)
ರಾಜ್ಯದಲ್ಲಿ ಶುರುವಾಗಿದ್ದ ಸಿಎಂ ಕುರ್ಚಿ ರಾಜಕಾರಣ ದೆಹಲಿಗೆ ಶಿಫ್ಟ್ ಆಗಿದೆ.ಕಳೆದ ೧೦ ದಿನದಿನಗಳಿಂದ್ಲೂ ಸಿಎಂ ಕುರ್ಚಿ ಹಾಗೂ ಸಂಪುಟ ಪುನಾರಚನೆಯ ಚರ್ಚೆ ಜೋರಾಗಿತ್ತು.ರಾಜ್ಯ ಕಾಂಗ್ರೆಸ್ ನಲ್ಲಿ ಅಲ್ಲೋಲ ಕಲ್ಲೋಲವನ್ನೇ ಹುಟ್ಟು ಹಾಕಿತ್ತು.ಆದ್ರೆ ಇದೀಗ ದೆಹಲಿಗೆ ಶಿಫ್ಟ್ ಆಗಿದ್ದು, ರಾಜ್ಯ ನಾಯಕರು ದೆಹಲಿಯ ಕಡೆ ಮುಖಮಾಡ್ತಿದ್ದಾರೆ.ವರಿಷ್ಠರ ಅಂಗಳದಲ್ಲಿ ತಮ್ಮತಮ್ಮ ಬೇಡಿಕೆ ಈಡೇರಿಸಿಕೊಳ್ಳೋಕೆ ಸ್ಕೆಚ್ ಹಾಕಿದ್ದಾರೆ.ನವೆಂಬರ್ ೬ ರನಂತರ ಹಲವರು ದೆಹಲಿ ಫ್ಲೈಟ್ ಹತ್ತಲಿದ್ದಾರೆ. ಯಾಕೆ ಏನು ಅನ್ನೋ ಡಿಟೇಲ್ಸ್ ಇಲ್ಲಿದೆ.
ನವೆಂಬರ್ ಕ್ಷಿಪ್ರ ಕ್ರಾಂತಿ: ರಾಜ್ಯ ರಾಜಕಾರಣ ಇದೀಗ ದೆಹಲಿಗೆ ಶಿಫ್ಟ್..!
ಕಳೆದ ಹತ್ತು ಹದಿನೈದು ದಿನಗಳಿಂದ ನಡೆದಿದ್ದ ರಾಜಕೀಯ ಬೆಳವಣಿಗೆಗಳು ಇದೀಗ ದೆಹಲಿಗೆ ಶಿಫ್ಟ್ ಆಗಿವೆ. ನವೆಂಬರ್ ೬ ರ ನಂತರ ರಾಜ್ಯ ನಾಯಕರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ನವೆಂಬರ್ ೬ ರಂದು ಬಿಹಾರದ ವಿಧಾನಸಭೆಗೆ ಮೊದಲಹಂತದ ಚುನಾವಣೆ ನಡೆಯಲಿದೆ.ನೀತಿ ಸಂಹಿತೆ ಇಡೀ ರಾಜ್ಯಾದ್ಯಂತ ಜಾರಿಯಲ್ಲಿರೋದ್ರಿಂದ ಹೊರಗಿನ ನಾಯಕರೆಲ್ಲರು ತಮ್ಮ ತಮ್ಮ ಸ್ಥಳಗಳಿಗೆ ವಾಪಸ್ ಆಗ್ಬೇಕಿದೆ.ಹಾಗಾಗಿ ಕಾಂಗ್ರೆಸ್ ವರಿಷ್ಠರು ಒಂದೆರಡು ದಿನ ದೆಹಲಿಗೆ ವಾಪಸ್ ಆಗಲಿದ್ದಾರೆ.ಇದೇ ಸಂದರ್ಭ ನೋಡಿಕೊಂಡು ಡಿಸಿಎಂ ಡಿಕೆಶಿ ನವೆಂಬರ್ ೬ ರಂದು ದೆಹಲಿಗೆ ತೆರಳ್ತಿದ್ದಾರೆ. ರಾಹುಲ್,ಸೋನಿಯಾ,ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಭೇಟಿಗೆ ಪ್ರಯತ್ನ ನಡೆಸಲಿದ್ದಾರೆ. ತಮ್ಮ ಸಿಎಂ ಕುರ್ಚಿಯ ಆಸೆಯನ್ನ ಅವರ ಮುಂದಿಡ ಲಿದ್ದಾರೆ.ನವೆಂಬರ್ ೨೦ ಕ್ಕೆ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಳ್ತಿರೋದ್ರಿಂದ ಹಿಂದೆ ನಡೆದಿದೆ ಎನ್ನಲಾದ ಒಪ್ಪಂದದ ಬಗ್ಗೆ ನೆನಪಿಸಲಿದ್ದಾರೆ.ಹೀಗಾಗಿ ಡಿಕೆಶಿ ಭೇಟಿ ಮಹತ್ವವನ್ನ ಪಡೆದುಕೊಂಡಿದೆ.
