾರ್ಡ್ ಹೊಂದಿರುವವರೆಲ್ಲರಿಗೂ ಉಚಿತ ಚಿಕಿತ್ಸೆ ನೀಡಬೇಕು ಎಂದು ಜಿ.ಸಿ. ಚಂದ್ರಶೇಖರ್ ತಿಳಿಸಿದ್ದಾರೆ.