)
ಬೆಳಗಾವಿ : ಬಿಎಸಿಯಲ್ಲಿ ಮಾತುಕೊಟ್ಟಂತೆ ಸ್ಪೀಕರ್ ಯುಟಿ ಖಾದರ್ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಿದ್ರು. ಮಾತು ಆರಂಭಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. 2013 ರಲ್ಲಿ ಸಿದ್ದರಾಮಯ್ಯನವರು ಸಿಎಂ ಆಗಿದ್ರು. ಈಗಲೂ ಇದ್ದಾರೆ.. ಆಗಿನಂತೆಯೇ ಸರ್ಕಾರವನ್ನ ನಡೆಸ್ತಾರೆ ಅನ್ನೋ ನಿರೀಕ್ಷೆಯಿತ್ತು, ಆದರೆ ಜನರ ಕಣ್ಣೊರೆಸುವ ಬದಲು ಕುರ್ಚಿ ಕಿತ್ತಾಟದಲ್ಲೆ ಮೈಮರೆತಿದ್ದಾರೆಂದು ಲೇವಡಿ ಮಾಡಿದ್ರು.
ಸರ್ಕಾರದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗ್ತಿವೆ.. ಇನ್ನೂ ಗ್ಯಾರೆಂಟಿ ಭ್ರಮೆಯಿಂದ ಹೊರಬಂದಿಲ್ಲ. ಖಜಾನೆ ಖಾಲಿ ಖಾಲಿ ಸರ್ಕಾರ ಜಾಲಿ ಜಾಲಿಯಾಗಿದೆ ಅಂತ ವ್ಯಂಗ್ಯವಾಡಿದ್ರು. ಈ ವೇಳೆ ಅಶೋಕ್ ಮಾತಿಗೆ ಕೃಷ್ಣಬೈರೇಗೌಡ ಹಾಗೂ ಪ್ರಿಯಾಂಕ್ ಖರ್ಗೆ ವಿರೋಧ ವ್ಯಕ್ರಪಡಿಸಿದ್ರು. ಸದನಕ್ಕೆ ಸುಳ್ಳು ಮಾಹಿತಿ ನೀಡ್ಬೇಡಿ ಅಂತ ಮುಗಿಬಿದ್ರು. ಈವೇಳೆ ಆಡಳಿತ ಪ್ರತಿಪಕ್ಷಗಳನಡುವೆ ಗದ್ದಲ ಶುರುವಾಯ್ತು. ಅಂತಿಮವಾಗಿ ಸ್ಪೀಕರ್ 10 ನಿಮಿಷ ಕಲಾಪವನ್ನ ಮುಂದೂಡ ಬೇಕಾಯ್ತು.
ಇನ್ನು ಸದನದಲ್ಲಿ ಬಿಜೆಪಿ ನಾಯಕರನ್ನ ಬಿಜೆಪಿಯಿಂದ ಉಚ್ಚಾಟನೆಯಾದ ಶಾಸಕನೇ ಲೇವಡಿ ಮಾಡಿದ ಪ್ರಸಂಗವೂ ಎದುರಾಯ್ತು. ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಉಚ್ಛಾಟಿತ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಪ್ರತಿಪಕ್ಷ ನಾಯಕರನ್ ಕಾಲೆಳೆಯುವ ಪ್ರಯತ್ನ ಮಾಡಿದ್ರು. ಸದನದ ಪ್ರಾರಂಭದಲ್ಲೇ ಸ್ಪೀಕರ್ ಪ್ರಶ್ನೋತ್ತರಕ್ಕೆ ಅವಕಾಶ ನೀಡಿದ್ರು. ಆಗ ಮೊದಲು ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಅವಕಾಶ ಕೊಡಿ ಅಂತ ಪ್ರತಿಪಕ್ಷಗಳ ಶಾಸಕರು ಒತ್ತಾಯ ಮಾಡಿದ್ರು. ಇದಕ್ಕೆ ವಿರೋಧ ಹೊರಹಾಕಿದ ಯತ್ಬಾಳ್ ಮೊದಲು ನಿಯಮದಂತೆ ಪ್ರಶ್ನೋತ್ತರಕ್ಕೆ ಅವಕಾಶ ನೀಡಿ, ಆಮೇಲೆ ಉತ್ತರ ಕರ್ನಾಟಕ ಸಮಸ್ಯೆ ಚರ್ಚೆಗೆ ಕೊಡಿ ಅಂದ್ರು. ಇದೇ ವೇಳೆ ನಮಗೆ ಸೀಟುಗಳನ್ನ ಮುಂದೆ ಕೊಡಿ ಎಂದು ಸ್ಪೀಕರ್ ಮುಂದೆ ಬೇಡಿಕೆ ಇಟ್ರು. ನಾವು ಹಿರಿತನ ನೋಡಿ ಕೊಟ್ಟಿಲ್ಲ, ನಿಮ್ಮ ವಿಪಕ್ಷ ನಾಯಕರು ಹೇಳಿದ್ರೆ ನೊಡೋಣ ಅಂತ ಸ್ಪೀಕರ್ ಹೇಳಿದ್ರು. ಆಗ ಇಲ್ಲಿ ನಾನೇ ಸರಿಯಾದ ವಿಪಕ್ಷ ನಾಯಕ, ನಾನು ಮುಖ್ಯಮಂತ್ರಿ ಕಚೇರಿಗೂ ಹೋಗಲ್ಲ, ಸಚಿವರ ಬಳಿಯೂ ಹೋಗಲ್ಲ, ನಾನು ಅಡ್ಜಸ್ಟ್ಮೆಂಟ್ ಗಿರಾಕಿ ಯಲ್ಲ ಅಂತ ಪ್ರತಿಪಕ್ಷ ನಾಯಕ ಅಶೋಕ್, ವಿಜಯೇಂದ್ರ ಹೆಸರೇಳದೆ ಕಾಲೆಳೆಯುವ ಪ್ರಯತ್ನ ಮಾಡಿದ್ರು. ಈ ವೇಳೆ ಅಶೋಕ್, ಬಿಜೆಪಿ ನಾಯಕರು ಪೇಚಿಗೆ ಸಿಲುಕಿದ್ರು.