ನಿತಿನ ಗಡ್ಕರಿ ಭೇಟಿ ನೆಪದಲ್ಲಿ ಪಕ್ಷದ ವರಿಷ್ಠರ ಭೇಟಿ..!
ಇನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆಂಡ್ ವಾಲ್ಮೀಕಿ ನಾಯಕರ ಟೀಂ ಕೂಡ ನವೆಂಬರ್ ೬ ರನಂತರ ದೆಹಲಿಗೆ ತೆರಳೋಕೆ ಸಿದ್ಧತೆ ನಡೆಸಿದೆ.ಬಿಹಾರ ಚುನಾವಣೆಯಲ್ಲಿ ಬ್ಯುಸಿಯಾಗಿರೋದ್ರಿಂದ ಯಾರು ದೆಹಲಿಗೆ ಬರಬೇಡಿ ಎಂದು ಎಐಸಿಸಿ ಅಧ್ಯಕ್ಷರು ಸೂಚಿಸಿದ್ದರು..ಹೀಗಾಗಿ ನಿನ್ನೆ ದೆಹಲಿಗೆ ತೆರಳಬೇಕಿದ್ದ ಬೆಳಗಾವಿ ಸಾವ್ಕಾರ್ ದೆಹಲಿ ಪ್ರಯಾಣವನ್ನ ಮುಂದೂಡಿದ್ದರು..ನವೆಂಬರ್ ೬ ರಂದು ಬಿಹಾರ ಚುನಾವಣೆಯಿಂದ ಖರ್ಗೆ,ರಾಹುಲ್ ದೆಹಲಿಗೆ ವಾಪಸ್ ಆಗಲಿದ್ದು,ಆವೇಳೆ ಅವರನ್ನ ಭೇಟಿ ಮಾಡೋ ಯೋಚನೆಯಲ್ಲಿದ್ದಾರೆ..ರಾಜ್ಯದ ಹೆದ್ದಾರಿಗಳಿಗೆ ಸಂಬಂದಿಸಿದಂತೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನ ಭೇಟಿ ಮಾಡುವ ನೆಪದಲ್ಲಿ ಸತೀಶ್ ಜಾರಕಿಹೊಳಿ ಟೀಂ ವರಿಷ್ಢರನ್ನ ಭೇಟಿ ಮಾಡಲಿದೆ.ರಾಜ್ಯದಲ್ಲಿ ಶುರುವಾಗಿರುವ ಸಿಎಂ ಬದಲಾವಣೆ, ಸಂಪುಟ ಪುನಾರಚನೆ ಚರ್ಚೆಗಳ ಬಗ್ಗೆ ಗಮನಕ್ಕೆ ತರಲಿದ್ದಾರೆ.ಪ್ರಸಕ್ತ ಸನ್ನಿವೇಶ,ಸಿದ್ದರಾಮಯ್ಯ ಬದಲಾವಣೆ ಮಾಡಿದ್ರೆ ಆಗುವ ಲಾಭ ನಷ್ಡ ಗಳು,ಡಿಕೆಶಿಗೆ ಅವಕಾಶ ಕೊಟ್ರೆ ಪಕ್ಷದಲ್ಲಿ ಉದ್ಬವಿಸುವ ಸಮಸ್ಯೆಗಳ ಬಗ್ಗೆ ವಿವರಿಸಲಿದ್ದಾರಂತೆ. ಇವರ ಜೊತೆಯೇ ರಾಜಣ್ಣ, ಚಳ್ಳಕೆರೆ ರಘುಮೂರ್ತಿ, ಅನಿಲ್ ಚಿಕ್ಕಮಾದು ಸೇರಿ ಹಲವು ವಾಲ್ಮೀಕಿ ನಾಯಕರು ಪ್ರಯಾಣ ಬೆಳಸಲಿದ್ದು,ಸಂಪುಟ ಪುನಾರಚನೆ ವೇಳೆ ಸಮುದಾಯದಿಂದ ಇಬ್ಬರಿಗೆ ಅವಕಾಶ ನೀಡುವಂತೆ ಡಿಮ್ಯಾಂಡ್ ಮಾಡಲಿದ್ದಾರೆ ಎನ್ನಲಾಗ್ತಿದೆ.
