ಮೈಸೂರು ಮಹಾನಗರ ಪಾಲಿಕೆ: ಕಾಂಗ್ರೆಸ್ 'ಕೈ'ಗೆ ಒಲಿದ ಮೇಯರ್ ಸ್ಥಾನ, ಉಪಮೇಯರ್ ಜೆಡಿಎಸ್ ಗೆ

 ಶನಿವಾರದಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೇಯರ್ ಸ್ಥಾನವನ್ನು ಪಡೆದರೆ ಜೆಡಿಎಸ್ ಉಪ ಮೇಯರ್ ಸ್ಥಾನಕ್ಕೆ ತೃಪ್ತಿಪಟ್ಟಿದೆ.

Last Updated : Nov 17, 2018, 03:03 PM IST
ಮೈಸೂರು ಮಹಾನಗರ ಪಾಲಿಕೆ: ಕಾಂಗ್ರೆಸ್ 'ಕೈ'ಗೆ ಒಲಿದ ಮೇಯರ್ ಸ್ಥಾನ, ಉಪಮೇಯರ್ ಜೆಡಿಎಸ್ ಗೆ  title=

ಬೆಂಗಳೂರು: ಶನಿವಾರದಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೇಯರ್ ಸ್ಥಾನವನ್ನು ಪಡೆದರೆ ಜೆಡಿಎಸ್ ಉಪ ಮೇಯರ್ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ಆ ಮೂಲಕ  ಕಾಂಗ್ರೆಸ್ ಪಕ್ಷದ ಪುಷ್ಪಲತಾ ಜಗನಾಥ್ ಮೇಯರ್ ಆಗಿ ಆಯ್ಕೆಯಾದರೆ ಜೆಡಿಎಸ್ ನ ಶಫಿ ಅಹಮದ್ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮೇಯರ್ ಸ್ಥಾನಕ್ಕೆ ಪುಷ್ಪಲತಾ ಜಗನ್ನಾಥ್, ಶಾಂತಕುಮಾರಿ, ಶೋಭಾ ಸುನೀಲ್, ಪುಟ್ಟನಿಂಗಮ್ಮ, ಹಜೀರಾ ಸೀಮಾ ನಡುವೆ ಸ್ಪರ್ಧೆ ಇತ್ತು. ಆದರೆ ಅಂತಿಮವಾಗಿ  ಇವರಲ್ಲಿ ಪುಷ್ಪಾಲತಾ ಅವರ ಹೆಸರನ್ನು ಕಾಂಗ್ರೆಸ್ ನಾಯಕರು ಫೈನಲ್ ಮಾಡಿದ್ದಾರೆ. ಈ ಬಾರಿ ಸಾಮಾನ್ಯ ವರ್ಗದ ಮಹಿಳೆಗೆ ಮೇಯರ್ ಸ್ಥಾನ ಮೀಸಲಾಗಿದೆ. ಹಿಂದುಳಿದ ವರ್ಗದ ಬಿ. ವರ್ಗಕ್ಕೆ ಉಪಮೇಯರ್ ಸ್ಥಾನ ಮೀಸಲಾಗಿದೆ.‌

ಇನ್ನು ಉಪಮೇಯರ್ ಆಗಿ ಜೆಡಿಎಸ್​ನ ಶಫಿ ಅಹಮ್ನದ್ ಆಯ್ಕೆಯಾಗಿದ್ದಾರೆ. ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಉಪಮೇಯರ್​ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್​ನ ಶಫಿ ಅಹಮ್ಮದ್​ ಭರ್ಜರಿ ಜಯ ಸಾಧಿಸಿದರು. ಮೇಯರ್ ಸ್ಥಾನದ ಆಯ್ಕೆಗಾಗಿ ನಿನ್ನೆ ನಡೆದ ಸಭೆಯಲ್ಲಿ ಮೊದಲ ಅವಧಿಗೆ ಕಾಂಗ್ರೆಸ್ ಬಿಟ್ಟುಕೊಡಲಾಗಿದೆ ಮತ್ತು  ಐದು ವರ್ಷಗಳ ಅಧಿಕಾರವಧಿಯನ್ನು 2:3 ರ ಅನುಪಾತದಲ್ಲಿ ಹಂಚಿಕೊಳ್ಳಲು ನಿರ್ಧರಿಸಲಾಗಿದೆ. ಈ ಹಿನ್ನಲೆಯಲ್ಲಿ  ಎರಡು ವರ್ಷಗಳ ಕಾಲ ಇಬ್ಬರು ಕಾಂಗ್ರೆಸ್ ಸದಸ್ಯರು ಮೇಯರ್ ಆಗಲಿದ್ದಾರೆ. ಉಳಿದ ಮೂರು ವರ್ಷಗಳಲ್ಲಿ ಜೆಡಿಎಸ್  ಮೇಯರ್ ಸ್ಥಾನವನ್ನು ಹೊಂದಲಿದೆ. 

​ಮೈಸೂರು ಪಾಲಿಕೆಯಲ್ಲಿ ಪಕ್ಷಗಳ ಸದಸ್ಯರ ಬಲಾಬಲ

ಒಟ್ಟು ಸದಸ್ಯರು    -     65
ಕಾಂಗ್ರೆಸ್​           -    19
ಜೆಡಿಎಸ್​            -    18
ಬಿಜೆಪಿ               -    22
ಬಿಎಸ್​ಪಿ            -     1
ಪಕ್ಷೇತರರು         -     5

Trending News