ಕೆಂಪುಕೋಟೆ ಮೇಲೆ ತ್ರಿವರ್ಣದ್ವಜ ಹಾರಿಸಿದ HDD ಈಶ್ವರನ ವರ ಪುತ್ರ : ನಿಖಿಲ್‌ ಕುಮಾರಸ್ವಾಮಿ

ರಾಜ್ಯ ಪಕ್ಷ ಸಂಘಟನಾ ರಾಜ್ಯ ಪ್ರವಾಸ ಮತ್ತು ಮಿಸ್ ಕಾಲ್ ಅಭಿಯಾನ ನಡೆಸುತ್ತಿದ್ದೇವೆ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು. 

Written by - Chetana Devarmani | Last Updated : Jun 15, 2025, 05:06 PM IST
  • ಜನರೊಂದಿಗೆ ಜನತಾದಳ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಿದ ಜೆಡಿಎಸ್
  • ಎಲ್ಲರೂ ಸೇರಿ ಪಕ್ಷ ಕಟ್ಟೋಣ, ಪಕ್ಷ ಸಂಘಟನೆಗೆ ನಿಖಿಲ್‌ ಕುಮಾರಸ್ವಾಮಿ ರಾಜ್ಯ ಪ್ರವಾಸ
  • 58 ದಿನಗಳ ಅಭಿಯಾನ ಪಕ್ಷಕ್ಕೆ ಹೊಸ ಯುಗ ಶುರುವಾಗಬೇಕು
ಕೆಂಪುಕೋಟೆ ಮೇಲೆ ತ್ರಿವರ್ಣದ್ವಜ ಹಾರಿಸಿದ HDD  ಈಶ್ವರನ ವರ ಪುತ್ರ : ನಿಖಿಲ್‌ ಕುಮಾರಸ್ವಾಮಿ

ಬೆಂಗಳೂರು: ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ನಾಳೆಯಿಂದ (ಜೂನ್‌ 16) ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಸೋಮವಾರ ತುಮಕೂರು ಜಿಲ್ಲೆಯಿಂದ ಅಧಿಕೃತ ವಾಗಿ ಪ್ರವಾಸ ಆರಂಭ ಮಾಡ್ತೇನೆ. ಎಲ್ಲಾ ಹಿರಿಯ ಮುಖಂಡರು ಸಹಕಾರ ಕೊಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರು ಮನವಿ ಮಾಡಿದರು.

Add Zee News as a Preferred Source

ಪಕ್ಷವನ್ನು ಜನರ ಬಳಿಗೆ ಕರೆದೊಯ್ಯುವ ಉದ್ದೇಶದಿಂದ ಹಿರಿಯರು ಸೇರಿ ಪಕ್ಷದ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರೊಂದಿಗೆ ಜನತಾದಳ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿಯೇ ರಾಜ್ಯ ಪಕ್ಷ ಸಂಘಟನಾ ರಾಜ್ಯ ಪ್ರವಾಸ ಮತ್ತು ಮಿಸ್ ಕಾಲ್ ಅಭಿಯಾನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಇಂದಿನಿಂದ ಅಧಿಕೃತವಾಗಿ ಮಿಸ್ಡ್ ಕಾಲ್ ಅಭಿಯಾನದ ಮೂಲಕ ಸದಸ್ಯತ್ವ ನೋಂದಣಿ ಆರಂಭ ಮಾಡಿದ್ದೇವೆ. ರಾಜ್ಯ ಪ್ರವಾಸದ ವೇಳೆ ಪ್ರತಿ ಕಾರ್ಯಕರ್ತರನ್ನು ಭೇಟಿ ಮಾಡಿ. ಪಕ್ಷಕ್ಕಾಗಿ ದುಡಿಯುವ ತಳಮಟ್ಟದ ಕಾರ್ಯಕರ್ತರನ್ನು ಗುರುತಿಸುವ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು.