ಸಂಪುಟ ಪುನಾರಚನೆ ಬಗ್ಗೆ ವರಿಷ್ಠರ ಜೊತೆ ಚರ್ಚೆ..!
ಇನ್ನು ನವೆಂಬರ್ ೧೫ ರೊಳಗೆ ಬಿಹಾರ ಚುನಾವಣೆ ಕಂಪ್ಲೀಟ್ ಆಗಲಿದೆ.ಫಲಿತಾಂಶವೂ ಹೊರಬೀಳಲಿದೆ.ಹಾಗಾಗಿ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿರುವ ವರಿಷ್ಠರು ಕೈಗೆ ಸಿಗಲ್ಲ ಅನ್ನೋ ಕಾರಣ ಕ್ಕೆ ಸಿಎಂ ೧೫ ರಂದು ದೆಹಲಿ ಗೆ ತೆರಳ್ತಿದ್ದಾರೆ.ಈ ವೇಳೆ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯ ವರನ್ನ ಭೇಟಿ ಮಾಡಲಿದ್ದಾರೆ. ಸಂಪುಟ ಪುನಾರಚನೆಗೆ ಒಪ್ಪಿಗೆ ಪಡೆಯಲಿದ್ದಾರೆ ಎನ್ನಲಾಗ್ತಿದೆ.ಒಮ್ಮೆ ರಿಶಪಲ್ಗೆ ಅನುಮತಿ ಪಡೆದಿದ್ದೇ ಆದ್ರೆ ಸಿಎಂ ಕುರ್ಚಿ ಕಂಠಕದಿಂದ ಪಾರಗಬಹುದು ಅನ್ನೋ ಲೆಕ್ಕಾಚಾರವಿದೆ.ಹಾಗಾಗಿ ರಿಷಪಲ್ ಮಾಡೋಕೆ ಸಿಎಂ ತುದಿಗಾಲಲ್ಲಿ ನಿಂತಿದ್ದು, ಹೇಗಾದ್ರೂಮಾಡಿ ರಾಹುಲ್ ಗಾಂಧಿ ಒಪ್ಪಿಸಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆ. ಒಂದು ವೇಳೆ ಪುನಾರಚನೆಗೆ ಒಪ್ಪಿಗೆ ದೊರೆತಿದ್ದೇ ಆದ್ರೆ ಸಿಎಂ ಕುರ್ಚಿ ಬದಲಾವಣೆ ವಿಚಾರ ಮತ್ತಷ್ಟು ದಿನ ದೂರ ಸರಿಯಲಿದೆ.ಹೀಗಾಗಿ ಸಿಎಂ ಲೆಕ್ಕಾಚಾರ ಹಾಕಿಕೊಂಡೇ ದೆಹಲಿಗೆ ಮುಖ ಮಾಡಲಿದ್ದಾರೆ.
