ಮುಖ್ಯಮಂತ್ರಿ ಬದಲಾವಣೆ ಸದ್ಯಕ್ಕಿಲ್ಲ ಸಿಎಂ ಸಿದ್ದರಾಮಯ್ಯ ಸೇಪ್..!

ಸಿಎಂ ಕನಸು ಕಾಣುತ್ತಿರುವ ಡಿಕೆ ಶಿವಕುಮಾರ್ ತಂತ್ರಗಾರಿಕೆ ಏನು ಅಂತ ಸಹ ಕೆಲ ಸಚಿವರು ಎದುರು ನೋಡುತ್ತಿದ್ದಾರೆ ಹಾಗಾಗಿ ಕೆಲವರು ನವೆಂಬರ್..ಡಿಸೆಂಬರ್ ಕ್ರಾಂತಿಗಾಗಿ ಕಾದು ಕುಳಿತಿದ್ದಾರೆ‌.

Written by - Manjunath Naragund | Last Updated : Oct 14, 2025, 06:32 PM IST
  • ಅಂತದೇನು ಇಲ್ಲ ನಡೆ ನಡೆ ಊಟ ಮಾಡು
  • ಶಾಸಕರ ಬೆಂಬಲ ಇಲ್ಲದೇ ಸಿಎಂ ಆಗೋಕೆ ಆಗುತ್ತೇನಯ್ಯಾ
  • ನವೆಂಬರ್..ಡಿಸೆಂಬರ್ ಕ್ರಾಂತಿಗಾಗಿ ಕೆಲವರು ಕಾದು ಕುಳಿತಿದ್ದಾರೆ‌
ಮುಖ್ಯಮಂತ್ರಿ ಬದಲಾವಣೆ ಸದ್ಯಕ್ಕಿಲ್ಲ ಸಿಎಂ ಸಿದ್ದರಾಮಯ್ಯ ಸೇಪ್..!
file photo

ಬೆಂಗಳೂರು: ಪ್ರತಿನಿತ್ಯ ದಿನ ಬೆಳಗಾದರೆ ನವಂಬರ್ ಕ್ರಾಂತಿ ನವಂಬರ್ ಕ್ರಾಂತಿ ಎಂದು ಕಾಂಗ್ರೆಸ್ ರಾಜಕೀಯ ಮನೆಯಲ್ಲಿ ಜೋರಾಗಿ ಚರ್ಚೆ ನಡೆಯುತ್ತಿತ್ತು.ಆದರೆ ನೆನ್ನೆ ಸಿಎಂ ಮನೆಯಲ್ಲಿ ನಡೆದ ಡಿನ್ನರ್ ಸಭೆಯಲ್ಲಿ ಖುದ್ದು ಸಿಎಂ ಈ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.

Add Zee News as a Preferred Source

ಹಾಗಾದರೆ ಸಿಎಂ ಕೊಟ್ಟ ಕ್ಲಾರಿಟಿ ಏನು?

ರಾಜ್ಯ ರಾಜಕೀಯದ ನವಂಬರ್ ಕ್ರಾಂತಿಯ ಚರ್ಚೆ ಬಹು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.ಇದೇ ನವಂಬರ್ ನಲ್ಲಿ ಕಾಂಗ್ರೆಸ್ ಪಾಲಯದಲ್ಲಿ ಕ್ರಾಂತಿ ಆಗುತ್ತೆ ಎಂದು ಪ್ರತಿನಿತ್ಯ ಮಾತುಗಳು ಕೇಳಿ ಬರುತ್ತಿವೆ.ಆದರೆ ಬದಲಾವಣೆ ಆಗಬೇಕಿರುವ ಸಿಎಂ ಸಾಹೇಬ್ರೇ ಪುಲ್ ಕೂಲ್ ಅಂಡ್ ಕಾಮ್ ಆಗಿ ಇದ್ದಾರೆ.ಖುದ್ದು ಅವರೇ‌ ಇಂದು ತಮ್ಮ ಕ್ಯಾಬಿನೆಟ್ ಸಹೋದ್ಯೋಗಿಗಳಿಗೆ ಉತ್ತರ ನೀಡಿದ್ದಾರೆ.ಸಿಎಂ ಬದಲಾವಣೆ ವಿಚಾರವಾಗಿ ಮೌನ ಮುರಿದಿರೋ ಸಿಎಂ ಅದ್ಯಾವುದೋ ಇಲ್ಲ ಬಿಡಯ್ಯ ಎಂದು ಹೇಳುವ ಮೂಲಕ ಆ ವಿಷಯಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಸುಂಟರಗಾಳಿಯಂತೆ ಸುಳಿದಾಡಿದ್ದ ಸಿಎಂ ಬದಲಾವಣೆ ವಿಚಾರವನ್ನು ಸಿದ್ದರಾಮಯ್ಯ ನಿಯಂತ್ರಣಕ್ಕೆ ತಂದಿದ್ದಾರೆ.ನಿನ್ನೆಯ ಡಿನ್ನರ್ ಸಭೆಯಲ್ಲಿ ಸ್ಪಷ್ಟವಾಗಿ ಎಲ್ಲರಿಗೂ ಸಂದೇಶ ರವಾನಿಸಿದ್ರು.ನಾಯಕತ್ವ ಬದಲಾವಣೆ ಬಗ್ಗೆ ನಿನ್ನೆ ಡಿಸಿಎಂ ಡಿ.ಕೆ ಶಿವಕುಮಾರ್ ಡಿನ್ನರ್ ಸಭೆಯಿಂದ ತೆರಳಿದ ಬಳಿಕ ಸಿಎಂ, ಸಚಿವರು ಈ ಬಗ್ಗೆ ಬಿಸಿಬಿಸಿ ಚರ್ಚೆ ನಡೆಸಿದ್ದಾರೆ.ಸಚಿವರೊಬ್ವರು ಸರ್ ಮಾಧ್ಯಮಗಳಲ್ಲಿ ಈಗ ಬರೀ ನವೆಂಬರ್ ಕ್ರಾಂತಿಯದ್ದೇ ಸುದ್ದಿ ಎಂದು ಹೇಳಿದ್ದಾರೆ.ಆಗ ತಮ್ಮ ಎಂದಿನ ದಾಟಿಯಲ್ಲಿ ಸಿಎಂ ಹೇ. ಯಾವುದೂ ಇಲ್ಲ.. ಸುಮ್ಕಿರಯ್ಯ ಎಂದು ಸಿಎಂ ಸಿದ್ದರಾಮಯ್ಯ ಗದರಿಸಿ ಉತ್ತರಿಸಿದ್ದಾರೆ.

