Pahalgam Terror Attack Viral Video: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ದಾಳಿಗೊಳಗಾದವರನ್ನು ಸ್ಥಳೀಯರು ರಕ್ಷಿಸಿ ಹೊತ್ತು ಸಾಗುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಈ ವೀಡಿಯೋದ ಬಗ್ಗೆ ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟಿರುವ ಕರ್ನಾಟಕದ ಶಿವಮೊಗ್ಗ ಮೂಲದ ಉದ್ಯಮಿ ಮಂಜುನಾಥ್ ರಾವ್ ಅವರ ಪತ್ನಿ ಪಲ್ಲವಿ ಅವರು ಖಚಿತಪಡಿಸಿದ್ದಾರೆ.
ಹೌದು, ಪಹಲ್ಗಾಮ್ ಉಗ್ರರ ದಾಳಿ 26 ಮುಗ್ಧ ಜೀವಗಳನ್ನು ಬಲಿ ಪಡೆದಿತ್ತು. ಘಟನೆ ಕುರಿತ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿವೆ. ಅದರಲ್ಲಿ ಸ್ಥಳೀಯ ಮುಸ್ಲಿಂ ವ್ಯಕ್ತಿಯೊಬ್ಬರು ಬೆನ್ನ ಮೇಲೆ ಯುವಕನನ್ನು ಹೊತ್ತು ಓಡುತ್ತಿದ್ದ ದೃಶ್ಯ ಹೆಚ್ಚಿನ ಗಮನ ಸೆಳೆದಿತ್ತು. ಆ ಯುವಕ ಬೇರಾರೂ ಅಲ್ಲ ಮಾರಕ ಭಯೋತ್ಪಾದಕ ಘಟನೆಯಲ್ಲಿ ಜೀವತೆತ್ತ ಕರ್ನಾಟಕದ ಮಂಜುನಾಥ್ ರಾವ್ ಅವರ ಮಗ ಅಭಿ ಜೈ.
ಇದನ್ನೂ ಓದಿ- Pahalgam Attack: 1960ರ ಸಿಂಧೂ ಜಲ ಒಪ್ಪಂದ ಸ್ಥಗಿತವನ್ನು ಯುದ್ಧ ಘೋಷಣೆ ಎಂದ ಪಾಕಿಸ್ತಾನಕ್ಕೆ ಭಾರತದ ತಿರುಗೇಟು
ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆಯುತ್ತಿದ್ದಂತೆ ಸ್ಥಳೀಯ ಮುಸ್ಲಿಮರೊಬ್ಬರು ನಮ್ಮ ರಕ್ಷಣೆಗಾಗಿ ಓಡೋಡಿ ಬಂದರು. ಅವರು ಬೆನ್ನಮೇಲೆ ನನ್ನ ಮಗನನ್ನು ಹೊತ್ತು ಸಾಗಿದರು. ಇನ್ನೊಬ್ಬರು ನನ್ನ ಕೈ ಹಿಡಿದು ರಕ್ಷಿಸಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಲು ನೆರವಾದರೂ ಎಂದು ವೈರಲ್ ವಿಡಿಯೋ ಹಿಂದಿನ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ಆ ಮುಸ್ಲಿಂ ವ್ಯಕ್ತಿಯನ್ನು ಎಂದೂ ಮರೆಯೊಲ್ಲ..!
ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಸ್ಥಳೀಯರಿಗೂ ಸಹ ಕೊಲೆ ಬೆದರಿಕೆ ಹಾಕುತ್ತಿದ್ದರು. ಆದರೆ, ಬಿಸ್ಮಿಲ್ಲಾ ಎಂದು ಹೇಳುತ್ತಾ ಉಗ್ರರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಜೊತೆಗೆ ನನ್ನ ಮಗನನ್ನೂ ಕೂಡ ಅವರು ಬಚಾವ್ ಮಾಡಿದ್ದಾರೆ. ದೇವರಂತೆ ಬಂದು ನನ್ನ ಮಗನನ್ನು ರಕ್ಷಿಸಿದ ಪಹಲ್ಗಾಮ್ನ ಆ ಸ್ಥಳೀಯ ಮುಸ್ಲಿಂ ವ್ಯಕ್ತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಮೃತ ಮಂಜುನಾಥ್ ಪತ್ನಿ ಪಲ್ಲವಿ ಹೇಳಿದ್ದಾರೆ.
ಇದನ್ನೂ ಓದಿ- ತ್ರಾಲ್‌ನಲ್ಲಿ ಪಹಲ್ಗಾಮ್ ದಾಳಿಕೋರ ಭಯೋತ್ಪಾದಕ ಆಸಿಫ್ ಶೇಖ್‌ನ ಮನೆ ಧ್ವಂಸ: ವಿಡಿಯೋ ವೈರಲ್
ಹಿಂದೂನಾ ಅಲ್ಲವಾ ಎಂದು ಕೇಳಿ ಕೊಂದ ಉಗ್ರರ ನಡುವೆ ಸ್ಥಳೀಯ ಮುಸ್ಲಿಮರು ಜೀವ ಉಳಿಸಲು ತಮ್ಮ ಜೀವ ಪಣವಾಗಿಟ್ಟಿದ್ದರ ಬಗ್ಗೆ ಮಾತನಾಡುವಾಗ ಪಲ್ಲವಿಯವರು ಭಾವುಕರಾಗಿದ್ದರು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









