ಬೆಂಗಳೂರು: KSRTC ನಿಗಮದ ವತಿಯಿಂದ ನೂತನವಾಗಿ 20 ಬೊಲೆರೋ ವಾಹನಗಳನ್ನು ಸೇರ್ಪಡೆಗೊಳಿಸಲಾಯಿತು. ನಿಗಮದ ಅಧ್ಯಕ್ಷ ಎಂ ಚಂದ್ರಪ್ಪರವರು ನೂತನ ವಾಹನಗಳಿಗೆ ಚಾಲನೆ ನೀಡಿ, ಮಾತನಾಡಿ, ಈ ವಾಹನಗಳನ್ನು ವಿಭಾಗಗಳಲ್ಲಿ ಅಪಘಾತ ನಡೆದ ಸ್ಥಳಕ್ಕೆ ತ್ವರಿತವಾಗಿ ತಲುಪಲು ಹಾಗೂ ಗಾಯಾಳುಗಳಿಗೆ ಸಮರ್ಪಕ ವೈದ್ಯಕೀಯ ಸೌಲಭ್ಯ ಸಕಾಲಕ್ಕೆ ಒದಗಿಸುವ ನಿಟ್ಟಿನಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Football ಮೈದಾನಕ್ಕೆ ಬಂದ ಘೇಂಡಾಮೃಗ: ಅದನ್ನು ಓಡಿಸಲು ಆಟಗಾರರು ಮಾಡಿದ ಕಿತಾಪತಿ ನೋಡಿ


ವಿಭಾಗಗಳ ವ್ಯಾಪ್ತಿಯಲ್ಲಿನ ಹೆಚ್ಚು ಅಪಘಾತ ಆಗುವ ಸ್ಥಳಗಳ ಬಗ್ಗೆ ಚಾಲನಾ ಸಿಬ್ಬಂದಿಗಳಿಗೆ ಜಾಗೃತೆ ಹಾಗೂ ಮುನ್ಸೂಚನೆ ನೀಡಲು ಮತ್ತು ತನಿಖಾದಳದ ಕಾರ್ಯಕ್ಕೆ ಈ ವಾಹನಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.


ಇದನ್ನೂ ಓದಿ: ಬಿಹಾರದಲ್ಲಿ ರಸ್ತೆ ಬದಿ ಗುಡಿಸಲಿಗೆ ಟ್ರಕ್ ಡಿಕ್ಕಿ, ಎಂಟು ಮಕ್ಕಳ ಸಾವು


KSRTC ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಮಾತನಾಡಿ, ಸದರಿ ವಾಹನಗಳನ್ನು ಅಪಘಾತ ಪರಿಹಾರ ನಿಧಿಯಿಂದ ಸೇರ್ಪಡೆಗೊಳಿಸಲಾಗುತ್ತಿದ್ದು, ಸಾರ್ವಜನಿಕ ಪ್ರಯಾಣಿಕರು ಹಾಗೂ  ಚಾಲನಾ ಸಿಬ್ಬಂದಿಗಳು ಅಪಘಾತಕ್ಕೆ ಒಳಗಾಗಬಾರದು. ಆದರೂ ಅಪಘಾತ ಆಕಸ್ಮಿಕವೇ. ಇಂತಹ ಸಂದರ್ಭಗಳಲ್ಲಿ ತುರ್ತು ಪರಿಹಾರ ಒದಗಿಸುವುದು ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ. ನಿಗಮದ ವ್ಯಾಪ್ತಿಯ 16 ವಿಭಾಗಗಳಲ್ಲಿ ಈ ವಾಹನಗಳು  24*7 ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸುತ್ತಾ, ನಿಗಮದಲ್ಲಿ ಕಾರ್ಮಿಕ ಕಲ್ಯಾಣಕ್ಕಾಗಿ ಹೆಚ್ಚು ಒತ್ತನ್ನು ನೀಡುತ್ತಿರುವ ಬಗ್ಗೆ ಪುನರುಚ್ಚಿಸಿದರು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.