ಕನಿಷ್ಠ ಐವತ್ತು ಲಕ್ಷ ಜನ ಸದಸ್ಯರಾಗಬೇಕು ಎಂಬ ಗುರಿ ಇಟ್ಟುಕೊಂಡು ಹೋಗೋಣ. ಮತ್ತೆ ಈ ಪಕ್ಷವನ್ನು ತಳ ಮಟ್ಟದಿಂದ ಪುಟಿದೇಳುವಂತೆ ಮಾಡಬೇಕು ಎಂಬ ನಿಟ್ಟಿನಲ್ಲಿ ಆ.16 ರವರೆಗೆ ರಾಜ್ಯ ಪ್ರವಾಸ ಹಮ್ಮಿಕೊಳ್ಳಲಾಗಿದೆ ನಿಮ್ಮ ಸಹಕಾರ ಇರಲಿ ಎಂದು ಮನವಿ ಮಾಡಿದರು.

 ಚಿತ್ರರಂಗದಲ್ಲಿ ಅಣ್ಣಾವ್ರು, ರಾಜಕಾರಣದಲ್ಲಿ ಕುಮಾರಣ್ಣ

ಚಿತ್ರರಂಗದಲ್ಲಿ ಡಾ ರಾಜ್ ಕುಮಾರಣ್ಣ ಅವರಿಗೆ ಅಣ್ಣ ಅಂತ ಸ್ಥಾನ ಕೊಟ್ಟಿದ್ದರು. ರಾಜಕೀಯದಲ್ಲಿ ಕುಮಾರಸ್ವಾಮಿ ಅವರಿಗೆ ಜನರು ಸ್ಥಾನ‌ ನೀಡಿದ್ದಾರೆ. ಅಪ್ಪಂದಿರ ದಿನಾಚರಣೆ ಆಚರಿಸೋಕ್ಕೆ ನನಗೆ ಒಳ್ಳೆ ಅವಕಾಶ ತಂದೆ ಅಂದ್ರೆ ನಮ್ಮ‌ ಜೀವನದ ಬೆಳಕು. ನಾನು ನಮ್ಮ‌ ತಂದೆಯಿಂದ ಹಲವು ವಿಚಾರಗಳನ್ನು ಹಾಗೆಯೇ ದೇವೇಗೌಡರ ರಾಜಕೀಯ ಕಾರ್ಯ ಕೆಲಸ ಕಲಿತಿದ್ದೇನೆ ಎಂದು ತಿಳಿಸಿದರು.

 ಕೆಂಪುಕೋಟೆ ಮೇಲೆ ತ್ರಿವರ್ಣದ್ವಜ ಹಾರಿಸಿದ HDD ಈಶ್ವರನ ವರ ಪುತ್ರ

ಒಬ್ಬ ರೈತನ ಮಗ ದೇಶದ ಉನ್ನತ ಹುದ್ದೆ ಅಲಂಕರಿಸಿದರು ದೇವೇಗೌಡರನ್ನ ಈಶ್ವರನ ಪುತ್ರ ಎಂದೇ ಹೇಳಬಹುದು. ರಾಜ್ಯದ ಬಗ್ಗೆ ಅವರಿಗೆ ಇದ್ದ ಬದ್ದತೆ ನೋಡಿದ್ರೆ ಹಲವು ಜನರಿಗೆ ಮಾರ್ಗದರ್ಶನ ಆಗುವಂತದ್ದು ಎಂದರು. ನನ್ನ ಒಳಗೆ ಆತಂಕವಿದೆ ಎಲ್ಲರೂ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ನಾನು ಪಕ್ಷದ ಸಂಘಟನೆಗೆ ಮೊದಲು ಹಾಜರಾತಿ ಆಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಾವೇಶಕ್ಕೂ ಮೊದಲು ಆದಿಚುಂಚನಗಿರಿ ಬುದ್ದಿಗಳ ಜೊತೆ ಕೂತಿದ್ದೆ. ಅವರು ಅನೇಕ ಪ್ರಸ್ತಾವಿಕ ನುಡಿ ಹೇಳುತ್ತಿದ್ರು. ಹೀಗಾಗಿ ಮಧ್ಯೆ ಎದ್ದು ಬರಲು ಆಗಲಿಲ್ಲ. ಎಲ್ಲರಿಗೂ ಕ್ಷಮೆ ಕೇಳುತ್ತೇನೆ ಮುಂದೆ ಈ ರೀತಿ ಆಗಲಿಲ್ಲ. ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ.ಪಕ್ಷಕ್ಕೆ ಹೊಸ ಯುಗ ಆರಂಭವಾಗಬೇಕು ಎಂದರು.

