ಸರ್ಕಾರದ ಅಭದ್ರತೆ ಬಗ್ಗೆ ಅಧಿಕಾರಿಗಳು ಚರ್ಚಿಸುವ ಅಗತ್ಯವಿಲ್ಲ: ಡಿಸಿಎಂ ಜಿ.ಪರಮೇಶ್ವರ

ರಾಜ್ಯ ಸರ್ಕಾರ ಅಭದ್ರವಾಗಿದೆ ಎಂದು ತಮಾಷೆಗೂ ಸಹ ಅಧಿಕಾರಿಗಳು ಚರ್ಚೆ ನಡೆಸಬಾರದು ಎಂದು ಡಿಸಿಎಂ ಜಿ.ಪರಮೇಶ್ವರ ತಿಳಿಸಿದ್ದಾರೆ.

Updated: Jun 12, 2019 , 02:33 PM IST
ಸರ್ಕಾರದ ಅಭದ್ರತೆ ಬಗ್ಗೆ ಅಧಿಕಾರಿಗಳು ಚರ್ಚಿಸುವ ಅಗತ್ಯವಿಲ್ಲ: ಡಿಸಿಎಂ ಜಿ.ಪರಮೇಶ್ವರ

ಬೆಂಗಳೂರು: ಸರ್ಕಾರದ ಅಭದ್ರತೆ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸುವುದು ಬೇಡ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಇಂದು ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮ್ಮೇಳನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಡಿಸಿಎಂ, ರಾಜ್ಯ ಸರ್ಕಾರ ಅಭದ್ರವಾಗಿದೆ ಎಂದು ತಮಾಷೆಗೂ ಸಹ ಅಧಿಕಾರಿಗಳು ಚರ್ಚೆ ನಡೆಸಬಾರದು. ಸರ್ಕಾರವನ್ನು ಭದ್ರವಾಗಿರಿಸಿಕೊಳ್ಳುವ ಕೆಲಸ ನಮ್ಮದು. ಈ ವಿಷಯ ಅಧಿಕಾರಿಗಳಿಗೆ ಬೇಕಿಲ್ಲ. ನಿಮ್ಮ ಕಾರ್ಯವನ್ನು, ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, ರಾಜ್ಯದಲ್ಲಿ ಶೇ.90ರಷ್ಟು ಜನ ಬಿಎಂಪಿಎಲ್‌ ಪಡಿತರ ಚೀಟಿ ಹೊಂದಿದ್ದಾರೆ. ಅಭಿವೃದ್ಧಿಶೀಲ ರಾಜ್ಯವಾದ ಕರ್ನಾಟಕದಲ್ಲಿ ಇಷ್ಟು ಪ್ರಮಾಣದ ಬಡವರು ನಿಜವಾಗಲೂ ಇದ್ದಾರೆಯೇ? ಯಾವ ಮಾನದಂಡದ ಮೇಲೆ ಬಿಪಿಎಲ್ ಕಾರ್ಡ್ ವಿತರಿಸಲಾಗುತ್ತಿದೆ ಎಂದು ಪರಮೇಶ್ವರ್ ಅಧಿಕಾರಿಗಳನ್ನು ಪ್ರಶ್ನಿಸಿದರಲ್ಲದೆ, ಈ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದರು.