Biligiriranga Betta News: ಹುಂಡಿ ಹಣ ಎಣಿಕೆ ವೇಳೆ ದೇವರ ದುಡ್ಡಿಗೆ ಕಣ್ಣು ಹಾಕಿ ಮೂವರು ತಗ್ಲಾಕಿಕೊಂಡ ಘಟನೆ ಪ್ರಸಿದ್ಧ ಯಾತ್ರಸ್ಥಳವಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಬುಧವಾರ (ಅ.15) ನಡೆದಿದೆ. ಮಂಡ್ಯ ನಗರದ ಗಿರೀಶ್, ಶ್ರೀನಿವಾಸ್, ಶರವಣ ಬಂಧಿತ ಆರೋಪಿಗಳು.
ಬುಧವಾರ (ಅಕ್ಟೋಬರ್ 15) ದಿನದಂದು ಬಿಳಿಗಿರಿರಂಗನ ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ ನಡೆಯುವಾಗ ಚಿಲ್ಲರೆ ಬೇಕೆಂದು ಬಂದಿದ್ದ ಈ ಮೂವರು ಬಳಿಕ ಎಣಿಕೆಗೆ ಸಹಾಯ ಮಾಡಲು ಕುಳಿತು ಅಧಿಕಾರಿಗಳು, ಸಿಬ್ಬಂದಿಗಳ ಕಣ್ತಪ್ಪಿಸಿ 63 ಸಾವಿರ ಹಣವನ್ನು ಲಪಟಾಯಿಸಿದ್ದರು.
ಹುಂಡಿ ಎಣಿಕೆ ಮಧ್ಯೆ ಮೂವರೂ ಕೂಡ ಒಮ್ಮೆಗೆ ಮೂತ್ರ ವಿಸರ್ಜನೆಗೆ ತೆರಳಿದ್ದರು. ಈ ಬಗ್ಗೆ ಅಲ್ಲಿದ್ದವರಿಗೆ ಅನುಮಾನವೂ ಮೂಡಿತ್ತು.
ಈ ವೇಳೆ ಸಂಶಯಗೊಂಡು ಪರಿಶೀಲಿಸಿದಾಗ ಅವರ ಬಳಿ ಕದ್ದ 63,095 ರೂ. ನಗದು ಪತ್ತೆಯಾಗಿದೆ. ಕೂಡಲೇ ಕಾರ್ಯ ನಿರ್ವಾಹಕ ಅಧಿಕಾರಿ ಮೋಹನ್ ಯಳಂದೂರು ಠಾಣೆಗೆ ದೂರು ನೀಡಿದ್ದರು.
ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ- ಕಬ್ಬು ಕಟಾವು ಮಾಡುವಾಗ ಎರಡು ಚಿರತೆ ಮರಿಗಳು ಪ್ರತ್ಯಕ್ಷ- ಹೌಹಾರಿದ ರೈತರು
ಇದನ್ನೂ ಓದಿ- ಮಾದಪ್ಪನ ಬೆಟ್ಟದಲ್ಲಿ ಶೌಚಾಲಯ ಅವ್ಯವಸ್ಥೆ ಆರೋಪ: ಮಹಿಳಾ ಭಕ್ತರ ಆಕ್ರೋಶ









