Operation Sindoor: ಮಗ ಬಾರದೇ ಹೋದರೂ ಭಾರತದ ಈ ನಿಲುವಿನ ಬಗ್ಗೆ ಗರ್ವವಿದೆ: ಮೃತ ಮಂಜುನಾಥ್ ರಾವ್ ತಾಯಿ

Operation Sindoor: ಪೆಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಂಡಿರುವ ಭಾರತೀಯ ಸೇನೆ ಕಾರ್ಯಾಚರಣೆಗೆ ದಾಳಿಯಲ್ಲಿ ಜೀವ ತೆತ್ತಿದ್ದ ಮೃತ ಮಂಜುನಾಥ್ ತಾಯಿ ಹರ್ಷ ವ್ಯಕ್ತಪಡಿಸಿದ್ದಾರೆ. 

Written by - Yashaswini V | Last Updated : May 7, 2025, 05:52 PM IST
  • ಪಹಲ್ಗಾಮ್ ದಾಳಿಗೆ ಪ್ರತೀಕಾರ
  • ಆಪರೇಷನ್ ಸಿಂಧೂರ್ ಗೆ ಸಂತಸ
Operation Sindoor: ಮಗ ಬಾರದೇ ಹೋದರೂ ಭಾರತದ ಈ ನಿಲುವಿನ ಬಗ್ಗೆ ಗರ್ವವಿದೆ: ಮೃತ ಮಂಜುನಾಥ್ ರಾವ್ ತಾಯಿ

Operation Sindoor: ಆಪರೇಷನ್ ಸಿಂಧೂರ್ ನಡೆಸುವ ಮೂಲಕ ಭಾರತ ಪೆಹಲ್ಗಾಮ್ ಉಗ್ರ ದಾಳಿ ದುರಂತಕ್ಕೆ ತಕ್ಕ ಉತ್ತರ ನೀಡಿದೆ.  ಭಾರತೀಯ ಸೇನೆ ದಿಟ್ಟ ತಿರುಗೇಟು ನೀಡಿ, ಉಗ್ರರ ನೆಲೆಗಳನ್ನು ಧ್ವಂಸ ಮಾಡಿದೆ.  ಇದೆ ಹೊತ್ತಲ್ಲಿ ಪಹಲ್ಗಾಮ್ ದಾಳಿಯಲ್ಲಿ ಉಗ್ರರಿಂದ ಹತರಾಗಿದ್ದ ಮಂಜುನಾಥ್ ರಾವ್ ಕುಟುಂಬ, ವಾಯು ಸೇನೆಯ ಈ ಏರ್‌ಸ್ಟ್ರೈಕ್‌ ನಿಂದ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.  ಮಗ ಬಾರದೇ ಹೋದರೂ, ಭಾರತದ ಈ ನಿಲುವಿನ ಬಗ್ಗೆ ಗರ್ವವಿದೆ ಅಂತಾ ಎಂದು ಮೃತ ಮಂಜುನಾಥ್ ರಾವ್ ತಾಯಿ ಹೇಳಿದ್ದಾರೆ.

Add Zee News as a Preferred Source

ಕಳೆದ ಕೆಲ ವಾರಗಳ ಹಿಂದೆಯಷ್ಟೇ,  ಶಿವಮೊಗ್ಗದ ಮಂಜುನಾಥ್ ರಾವ್ ಅವರ ಪತ್ನಿ ಪಲ್ಲವಿ, ಪುತ್ರ ಅಭಿಜಯ್ ಭೂಲೋಕದ ಸ್ವರ್ಗ ಎಂದೇ ಕರೆಸಿಕೊಳ್ಳುವ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ರು.  ಈ ವೇಳೆ, ಪಹಲ್ಗಾಮ್ ವ್ಯಾಲಿಯ ಪ್ರವಾಸಿ ತಾಣದಲ್ಲಿ ಹಾಯಾಗಿ ವಿಹರಿಸಬೇಕಾಗಿದ್ದ ಸುಮಾರು 26 ಜನ ಪ್ರವಾಸಿಗರು ಉಗ್ರರ ದಾಳಿಗೆ ಹತರಾಗಿ ಹೋಗಿದರು. ಅಂತಹ ದುರ್ದೈವಿಗಳಲ್ಲಿ ಮಂಜುನಾಥ್ ಸಹ ಒಬ್ಬರು. 