ಇನ್ನು ಬೆಳಗ್ಗೆಯಷ್ಟೇ ಸದನಕ್ಕೆಂದು ಬೆಳಗಾವಿ ಏರ್ಪೋರ್ಟ್ ಗೆ ಆಗಮಿಸಿದ ಡಿಕೆಶಿಯನ್ನ ಎಂಎಲ್ ಸಿ ಚನ್ನರಾಜ್ ಹಟ್ಟಿಹೊಳಿ ಸ್ವಾಗತಿಸಿದ್ರು.. ಇದರ ಫೋಟೋಗಳನ್ನ ತಮ್ಮ ಪೇಸ್ಬುಕ್ ಪೇಜ್ ನಲ್ಲಿ ಹಾಕುವ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಂತ ಪೋಸ್ಟ್ ಹಾಕಿದ್ರು.. ಇದು ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸದ್ದುಮಾಡ್ತು.. ಈ ವಿಚಾರ ವಿಧಾನಸಭೆಯಲ್ಲೂ ಚರ್ಚೆಗೆ ಬಂತು. ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ ನಡೆದಿದೆ. ಇದರ ಬೆನ್ನಲ್ಲೇ ಚನ್ನರಾಜ್ ಮುಖ್ಯಮಂತ್ರಿ ಡಿಕೆಶಿ ಅಂತ ಹಾಕಿದ್ದಾರೆ.. ಹಾಗಾಗಿ ಇದು ಎಲ್ಲರ ಗೊಂದಲಕ್ಕೆ ಕಾರಣವಾಗಿದೆ. ಇದರ ಬಗ್ಗೆ ಉತ್ತರ ಕೊಡಿ ಅಂತ ಕಾಂಗ್ರೆಸ್ ಶಾಸಕರನ್ನ ಕಾಲೆಳೆಯುವ ಪ್ರಯತ್ನ ಮಾಡಿದ್ರು. ಆದ್ರೆ ಮಧ್ಯಪ್ರವೇಶ ಮಾಡಿದ ಸ್ಪೀಕರ್ ನಿಮಗೆ ಉತ್ತರ ಕರ್ನಾಟಕದ ಚರ್ಚೆ ಬೇಕಾ ಇಲ್ವಾ ಎಂದು ಪ್ರಶ್ನಿಸಿದ್ರು. ಇದು ನಮ್ಮ ಪಕ್ಷದ ಅಂತರಿಕ ವಿಚಾರ ನಿಮಗೇನು ಕೆಲಸ ಅಂತ ಕೈ ಶಾಸಕರು ಟಾಂಗ್ ಕೊಟ್ರು.ಇದರ ಬಗ್ಗೆ ಗೊತ್ತಾಗಬೇಕಲ್ಲ, ಎಲ್ಲರಿಗೆ ತಿಳಿಯಲಿ ಅಂತ ಅರವಿಂದ ಬೆಲ್ಲದ್ಮತ್ತೆ ಲೇವಡಿ ಮಾಡುವ ಪ್ರಯತ್ನ ಮಾಡಿದ್ರು.
