ಯಾವುದೇ ಕಾರಣಕ್ಕೂ‌ ಆಟೋ, ಲಾರಿ, ಟೆಂಪೋ, ಬಸ್ ಚಾಲಕರ ಕೈಬಿಡುವುದಿಲ್ಲ: ಗೋಪಾಲಯ್ಯ

ನಮ್ಮ ಸರ್ಕಾರ ಬಂದಮೇಲೆ ಸಾಕಷ್ಟು ಸುಧಾರಣೆಗಳು ಆಗಿವೆ. ಕೊರೋನ ವೈರಸ್ ತಡೆಯುವುದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ದಿಟ್ಟವಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

Last Updated : May 22, 2020, 12:42 PM IST
ಯಾವುದೇ ಕಾರಣಕ್ಕೂ‌ ಆಟೋ, ಲಾರಿ, ಟೆಂಪೋ, ಬಸ್ ಚಾಲಕರ ಕೈಬಿಡುವುದಿಲ್ಲ: ಗೋಪಾಲಯ್ಯ title=

ಬೆಂಗಳೂರು: ನಮ್ಮ ಸರ್ಕಾರವಿರುವುದು ಬಡವರಿಗೆ ಹಾಗೂ ನಿಮಗೋಸ್ಕಾರ. ಯಾವುದೇ ಸಂದರ್ಭದಲ್ಲೂ ನಾವು ಚಾಲಕರ ಕೈ  ಬಿಡುವಮಾತಿಲ್ಲ. ನಿಮ್ಮ ಜೊತೆಗೆ ನಾವು ಯಾವಾಗಲೂ ಇರ್ತೀವಿ ಎಂದು ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ (K Gopalaiah)ನವರು ಹೇಳಿದ್ದಾರೆ.

ಮಹಾಲಕ್ಷ್ಮಿ ವಿಧಾನ ಸಭಾ ಕ್ಷೇತ್ರದ, ಕಮಲಮ್ಮನ ಗುಂಡಿ ಆಟದ ಮೈದಾನದಲ್ಲಿ, 4,000 ಸಾವಿರ ಆಟೋ, ಲಾರಿ, ಟೆಂಪೋ, ಮತ್ತು ಬಸ್  ಚಾಲಕರಿಗೆ ಆಹಾರ ಕಿಟ್ ಗಳನ್ನು ವಿತರಿಸಿ ಮಾತನಾಡಿದ ಅವರು, ಇವತ್ತು ನಮ್ಮ ಕ್ಷೇತ್ರದ ಎಲ್ಲಾ ಚಾಲಕರಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಗಿದೆ. ಯಾರ ಹೆಸರು ಬಿಟ್ಟೋಗಿದೆಯೋ ಕಚೇರಿಯಲ್ಲಿ ಕಿಟ್ ಗಳನ್ನು ಕೊಡಲಾಗುವುದು ಎಂದು ತಿಳಿಸಿದರು.

ನಮ್ಮ ಸರ್ಕಾರ ಬಂದಮೇಲೆ ಸಾಕಷ್ಟು ಸುಧಾರಣೆಗಳು ಆಗಿವೆ. ಕೊರೋನ ವೈರಸ್ ತಡೆಯುವುದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ದಿಟ್ಟವಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.  ಕಾರ್ಯಕ್ರಮಕ್ಕೆ ಕಂದಾಯ ಸಚಿವ ಆರ್. ಅಶೋಕ್ ಬಂದಿರುವುದು ನನಗೆ ಖುಷಿಯಾಗಿದೆ ಎಂದು ಹೇಳಿದರು.