ಇದನ್ನೂ ಓದಿ- Operation Sindoor: ಗಾಯ ಮಾಸಿತು... ಪೋಕ್‌ನಲ್ಲಿ 'ಆಪರೇಷನ್ ಸಿಂದೂರ್' ಬಳಿಕ ಭಾವುಕರಾದ ಶುಭಂ ದ್ವಿವೇದಿ ತಂದೆ 

ಕಣ್ಣ ಮುಂದೆಯೇ ತಂದೆಗೆ ಗುಂಡಿಟ್ಟು ಕೊಂದಿದ್ದ ಉಗ್ರನಿಗೆ ಮೃತ ಮಂಜುನಾಥ್ ಪುತ್ರ   ಕುತ್ತೆ....ಹಮೇ ಭೀ ಮಾರೋ.... ಎಂದು ಹೇಳಿದ್ದ. ಇದಕ್ಕೆ ಧಿಮಾಕಿನಿಂದ ಉತ್ತರಿಸಿದ್ದ ಭಯೋತ್ಪಾದಕ "ಜಾವೋ ತುಮ್ಹಾರೆ ಮೋದಿ ಕೋ ಬೋಲೋ" ಎಂದು ಹೇಳಿದ್ದನಂತೆ.  ಅದರಂತೆ, ಇದೀಗ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ದಿಟ್ಟ ಉತ್ತರಕ್ಕೆ ಪಾಪಿ ಪಾಕಿಸ್ತಾನ ಪ್ರಚೋದಿತ ಉಗ್ರರ ಅಡಗು ತಾಣಗಳು ಉಡೀಸ್ ಆಗಿವೆ.  ನೂರಕ್ಕೂ ಹೆಚ್ಚು ಉಗ್ರರ ನೆಲೆಗಳು ಭಾರತದ ವಾಯು ಸೇನೆಯ ಪ್ರಬಲ ದಾಳಿಗೆ ನುಚ್ಚು ನೂರಾಗಿ ಹೋಗಿದ್ದು, ಯುದ್ಧದ ಮೊದಲೇ ಪಾಕಿಸ್ತಾನ ಯುದ್ಧ ವಿರಾಮ ಘೋಷಿಸಿಬಿಟ್ಟಿದೆ. 

ಈ ನಡುವೆ, ಆಪರೇಷನ್ ಸಿಂಧೂರ್ ವಿಷಯವನ್ನು ಟಿವಿಯಲ್ಲಿ ಗಮನಿಸಿರುವ ಮೃತ ಮಂಜುನಾಥ್ ತಾಯಿ ಸುಮತಿ,  ಸಂತಸ ವ್ಯಕ್ತ ಪಡಿಸಿದ್ದಾರೆ.  ನಮ್ಮನ್ನು ಬಿಟ್ಟು ಹೋಗಿರುವ ಮಂಜುನಾಥ್ ಮತ್ತೆ ಬರುವುದಿಲ್ಲ. ಆದರೆ ಪಾಕಿಸ್ತಾನದಲ್ಲಿನ ಉಗ್ರ ಶಿಬಿರದ ಮೇಲೆ ದಾಳಿ ನಡೆಸುವುದರ ಮೂಲಕ ಭಾರತೀಯ ಸೇನೆ ತಕ್ಕ ಉತ್ತರವನ್ನೇ ನೀಡಿದೆ. ಇದರಿಂದ  ನಮ್ಮ ಕುಟುಂಬಕ್ಕೆ ನೆಮ್ಮದಿ ಸಿಕ್ಕಿದೆ.  ದುಃಖದಲ್ಲಿದ್ದರೂ ಇಂದೊಂದು ಸಂತೋಷದ ಸಂಗತಿ ಅಂತಾ ಹೇಳಿದ್ದಾರೆ.

ಇದನ್ನೂ ಓದಿ- Operation Sindoor: ಪಾಕಿಸ್ತಾನ ಭಯೋತ್ಪಾದಕ ನೆಲೆಗಳ ಮೇಲೆ ಭಾರತದ ಏರ್‌ಸ್ಟ್ರೈಕ್‌ ಬಗ್ಗೆ ಚೀನಾ ಶಾಕಿಂಗ್ ಹೇಳಿಕೆ...

ಇನ್ನು, ಇದೇ ವೇಳೆ ಮೃತ ಮಂಜುನಾಥ್ ಸೋದರ ಸಂಬಂಧಿ ಕೂಡ ಹರ್ಷ ವ್ಯಕ್ತ ಪಡಿಸಿದ್ದು, ಭಾರತ ಮಾತೆಯ ಸಿಂಧೂರ ಅದು ಕಾಶ್ಮೀರ, ಈ ಹೆಸರಲ್ಲೇ ಸರ್ಜಿಕಲ್ ಸ್ಟ್ರೈಕ್ ನಡೆಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.  

ಸಂಸದ ರಾಘವೇಂದ್ರ, ಪ್ರಧಾನಿ ಹಾಗೂ ಸೇನೆ ನಡೆ ಕೊಂಡಾಡಿದ್ದು, 26 ಜನ ಹೆಣ್ಣುಮಕ್ಕಳ ಸಿಂಧೂರವನ್ನಳಿಸಿದ ಉಗ್ರರಿಗೆ ಅದೇ ಹೆಸರಲ್ಲಿ ತಕ್ಕ ಉತ್ತರ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.  ಮತ್ತೊಂದೆಡೆ, ರಾಷ್ಟ್ರಭಕ್ತ ಬಳಗದ ಸದಸ್ಯರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದು, ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿ ಬರಲಿ ಅಂತಾ ಗಣಪತಿಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News