ಇನ್ನು ಪ್ರಶ್ನೋತ್ತರ ಕಲಾಪದ ವೇಳೆ ಆನ್ಲೈನ್ ಗೇಮಿಂಗ್ ಬಗ್ಗೆ ಸದನದಲ್ಲಿ ಸಕಲೇಶಪುರದ ಸಿಮೆಂಟ್ ಮಂಜು ಪ್ರಸ್ತಾಪಿಸಿದ್ರು.. ಅನ್ಲೈನ್ಗೇಮಿಂಗ್ ಬಗ್ಗೆ ಯುವಕರು ಹಾಳಾಗ್ತಿದ್ದಾರೆ, ಇದಕ್ಕೆ ಸರ್ಕಾರ ಕಡಿವಾಣ ಹಾಕ್ಬೇಕು ಅಂತ ಒತ್ತಾಯಿಸಿದ್ರು.. ಆದ್ರೆ ಗೃಹ ಸಚಿವರೇ ಕಡಿವಾಣ ಹಾಕುವ ಬಗ್ಗೆ ಅಸಹಾಯಕತೆ ತೋಡಿಕೊಂಡ್ರು.. ನಿಯಂತ್ರಣಕ್ಕೆ ನಾವು ಪ್ರಯತ್ನ ಮಾಡ್ತಿದ್ದೇವೆ, ಡಿಜಿಪಿಯನ್ನೇ ಇದಕ್ಕೆ ನೇಮಿಸಿದ್ದೇವೆ, 25 ಸಾವಿರ ಕೇಸ್ ದಾಖಲಾಗಿದ್ದವು, ಅದರಲ್ಲಿ 15 ಸಾವಿರ ಕೇಸ್ ಗೆ ಬಂದು ನಿಂತಿದೆ, ಅಂದ್ರೆ ಕೇಸ್ ಪ್ರಮಾಣ ಕಡಿಮೆಯಾಗಿದೆ ಎಂದರ್ಥ ಅಲ್ವೇ.. ಇದರ ಮೇಲೆನಿಗಾ ಹಿಡೋಕೆ 45 ಸೈಬರ್ ಕ್ರೈಂ ಠಾಣೆಗಳನ್ನ ತೆರೆಯಲಾಗಿದೆ ಎಂದ್ರು..
ಇನ್ನು ಕಿರಾಣಿ ಅಂಗಡಿಗಳಲ್ಲಿ ಮಧ್ಯಪಾನ ಮಾರಾಟ ಆಗ್ತಿದೆ, ಗ್ಯಾರೆಂಟಿ ಹೆಸರಲ್ಲಿ ಮಹಿಳೆಯರಿಗೆ ಹಣ ಹಾಕಿ, ಎಣ್ಣೆ ಮಾರಿ ಅದನ್ನ ವಾಪಸ್ ಪಡೆದುಕೊಳ್ಗಿದೆ ಅಂತ ಜೆಡಿಎಸ್ ನಾಯಕ ಸುರೇಶ್ ಬಾಬು ಲೇವಡಿ ಮಾಡಿದ್ರು.. ಇದೇ ವೇಳೆ ಸ್ವಿಗ್ಗಿ, ಜೊಮೊಟೋ ದಲ್ಲಿ ಎಣ್ಣೆಯನ್ನೂ ಮಾರಾಟ ಮಾಡಿ ಅಂತ ಸುರೇಶ್ ಕುಮಾರ್ ಕಿಂಡಲ್ ಮಾಡಿದ್ರು.. ಅಲ್ಲದೆ ಸ್ವಿಗ್ಗಿ, ಜೊಮೊಟೋ ಜೊತೆ ಡ್ರಗ್ಸ್ ಸಪ್ಲೈ ಮಾಡಲಾಗ್ತಿದೆ, ಡ್ರಗ್ಸ್ ಮುಕ್ತ ಅಂತೀರ ಹೇಗೆ ಅಂತ ಪ್ರಶ್ಬಿಸಿದ್ರು.. ಅಂತಹ ಮಾಹಿತಿ ಇದ್ರೆ ಕೊಡಿ ಕಠಿಣ ಕ್ರಮ ಕೈಗೊಳ್ತೇವೆ ಅಂತ ಗೃಹ ಸಚಿವ ಪರಮೇಶ್ವರ್ ಆನ್ಸರ್ ಮಾಡಿದ್ರು..
ಒಟ್ನಲ್ಲಿ ಇವತ್ತಿನ ಎರಡನೇ ದಿನದ ಕಲಾಪ ದಲ್ಲಿ ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಅವಕಾಶ ನೀಡಲಾಯ್ತು.. ಪ್ರತಿ ಪಕ್ಷ ನಾಯಕ ಆರ್.ಅಶೋಕ್ ಸರ್ಕಾರವನ್ನ ಪದೇ ಪದೇ ಕುಟುಕುವ ಕೆಲಸ ಮಾಡಿದ್ರು. ಇನ್ನು ಗೃಹ ಲಕ್ಷ್ಮಿ ಬಾಕಿ ಹಣ, ಅನ್ಲೈನ್ ಗೇಮಿಂಗ್ ಕಡಿವಾಣ ವಿಚಾರಗಳು ಗಮನ ಸೆಳೆದ್ವು.