ಇದನ್ನೂ ಓದಿ: 45 ವರ್ಷಗಳ ದಾಖಲೆ ಮುರಿತ : 7 ಲಕ್ಷ ರೂ.ಗಳ ಗಡಿ ದಾಟುತ್ತಿರುವ ಬೆಳ್ಳಿ ! ಬಂಗಾರದ ಸನಿಹ ಬೆಳ್ಳಿ ನಿಲ್ಲುವುದಕ್ಕೆ ಇದೇ ಕಾರಣ

ಇನ್ನು ಸಚಿವರು ಈ ಬಗ್ಗೆ ಕೇಳಿದಕ್ಕೆ ಹೈಕಮಾಂಡ್ ನವ್ರು ನಿಂಗೆ ಹೇಳಿದ್ದಾರಾ? ಎಂದು ಸಚಿವರೊಬ್ಬರನ್ನ ಪ್ರಶ್ನಿಸಿದ್ರು ಸಿಎಂ. ಅಂತದೇನು ಇಲ್ಲ ನಡೆ ನಡೆ ಊಟ ಮಾಡು ಎಂದು ಸಚಿವರಿಗೆ ಸಿಎಂ‌ ಹೇಳಿದ್ದಾರೆ.ಇನ್ನು ಈ ವೇಳೆ ಡಿ.ಕೆ ಶಿವಕುಮಾರ್ ಹೇಳಿಕೆ ಬಗ್ಗೆಯೂ ಸಚಿವರು ಪ್ರಸ್ತಾಪ ಮಾಡಿದ್ದಾರೆ.ಸಿಎಂ ಆಯ್ಕೆಗೆ ಶಾಸಕರ ಬಲ ಬೇಡ ಹೈಕಮಾಂಡ್ ತೀರ್ಮಾನ ಸಾಕು ಅಂತಾ ಡಿಕೆ ಹೇಳ್ತಿದ್ದಾರೆ ಎಂದ ಸಚಿವರೊಬ್ಬರು ಹೇಳಿದ್ದಾರೆ.ಆಗ ಸಿಎಂ ನೋಡಯ್ಯ ಅದೆಲ್ಲ ಸಾಧ್ಯನಾ? ಶಾಸಕರ ಬೆಂಬಲ ಇಲ್ಲದೇ ಸಿಎಂ ಆಗೋಕೆ ಆಗುತ್ತೇನಯ್ಯಾ ಎಂದು ಸಚಿವರಿಗೆ ಮರು ಪ್ರಶ್ನೆ ಹಾಕಿದ್ದಕ್ಕೆ ಪ್ರತ್ಯುತ್ತರ ನೀಡದೆ ಸಚಿವರು ತೆಪ್ಪಗಾಗಿದ್ದಾರೆ.

ಈ ಮೂಲಕ ಐದು ವರ್ಷವೂ ನಾನೇ ಸಿಎಂ ಎಂದು ಸಿದ್ದರಾಮಯ್ಯ ಸಂದೇಶವನ್ನ ಡಿನ್ನರ್ ಸಭೆಯಲ್ಲಿ ನೀಡಿದ್ದಾರೆ‌‌.ಅತ್ತ ಸಿಎಂ ಕನಸು ಕಾಣ್ತಿರೋ ಡಿಕೆಶಿ ತಂತ್ರಗಾರಿಕೆ ಏನು ಅಂತ ಸಹ ಕೆಲ ಸಚಿವರು ಎದುರು ನೋಡ್ತಿದ್ದಾರೆ. ನವೆಂಬರ್..ಡಿಸೆಂಬರ್ ಕ್ರಾಂತಿಗಾಗಿ ಕೆಲವರು ಕಾದು ಕುಳಿತಿದ್ದಾರೆ‌.

ವರದಿ: ರಾಚಪ್ಪ.ಸುತ್ತೂರು
ಪೊಲಿಟಿಕಲ್ ಬ್ಯುರೋ
ಜೀ ಕನ್ನಡ ‌ನ್ಯೂಸ್

About the Author

Trending News