 58 ದಿನಗಳ ಕಾಲ ನಿಮ್ಮ ಜೊತೆ ನಿರಂತರವಾಗಿ ಹೆಜ್ಜೆ ಹಾಕ್ತೇನೆ

ನಾಳೆಯಿಂದ ಬಹುತೇಕ ಜಿಲ್ಲೆ, ತಾಲೂಕುಗಳಿಗೆ ಭೇಟಿ ನೀಡುತ್ತೇನೆ. ಇವತ್ತು ಬಹಳ ಉತ್ಸಾಹದಿಂದ ಪಕ್ಷ ಕಟ್ಟೋಕ್ಕೆ‌ ಎಲ್ಲರು ಬಂದಿದ್ದಾರೆ. 58 ದಿನಗಳ ಕಾಲ ನಿಮ್ಮ ಜೊತೆ ನಿರಂತರವಾಗಿ ಹೆಜ್ಜೆ ಹಾಕ್ತೇನೆ.ನಾನು ನಿಮ್ಮ ಜೊತೆ ಇರುತ್ತೇನೆ. ಒಂದು ಕಡೆ ಪಕ್ಷ ಸಂಘಟನೆ ಆದರೆ ಮತ್ತೊಂದು  ಕಡೆ ಸರ್ಕಾರದ ವೈಫಲ್ಯ ತೆರದಿಡಲು ಬರುತ್ತಿದ್ದೇನೆ ಎಂದರು.

 ಭ್ರಷ್ಟಾ ಸರ್ಕಾರ ರಾಜ್ಯದಿಂದ ತೊಲಗಬೇಕು

ರೈತ ವರ್ಗಕ್ಕೆ ಕುಮಾರಣ್ಣ ಕೊಟ್ಟ ಕೊಡುಗೆ ಹೇಳಲು ಆಗದು. 25 ಸಾವಿರ ಕೋಟಿ‌ ಯೋಜನೆಯನ್ನ ರೈತಾಪಿ ವರ್ಗಕ್ಕೆ ನೀಡಿದ್ದಾರೆ. ಪಂಚ ರತ್ನ ಯೋಜನೆ ಕನಸು ನನಸು ಆಗಬೇಕು.ಈ ಭ್ರಷ್ಟಾ ಸರ್ಕಾರ ರಾಜ್ಯದಿಂದ ತೊಲಗಬೇಕು ಎಂದು ಸರ್ಕಾರ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಅವಾಂತರ; ಬೆಳಗಾವಿಯಲ್ಲಿ ಚೊರ್ಲಾ-ಗೋವಾ ರಸ್ತೆ ಬಂದ್!!

ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಕಡೆಯೂ ಪ್ರವಾಸ ಮಾಡ್ತೇವೆ. ಕಾರ್ಯಕರ್ತರು ಒಂದು ಛಲ ಇಟ್ಟುಕೊಳ್ಳಬೇಕು.ನಮ್ಮದು ಸಣ್ಣ ಪ್ರಮಾಣದ ಪಕ್ಷ ಅಲ್ಲ.ಹಳ್ಳಿ ಹಳ್ಳಿಗಳಿಗೆ ಹೋಗಿ ಒಂದು ರಿಜಿಸ್ಟರ್ ಮಾಡಿ ಯಾವುದೇ ಹಣ ಕಾಸು ಖರ್ಚಾಗಲ್ಲ ಎಲ್ಲರ ಬಳಿ ಸ್ಮಾರ್ಟ್ ಪೋನ್ ಇದೆ. ಡಿಜಿಟಲ್ ನಲ್ಲಿ ರಿಜಿಸ್ಟರ್ ಮಾಡಿಸಿ ಪಕ್ಷದ ಸಂಘಟನೆಯಲ್ಲಿ ಕೈ ಜೋಡಿಸಿ ಎಂದು ಮನವಿ ಮಾಡಿದರು. ಯಾರೂ  ಕೂಡ ಮೈ ಮರೆಯೋದು ಬೇಡ. ಇವತ್ತಿಂದ ಟೈಂ ಶುರುವಾಗಿದೆ. ಕನಿಷ್ಠ 50 ಲಕ್ಷ ಮಿಸ್ ಕಾಲ್ ಸದಸ್ಯ ಕೊಡ್ತೇವೆಂದು ದೇವೇಗೌಡರು ಹಾಗೂ ಕುಮಾರಣ್ಣಗೆ ಭರವಸೆ ಕೊಡ್ತಿದ್ದೇವೆ ಎಂದು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News