ಮಾದಪ್ಪನ ಬೆಟ್ಟದಲ್ಲಿ ರೂಂ ಬೇಕಾ!! ಮೊಬೈಲ್ ನಲ್ಲೇ ಬುಕ್ ಮಾಡಿ!!

Male Mahadeshwara Hills: ಮಾದಪ್ಪನ ಸನ್ನಿಧಿ, ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಲು ಯೋಜಿಸುತ್ತಿರುವವರಿಗೆ ಭರ್ಜರಿ ಗುಡ್ ನ್ಯೂಸ್ ಇದೆ. ಈ ಸುದ್ದಿಯಿಂದ, ನಿಮ್ಮ ಪ್ರವಾಸ ಮತ್ತಷ್ಟು ಸುಗಮವಾಗಲಿದೆ. 

Written by - Yashaswini V | Last Updated : May 22, 2025, 10:09 AM IST
  • ಮಲೆ ಮಹದೇಶ್ವರನ ಬೆಟ್ಟ ಕರ್ನಾಟಕದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದು
  • ಇದೀಗ ಮಾದಪ್ಪನ ದರ್ಶನಕ್ಕೆ ತೆರಳುವವರಿಗೆ ಸಿಹಿ ಸುದ್ದಿ
ಮಾದಪ್ಪನ ಬೆಟ್ಟದಲ್ಲಿ ರೂಂ ಬೇಕಾ!! ಮೊಬೈಲ್ ನಲ್ಲೇ ಬುಕ್ ಮಾಡಿ!!

Madappa Hills: ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯಕ್ಕಾಗಿ ಅಲೆದಾಡುತ್ತಿದ್ದ ಭಕ್ತರಿಗೆ ಪ್ರಾಧಿಕಾರ ಸಿಹಿ ಸುದ್ದಿ ಕೊಟ್ಟಿದೆ.

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಜೇನುಮಲೆ, ಶಿವ ದರ್ಶಿನಿ, ಸೂರ್ಯ ದರ್ಶಿನಿ, ಶೈಲ ಭವನ, ಗುರುದರ್ಶಿನಿ, ಮಹದೇಶ್ವರ ಭವನ, ಯಾತ್ರಿ ನಿವಾಸ, ಡಾರ್ಮೆಟರಿ, ನಾಗಮಲೆ ಭವನಗಳಲ್ಲಿ ಆನ್ ಲೈನ್ ಬುಕಿಂಗ್ ಗೆ ಅವಕಾಶ ನೀಡಲಾಗಿದೆ. 

ಇದನ್ನೂ ಓದಿ- ನಮ್ಮ ಮೆಟ್ರೋದಲ್ಲಿ ಅಪರಿಚಿತ ವ್ಯಕ್ತಿಯ ವಿಕೃತ ಕೃತ್ಯ : ಮಹಿಳೆಯರ ಆಕ್ಷೇಪಾರ್ಹ ವಿಡಿಯೋ ತೆಗೆದು ಅಪ್ಲೋಡ್

ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದಿಂದ ಲಭ್ಯವಿರುವ ಮಾಹಿತಿಗಳ ಪ್ರಕಾರ, ಶೇ.70  ರಷ್ಟು ಕೊಠಡಿಗಳನ್ನು ಆನ್ ಲೈನ್ ಮೂಲಕ ಕಾದಿರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ- ಬೆಂಗಳೂರು ಜನರು ಬ್ರ್ಯಾಂಡೆಡ್ ನರಕದಲ್ಲಿ ನರಳುತ್ತಿದ್ದಾರೆ!!

ವಾಸ್ತವವಾಗಿ, ಕಳೆದ ಕೆಲವು ತಿಂಗಳುಗಳಿಂದ ತಾಂತ್ರಿಕ ದೋಷದಿಂದ ಆನ್ ಲೈನ್ ಬುಕಿಂಗ್ ಸ್ಥಗಿತವಾಗಿತ್ತು. ಇದೀಗ  ಇದನ್ನು ಸರಿಪಡಿಸಲಾಗಿದ್ದು ಶೇ 70ರಷ್ಟು ಮುಂಗಡ ಬುಕಿಂಗ್ ಮಾಡಲು ಅವಕಾಶ ನೀಡಲಾಗುತ್ತಿದೆ. ಇದರ ಸಹಾಯದಿಂದ ಮಲೆ ಮಹದೇಶ್ವರನ ಸನ್ನಿಧಾನಕ್ಕೆ ತೆರಳಲು ಯೋಜಿಸುವ ಪ್ರತಿಯೊಬ್ಬರು  ಆನ್ ಲೈನ್ ಮೂಲಕವೇ ವಸತಿಗೃಹಗಳನ್ನು  ಬುಕ್ ಮಾಡಿಕೊಳ್ಳಬಹುದು. ಇದರಿಂದ ಸಮಯ ಉಳಿತಾಯವಾಗಲಿದೆ, ಉಳಿದಂತೆ ಶೇ 30ರಷ್ಟು ಮಾಹಿತಿ ಕೇಂದ್ರಕ್ಕೆ ತೆರಳಿ ವಸತಿಗೃಹಗಳನ್ನು ಪಡೆದುಕೊಳ್ಳಬಹುದು  ಎಂದು ಕಾರ್ಯದರ್ಶಿ ರಘು ತಿಳಿಸಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

Trending News