ನಮ್ಮನ್ನ ಹುಡುಕಿಕೊಂಡು ದೆಹಲಿಗೆ ಯಾರು ಬರಬೇಡಿ..!
ಇನ್ನು ಬಿಹಾರ ಮೊದಲ ಹಂತದ ಬಹಿರಂಗ ಪ್ರಚಾರ ಇಂದಿಗೆ ಅಂತ್ಯವಾಗಲಿದೆ.6 ರಂದು ಮತದಾನ ನಡೆಯಲಿದೆ. ಆದ್ರೆ ನಾಳೆಯಿಂದ ಎರಡನೇ ಹಂತದ ಮತದಾನ ಇರುವ ಕಡೆ ವರಿಷ್ಠರು ಮತ್ತೆ ಪ್ರಚಾರ ಆರಂಭಿಸಬೇಕಿದೆ.ನವೆಂಬರ್ ೯ ರವರೆಗೆ ಪ್ರಚಾರದಲ್ಲಿ ಬ್ಯುಸಿಯಾಗಲಿದ್ದಾರೆ. ಹಾಗಾಗಿ ಅಲ್ಲಿಯವರೆಗೆ ಯಾರು ದೆಹಲಿಯಲ್ಲಿ ರಲಿಲ್ಲ..ಆಕಾರಣಕ್ಕೆ ರಾಜ್ಯ ನಾಯಕರಿಗೆ ಸುಮ್ಮನೆ ದೆಹಲಿಗೆ ಬಂದು ಸಮಯ ವ್ಯರ್ಥ ಮಾಡಿಕೊಳ್ಬೇಡಿ, ನಾವು ಯಾರು ಇರೋದಿಲ್ಲ, ಚುನಾವಣೆ ಮುಗಿಯುವ ವರೆಗೆ ಇತ್ತ ತಲೆಹಾಕಬೇಡಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯವರು ರಾಜ್ಯ ಕಾಂಗ್ರೆಸ್ ನಾಯಕರಿಗೆ ತಾಕೀತು ಮಾಡಿದ್ದಾರಂತೆ. ಆಕಾರಣಕ್ಕಾಗಿಯೇ ನಿನ್ನೆ ದೆಹಲಿಗೆ ತೆರಳಬೇಕಿದ್ದ ಸತೀಶ್ ಜಾರಕಿಹೊಳಿ ಪ್ರವಾಸ ಮುಂದೂಡಿದ್ದರು. ಇನ್ನು ಡಿಸಿಎಂ ದೆಹಲಿಗೆ ತೆರಳಿದ್ರೂ ೬ ರಂದು ವರಿಷ್ಠರ ಕೈಗೆ ಸಿಗೋದು ಕಷ್ಟ.ಅವರು ಬರಿಗೈಲಿ ವಾಪಸ್ ಆಗ್ಬೇಕಿದೆ.
ಒಟ್ನಲ್ಲಿ ರಾಜ್ಯದಲ್ಲಿ ನಡೆದಿದ್ದ ರಾಜಕೀಯ ಬೆಳವಣಿಗೆಗಳು ಸದ್ಯಕ್ಕೆ ಸೈಲೆಂಟಾಗಿವೆ.ಎಲ್ಲವೂ ದೆಹಲಿಗೆ ಶಿಫ್ಟ್ ಆಗಿವೆ. ನವೆಂಬರ್ ೯ರ ನಂತರವೇ ವರಿಷ್ಟರು ದೆಹಲಿಗೆ ವಾಪಸ್ ಆಗಲಿದ್ದು,ಆವೇಳೆ ರಾಜ್ಯ ನಾಯಕರು ಭೇಟಿಯಾಗ ಬಹುದು.ಅಲ್ಲಿಯವರೆಗೆ ಎಲ್ಲವೂ ಸೈಲೆಂಟ್ ಆಗಲಿದೆ.