ಮಂಡ್ಯದಿಂದ ಬರುವವರ ಮೇಲೆ ತೀವ್ರ ನಿಗಾ ಇಡುವಂತೆ ಮೈಸೂರು ಉಸ್ತುವಾರಿ ಸಚಿವ ಸೋಮಶೇಖರ್ ಸೂಚನೆ

ಆಟೋ ಚಾಲಕರ ಕಷ್ಟಕ್ಕೆ ನಮ್ಮ ಸರ್ಕಾರ ಸ್ಪಂದಿಸಿದ್ದು ಅವರಿಗೆ 5,000 ಸಾವಿರ ಪರಹಾರ ಹಣ ಘೋಷಣೆ ಮಾಡಿದೆ. ಆಟೋ ಚಾಲಕರು ಹಣ ಪಡೆಯೋದಕ್ಕೆ ಅಗತ್ಯ ದಾಖಲೆಗಳನ್ನ ಕೊಡಬೇಕು. ಅದನ್ನ ನನ್ನ ಕಚೇರಿನಲ್ಲೆ ಪ್ರರಂಭಿಸಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಬಡ ವಲಸೆ ಕಾರ್ಮಿಕರಿಗೆ ಆಹಾರದ ಕೊರತೆಯಾಗಬಾರದೆಂದು ನಮ್ಮ ಸರ್ಕಾರ ರೇಷನ್ ಕಾರ್ಡ್ (Ration Card) ಇಲ್ಲದವರಿಗೂ ಉಚಿತ ಆಹಾರ ಧಾನ್ಯಗಳನ್ನು ಕೊಡಬೇಕು ಎಂದು ನಿರ್ಧರಿಸಿದೆ. ಯಾರ ಬಳಿ ರೇಷನ್ ಕಾರ್ಡ್ ಇಲ್ಲದವರು ಆಧಾರ್ ಕಾರ್ಡ್ ತೋರಿಸಿ ನ್ಯಾಲಬೆಲೆ ಅಂಗಡಿಗಳಲ್ಲಿ ಮೇ 26ರಿಂದ ರೇಷನ್ ಪಡೆಯಬಹುದು. ಇದೇ ತಿಂಗಳ 26 ರಿಂದ 31ರವರೆಗೆ ಪ್ರತಿ ವ್ಯಕ್ತಿಗೆ  5 ಕೆ.ಜಿ. ಅಕ್ಕಿ ಉಚಿತವಾಗಿ ನೀಡಲು ನಿರ್ಧರಿಸಿದ್ದು ಮುಂದಿನ ತಿಂಗಳು ಜೂನ್ 1 ರಿಂದ ದಿನಾಂಕ 10 ರವರೆಗೆ ಪ್ರತಿ ವ್ಯಕ್ತಿಗೆ 5ಕೆಜಿ ಅಕ್ಕಿ ಮತ್ತು ಪ್ರತಿ ಕುಟುಂಬಕ್ಕೆ 2 ಕೆಜಿ ಕಡಲೆಕಾಳು ಉಚಿತವಾಗಿ ನೀಡಲಾಗುತ್ತದೆ. ಯಾರು ಹೆದರಬೇಕಾಗಿಲ್ಲ ನಿಮ್ಮ ಜೊತೆ  ಸರ್ಕಾರ ಮತ್ತು ನಾವು ಇರುತ್ತೇವೆ ಎಂದು ತಿಳಿಸಿದರು.

ಹುವೈನಿಂದ 2,000 ವಿದ್ಯಾರ್ಥಿಗಳಿಗೆ ನವೀನ ತಂತ್ರಜ್ಞಾನ ತರಬೇತಿ: ಡಾ. ಅಶ್ವತ್ಥನಾರಾಯಣ

ಆರ್ ಅಶೋಕ್ (R Ashok) ಮಾತನಾಡಿ ಇಡೀ ದೇಶ ಒಟ್ಟಾಗಿ ಕೊರೋನ ಮಹಾಮಾರಿಯನ್ನು ಹೊರಗಾಕಬೇಕೆಂದು ನಿರಂತರವಾಗಿ ಕೆಲಸ ಮಡುತ್ತಿದೆ. ಈ ಸಂದರ್ಭದಲ್ಲಿ ವೈದ್ಯರಿಗೆ, ನರ್ಸ್, ಆಶಾ ಕಾರ್ಯಕರ್ತೆಯರು, ಪೊಲೀಸರಿಗೆ ಧನ್ಯವಾದಗಳನ್ನು ಅರ್ಪಿಸಬೇಕು. ಕೊರೋನ ಬಂತು ಎಂದರೆ ಎಲ್ಲರೂ ನಮ್ಮನ್ನು ಹೊರಗೆ ಹಾಕುತ್ತಾರೆ. ಆದರೆ ಇವರು ಧೈರ್ಯದಿಂದ ಕೆಲಸ ಮಾಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರ ಕೊರೋನಾ ರೋಗಿಗಳು ಇದ್ದಲ್ಲಿಗೆ ಹೋಗಿ  ಔಷದಿಗಳನ್ನು ಕೊಡ್ತಿದ್ದಾರೆ ಎಂದು ತಿಳಿಸಿದರು.

ಮಾಜಿ ಶಾಸಕರಾದ ಮುನಿರಾಜು , ನರೇಂದ್ರಬಾಬು, ಮಾಜಿ ಉಪಮೇಯರ್ ಎಸ್ ಹರೀಶ್, ಪಾಲಿಕೆ ಸದಸ್ಯ ರಾಜೇಂದ್ರ ಕುಮಾರ್ ಮುಂತಾದವರು ಇದ್ದರು.

Trending News