ನಾಗರಿಕರ ಕುಂದುಕೊರತೆಗಳನ್ನು ದಾಖಲಿಸಲು ನಿಮಗಿನ್ನೂ ಸುಲಭ ...!

ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ವೇದಿಕೆ (ಇ-ಆಡಳಿತ) ವತಿಯಿಂದ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆಗಾಗಿ ಜನಸ್ಪಂದನ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ನಾಗರಿಕರ ಕುಂದುಕೊರತೆಗಳನ್ನು ದಾಖಲಿಸಲು ಜನಸ್ಪಂದನ ಸಮಗ್ರ ವೇದಿಕೆಯಾಗಿದೆ.

Written by - Zee Kannada News Desk | Last Updated : Feb 2, 2022, 11:35 PM IST
  • ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ವೇದಿಕೆ (ಇ-ಆಡಳಿತ) ವತಿಯಿಂದ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆಗಾಗಿ ಜನಸ್ಪಂದನ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ನಾಗರಿಕರ ಕುಂದುಕೊರತೆಗಳನ್ನು ದಾಖಲಿಸಲು ಜನಸ್ಪಂದನ ಸಮಗ್ರ ವೇದಿಕೆಯಾಗಿದೆ.
ನಾಗರಿಕರ ಕುಂದುಕೊರತೆಗಳನ್ನು ದಾಖಲಿಸಲು ನಿಮಗಿನ್ನೂ ಸುಲಭ ...! title=

ಬೆಂಗಳೂರು: ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ವೇದಿಕೆ (ಇ-ಆಡಳಿತ) ವತಿಯಿಂದ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆಗಾಗಿ ಜನಸ್ಪಂದನ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ನಾಗರಿಕರ ಕುಂದುಕೊರತೆಗಳನ್ನು ದಾಖಲಿಸಲು ಜನಸ್ಪಂದನ ಸಮಗ್ರ ವೇದಿಕೆಯಾಗಿದೆ.

ಸಾರ್ವಜನಿಕರು ಜನಸ್ಪಂದನ ಮೊಬೈಲ್ ಆ್ಯಪ್ ಅಥವಾ ಐ.ಪಿ.ಜಿ.ಆರ್.ಎಸ್ ವೆಬ್‌ಸೈಟ್ https://ipgrs.karnataka.gov.in ಮೂಲಕ ತಮ್ಮ ಕುಂದುಕೊರತೆಗಳನ್ನು ದಾಖಲಿಸಬಹುದು.

ಇದನ್ನೂ ಓದಿ: ಸಾರಿಗೆ ಸಂಸ್ಥೆಗಳ ಪುನಶ್ಚೇತನಕ್ಕೆ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

ಜನಸ್ಪಂದನ ವೈಶಿಷ್ಟ್ಯಗಳು: 

ಸರ್ಕಾರದ ಯಾವುದೇ ಸೇವೆ ಅಥವಾ ಯೋಜನೆಯನ್ನು ಪಡೆಯುವಲ್ಲಿ ಯಾವುದೇ ವಿಳಂಬ, ನಿರಾಕರಣೆ, ತೊಂದರೆ ಉಂಟಾದಲ್ಲಿ ದೂರು ದಾಖಲಿಸಬಹುದು.

ವೆಬ್ ಪೋರ್ಟಲ್, ಮೊಬೈಲ್ ಆ್ಯಪ್, ಸಹಾಯವಾಣಿ 1902 ಮತ್ತು ಬಾಪೂಜಿ ಸೇವಾ ಕೇಂದ್ರಗಳ ಮುಖಾಂತರ ಕುಂದುಕೊರತೆ ಅಥವಾ ದೂರು ದಾಖಲಿಸಲು ಅವಕಾಶವಿದ್ದು,  ದೂರು ದಾಖಲಾದ ಕೂಡಲೇ ನಾಗರಿಕರಿಗೆ 'ಸ್ವೀಕೃತಿ' ಸಂದೇಶ ರವಾನೆಯಾಗುತ್ತದೆ. ಸಂಬಂಧಪಟ್ಟ ಇಲಾಖೆಯ ಕ್ಷೇತ್ರ ಅನುಷ್ಠಾನಾಧಿಕಾರಿಗೆ ನಿವಾರಣೆ ಕ್ರಮ ವಹಿಸಲು ಕುಂದುಕೊರತೆ ಅರ್ಜಿಯ ರವಾನಿಸಲಾಗುತ್ತದೆ. ನಿಗದಿತ ಅವಧಿಯಲ್ಲಿ ಕುಂದುಕೊರತೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಕಾಲಾವಧಿ ಮೀರಿದರೆ, ಸ್ವಯಂಚಾಲಿತವಾಗಿ ಮೇಲಾಧಿಕಾರಿಗೆ ಕುಂದುಕೊರತೆಯ ವರ್ಗಾವಣೆಯಾಗುತ್ತದೆ.

ಇದನ್ನೂ ಓದಿ: Murugesh R Nirani: 2365.99 ಕೋಟಿ ರೂ. ಬಂಡವಾಳ ಆಕರ್ಷಿಸಿದ ರಾಜ್ಯ, 10904 ಉದ್ಯೋಗ ಸೃಷ್ಟಿ

ಕುಂದುಕೊರತೆ ನಿವಾರಣೆ ತೃಪ್ತಿಕರವಾಗಿರುವ ಕುರಿತು ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.ನಾಗರಿಕರ ಕುಂದುಕೊರತೆಗಳನ್ನು ದಾಖಲಿಸುವ ಕುರಿತಂತೆ ನೆರವಿಗಾಗಿ ಸಹಾಯವಾಣಿ 1902ಕ್ಕೆ ಕರೆಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News